ಈ ಪುಟವನ್ನು ಪ್ರಕಟಿಸಲಾಗಿದೆ
೧೮೮
ಭಾರತ ವರ್ತನ

ಹಿಂದಿನಿಂದ ಇಂಡಿಯದಲ್ಲಿ ರೇಷ್ಮೆಯು ಸಹ ತಯಾರಾಗುತ್ತಿತ್ತು, ಭಾರತದ ರೇಷ್ಮೆ ಕೈಗಾರಿಕೆಯು ಆಮೇಲೆ ಅಭಿವೃದ್ದಿಗೆ ಬಂದರೂ ಬಹಳ ಮುಂದುವರಿದಂತೆ ತೋರುವುದಿಲ್ಲ. ಬಟ್ಟೆಗೆ ಬಣ್ಣ ಹಾಕುವ ಕಲೆಯು ಬಹಳ ಮುಂದುವರಿದಿತ್ತು ; ಗಟ್ಟ ಬಣ್ಣಗಳನ್ನು ಮಾಡಲು ಹೊಸ ಹೊಸ ವಿಧಾನಗಳನ್ನು ಕಂಡುಹಿಡಿದರು, ಇದರಲ್ಲಿ ನೀಲಿಯು ಒಂದು. ಇಂಡಿಗೊ ಎಂದು ಗ್ರೀಕರು ಹೇಳುವದಕ್ಕೆ ಕಾರಣ ಅದು ಇಂಡಿಯದಿಂದ ಬಂದದ್ದರಿಂದ, ಈ ಬಣ್ಣ ಹಾಕುವ ಕಲೆಯೇ ಪ್ರಾಯಶಃ ಭಾರತದ ವಿದೇಶ ವ್ಯಾಪಾರದ ಅಭ್ಯುದಯಕ್ಕೆ ಮುಖ್ಯ ಕಾರಣವಾಯಿತು,
ಕ್ರಿಸ್ತಶಕೆಯ ಆರಂಭದ ಶತಮಾನಗಳಲ್ಲಿ ಭಾರತದಲ್ಲಿ ರಸಾಯನ ಶಾಸ್ತ್ರವು ಇತರ ಎಲ್ಲ ದೇಶ ಗಳಿಗಿಂತ ಹೆಚ್ಚು ಮುಂದುವರಿದಿತ್ತು. ಆ ವಿಷಯವು ಹೆಚ್ಚು ನನಗೆ ತಿಳಿಯದು. ಆದರೆ ಭಾರತೀಯ ರಸಾಯನ ಶಾಸ್ತ್ರಜ್ಞರಲ್ಲಿ ಗಣ್ಯರು ಮತ್ತು ಅನೇಕ ವರ್ಷಗಳಿಂದ ಅನೇಕ ಭಾರತೀಯ ವಿಜ್ಞಾನಿ ಗಳನ್ನು ತಯಾರು ಮಾಡಿದವರೂ ಆದ ಆಚಾರ್ಯ ಸರ್ ಪ್ರಫುಲ್ಲಚಂದ್ರರಾಯ್ ಅವರು ಹಿಂದೂ ರಸಾಯನ ಶಾಸ್ತ್ರದ ಇತಿಹಾಸ ಎಂಬ ಗ್ರಂಥವನ್ನು ಬರೆದಿದ್ದಾರೆ. ಆಗ ರಸಾಯನ ಶಾಸ್ತ್ರವೆಂದರೆ ರಸ ವಿಜ್ಞಾನ ಮತ್ತು ಲೋಹ ವಿಜ್ಞಾನವಾಗಿತ್ತು. ಆಗಿನ ಪ್ರಸಿದ್ದ ಭಾರತೀಯ ರಾಸಾಯನಿಕ ಮತ್ತು ಲೋಹವಿಜ್ಞಾನಿ ಎಂದರೆ ನಾಗಾರ್ಜುನನ ಹೆಸರು ಒಂದೇ ಇರುವುದರಿಂದ ಕ್ರಿಸ್ತಶಕ ಒಂದನೆಯ ಶತಮಾನದ ತತ್ತ್ವಶಾಸ್ತ್ರಜ್ಞನಾದ ನಾಗಾರ್ಜುನನೇ ಈತನಿರಬೇಕೆಂದು ಕೆಲವರ ಊಹೆ. ಆದರೆ ಅದು ಸರಿ ಎಂದು ತೋರುವುದಿಲ್ಲ.
ಉಕ್ಕಿಗೆ ಕಾವು ಕೊಡುವ ಹದವು ಭಾರತೀಯರಿಗೆ ಬಹು ದಿನಗಳಿಂದ ತಿಳಿದಿತ್ತು. ಭಾರತದ ಉಕ್ಕು ಮತ್ತು ಕಬ್ಬಿಣಕ್ಕೆ, ಅದರಲ್ಲೂ ಮುಖ್ಯವಾಗಿ ಯುದ್ದ ಶಸ್ತ್ರಾಸ್ತ್ರಗಳ ತಯಾರಿಯಲ್ಲಿ ಬಹಳ ಬೆಲೆಯಿತ್ತು. ಇನ್ನೂ ಅನೇಕ ಲೋಹಗಳ ಪರಿಚಯವು ಅವರಿಗೆ ಇತ್ತು. ವೈದ್ಯ ವಿದ್ಯೆಯಲ್ಲಿ ಅನೇಕ ಲೋಹ ಭಸ್ಮಗಳನ್ನು ಮಾಡುವುದನ್ನು ತಿಳಿದಿದ್ದರು. ಭಟ್ಟಿ ಇಳಿಸುವುದೂ, ಭಸ್ಮ ಮಾಡುವುದೂ ಗೊತ್ತಿತ್ತು. ವೈದ್ಯ ವಿದ್ಯೆಯು ಚೆನ್ನಾಗಿ ಅಭಿವೃದ್ದಿಯಾಗಿತ್ತು. ಹಳೆಯ ಗ್ರಂಥಗಳ ಆಧಾರದ ಮೇಲೆಯೇ ಆದರೂ ಮಧ್ಯ ಯುಗದವರೆಗೂ ಪ್ರಯೋಗ ವಿಜ್ಞಾನವು ವಿಶೇಷ ಮುಂದುವರಿದಿತ್ತು. ಅವಯವ ವಿಚ್ಛೇದನ ಶಾಸ್ತ್ರವನ್ನೂ ಮತ್ತು ಶರೀರ ಲಕ್ಷಣ ಶಾಸ್ತ್ರವನ್ನೂ ಅಭ್ಯಾಸ ಮಾಡುತ್ತಿದ್ದರು. ಹಾರ್ವೆಗಿಂತ ಮುಂಚೆಯೇ ರಕ್ತಚಲನೆಯು ನಡೆಯುತ್ತದೆ ಎಂದು ಹೇಳಿದ್ದರು.
ಅತಿ ಪ್ರಾಚೀನ ವಿಜ್ಞಾನ ಶಾಸ್ತ್ರವಾದ ಖಗೋಳ ಶಾಸ್ತ್ರವು ವಿಶ್ವವಿದ್ಯಾನಿಲಯದ ಶಿಕ್ಷಣ ಕ್ರಮ ದಲ್ಲಿ ನಿತ್ಯ ಪಾಠದ ಒಂದು ಅಂಗವಾಗಿತ್ತು. ಅದರ ಜೊತೆಯಲ್ಲೇ ಜ್ಯೋತಿಷ್ಯವನ್ನೂ ಕಲಿಸುತ್ತಿ ದ್ದರು. ಬಹಳ ನಿಕರವಾಗಿ ಪಂಚಾಂಗವನ್ನು ಬರೆಯುತ್ತಿದ್ದರು. ಅದೇ ಪಂಚಾಂಗ ಪದ್ಧತಿ ಈಗಲೂ ಜನರ ಅನುಷ್ಠಾನದಲ್ಲಿದೆ: ಸೂರಸಿದ್ಧಾಂತವಾದರೂ ಚಂದ್ರಮಾನದ ತಿಂಗಳುಗಳು. ಆದ್ದರಿಂದ ಆಗಾಗ ಸರಿತೂಗಿಸಬೇಕಾಗುತ್ತದೆ. ಇತರ ಎಲ್ಲ ಕಡೆಗಳಂತೆ ಪುರೋಹಿತರು ಅಥವ ಬ್ರಾಹ್ಮಣರೇ ಈ ಪಂಚಾಂಗವನ್ನು ಬರೆಯುವವರು. ಕಾಲ ಕಾಲಕ್ಕೆ ಬರುವ ಹಬ್ಬದ ದಿನಗಳನ್ನೂ ಸೂರ್ಯಚಂದ್ರ ಗ್ರಹಣ ದಿನಗಳೂ ನಿರ್ದಿಷ್ಟ ಮಾಡುತ್ತಿದ್ದರು. ಈ ಗ್ರಹಣದಿನಗಳನ್ನೂ ಹಬ್ಬಗಳಂತೆ ಆಚರಿಸುತ್ತಿದ್ದರು. ಈ ಜ್ಞಾನಬಲದಿಂದ ಜನರಲ್ಲಿ ಮೂಢಭಾವನೆಗಳನ್ನು ಬೆಳೆಸಿ ವ್ರತಗಳನ್ನು ಏರ್ಪಡಿಸಿ ತಮ್ಮ ಪ್ರತಿಷ್ಠೆ ಯನ್ನು ಹೆಚ್ಚಿಸಿಕೊಂಡರು. ಸಮುದ್ರಯಾನ ಮಾಡುವವರಿಗೆ ಖಗೋಳಶಾಸ್ತ್ರ ಜ್ಞಾನವು ತುಂಬ ಉಪಯುಕ್ತವಿತ್ತು, ಖಗೋಳಜ್ಞಾನದಲ್ಲಿ ತಮಗಿದ್ದ ಪಾಂಡಿತ್ಯ ಪ್ರೌಢಿಮೆ ಕುರಿತು ಭಾರತೀಯರು ಬಹಳ ಹೆಮ್ಮೆ ಪಡುತ್ತಿದ್ದರು. ಬಹುಮಟ್ಟಿಗೆ ಅಲೆಕ್ಸಾಂಡ್ರಿಯ ಖಗೋಳಶಾಸ್ತ್ರವನ್ನವಲಂಬಿಸಿದ್ದು ಅರಬ್ಬಿ ಖಗೋಳಶಾಸ್ತ್ರವು ಸಹ ಭಾರತೀಯರಿಗೆ ಪರಿಚಯವಿತ್ತು.
ಆಗ ಯಂತ್ರ ಸಲಕರಣೆಗಳು ಎಷ್ಟರಮಟ್ಟಿಗೆ ಮುಂದುವರಿದು ಇದ್ದವು ಎಂದು ಹೇಳುವುದು ಬಹು ಕಷ್ಟ. ಆದರೆ ಹಡಗುಗಳ ನಿರ್ಮಾಣ ಕಾರ್ಯವು ಪ್ರೌಢವಾಗಿ ಬೆಳೆದು ಒಂದು ದೊಡ್ಡ ಉದ್ಯಮ ವಾಗಿತ್ತು. ಮುಖ್ಯವಾಗಿ ಯುದ್ಧದಲ್ಲಿ ಉಪಯೋಗಿಸಲು ಅನೇಕ ಬಗೆಯ ಯಂತ್ರಗಳಿದ್ದವೆಂದು