ಈ ಪುಟವನ್ನು ಪರಿಶೀಲಿಸಲಾಗಿದೆ

ಯುಗಾಂತರಗಳು

೧೯೭

ರಾಜಕೀಯ ಸ್ವಾತಂತ್ರವು ಹೋದ ಒಡನೆ ಸಾಂಸ್ಕೃತಿಕ ಅವನತಿಯ ನಿಶ್ಚಯವೆಂಬುದೆಲ್ಲ ನಿಜ. ಆದರೆ ರಾಜಕೀಯ ಸ್ವಾತಂತ್ರದ ನಾಶಕ್ಕೆ ಮೊದಲು ಯಾವುದೋ ಒಂದು ಕ್ಷಯರೋಗ ವಿಲ್ಲದೆ ರಾಜಕೀಯ ಸ್ವಾತಂತ್ರವು ಏಕೆ ಹೋಗಬೇಕು ? ಒಂದು ದೊಡ್ಡ ಬಲಯುತ ರಾಷ್ಟ್ರವು ಸಣ್ಣ ನೆರೆಯ ರಾಜ್ಯವನ್ನು ನುಂಗಬಹುದು. ಆದರೆ ಸರ್ವತೋಮುಖ ಪ್ರಗತಿಯನ್ನು ಪಡೆದು, ಶ್ರೇಷ್ಠ ನಾಗರಿಕತೆಯುಳ್ಳ ವಿಶಾಲ ಭಾರತದಂಥ ದೇಶವು ಅಂತಃಕ್ಷಯ ಅಥವ ಪರಕೀಯರ ವಿಶೇಷ ಯುದ್ಧ ನೈಪುಣ್ಯವಿಲ್ಲದ ಸರದಾಳಿಗೆ ಬಲಿಯಾಗಲು ಕಾರಣವಿಲ್ಲ. ಈ ಒಂದು ಸಾವಿರ ವರ್ಷಗಳ ಅಂತ್ಯದಲ್ಲಿ ಆ ಅಂತಃ ಕ್ಷಯವು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ.

ಪ್ರತಿಯೊಂದು ನಾಗರಿಕತೆಯ ಜೀವನದಲ್ಲಿಯೂ ಅವನತಿ ಮತ್ತು ಛಿದ್ರತೆಯ ಕಾಲಗಳು ಇದ್ದೇ ಇವೆ. ಭಾರತದ ಇತಿಹಾಸದಲ್ಲಿಯೂ ಮೊದಲು ಕಾಲಗಳಿದ್ದವು. ಆದರೆ ಭಾರತವು ಅವೆಲ್ಲವನ್ನೂ ಗೆದ್ದು ಜೀರ್ಣಿಸಿಕೊಂಡಿತ್ತು. ಪುನರುಜ್ಜಿವನ ಪಡೆದಿತ್ತು; ಕೆಲವು ಕಾಲ ತನ್ನೊಳಗೆ ತಾನೆ ಗುಪ್ತವಾಗಿ ಅಡಗಿದ್ದು ಪುನಃ ಹೊಸಶಕ್ತಿಯಿಂದ ಭೋರ್ಗರೆದು ಹೊರಹೊಮ್ಮುತ್ತಿತ್ತು. ಒಳಗೊಂದು ಅಂತ ಶೈಕಿಯ ಜ್ವಾಲೆಯಿತ್ತು. ಹೊಸ ಸಂಪರ್ಕದಿಂದ ಕಳೆಗುಂದಿ, ಅಭಿವೃದ್ಧಿಗೊಂಡು, ಹೊಸದಾಗಿ ಕಂಡರೂ ತನ್ನ ಅಂತಸ್ಸತ್ವವನ್ನೂ ಬಿಡದೆ ಪ್ರಜ್ವಲಿಸುವ ಕಾವು ಇತ್ತು. ಭಾರತದ ಅಸ್ತಿತ್ವವನ್ನು ಅಷ್ಟು ದೀರ್ಘಕಾಲ ಕಾಪಾಡಿಕೊಂಡು ಬಂದ ಈ ಮಾನಸಿಕ ನವ್ಯತೆ, ಈ ಸಂಯೋಜಕಶಕ್ತಿಯು ಈಗ ಮಾಯವಾದವೇನು ? ಅದರ ನಿರ್ದಿಷ್ಟ ಮತಗಳ ಮತ್ತು ಸಾಮಾಜಿಕ ರಚನೆಯ ಕಟ್ಟುಗಳ ಕಾಠಿಣ್ಯ ಬೆಳೆದು ಮನಸ್ಸನ್ನೂ ಕಠಿಣಮಾಡಿದವೇನು ? ಏಕೆಂದರೆ ಜೀವನ ಬೆಳೆಯದೆ ಹೋದರೆ, ವಿಕಾಸನಾಗದೆ ಹೋದರೆ ಭಾವನಾವಿಕಾಸವೂ ಅವಕುಂಠಿತವಾಗುತ್ತದೆ, ಭಾವನೆಯ ಉತ್ಪಾ೦ತಿಯೂ, ಸಂಪ್ರದಾಯಶೀಲವೂ ಎರಡೂ ವಿಚಿತ್ರ ರೀತಿಯಿಂದ ಬಹುಕಾಲದಿಂದ ಭಾರತದಲ್ಲಿ ಸಮಾವೇಶ ಗೊ೦ಡಿದ್ದವು. ಭಾವನೆಗಳು ಆಚರಣೆಯ ಮೇಲೆ ಪ್ರಭಾವ ಬೀರುವುದು ಅನಿವಾರ್ಯವಿತ್ತು ; ಆದರೂ ಹಿಂದಿನವನ್ನು ನಾಶಮಾಡದೆ ತನ್ನದೇ ಒಂದು ವೈಶಿಷ್ಠದಿಂದ ಮಾರ್ಪಾಟು ಮಾಡುತ್ತಿತ್ತು, ಆದರೆ ಭಾವನೆಯಲ್ಲಿ ಕ್ರಾಂತಿಯ ಕಾವು ನಾಶವಾದೊಡನೆ ಅದರ ನಿರ್ಮಾಣ ಶಕ್ತಿ ಕುಂದಿದೊಡನೆ, ಭಾವನೆಯ ಅರ್ಥರಹಿತ ಶುಷ್ಕ ಶಿಷ್ಟಾಚಾರದ ಗಿಳಿಪಾಠದ ಹಿಮ್ಮೇಳವಾಗಿ, ಜೀವನ ಶುಷ್ಕವಾಗಿ, ತನ್ನಿಂದ ತಾನೇ ರಚಿಸಿಕೊಂಡ ಬಲೆಯಲ್ಲಿ ಬಂಧಿತವಾಯಿತು.

ಅನೇಕ ನಾಗರಿಕತೆಗಳು ನಾಶವಾದ ಕತೆಗಳನ್ನು ನಾವು ಕಂಡಿದ್ದೇವೆ. ಇವುಗಳಲ್ಲೆಲ್ಲ ಅತಿ ಮುಖ್ಯವಾದುದೆಂದರೆ ರೋಮ್ ಪತನವಾದಂದಿನಿಂದ ನಾಶವಾದ ಯೂರೋಪಿನ ಪ್ರಾಚೀನ ನಾಗರಿಕತೆ ಉತ್ತರದಿಂದ ದಂಡೆತ್ತಿ ಬಂದವರಿಗೆ ರೋಮ್ ಸೋಲುವ ಮುಂಚೆಯೇ ಅಂತರ್ದೌಬಲ್ಯದಿಂದಲೇ ರೋಮ್ ಕುಸಿದು ಬೀಳುವುದರಲ್ಲಿತ್ತು. ಒಂದಾನೊಂದು ಕಾಲದಲ್ಲಿ ವಿಶಾಲಗೊಳ್ಳುತಿದ್ದ ಅದರ ಆರ್ಥಿಕ ನೀತಿಯು ಸಂಕುಚಿತವಾಗಿ ಅನೇಕ ತೊಡರುಗಳನ್ನು ತಂದು ಒಡ್ಡಿತ್ತು. ನಗರದ ಕೈಗಾರಿಕೆ ಗಳು ಕ್ಷೀಣಿಸಿದವು. ಮಹಾನಗರಗಳು ಹೀನಸ್ಥಿತಿಗೆ ಬಂದು ಪಾಳುಬಿದ್ದು, ನಾಶವಾದವು. ದೇಶದ ಫಲವತ್ತು ಸಹ ಕ್ಷೀಣಿಸಿತು. ಈ ತೊಂದರೆಗಳ ನಿವಾರಣೆಗೆ ರೋಮನ್ ಚಕ್ರವರ್ತಿಗಳು ಏನೇನೊ ಉಪಾಯಗಳನ್ನು ಹೂಡಿದರು. ವರ್ತಕರು, ಕರ್ಮಕುಶಲರು, ಶ್ರಮಜೀವಿಗಳು ನಿರ್ದಿಷ್ಟ ಕೆಲಸ ವನ್ನೆ ಮಾಡಬೇಕೆಂಬ ನಿರ್ಬಂಧವಿತ್ತು. ಅನೇಕ ಕೆಲಸಗಾರರಿಗೆ ಅವರ ಗುಂಪಿನಿಂದ ಹೊರಗೆ ಮದುವೆ ಮಾಡಿಕೊಳ್ಳಬಾರದೆಂಬ ನಿರ್ಬಂಧವಿತ್ತು. ಆದ್ದರಿಂದ ಕೆಲವು ಉದ್ಯೋಗದವರಿಗೆ ಅವರದೇ ಒಂದು ಜಾತಿಯಾಯಿತು. ರೈತರು ಜೀತದಾಳುಗಳಾದರು. ಆದರೆ ಅವಸಾನ ಕಾಲವನ್ನು ತಡೆ ಗಟ್ಟಲು ಮಾಡಿದ ಈ ಎಲ್ಲ ತೇಪೆ ಕೆಲಸಗಳೂ ನಿಷ್ಪಲವಾದವು. ರೋಗವು ಇನ್ನೂ ಪ್ರಬಲಗೊಂಡು ರೋಮನ್ ಚಕ್ರಾಧಿಪತ್ಯವು ನಾಶವಾಯಿತು.

ಭಾರತೀಯ ಸಂಸ್ಕೃತಿಯು ಅಷ್ಟು ನಾಟಕೀಯವಾಗಿ ಯಾವಾಗಲೂ ನಾಶವಾಗಿಯೂ ಇಲ್ಲ, ಆಗುವುದೂ ಇಲ್ಲ ; ಏನೇ ಇರಲಿ ಒಂದು ಅದ್ಭುತ ಜೀವನಚೈತನ್ಯವನ್ನು ತೋರಿಸಿದೆ. ಆದರೆ