ಸ್ಥಳೀಯ ಅಭಿಮಾನ ಹೆಚ್ಚಿತು. ವಿಶಾಲ ಭಾರತದ ಭಾವನೆಯು ಮಾಯವಾಗಿ ಪಾಳೆಯಗಾರಿಕೆ, ಸ್ವಾರ್ಥ ಭಾವನೆ ಹೆಚ್ಚಿತು. ಆದಾಗ್ಯೂ ಕೊನೆ ಕೊನೆಗೆ ವ್ಯಕ್ತವಾದಂತೆ ಆ ಜೀರ್ಣವಾದ ರಚನಾ ಚೌಕಟ್ಟಿನಲ್ಲೂ ಜೀವಶಕ್ತಿಯು ಇನ್ನೂ ಅಡಗಿತ್ತು : ನೂತನ ಸನ್ನಿವೇಶಕ್ಕಣಿಗೊಳ್ಳುವ ಶಕ್ತಿ, ನವ್ಯತ, ದಿಟ್ಟ ತನವೂ ಇತ್ತು. ಆ ಶಕ್ತಿಯಿಂದಲೇ ಜೀವಂತವಾಗಿ ಉಳಿಯಿತು. ಹೊಸ ಸಂಪರ್ಕ, ಭಾವನಾ ತರಂಗಗಳಿಂದ ಲಾಭಗೊಂಡು ಕೆಲವು ಮಾರ್ಗಗಳಲ್ಲಿ ಪ್ರಗತಿಯನ್ನೂ ಪಡೆಯಿತು. ಆದರೆ ಅನೇಕ ಪುರಾತನ ಪದ್ದತಿಗಳ ಅವಶೇಷಗಳು ಆ ಪ್ರಗತಿಗೆ ಉರುಲು ಆಗಿ ಸದಾ ಅದುಮುತ್ತಿದ್ದವು.
ಅಧ್ಯಾಯ ೬ : ಹೊಸ ಸಮಸ್ಯೆಗಳು
೧. ಅರಬರು ಮತ್ತು ಮಂಗೋಲರು
ಉತ್ತರ ಹಿಂದೂಸ್ಥಾನದಲ್ಲಿ ಶ್ರೀಹರ್ಷನು ಒಂದು ಬಲಿಷ್ಠ ರಾಜ್ಯಾಧಿಪನಾಗಿ ಆಳುತ್ತಿದ್ದಾಗ, ಚೀನೀ ಯಾತ್ರಿಕನೂ ಜ್ಞಾನಭಿಕ್ಷುವೂ ಆದ ಹುಯನ್ ತ್ಸಾಂಗ್ ನಲಂದ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದಾಗ, ಅರೇಬಿಯಾದಲ್ಲಿ ಇಸ್ಲಾಂ ಧರ್ಮವು ರೂಪುಗೊಳ್ಳುತ್ತಿದ್ದಿತು. ಇಸ್ಲಾಂ ಭಾರತಕ್ಕೆ ಒಂದು ಧಾರ್ಮಿಕ ಶಕ್ತಿಯಾಗಿ, ರಾಜಕೀಯ ಶಕ್ತಿಯಾಗಿ ಬಂದು ಹೊಸ ಸಮಸ್ಯೆಗಳನ್ನು ಎಬ್ಬಿಸತಕ್ಕದ್ದಿತ್ತು. ಆದರೆ ಭಾರತೀಯ ರಂಗದಲ್ಲಿ ವಿಶೇಷ ವ್ಯತ್ಯಾಸ ಮಾಡಲು ಬಹಳ ಕಾಲಹಿಡಿ ಯಿತು. ಭಾರತ ಹೃದಯವನ್ನು ಮುಟ್ಟಲು ಆರುನೂರು ವರ್ಷಗಳು ಬೇಕಾಯಿತು. ರಾಜಕೀಯ ವಿಜಯವನ್ನು ಪಡೆಯುವ ಹೊತ್ತಿಗೆ ಅದರ ಸ್ವರೂಪವೇ ಬಹಳ ಬದಲಾಯಿಸಿತ್ತು. ಅದರ ಮುಂಚೂಣಿ ಜನರೂ ಬೇರೆ ಇದ್ದರು. ಒಂದು ಉನ್ನತ ಉತ್ಸಾಹದ ಉದ್ದೇಶದಿಂದ ಮತ್ತು ಉಜ್ವಲ ಕಾರ್ಯಶಕ್ತಿಯಿಂದ ಸ್ಪೇನ್ನಿಂದ ಮಂಗೋಲಿಯದವರೆಗೆ ಹಬ್ಬಿ ಹರಡಿ, ವಿಜಯ ಪತಾಕೆಯನ್ನು ನೆಟ್ಟು, ಜಾಜ್ವಲ್ಯಮಾನವಾದ ಸಂಸ್ಕೃತಿಯನ್ನು ಹರಡಿದ ಅರಬ್ಬಿ ಜನರು ಇಂಡಿಯ ದೇಶಕ್ಕೆ ಬರ ಲಿಲ್ಲ. ವಾಯವ್ಯದ ಗಡಿಯ ಅಂಚಿಗೆ ಬಂದು ಅಲ್ಲಿಯೇ ನಿಂತರು, ಅರಬ್ಬಿ ಸಂಸ್ಕೃತಿಯು ಕ್ರಮೇಣ ಹೀನಸ್ಥಿತಿಗೆ ಬಂದು ಅನೇಕ ತುರ್ಕಿ ಪಂಗಡಗಳು ಮಧ್ಯ ಮತ್ತು ಪಶ್ಚಿಮ ಏಷ್ಯಗಳಲ್ಲಿ ಪ್ರಾಮುಖ್ಯತೆಗೆ ಬಂದವು. ಭಾರತದ ಗಡಿ ಪ್ರಾಂತ್ಯಗಳಿಂದ ಇಸ್ಲಾಂ ಧರ್ಮವನ್ನು ಒಂದು ರಾಜಕೀಯ ಶಕ್ತಿಯನ್ನಾಗಿ ಇಂಡಿಯಕ್ಕೆ ತಂದವರೇ ಇವರು.
ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಕೆಲವು ದಿನಾಂಕಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಮಹಮ್ಮದ್ ಪೈಗಂಬರರು ಕ್ರಿಸ್ತಶಕ ೬೨೨ ರಲ್ಲಿ ಮಕ್ಕದಿಂದ ಮದೀನಾಕ್ಕೆ ಹೊರಟು ಹೋದ ಸರತ್ತಿನಿಂದ ಇಸ್ಲಾಂ ಧರ್ಮವು ಆರಂಭವಾಗುತ್ತದೆ. ಮಹಮ್ಮದರು ಕಾಲವಾದದ್ದು ಹತ್ತು ವರ್ಷಗಳ ನಂತರ, ಅರೇಬಿಯಾದಲ್ಲಿಯೇ ಒಂದು ರಾಜಕೀಯ ಸ್ಥಿಮಿತಕ್ಕೆ ಬರಲು ಕೆಲವು ಕಾಲ ಹಿಡಿಯಿತು. ಇದಾದ ನಂತರ ಅರಬ್ಬರು ಇಸ್ಲಾಂ ಧ್ವಜವನ್ನೆ ಹಿಡಿದು ಪೂರ್ವದಲ್ಲಿ ಮಧ್ಯ ಏಷ್ಯ ವನ್ನೂ ಪಶ್ಚಿಮದಲ್ಲಿ ಉತ್ತರ ಆಫ್ರಿಕೆಯನ್ನೂ ಆಕ್ರಮಿಸಿ, ಸ್ಪೇನ್ ಮೂಲಕ ಫ್ರಾನ್ಸ್ ವರೆಗೆ ಹರಡಿ ಅದ್ಭುತ ಕಾಠ್ಯಗಳನ್ನು ಸಾಧಿಸಿದರು. ಏಳು ಮತ್ತು ಎಂಟನೆಯ ಶತಮಾನಗಳಲ್ಲಿ ಇರಾಣ ಇರಾಕ್ ಮತ್ತು ಮಧ್ಯ ಏಷ್ಯದಲ್ಲಿ ಹರಡಿದ್ದರು. ಕ್ರಿಸ್ತಶಕ ೭೧೨ ರಲ್ಲಿ ವಾಯವ್ಯ ಇಂಡಿಯದಲ್ಲಿ ಸಿಂಧು ದೇಶ ವನ್ನು ಅಕ್ರಮಿಸಿ ಅಲ್ಲಿಯೇ ನಿಂತುಬಿಟ್ಟರು. ಅವರಿಗೂ ಭಾರತದ ಫಲವತ್ತಾದ ಮೈದಾನಗಳಿಗೂ ಮಧ್ಯೆ ದೊಡ್ಡ ಮರಳಾಡುಇತ್ತು. ಪಶ್ಚಿಮದಲ್ಲಿ ಅರಬ್ಬಿ ಜನರು ಯೂರೋಪ್ ಮತ್ತು ಆಫ್ರಿಕ ಖಂಡಗಳ ಮಧ್ಯದ ಜಲಸಂಧಿಯನ್ನು (ಅಲ್ಲಿಂದ ಈಚೆಗೆ ಜಿಬ್ರಾಲ್ಟರ್ ಜಲಸಂಧಿ ಎಂದು ಹೆಸರಾಗಿದೆ) ದಾಟ ಕ್ರಿಸ್ತಶಕ ೭೧ ರಲ್ಲಿ ಸ್ಪೇನಿಗೆ ಬಂದರು. ಸ್ಪೇನ್ ದೇಶವನ್ನು ಪೂರ್ಣ ಆಕ್ರಮಿಸಿ ಪಿರನೀಸ್ ಬೆಟ್ಟವನ್ನು ದಾಟಿ ಫ್ರ್ರಾಸಿಗೆ ಬಂದರು. ೭೪೨ ರಲ್ಲಿ ಫ್ರಾನ್ಸಿನಲ್ಲಿ ಟೂರ್ಸ್ ನಲ್ಲಿ ಬೌರ್ಲೆಸ್ ಮಾರ್ಟಲ್ ಎಂಬಾತನು ಅವರನ್ನು ಸೋಲಿಸಿ ಹಿಮ್ಮೆಟ್ಟಿಸಿದನು.