ಈ ಪುಟವನ್ನು ಪರಿಶೀಲಿಸಲಾಗಿದೆ
ಹೊಸ ಸಮಸ್ಯೆಗಳು
೨೧೫

ಕಾರಣ ಸಹಸ್ರಗಟ್ಟಲೆ ಮಧ್ಯಮ ವರ್ಗದ ಮಹಿಳೆಯರನ್ನು ಒಂದಲ್ಲ ಒಂದು ಸಾರ್ವಜನಿಕ ಕೆಲಸಕ್ಕೆ ಎಳೆದಿರುವ ಕಾಂಗ್ರೆಸ್ಸಿನ ರಾಜಕೀಯ ಮತ್ತು ಸಾಮಾಜಿಕ ಚಳವಳಿಗಳು. ಗಾಂಧೀಜಿಯು ಈ ಪರದ ಪದ್ಧತಿಯ ಪ್ರಚಂಡ ವಿರೋಧಿ, ಮಹಿಳೆಯರನ್ನು ಹಿಂದಕ್ಕೆ ತಳ್ಳಿ ಅಪ್ರಬದ್ಧರನ್ನಾ ಗಿಟ್ಟಿರುವ “ ದುಷ್ಟ ಪಾಶವೀ ಪದ್ದತಿ ” ಎಂದು ಕರೆದಿದ್ದಾರೆ. “ ಆಚರಣೆಗೆ ತಂದಾಗ ಏನೇ ಪ್ರಯೋಜನ ವಿದ್ದಿರಲಿ, ಈಗ ಪೂರ್ಣ ನಿರುಪಯೋಗವಾಗಿ, ದೇಶಕ್ಕೆ ಅಪಾರ ಹಾನಿಯನ್ನುಂಟುಮಾಡುವ ಈ ದುಷ್ಟ ಪದ್ಧತಿಗೆ ಅಂಟಿಕೊಂಡು ಗಂಡಸರು ಭಾರತದ ಮಹಿಳೆಯರಿಗೆ ಮಾಡುತ್ತಿರುವ ಅನ್ಯಾಯ ವನ್ನು ಗಮನಿಸಿದ್ದೇನೆ” ಎಂದಿದ್ದಾರೆ. “ ಮನುಷ್ಯನಿಗಿರುವಷ್ಟೇ ಸ್ವಾತಂತ್ರ್ಯ ಮತ್ತು ಆತ್ಮವಿಕಾಸದ ಅವಕಾಶ ಮಹಿಳೆಯರಿಗು ಇರಬೇಕೆಂದು ಗಾಂಧಿಯವರ ಮತ. ಸ್ತ್ರೀ ಪುರುಷರ ಸಂಬಂಧ ಸದ್ಭಾವನೆ ಯಿಂದ ಕೂಡಿರಬೇಕು. ಇಬ್ಬರ ಮಧ್ಯೆ ಯಾವ ಅಡ್ಡ ಗೋಡೆಯನ್ನೂ ಹಾಕಬಾರದು, ಪರಸ್ಪರ ನಡತೆ ಸ್ವಾಭಾವಿಕವೂ, ಸ್ವಯಂಪ್ರೇರಿತವೂ ಇರಬೇಕು ” ಎಂದಿದ್ದಾರೆ. ಸ್ತ್ರೀಯರ ಸಮಾನತೆ ಮತ್ತು ಸ್ವಾತಂತ್ರದ ಪರವಾಗಿ ಗಾಂಧೀಜಿ ಬಹಳ ಕಟುವಾಗಿಯೇ ಬರೆದಿದ್ದಾರೆ ಮತ್ತು ಮಾತನಾಡಿದ್ದಾರೆ. ಅವರು ಮನೆಯ ದಾಸ್ಯತ್ವವನ್ನು ಉಗ್ರವಾಗಿ ಖಂಡಿಸಿದ್ದಾರೆ.

ಅಡ್ಡದಾರಿ ಹಿಡಿದು ಆಧುನಿಕ ಕಾಲಕ್ಕೆ ಹಾರಿ ಬಂದಿದ್ದೇನೆ. ಆಫ್ಘನರು ದೆಹಲಿಯಲ್ಲಿ ನೆಲಸಿದ ಮೇಲೆ ಪುರಾತನ ಮತ್ತು ನವೀನ ಪದ್ಧತಿಗಳ ಸಂಘಟನೆಯ ಮಧ್ಯ ಯುಗಕ್ಕೆ ಹಿಂದಿರುಗಬೇಕು. ಈ ವ್ಯತ್ಯಾಸಗಳೆಲ್ಲ, ಮೇರಗತಿಯ ಶ್ರೀಮಂತರು ಮತ್ತು ಉತ್ತಮ ವರ್ಣದ ಜನರಲ್ಲಿ ಮಾತ್ರ ಆಯಿತು. ಸಾಮಾನ್ಯ ಜನರಲ್ಲಿ, ಅದರಲ್ಲೂ ಮುಖ್ಯವಾಗಿ ಹಳ್ಳಿಗಾಡಿನ ಜನರಲ್ಲಿ ಯಾವ ವ್ಯತ್ಯಾ ಸವೂ ಆಗಲಿಲ್ಲ. ಅರಮನೆಗಳ ಆವರಣದಲ್ಲಿ ಆರಂಭವಾಗಿ ನಗರ ಮತ್ತು ಪಟ್ಟಣಗಳಿಗೆ ಹರಡಿದವು. ಈ ರೀತಿ ಉತ್ತರ ಹಿಂದೂಸ್ಥಾನದಲ್ಲಿ ಒಂದು ಮಿಶ್ರ ಸಂಸ್ಕೃತಿಯು ಆರಂಭವಾಗಿ ಅನೇಕ ಶತಮಾನಗಳ ಕಾಲ ನಡೆಯಿತು. ದೆಹಲಿ ಮತ್ತು ಈಗಿನ ಸಂಯುಕ್ತ ಪ್ರಾಂತ್ಯಗಳು ಪುರಾತನ ಆರ್ಯ ಸಂಸ್ಕೃತಿಗೆ ಕೇಂದ್ರವಾಗಿದ್ದಂತೆ, ಈ ಸಂಸ್ಕೃತಿಗೂ ಕೇಂದ್ರವಾಯಿತು. ಆದರೆ ಆರ್ಯ ಸಂಸ್ಕೃತಿಯ ಬಹು ಭಾಗವು ದಕ್ಷಿಣ ಇಂಡಿಯಕ್ಕೆ ಹೋಯಿತು ದಕ್ಷಿಣ ಭಾರತವು ಶಿಷ್ಟಾಚಾರದ ಹಿಂದೂ ಧರ್ಮಕ್ಕೆ ಭದ್ರವಾದ ಕೋಟೆಯಾಯಿತು.

ತೈಮೂರನ ಮುತ್ತಿಗೆಯಿಂದ ದೆಹಲಿಯ ಸುಲ್ತಾನರು ಬಲಗುಂದಿದ ಮೇಲೆ ಸಂಯುಕ್ತ ಪ್ರಾಂತ್ಯ ಗಳಲ್ಲಿ ಜಾನಪುರದಲ್ಲಿ ಒಂದು ಸಣ್ಣ ಮುಸ್ಲಿ೦ರಾಜ್ಯವು ತಲೆ ಎತ್ತಿತು. ಹದಿನೈದನೆಯ ಶತಮಾನದಲ್ಲಿ ಕಲೆ ಮತ್ತು ಸಂಸ್ಕೃತಿಗೆ, ಧರ್ಮ ಸಹಿಷ್ಣುತೆಗೆ ಇದು ಒಂದು ಕೇಂದ್ರವಾಯಿತು. ಜನಪ್ರಿಯವಾಗಿ ಪ್ರಬುದ್ದ ಮಾನಕ್ಕೆ ಬರುತ್ತಿದ್ದ ಹಿಂದಿ ಭಾಷೆಗೆ ಪ್ರೋತ್ಸಾಹ ದೊರೆಯಿತು. ಹಿಂದು ಮತ್ತು ಮುಸ್ಲಿಂ ಧರ್ಮಗಳನ್ನು ಒಂದುಗೂಡಿಸುವ ಪ್ರಯತ್ನವೂ ನಡೆಯಿತು. ಇದೇ ಸಮಯದಲ್ಲಿ ಉತ್ತರದಲ್ಲಿ ದೂರದ ಕಾಶ್ಮೀರದಲ್ಲಿ ಒಬ್ಬ ಸ್ವತಂತ್ರ ಮುಸ್ಲಿಂ ರಾಜನಾದ ಜೈನುಲಾದ್ದೀನ ತನ್ನ ಪರಮತ ಸಹಿಷ್ಣುತೆಗೆ ಪ್ರಸಿದ್ಧನಾದನು, ಸಂಸ್ಕೃತ ಪಾಂಡಿತ್ಯಕ್ಕೂ ಮತ್ತು ಪುರಾತನ ಸಂಸ್ಕೃತಿಗೂ ಬಹಳ ಪ್ರೋತ್ಸಾಹ ಕೊಟ್ಟನು.

ಭಾರತದಾದ್ಯಂತ ಈ ಹೊಸ ಕ್ರಾಂತಿಯಾಗುತ್ತಿತ್ತು. ಹೊಸಭಾವನೆಗಳು ಜನರ ಮನಸ್ಸನ್ನು ಕಲಕಿದ್ದವು. ಹಿಂದಿನಂತೆಯೇ ಈಗಲೂ ಭಾರತವು, ಅವ್ಯಕ್ತವಾಗಿ ಪರಕೀಯವಾದುದನ್ನು ಜೀರ್ಣಿಸಿ ಕೊಳ್ಳುತ್ತಿತ್ತು ; ಈ ಕಾರ್ಯದಲ್ಲಿ ತಾನೂ ಸ್ವಲ್ಪ ವ್ಯತ್ಯಾಸ ಹೊಂದುತ್ತಿತ್ತು. ಈ ಕ್ರಾಂತಿಸಮಯ ದಲ್ಲಿ ಉದ್ದೇಶ ಪೂರ್ವಕವಾಗಿ ಸಂಘಟನೆಯನ್ನು ಪ್ರಚಾರಮಾಡಿದ ಹೊಸ ಸುಧಾರಕರು ಹುಟ್ಟಿದರು. ಅವರೆಲ್ಲ ಮತ ಪದ್ದತಿಯನ್ನು ಖಂಡಿಸಿ ಅಥವ ನಿರ್ಲಕ್ಷಿಸಿ ತಮ್ಮ ಪ್ರಚಾರ ನಡೆಸಿದರು. ಹದಿನೈದನೆಯ ಶತಮಾನದಲ್ಲಿ ದಕ್ಷಿಣದಲ್ಲಿ ಹಿಂದೂ ರಮಾನಂದನಿದ್ದನು. ಆತನ ಶಿಷ್ಯನಾದ ಕಾಶಿಯ ಮುಸ್ಲಿಂ ನೇಕಾರ ಕಬೀರ್ ಇನ್ನೂ ಪ್ರಾಮುಖ್ಯತೆಗೆ ಬಂದನು. ಕಬೀರನ ಕವನಗಳು ಮತ್ತು ಗೀತೆಗಳು ಬಹಳ ಲೋಕಪ್ರಿಯವಾದವು. ಈಗಲೂ ಜನಜನಿತವಿವೆ. ಉತ್ತರದಲ್ಲಿ ಸಿಕ್ಮತಸ್ಥಾಪಕನಾದ