ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

اور ಭಾರತ ದರ್ಶನೆ ಗಳಿಗಾಗಿ ಪಂಚಾಯತಿಗಳಲ್ಲಿ ಕೆಲಸಮಾಡಲು ಗ್ರಾಮಸ್ಥರಿಗಿರುವ ಉತ್ಸಾಹವನ್ನು ಕಂಡು ಬೆರಗಾಗಿ ದೇನೆ. ಅತ್ಯಲ್ಪ ಕಾಲದಲ್ಲಿ ಅರ್ಥಮಾಡಿಕೊಂಡು, ತಮ್ಮ ಜೀವನಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಸಹಾಯಕರಾಗುತ್ತಾರೆ. ಅವರ ಬಾಯಿ ಕಟ್ಟುವುದು ಅಷ್ಟು ಸುಲಭವಲ್ಲ. ಆದರೆ ಸಣ್ಣ ಪಂಗಡಗಳಾಗಿ ಒಡೆದು ಪರಸ್ಪರ ಕಾದಾಡಲು ಇದರಿಂದ ಅವಕಾಶವಾಯಿತು. ಪ್ರಜಾಡಳಿತ ಪದ್ಧತಿಯು ಎಲ್ಲರಿಗೂ ತಿಳಿದಿದ್ದಿ ತಲ್ಲದೆ, ಸಮಾಜಜೀವನದಲ್ಲಿ, ಸ್ಥಳೀಯ ಸಂಸ್ಥೆ ಗಳಲ್ಲಿ, ವ್ಯಾಪಾರಸಂಘಗಳಲ್ಲಿ ಧರ್ಮಸಭೆಗಳಲ್ಲಿ ಸಾಮಾನ್ಯ ಆಚರಣೆಯಲ್ಲಿತ್ತು. ಕಾರ್ಯವಿಧಾನ, ಚುನಾವಣೆ ಮತ್ತು ಚರ್ಚೆಗಳಿಗೆ ವಿಶದವಾದ ನಿಯಮಗಳಿದ್ದವು. ಬೌದ್ಧ ಸಭೆಗಳ ವಿಷಯವಾಗಿ ಬರೆಯುತ್ತ ಮಾರ್ಕ್ವಿಸ್ ಆಫ್ ಜೆ ಟೈಂಡ್ “ ಎರಡುಸಾವಿರ ವರ್ಷಗಳ ಅಥವ ಅದಕ್ಕೂ ಹಿಂದಿನ ಈ ಬುದ್ದ ಸಭೆಗಳಲ್ಲಿ ನಮ್ಮ ಇಂದಿನ ಪಾರ್ಲಿಮೆಂಟರಿ ಪದ್ಧತಿಯ ಮೂಲವಿದೆ ಎಂದು ಕೇಳಿ ಅನೇಕರಿಗೆ ಆಶ್ಚರ್ಯವಾಗಬಹುದು. ಸಭೆಯ ಗೌರವ ಕಾಯಲು ಒಬ್ಬ ವಿಶೇಷ ಅಧಿಕಾರಿಯನ್ನು ನೇಮಿಸು ತಿದ್ದರು. ಆತನೇ ಇಂದಿನ “ ಹೌಸ್ ಆಫ್ ಕಾಮಸ್ಟ್ ನ ಸ್ಪೀಕರ್‌ನ ಮೂಲ, ಸಭೆಯಲ್ಲಿ ತಕ್ಕಷ್ಟು ಸದಸ್ಯರಿರುವಂತೆ ನೋಡಿಕೊಳ್ಳಲು ಇನ್ನೊಬ್ಬ ಅಧಿಕಾರಿಯನ್ನು ನೇಮಿಸುತ್ತಿದ್ದರು. ಆತನನ್ನು ಈಗಿನ ಪಾರ್ಲಿಮೆಂಟರಿ ಪದ್ದತಿಯ (ಚೀಫ್ ಮೈಪ್) ಪ್ರಮುಖ ಸಂಚಾಲಕ ಎನ್ನ ಬಹುದು. ಸದಸ್ಯರು ಯಾವುದಾದರೂ ವಿಷಯವನ್ನು ಸಭೆಯ ಗಮನಕ್ಕೆ ತರಬೇಕಾದರೆ ನಿರ್ಣಯರೂಪದಲ್ಲಿಟ್ಟು ಅನಂತರ ಚರ್ಚೆಯಾಗುತ್ತಿತ್ತು. ಕೆಲವು ಬಾರಿ ಇದು ಒ೦ದೇ ಸಲವೂ, ಇನ್ನು ಕೆಲವು ವೇಳೆ ಮೂರು ಬಾರಿಯೂ ನಡೆಯುತ್ತಿತ್ತು. ಅಂದರೆ ಈಗ ಮಸೂದೆಗಳ ಪಠನದಲ್ಲಿರುವ ಪಾರ್ಲಿಮೆಂಟರಿ ಪದ್ಧತಿಯು ಆಗಲೇ ಅವರ ಅನುಷ್ಠಾನದಲ್ಲಿತ್ತು. ಅಭಿಮತ ವ್ಯತ್ಯಾಸವಿದ್ದರೆ ಮತಗಣನೆಯಿಂದ ಬಹುಮತ ಅಭಿಪ್ರಾಯದಂತೆ ತೀರ್ಮಾನಮಾಡುತ್ತಿದ್ದರು. ಮತಗಣನೆಯು ಚೀಟಿಗಳ ಮೂಲಕ ನಡೆಯುತ್ತಿತ್ತು ” ಎಂದು ಹೇಳಿದ್ದಾನೆ. - ಸನಾತನ ಭಾರತೀಯ ಸಮಾಜರಚನೆಯಲ್ಲಿ ಈ ರೀತಿ ಕೆಲವು ಒಳ್ಳೆಯ ಪದ್ದತಿಗಳಿದ್ದವು. ಇಲ್ಲದಿದ್ದರೆ ಅಷ್ಟು ದೀರ್ಘಕಾಲ ಬದುಕಿ ಬಾಳಲು ಸಾಧ್ಯವೇ ಇರಲಿಲ್ಲ, ಅವುಗಳ ಹಿನ್ನೆಲೆಯಾಗಿ ಭಾರತೀಯ ಸಂಸ್ಕೃತಿಯ ದಾರ್ಶನಿಕ ಆದರ್ಶವಿತ್ತು- ಐಶ್ವಠ್ಯಕ್ಕಿಂತ ಮಾನವಜೀವನದ ಪರಿ ಪೂರ್ಣತೆ, ಸದ್ಗುಣಗಳು, ಸತ್ಯ ಮತ್ತು ಸೌಂದಯ್ಯಗಳಿಗೆ ಪ್ರಾಧಾನ್ಯ ಇತ್ತು. ಗೌರವ, ಪ್ರತಿಷ್ಠೆ ಮತ್ತು ಐಶ್ವರ್ಯಗಳು ಒಂದೇ ಕಡೆಯಲ್ಲಿ ಕೇಂದ್ರೀಕೃತವಾಗದಂತೆ ಎಚ್ಚರ ತೆಗೆದುಕೊಳ್ಳಲಾಗಿತ್ತು. ಸಮಾಜದ ಮತ್ತು ವ್ಯಕ್ತಿಯ ಅಧಿಕಾರಕ್ಕಿಂತ ಕರ್ತವ್ಯಕ್ಕೆ ವಿಶೇಷ ಬೆಲೆಕೊಡಲಾಗಿತ್ತು. ಸ್ಮೃತಿ ಗಳಲ್ಲಿ ಬೇರೆ ಬೇರೆ ಜಾತಿಗಳ “ ಧರ್ಮಗಳ”-ಕೆಲಸಕಾರಗಳ ಪಟ್ಟಿ ಇದೆ ; ಅಧಿಕಾರಗಳ ಪಟ್ಟಿ ಯು ಎಲ್ಲೂ ಇಲ್ಲ. ಪ್ರತಿಯೊಂದು ಪಂಗಡವೂ, ಮುಖ್ಯವಾಗಿ ಗ್ರಾಮವೂ ಮತ್ತೊಂದು ರೀತಿಯಲ್ಲಿ ಜಾತಿಯೂ ಸ್ವಸಂಪೂರ್ಣ ಇರಬೇಕಾಗಿತ್ತು. ಹೊರಗಣ ಚೌಕಟ್ಟಿನಲ್ಲಿ ಸ್ವಲ್ಪ ಹೊಂದಾಣಿಕೆ, ವ್ಯತ್ಯಾಸ ಮತ್ತು ಸ್ವಾತಂತ್ರಕ್ಕೆ ಅವಕಾಶವಿದ್ದರೂ ಒಳಗೆ ಬಹಳ ಬಿಗಿಯು ಇತ್ತು. ಕ್ರಮೇಣ ಅದರ ಪ್ರಸರಣಶಕ್ತಿಯೂ ಬುದ್ಧಿ ವಿಕಾಸಶಕ್ತಿಯೂ ಕುಂದಿತು, ಪ್ರತಿಷ್ಠಿತರು ಅಧಿಕಾರಬಲದಿಂದ ಯಾವ ಪ್ರಗತಿಗೂ ಅವಕಾಶ ಕೊಡದೆ ವಿದ್ಯೆಯು ಜನಸಾಮಾನ್ಯರಲ್ಲಿ ಹರಡದಂತೆ ಅಡ್ಡಿ ಬಂದರು. ಉತ್ತಮವರ್ಗದವರನೇಕರಿಗೆ ಮೂಢನಂಬಿಕೆಗಳೆಂದು ಗೊತ್ತಿದ್ದರೂ ಜನರಲ್ಲಿ ಅವುಗಳನ್ನು ಪ್ರೋತ್ಸಾ ಹಿಸಿದುದಲ್ಲದೆ ಹೊಸ ಮೂಢಭಾವನೆಗಳನ್ನೂ ಬೆಳೆಸಿದರು. ರಾಷ್ಟ್ರದ ಆರ್ಥಿಕ ಸ್ಥಿತಿ ಮಾತ್ರ ಅಲ್ಲದೆ ಭಾವನೆಗಳು ಸಹ ನಿಂತಲ್ಲಿ ನಿಂತು ಪಾಚಿಗಟ್ಟ ಸಂಕುಚಿತವೂ, ಪ್ರತಿಗಾಮಿಯೂ, ಸಾಂಪ್ರದಾಯಿ ಕವೂ, ಕಠಿನವೂ ಆದವು. ಜಾತಿಯ ಕಲ್ಪನೆ ಮತ್ತು ಆಚರಣೆಯಲ್ಲಿ ಅಧಿಕಾರದರ್ಪದ ಭಾವನೆ ಇದ್ದು ಪ್ರಜಾಡಳಿತ ನೀತಿಗೆ ಅದು ವಿರುದ್ಧ ವಿದೆ. ಎಲ್ಲಿಯವರೆಗೆ ಜನರು ತಮ್ಮ ವಂಶಪಾರಂಪಠ್ಯವಾದ ಕೆಲಸಗಳಲ್ಲಿ ನಿರತರಾಗಿ ಸಮಾಜವ್ಯವಸ್ಥೆಗೆ ವಿರುದ್ಧವಾಗಿ ಎದುರುಬೀಳಲಿಲ್ಲವೋ ಅಲ್ಲಿಯವರೆಗೆ ಜಾತಿ ಪದ್ಧತಿಯಲ್ಲಿ