ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೊಸ ಸಮಸ್ಯೆಗಳು ೨f ಸಂಸ್ಕೃತಿಯು ತನ್ನ ಉನ್ನತಿಯನ್ನು ಮುಟ್ಟಿ ಮೊದಲಿನ ಕುತೂಹಲ ಸೃಷ್ಟಿಯನ್ನೂ ಸಾಹಸ ಮನೋ ಭಾವನೆಯನ್ನೂ ಕಳೆದುಕೊಂಡಿದ್ದಿತು. , ಬಾಬರನಿಗೆ ಕಲೆ, ಸಾಹಿತ್ಯ, ಉತ್ಕೃಷ್ಟ ಜೀವನದಲ್ಲಿ ಆಸಕ್ತಿಯಿತ್ತು : ಧೈರ್ಯಶಾಲಿಯೂ, ಸಾಹಸಿಗನೂ ಆಗಿ, ಪುನರುಜ್ಜಿವನ ಕಾಲದ ಪ್ರತಿನಿಧಿಯಾಗಿ, ಮನಮೋಹಕ ರೂಪಿನ ರಾಜನಾಗಿ ದ್ದನು. ಆತನ ಮೊಮ್ಮಗ ಅಕ್ಷರ್ ಅವನಿಗಿಂತ ಸುಂದರನೂ, ಸದ್ಗುಣಿಯೂ ಆಗಿದ್ದನು. ಪ್ರಾಣದ ಹಂಗಿಲ್ಲದೆ ಕಾದಾಡುವ ಧೈರ್ಯಶಾಲಿಯೂ, ದಕ್ಷಸೇನಾಪತಿಯೂ ಆದರೂ, ಮೃದು ಸ್ವಭಾವದವನೂ, ಕರುಣಿಯ, ಆದರ್ಶ ಜೀವಿಯೂ, ಮಹಾಕನಸು ಕಾಣುವವನೂ ಅಗಿದ್ದನು. ಅಲ್ಲದೆ ಶ್ರೇಷ್ಠ ಕಾರ್ಯಸಾಧಕನಾಗಿದ್ದನು ಮತ್ತು ತನ್ನ ಅನುಯಾಯಿಗಳಲ್ಲಿ ಅಚಲವಾದ ಸ್ವಾಮಿಭಕ್ತಿಯನ್ನು ಪ್ರೇರೇಪಿಸಿದ ಜನನಾಯಕನಾಗಿದ್ದನು. ಯೋಧನಾಗಿ ಭಾರತದ ಅನೇಕ ಭಾಗಗಳನ್ನು ಗೆದ್ದನು, ಆದರೆ ಆತನ ದೃಷ್ಟಿ ಯು ಇನ್ನೂ ಶಾಶ್ವತವಾದ ಜಯವನ್ನು ಮತ್ತು ಹೃದಯದ ಒಲವನ್ನು ಗೆಲ್ಲುವು ದರ ಮೇಲೆ ನೆಟ್ಟಿತ್ತು. ಆತನ ಆಸ್ಥಾನದ ಪೋರ್ತುಗೀಸ್ ಯೇಸು ಪಂಥದವರು (Jesuits) ಹೇಳಿರುವಂತೆ ಆತನ ಕಣ್ಣುಗಳು “ ಸೂರ್ಯ ರಶ್ಮಿಯು ಬಿದ್ದ ಸಮುದ್ರದ ಕಾಂತಿಯಂತ ಜಾಜ್ವಲ್ಯ ಮಾನವಾಗಿ ” ಮನಸ್ಸನ್ನು ಸೂರೆಗೊಳ್ಳುತ್ತಿದ್ದವು. ಅಖಂಡ ಭಾರತದ ಪ್ರಾಚೀನ ಸವಿಗನಸುರಾಜಕೀಯವಾಗಿ ಮಾತ್ರವಲ್ಲದೆ ಒಂದು ಜನಾಂಗವೆಂಬ ಸವಿಗನಸು-ಪುನಃ ಆತನ ಮನಸ್ಸಿನಲ್ಲಿ ಮೂಡಿತು. ೧೫೫೬ ರಿಂದ ಆರಂಭವಾದ ಅವನ ಐವತ್ತು ವರ್ಷಗಳ ದೀರ್ಘ ರಾಜ್ಯಭಾರ ಕಾಲವ ನ್ನೆಲ್ಲ ಅವನು ಈ ಉದ್ದೇಶ ಸಾಧನೆಗಾಗಿಯ ಮಾಸಲಿಟ್ಟನು. ಬೇರೆ ಯಾರಿಗೂ ಅಧೀನರಾಗದ ಅನೇಕ ರಾಜಪುತ್ರ ರಾಜರನ್ನು ತನ್ನ ಕಡೆ ಒಲಿಸಿಕೊಂಡನು, ಒಬ್ಬ ರಾಜ ಪುತ್ರ ರಾಜಕುಮಾರಿ ಯನ್ನು ಮದುವೆಯಾದನು. ಆತನ ಮಗ ಜಹಾಂಗೀರ್ ಆಕೆಯ ಮಗ, ಜಹಾಂಗೀರನ ಮಗ ನಾದ ಷಹಜಹಾನನ ತಾಯಿಯು ಸಹ ರಾಜಪುತ್ರ ರಾಜಮನೆತನದವಳು. ಈ ರೀತಿ ಈ ತುರ್ಕಿ ಮೊಗಲ ರಾಜಮನೆತನವು ಕ್ರಮೇಣ ಹೆಚ್ಚು ಭಾರತೀಯವಾಯಿತು. ರಾಜಪುತ್ರರೆಂದರೆ ಅಕ್ಷರನಿಗೆ ಬಹಳ ಗೌರವವಿತ್ತು. ತನ್ನ ವಿವಾಹ ಸಂಬಂಧಗಳಿಂದ ಮತ್ತು ಇತರ ಕಾರ್ಯನೀತಿಯಿಂದ ರಾಜಪುತ್ರ ರಾಜಮನೆತನಗಳ ವಿಶ್ವಾಸವನ್ನು ಗಳಿಸಿ ತನ್ನ ಚಕ್ರಾಧಿಪತ್ಯವನ್ನು ಭದ್ರಪಡಿಸಿದನು. ಮುಂದಿನ ಆಳ್ವಿಕೆಯಲ್ಲೂ ಮುಂದುವರಿದ ಈ ಮೊಗಲ್- ರಾಜಪುತ್ರ ಸಹಕಾರದಿಂದ ಸರಕಾರ ಪದ್ದತಿ ಆಡಳಿತ ಕ್ರಮ ಮತ್ತು ಸೈನ್ಯದಲ್ಲಿ ಮಾತ್ರವಲ್ಲದೆ ಕಲೆ, ಸಂಸ್ಕೃತಿ ಮತ್ತು ಜೀವನ ವಿಧಾನ ದಲ್ಲಿ ಸಹ ವಿಶೇಷ ಪರಿಣಾಮಗಳಾದವು. ಮೊಗಲ್ ಶ್ರೀಮಂತರು ಕ್ರಮೇಣ ಭಾರತೀಯರಾದರು ; ರಾಜಪುತ್ರರೂ ಮತ್ತು ಇತರರೂ ಪಾರಸಿ ಸಂಸ್ಕೃತಿಗೆ ಮಾರುಹೋದರು. ಅಕ್ಷರ್ ಅನೇಕರನ್ನು ವಶಪಡಿಸಿಕೊಂಡನು. ಆದರೆ ರಾಜಪುತಾನದ ಮೇವಾಡದ ದೊರೆ ಯಾದ ರಾಣಾ ಪ್ರತಾಪನು ಮಾತ್ರ ಕೊನೆಗೂ ಜಗ್ಗಲಿಲ್ಲ. ಪರದೇಶದ ಆಕ್ರಮಣಕಾರನಿಗೆ ಎಂದೂ ತಲೆ ಬಾಗುವುದಿಲ್ಲವೆಂದು ಕಾಡುಮೇಡುಗಳಲ್ಲಿ ಅಲೆದರೂ ಸರಿಯೆಂದು ದಿಟ್ಟ ತನದ ಆತ್ಮಗೌರವದಿಂದ ಕಷ್ಟ ಪರಂಪರೆಯನ್ನನುಭವಿಸಿದನು.

  • ಅಕೃರನ ಸುತ್ತಲೂ ಆತನಲ್ಲಿ ಮತ್ತು ಆತನ ಆದರ್ಶಗಳಲ್ಲಿ ವಿಶ್ವಾಸವನ್ನಿಟ್ಟಿದ್ದ ಅನೇಕ ಮಹಾ ಮೇಧಾವಿಗಳು ಸೇರಿದರು ಫೈಜಿ, ಅಬುಲ್ ಫಜಲ್ ಸೋದರರು, ಬೀರ್ಬಲ್, ರಾಜಮಾನ್ಸಿಂಗ್, ಅಬ್ದುಲ್ ರಹೀಂಖಾನ್ ಖಾನಾ ಅವರಲ್ಲಿ ಮುಖ್ಯರು. ಆತನ ಆಸ್ಥಾನದಲ್ಲಿ ಎಲ್ಲ ಧರ್ಮಗಳ ಜನರೂ, ಹೊಸಭಾವನೆಗಳು, ಸಂಶೋಧನೆಗಳನ್ನು ಕಂಡುಹಿಡಿದವರೂ ಬಂದು ಸೇರುತ್ತಿದ್ದರು. ಆತನ ಧರ್ಮ ಸಹಿಷ್ಣುತೆ, ಅನ್ಯ ಧರ್ಮಗಳ ಮತ್ತು ಭಾವನೆಗಳ ಪ್ರೋತ್ಸಾಹದಿಂದ ಧರ್ಮನಿಷ್ಠ ಮುಸ್ಲಿಮರನೇಕ ರಿಗೆ ಕೋಪವುಂಟಾಯಿತು. ಎಲ್ಲರಿಗೂ ಮಾನ್ಯವಾದ ನೂತನ ಧರ್ಮ ಒಂದನ್ನು ಸ್ಥಾಪಿಸಲು ಪ್ರಯತ್ನ ಪಟ್ಟನು. ಉತ್ತರ ಹಿಂದೂಸ್ಥಾನದಲ್ಲಿ ಹಿಂದೂ-ಮುಸ್ಲಿಂ ಸಂಸ್ಕೃತಿಗಳ ಸಂಕೀರ್ಣವಾಗಿ ಮುಂದುವರಿದದ್ದು ಈತನ ಕಾಲದಲ್ಲಿ. ಅಕ್ಷರ್ ಹಿಂದೂ-ಮುಸ್ಲಿಂ ಇಬ್ಬರ ಪ್ರೇಮ ವಿಶ್ವಾಸಗಳನ್ನೂ ಗಳಿಸಿದ್ದನು. ಮೊಗಲ್ ಸಂತತಿಯು ಪೂರ್ಣ ಭಾರತೀಯವಾಗಿ ಬೇರುಬಿಟ್ಟಿತು.