ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತ ದರ್ಶನ ದಕ್ಷರೂ, ಮೇಧಾವಿಗಳೂ ಆದ ಅಧಿಕಾರಿಗಳು ಇದ್ದು ಭಾರತದ ರಾಜಸಭೆಗಳಲ್ಲಿ ಅವರು ಕಾರ್ಯಭಾರ ನಡೆಸುತ್ತಿದ್ದರು ” ಎಂದು ಎಡ್ವರ್ಡ್ ಥಾಮ್ಸನ್ ಹೇಳುತ್ತಾನೆ. ರಾಜನ ಮಂತ್ರಿಗಳಿಗೆ ಮತ್ತು ಇತರ ಉನ್ನತ ಅಧಿಕಾರಿಗಳಿಗೆ ಲಂಚಕೊಟ್ಟು ಅವರಲ್ಲಿ ದ್ರೋಹಬುದ್ದಿ ಯನ್ನುಂಟುಮಾಡುವುದು ಬ್ರಿಟಿಷ್ ರೆಸಿಡೆಂಟರುಗಳ ಮುಖ್ಯ ಕೆಲಸವಾಗಿತ್ತು. “ ಗುಪ್ತಚಾರ ಪದ್ದತಿಯು ಸಂಪೂರ್ಣ ದಕ್ಷತೆ ಯಿಂದ ಕೆಲಸಮಾಡುತ್ತಿತ್ತು” ಎಂದು ಒಬ್ಬ ಚರಿತ್ರೆಕಾರನು ಹೇಳುತ್ತಾನೆ. ರಾಜಸಭೆಯ ವಿಷಯ ಗಳು, ತಮ್ಮ ಶತ್ರುಗಳ ಸೈನ್ಯಬಲ ಸಂಪೂರ್ಣವಾಗಿ ಬ್ರಿಟಿಷರಿಗೆ ತಿಳಿದಿತ್ತು. ಆದರೆ ಬ್ರಿಟಿಷರು ಮಾಡುತ್ತಿದ್ದ ಅಥವ ಮುಂದೆ ಮಾಡಲು ಯೋಚಿಸುತ್ತಿದ್ದ ಕೆಲಸ ಅವರ ಶತ್ರುಗಳಿಗೆ ಸ್ವಲ್ಪವೂ ಗೊತ್ತಾಗುತ್ತಿರಲಿಲ್ಲ. ಬ್ರಿಟಿಷರ ಈ ಪಂಚಮದಳವು ಬಹಳ ದಕ್ಷತೆಯಿಂದ ಕೆಲಸಮಾಡಿತು. ವಿಷಮ ಸನ್ನಿವೇಶಗಳಲ್ಲಿ ಮತ್ತು ಯುದ್ಧದ ಕಾಲದಲ್ಲಿ ಭಾರತ ಸೈನ್ಯದ ಅಧಿಕಾರಿಗಳು ಈಸ್ಟ್ ಇಂಡಿಯ ಕಂಪೆನಿಯ ಪರವಾಗಿ ಕೈಬಿಟ್ಟು ಬಿಡುತ್ತಿದ್ದ ಕಾರಣ ಯುದ್ದ ಪರಿಸ್ಥಿತಿಯೇ ತುಂಬ ವ್ಯತ್ಯಾಸವಾಗು ಇತ್ತು. ನಿಜವಾದ ಯುದ್ಧದ ಆರಂಭದ ಮೊದಲೇ ಯುದ್ದಗಳನ್ನು ಗೆಲ್ಲುತ್ತಿದ್ದರು. ಪ್ಲಾಸಿಯಲ್ಲಿ ಹಾಗೆ ಆಯಿತು, ಸಿಕ್ಕ ಕದನಗಳವರೆಗೂ ಅದೇ ನೀತಿಯನ್ನು ಅನುಸರಿಸಿದರು. ಉದಾಹರಣೆ ಬೇಕೆಂದರೆ ಗ್ವಾಲಿಯ‌ದ ಸಿಂಧ್ಯನ ಸೇನೆಯಲ್ಲಿದ್ದ ಒಬ್ಬ ಉನ್ನತ ಅಧಿಕಾರಿಯು ಮೊದಲೇ ಬ್ರಿಟ ಷರ ಒಡನೆ ಗುಪ್ತವಾಗಿ ಒಪ್ಪಂದ ಮಾಡಿಕೊಂಡು ಯುದ್ಧ ಹೂಡಬೇಕೆನ್ನುವಾಗ ದ್ರೋಹಮಾಡಿ ತನ್ನ ಪೂರ್ವ ಸೈನ್ಯದೊಡನೆ ಬ್ರಿಟಿಷರನ್ನು ಸೇರಿಕೊಂಡನು. ಈ ದ್ರೋಹಕ್ಕೆ ಬಲಿಯಾದ ಸಿಂಧ್ಯನ ರಾಜ್ಯದಿಂದಲೇ ಒಂದು ಭಾಗವನ್ನು ಪ್ರತ್ಯೇಕಿಸಿ ಬೇರೆ ಸಂಸ್ಥಾನವನ್ನು ಸ್ಥಾಪಿಸಿ ಬ್ರಿಟಿಷರು ಆತನನ್ನು ರಾಜನನ್ನಾಗಿ ಮಾಡಿ ಬಹುಮಾನಿಸಿದರು. ಆ ಸಂಸ್ಥಾನವು ಈಗಲೂ ಇದೆ. ಆದರೆ ಆತನ ಹೆಸರು ಮಾತ್ರ ದ್ರೋಹ ಮತ್ತು ಮೋಸಕ್ಕೆ ಇಂದಿನ ಯುದ್ಧಗಳ “ ಕ್ವಿಸ್ಸಿಂಗ್ ” ನಂತೆ ಮನೆಮಾತಾಗಿದೆ. ಈ ರೀತಿ ಬ್ರಿಟಿಷರಲ್ಲಿ ದಕ್ಷರಾದ ನಾಯಕರಿದ್ದರು. ಐಕಮತ್ಯವಿತ್ತು. ಅದರಿಂದ ಅವರಲ್ಲಿ ಶ್ರೇಷ್ಠ ರಾಜನೈಪುಣ್ಯತೆಯು, ಸೈನ್ಯ ಶಕ್ತಿಯು ಇತ್ತು. ಅವರ ಶತ್ರುಗಳಿಂದ ಹೆಚ್ಚು' ವಿಷಯವು ಬ್ರಿಟಿಷರಿಗೇ ತಿಳಿದಿತ್ತು. ಭಾರತದ ರಾಜರುಗಳಲ್ಲಿನ ಅನೈಕ್ಯತೆ ಮತ್ತು ಪರಸ್ಪರ ವೈಷಮ್ಯವನ್ನು ಪೂರ್ಣ ಉಪ ಯೋಗ ಮಾಡಿಕೊಂಡರು. ಸಮುದ್ರ ಮಾರ್ಗಗಳ ಸ್ವಾಮ್ಯದಿಂದ ಉತ್ತಮು ಬಂದರುಗಳನ್ನು ಸ್ಥಾಪಿಸಿ ಆ ಮೂಲಕ ತಮ್ಮ ಮೂಲಸಾಮಗ್ರಿಗಳನ್ನು ಬಲಪಡಿಸಿಕೊಂಡರು, ತಾತ್ಕಾಲಿಕ ಸೋಲು ಆದರೂ ಸ್ವಲ್ಪ ಕಾಲ ಸುಮ್ಮನೆ ಕಾದು ಚೇತರಿಸಿಕೊಂಡು ಪುನಃ ಮೇಲೆ ಬೀಳುತ್ತಿದ್ದರು. ಪ್ಲಾಸಿ ಕದನದ ನಂತರ ಮರಾಠರು ಮತ್ತು ಇತರರೊಡನೆ ಯುದ್ಧ ಮಾಡಲು ಬಂಗಾಲದಲ್ಲಿ ಅಪಾರ ಐಶ್ವರವೂ ಯುದ್ಧ ಸಾಮಗ್ರಿಗಳೂ ದೊರೆತವು. ಪ್ರತಿಯೊಂದು ಗೆಲವಿನಿಂದಲೂ ಅವರ ಶಕ್ತಿ ಸಾಮಗ್ರಿಯನ್ನು ಬಲಪಡಿಸಿ ಕೊಳ್ಳುತ್ತಿದ್ದರು. ಭಾರತೀಯ ರಾಜರಿಗಾದರೋ ಪ್ರತಿಯೊಂದು ಸೋಲೂ ಒ೦ದು ಚೇತರಿಸಿಕೊಳ್ಳ ಲಾಗದ ದುರಂತವಾಗುತ್ತಿತ್ತು. ಈ ಯುದ್ದ ದಂಡಯಾತ್ರೆ ಮತ್ತು ಲೂಟಗಳಿಂದ ಮಧ್ಯ ಭಾರತ ರಾಜಪುತಾನ ದಕ್ಷಿಣ ಮತ್ತು ಪಶ್ಚಿಮ ಭಾರತದ ಕೆಲವು ಭಾಗಗಳು ದಾತರಿಲ್ಲದ ಹಿಂಸೆ ದುಃಖ ಸಂಕಟಗಳ ಗೋಳಿನ ಸ್ಮಶಾನಗಳು ದವು, ಮೇಲಿಂದ ಮೇಲೆ ಸೈನ್ಯಗಳ ಓಡಾಟ, ಹಿಂದೆಯೇ ದರೋಡೆಕಾರರ ಗುಂಪು. ಜನರನ್ನು ಸುಲಿಗೆ ಮಾಡಿ ಅವರಲ್ಲಿದ್ದ ಹಣಕಾಸನ್ನು ದೋಚಿಕೊಳ್ಳುವುದರ ಹೊರತು ಆ ದುರದೃಷ್ಟ ಜೀವಿಗಳ ಗೋಳನ್ನು ಕೇಳುವವರೇ ಇರಲಿಲ್ಲ. ಭಾರತದ ಕೆಲವು ಭಾಗಗಳು ಮೂವತ್ತು ವರ್ಷಗಳ ಯುದ್ಧ ಕಾಲದ ಮಧ್ಯ ಯೂರೋಪಿನಂತ ಅನಾಯಕ ರಾಜ್ಯಗಳಾದವು. ಎಲ್ಲ ಕಡೆಯು ಪರಿಸ್ಥಿತಿಯು ಹದ ಗಟ್ಟಿತ್ತು; ಬ್ರಿಟಿಷರ ಆಡಳಿತದಲ್ಲಿ ಅಥವ ಅಧೀನ ರಾಜ್ಯಗಳ ಪರಿಸ್ಥಿತಿಯು ಇನ್ನೂ ಹೊಲಸಾಗಿತ್ತು. * ಮದ್ರಾಸು, ಅಥವ ಅಧೀನ ರಾಜ್ಯಗಳಾದ ಅಯೋಧ್ಯೆ ಅಥವ ಹೈದರಾಬಾದಿನ ಗೋಳಿನ ತಳ ಮಳದ ಬಾಳನ್ನು ನೆನಸಿಕೊಂಡರೆ ಮೈನವಿರುತ್ತದೆ. ಇದಕ್ಕೆ ಪ್ರತಿಯಾಗಿ ಮರಾಠರ ದಂಡನಾಯಕ ನಾದ ನಾನಾಪತ್ನವೀಸನ ರಾಜ್ಯದ ಜನರ ನೆಮ್ಮದಿಯ ಬಾಳು ಕನಸಿನಂತೆ ಇತ್ತು” ಎಂದು ಎಡ್ವರ್ಡ್ ಥಾಮ್ಸನ್ ಹೇಳುತ್ತಾನೆ,