ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೊಸ ಸಮಸ್ಯೆಗಳು ಆಶ್ರಯಿಸಿದ ದಾಸ್ಯ ವೃತ್ತಿಯ ಜನರು ಅಥವ ಭಾರತದ ರಾಜಾಸ್ಥಾನಗಳ ಲಂಚಬಡಕರೂ ದ್ರೋಹಿ ಗಳೂ ಆದ ಮಂತ್ರಿಗಳು, ರಣಜಿತ್‌ಸಿಂಗ್ ಸೂಕ್ಷ್ಮ ಬುದ್ದಿ ಯವನೂ ವಿಚಾರಪರನೂ ಮಾತ್ರವಲ್ಲದೆ ಇಂಡಿಯದಲ್ಲಿ, ಪ್ರಪಂಚದಲ್ಲಿ, ಮಾನವ ಜೀವನಕ್ಕೆ ಬೆಲೆ ಇಲ್ಲದ ಪಾಶವೀ ವೃತ್ತಿಯ ಕಾಲದಲ್ಲಿ ಆತನ ಮಾನವೀ ಯತೆಯು ಅದ್ಭುತವಾಗಿತ್ತು. ರಾಜ್ಯವನ್ನು ಕಟ್ಟಿ, ದೊಡ್ಡ ಸೇನೆಯನ್ನು ಶೇಖರಿಸಿದರೂ ಆತನಿಗೆ ರಕ್ತಪಾತವೆಂದರೆ ಆಗುತ್ತಿರಲಿಲ್ಲ. * ಅತ್ಯಲ್ಪ ದೋಷದಿಂದ ಒಬ್ಬ ವ್ಯಕ್ತಿಯು ಅಷ್ಟು ದೊಡ್ಡ ಸಾಮ್ರಾ ಜ್ಯವನ್ನು ಕಟ್ಟಿದ ನಿದರ್ಶನವು ಇದೇ ಮೊದಲನೆಯದು ” ಎಂದು ಪ್ರಿನ್ಸೆಪ್ ಹೇಳುತ್ತಾನೆ. ಇಂಗ್ಲೆ೦ಡಿ ನಲ್ಲಿ ಸಣ್ಣ ಕಳುವು ಮಾಡಿದವರಿಗೂ ಮರಣದಂಡನೆಯನ್ನು ವಿಧಿಸುತ್ತಿದ್ದಾಗ ತಪ್ಪು ಎಷ್ಟೇ ದೊಡ್ಡದಿ ದ್ದರೂ ಯಾವ ಅಪರಾಧಕ್ಕೂ ಮರಣ ದಂಡನೆಯು ಇರಕೂಡದೆಂದು ರಣಜಿತ್‌ಸಿಂಗ್ ವಿಧಿಸಿದನು. “ಆತನ ಪ್ರಾಣಹರಣಕ್ಕಾಗಿ ಅನೇಕ ಪ್ರಯತ್ನಗಳು ನಡೆದರೂ ಯುದ್ಧರಂಗದಲ್ಲಿ ಹೊರತು ಯಾವಾ ಗಲೂ ಯಾರ ಪ್ರಾಣವನ್ನೂ ಅವನು ತೆಗೆದುಕೊಂಡವನಲ್ಲ ; ನಾಗರಿಕರೆಂದು ಹೇಳಿಕೊಳ್ಳುವ ಅನೇಕ ರಾಜರುಗಳ ಆಳ್ವಿಕೆಯಲ್ಲಿ ಕಂಡು ಬರುವ ಕೌಲ್ಯ ಮತ್ತು ದಬ್ಬಾಳಿಕೆ ಯಾವುದೂ ಆತನ ಆಳ್ವಿಕೆಯಲ್ಲಿ ಕಾಣುವುದಿಲ್ಲ” ಎಂದು ಆತನನ್ನು ನೋಡಿದ ಆ ಸ್ಟಾರ್‌ನ್ ಬರೆಯುತ್ತಾನೆ. ರಾಜಪುತಾನದ ಜಯಪುರದ ಸವಾಯಿ ಜಯಸಿಂಗ್ ಇನ್ನೊಂದು ಬಗೆಯ ರಾಜಕಾರಣಿಯಾಗಿ ದ್ದನು. ಆತನು ಇನ್ನೂ ಸ್ವಲ್ಪ ಮುಂಚಿನವನು ; ತೀರಿದ್ದು ೧೭೪೩ ರಲ್ಲಿ, ಅವರಂಗಜೇಬನ ಮರ ಣಾನಂತರ ಮೊಗಲ್ ರಾಜ್ಯವು ಒಡೆಯುತ್ತಿದ್ದ ಕಾಲದಲ್ಲಿ ಇದ್ದವನು. ಮೇಲಿಂದ ಮೇಲೆ ಒದಗಿದ ಆಘಾತಗಳು ಮತ್ತು ಪರಿವರ್ತನೆಗಳನ್ನೆಲ್ಲ ಎದುರಿಸಿ ಉಳಿಯುವಷ್ಟು ಬುದ್ದಿಶಾಲಿಯೂ, ಸಮಯ ಸಾಧಕನೂ ಆಗಿದ್ದನು. ದೆಹಲಿ ಚಕ್ರವರ್ತಿಯ ಸಾರ್ವಭೌಮತ್ವವನ್ನು ಒಪ್ಪಿಕೊಂಡಿದ್ದನು. ಮುನ್ನುಗ್ಗುತ್ತಿದ್ದ ಮರಾಠರನ್ನು ತಡೆಯುವುದು ಸಾಧ್ಯವಿಲ್ಲವೆಂದು ಕಂಡಾಗ ದೆಹಲಿಯ ಚಕ್ರವರ್ತಿಯ ಪರವಾಗಿ ಆತನೊಡನೆ ಒಪ್ಪಂದಕ್ಕೆ ಬಂದನು. ಆದರೆ ನಾನು ಆತನಲ್ಲಿ ನೋಡುವುದು ಆತನ ರಾಜ ಕೀಯ ಅಥವ ಯುದ್ಧ ನೈಪುಣ್ಯವಲ್ಲ. ಆತನು ಪರಾಕ್ರಮಶಾಲಿಯಾದ ಯೋಧನೂ ರಾಜಕಾರಣ ಪಟುವೂ ಆಗಿದ್ದು ದಕ್ಕಿಂತ ಹೆಚ್ಚಾಗಿ ಗಣಿತಶಾಸ್ತ್ರ, ಖಗೋಳ ಶಾಸ್ತ್ರ, ವಿಜ್ಞಾನ ಮತ್ತು ನಗರ ನಿರ್ಮಾಣ ಯೋಜನೆಯಲ್ಲಿ ಮಹಾ ಜ್ಞಾನಿಯಾಗಿದ್ದನು. ಇತಿಹಾಸದ ಅಭ್ಯಾಸದಲ್ಲ ಆಸಕ್ತ ನಿದ್ದನು. ಜಯಸಿಂಗನು ಜಯಪುರ, ದೆಹಲಿ, ಉಜ್ಜಯಿನಿ, ಕಾಶಿ ಮತ್ತು ಮಧುರಾ ನಗರಗಳಲ್ಲಿ ದೊಡ್ಡ ಸಮೀಕ್ಷಾ ಮಂದಿರಗಳನ್ನು ಕಟ್ಟಿಸಿದನು. ಪೋರ್ತುಗಲ್ ನಲ್ಲಿ ಖಗೋಳ ಶಾಸ್ತ್ರದ ಬೆಳವಣಿಗೆಯನ್ನು ಪೋರ್ತುಗೀಸ್ ಮತಪ್ರಚಾರಕರಿಂದ ತಿಳಿದು ಪೋರ್ತುಗೀಸ್ ದೊರೆಯಾದ ಇಮ್ಯಾನ್ಯುಯಲ್ ರಾಜನ ಬಳಿಗೆ ತನ್ನ ರಾಯಭಾರಿಯೊಬ್ಬನನ್ನು ಪಾದ್ರಿಗಳೊಂದಿಗೆ ಕಳುಹಿಸಿದನು. ಇಮ್ಯಾನ್ಯು ಯಲ್ ತನ್ನ ರಾಯಭಾರಿಯಾದ ಝೇವಿಯರ್ ಡಿ ಸಿಲ್ವಾನನ್ನು ಡಿಲಾಹೈರ್‌ನ ಕೋಷ್ಟಕಗಳೊಂದಿಗೆ ಜಯಸಿಂಗನಲ್ಲಿಗೆ ಕಳುಹಿಸಿದನು. ತನ್ನ ಕೋಷ್ಟಕಗಳೊಂದಿಗೆ ಹೋಲಿಸಿನೋಡಿದಾಗ ಪೋರ್ತು ಗೀಸರ ಕೋಷ್ಟಕಗಳು ನಿಖರ ಇಲ್ಲವೆಂದೂ, ಅನೇಕ ತಪ್ಪುಗಳಿವೆ ಎಂದೂ ಗೊತ್ತಾಯಿತು. ಅವರು ಉಪಯೋಗಿಸಿದ ಉಪಕರಣಗಳ ವ್ಯತ್ಯಾಸಗಳ ದೋಷದಿಂದ ಆ ತಪ್ಪಾಗಿದೆ ಎಂದು ಕಂಡುಹಿಡಿದನು. - ಜಯಸಿಂಗ್ ಭಾರತೀಯ ಗಣಿತಶಾಸ್ತ್ರದಲ್ಲಿ ನಿಪುಣನಿದ್ದನು. ಗ್ರೀಕರ ಖಗೋಳ ಗ್ರಂಥಗ ಇನ್ನೂ ಅಭ್ಯಾಸಮಾಡಿದ್ದನು. ಯೂರೋಪಿನಲ್ಲಿ ಗಣಿತಶಾಸ್ತ್ರದಲ್ಲಾದ ಪ್ರಗತಿಯನ್ನೂ ತಿಳಿದು ಕೊಂಡಿದ್ದನು. ಸಮಕ್ಷೇತ್ರ ಮತ್ತು ಗೋಲ ತ್ರಿಕೋನ ಮಿತಿಯ ಮೇಲೂ, ಲಘು ಗಣಕದ (ಲಾಗರಿ ತಮ್) ರಚನೆ ಮತ್ತು ಉಪಯೋಗದ ಮೇಲೂ ಇದ್ದ ಗ್ರೀಕ್ ಮತ್ತು ಯುರೋಪಿರ್ಯ ಗ್ರಂಥಗಳನ್ನು ಸಂಸ್ಕೃತ ಭಾಷೆಗೆ ಭಾಷಾಂತರ ಮಾಡಿಸಿದ್ದನು. ಖಗೋಳಶಾಸ್ತ್ರದ ಮೇಲಣ ಅರಬ್ಬಿ ಗ್ರಂಥಗಳನ್ನೂ ಭಾಷಾಂತರ ಮಾಡಿಸಿದ್ದನು.