ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತ ದರ್ಶನ ಈ ಆಡಳಿತವ್ಯವಸ್ಥೆಯ ಎರಡು ಮುಖ್ಯ ಅಂಗಗಳೆಂದರೆ ಭೂಕಂದಾಯ ಪದ್ಧತಿ ಮತ್ತು ಪೋಲೀಸ್ ಪಡೆ, ಪ್ರತಿಯೊಂದು ಜಿಲ್ಲೆಯಲ್ಲೂ ಕಲೆಕ್ಟರ್ ಅಥವಾ ಜಿಲ್ಲೆಯ ನ್ಯಾಯಾಧೀಶನೇ ಆಡಳಿತ ವರ್ಗದ ಸೂತ್ರಧಾರನಾದನು. ಆಡಳಿತಸೂತ್ರ, ನ್ಯಾಯವಿಮರ್ಶೆ, ಕಂದಾಯ ವಸೂಲಿ, ಮತ್ತು ರಕ್ಷಣೆ ಎಲ್ಲವೂ ಅವನಲ್ಲಿಯೇ ಕೇಂದ್ರೀಕೃತವಾಗಿ ಜಿಲ್ಲೆಯ ಸರ್ವಾಧಿಕಾರಿಯಾದನು. ಅಕ್ಕ ಪಕ್ಕ ದಲ್ಲಿ ಯಾವುದಾದರೂ ದೇಶೀಯ ಸಂಸ್ಥಾನಗಳಿದ್ದರೆ ಅವುಗಳಿಗೆ ಬ್ರಿಟಿಷರ ಪ್ರತಿನಿಧಿಯೂ ಅವನೇ. ಇದರ ಮೇಲೆ ಭಾರತೀಯ ಸೈನ್ಯ; ಸೈನ್ಯದಲ್ಲಿ ಬ್ರಿಟಿಷರೂ ಭಾರತೀಯರೂ ಇದ್ದರೂ ಅಧಿ ಕಾರವೆಲ್ಲ ಬ್ರಿಟಿಷ್ ಅಧಿಕಾರಿಗಳ ಕೈಯಲ್ಲಿ. ೧೮೫೭ನೆ ದಂಗೆಯ ನಂತರ ಅನೇಕ ಬಾರಿ ಸೈನ್ಯವನ್ನು ಪುನರ್ವ್ಯವಸೆಮಾಡಿ ಕೊನೆಗೆ ಅದು ಬ್ರಿಟಿಷ್ ಸೈನ್ಯದ ಒಂದು ಅಂಗವಾಯಿತು. ವಿವಿಧ ಪಂಗಡ ಗಳನ್ನು ತೃಪ್ತಿಗೊಳಿಸುವ ನೆಪದಲ್ಲಿ ಪ್ರಮುಖ ಸ್ಥಾನಗಳಲ್ಲಿ ಬ್ರಿಟಿಷ್ ಸೈನ್ಯವನ್ನೇ ಇಡಲಾಯಿತು. “ ತಕ್ಕಷ್ಟು ಯೂರೋಪಿಯನ್ ಸೈನ್ಯವನ್ನೂ ಇಡುವುದರ ಜೊತೆಗೆ, ದೇಶೀಯ ಸೈನಿಕರಲ್ಲಿ ಒಬ್ಬರ ಮೇಲೊಬ್ಬರನ್ನು ಎತ್ತಿ ಕಟ್ಟಲಾಗಿದೆ” ಎಂದು ೧೮೫೯ರ ಅಧಿಕೃತವರದಿಯಿಂದ ಗೊತ್ತಾಗುತ್ತದೆ. ಈ ಸೈನ್ಯದ ಮುಖ್ಯ ಕೆಲಸ ದೇಶದ ಆಕ್ರಮಣ. “ ಒಳ ರಕ್ಷಣೆ ಸೈನ್ಯ” ಎಂದು ಹೆಸರು ; ಆದರೆ ಅವರಲ್ಲಿ ಬಹು ಸಂಖ್ಯಾತರು ಬ್ರಿಟಿಷರು ಭಾರತದ ವೆಚ್ಚದಿಂದ ಗಡಿನಾಡು ಪ್ರಾಂತ್ಯವು ಬ್ರಿಟಿಷ್ ಅಧಿಕಾರಿಗಳಿಗೆ ಶಿಕ್ಷಣ ಕೇಂದ್ರವಾಯಿತು. ಭಾರತೀಯರೇ ಹೆಚ್ಚಾಗಿದ್ದ ಯೋಧಪಡೆಯನ್ನು ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣಕ್ಕಾಗಿ ಯುದ್ಧ ಮಾಡಲು ಹೊರಗೆ ಕಳುಹಿಸಿ, ಆ ವೆಚ್ಚವನ್ನೆಲ್ಲ ಭಾರತದ ಮೇಲೆ ಹೇರುತ್ತಿದ್ದರು. ಭಾರತೀಯ ಸೈನ್ಯವನ್ನು ಜನತೆಯೊಂದಿಗೆ ಬೆರೆಯದಂತೆ ಅದನ್ನು ಜನಸಾಮಾನ್ಯರಿಂದ ದೂರವಿಡುತ್ತಿದ್ದರು. ಈ ರೀತಿ ಭಾರತವು ತನ್ನ ಆಕ್ರಮಣದ ಬ್ರಿಟಿಷರ ವೆಚ್ಚ, ಈಸ್ಟ್ ಇಂಡಿಯ ಕಂಪೆನಿ ತನ್ನನ್ನು ಬ್ರಿಟಿಷ್ ಸರಕಾರಕ್ಕೆ ಮಾರಿದ ವೆಚ್ಚ, ಬ್ರಿಟಿಷ್‌ ಸ್ರಾಮ್ರಾಜ್ಯವನ್ನು ಬರ ಮುಂತಾದ ಕಡೆಗಳಲ್ಲಿ ವಿಸ್ತರಿಸಿದ ವೆಚ್ಚ, ಬ್ರಿಟಿಷ್ ಸೈನ್ಯವು ಆಫ್ರಿಕ, ಪರ್ಷಿಯ ಮುಂತಾದ ಕಡೆಗಳಲ್ಲಿ ಪ್ರವಾಸ ಮಾಡಿದ ವೆಚ್ಚ ಮತ್ತು ಭಾರತೀಯ ವಿರುದ್ಧ ರಕ್ಷಣೆಯ ವೆಚ್ಚ, ಈ ಎಲ್ಲವನ್ನೂ ತೆರಬೇಕಾಗಿ ಬಂದಿತು. ಬ್ರಿಟಿಷ್ ಬೊಕ್ಕಸಕ್ಕೆ ಬಿಡಿಕಾಸಿನ ವೆಚ್ಚವಿಲ್ಲದೆ ಸಾಮ್ರಾಜ್ಯ ಕಾರಣಗಳಿಗಾಗಿ ಸೈನ್ಯ ಮೂಲವಾಯಿ ತಲ್ಲದೆ, ಇಂಗ್ಲೆಂಡಿನಲ್ಲಿನ ಬ್ರಿಟಿಷ್ ಸೈನ್ಯದ ಶಿಕ್ಷಣದ ಒಂದು ಭಾಗದ ವೆಚ್ಚವನ್ನೂ ಹೊರಬೇಕಾ ಯಿತು; ಚೀನಾ, ಪರ್ಷಿಯದ ಬ್ರಿಟಿಷ್ ರಾಯಭಾರಿ ಕಛೇರಿಯ ವೆಚ್ಚ, ಇಂಗ್ಲೆಂಡಿನಿಂದ ಭಾರತಕ್ಕೆ ತಂತಿ ಹಾಕಿದ ವೆಚ್ಚ, ಮೆಡಿಟರೇನಿಯನ್ ಸಮುದ್ರದಲ್ಲಿನ ಬ್ರಿಟಿಷ್ ನಾವಿಕಾ ಪಡೆಯ ವೆಚ್ಚದ ಒಂದು ಭಾಗ, ಮತ್ತು ಲಂಡನ್‌ನಲ್ಲಿ ಟರ್ಕಿಯ ಸುಲ್ತಾನನಿಗೆ ಕೊಟ್ಟ ಔತಣದ ವೆಚ್ಚ ಸಹ ಭಾರತದ ಪಾಲಿಗೆ ಬಂದವು ರೈಲುಹಾಕುವದು ಎಷ್ಟೇ ಅವಶ್ಯವಿದ್ದರೂ, ಅದಕ್ಕಾಗಿ ಮಿತಿಮೀರಿ ಹಣವನ್ನು ವ್ಯಯ ಮಾಡಲಾಯಿತು. ಹಾಕಿದ ಬಂಡವಾಳದ ಮೇಲೆಲ್ಲ ಶೇಕಡ ೫ರಂತೆ ಬಡ್ಡಿ ಕೊಡಲು ಸರಕಾರವು ಭರವಸೆ ಕೊಟ್ಟಿತು. ಅಂದಾಜನ್ನಾಗಲಿ, ವೆಚ್ಚವನ್ನಾಗಲಿ ತನಿಖೆ ಮಾಡುವ ಪ್ರಮೇಯವಿರಲಿಲ್ಲ, ಎಲ್ಲ ಸಾಮಾನುಗಳನ್ನು ಕೊಳ್ಳುತ್ತಿದ್ದು ದೂ ಇಂಗ್ಲೆಂಡಿನಲ್ಲೇ ಸರಕಾರದ ಆಡಳಿತ ವೆಚ್ಚದ ದುಂದುಗಾರಿಕೆಗೆ ಮಿತಿಯೇ ಇರಲಿಲ್ಲ. ಉನ್ನತ ಸ್ಥಾನಗಳೆಲ್ಲವೂ ಯುರೋಪಿಯನರಿಗೆ ಮೀಸಲು. ಆಡಳಿತ ವರ್ಗದಲ್ಲಿ ಭಾರತೀಯರಿಗೆ ಸ್ಥಾನದೊರೆಯಲು ಬಹು ಕಾಲ ಬೇಕಾಯಿತು ; ಸ್ವಲ್ಪ ಸ್ಥಾನ ದೊರೆತದ್ದೆಂದರೆ ಇಪ್ಪತ್ತನೆಯ ಶತಮಾನದಲ್ಲಿ. ಇದರಿಂದ ಭಾರತೀಯರ ಕೈಗೆ ಅಧಿಕಾರ ಬರುವುದಕ್ಕೆ ಪ್ರತಿಯಾಗಿ ಬ್ರಿಟಿಷರ ಅಧಿಕಾರಕ್ಕೆ ಇನ್ನೂ ಬಲ ದೊರ ಕಿತು. ಮುಖ್ಯ ಸ್ಥಾನಗಳೆಲ್ಲ ಬ್ರಿಟಿಷರ ಕೈಯಲ್ಲೇ ಉಳಿದು ಭಾರತೀಯರು ಬ್ರಿಟಿಷ್ ಆಡಳಿತದ ಕೈಗೊಂಬೆಗಳಾದರು, ಇದೆಲ್ಲದರ ಜೊತೆಗೆ ಭಾರತೀಯರಲ್ಲೇ ಒಂದು ಪಂಗಡವನ್ನು ಇನ್ನೊಂದು ಪಂಗಡದ ಮೇಲೆ