ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

29. ಭಾರತ ದರ್ಶನ ಕೆಲವಕ್ಕೆ ಸ್ಥಾನವಿಲ್ಲ. ಅವು ಇರುವುದೆಲ್ಲ ಕಾಥೇವಾಡ, ಪಶ್ಚಿಮ ಇ೦ಡಿಯ ಮತ್ತು ಪಂಜಾಬಿನಲ್ಲಿ. ಈ ಸಂಸ್ಥಾನಗಳಲ್ಲಿ ಫ್ರಾನ್ಸಿನಷ್ಟು ದೊಡ್ಡ ದರಿಂದ ಹಿಡಿದು ಸಣ್ಣ ರೈತನ ಹಿಡುವಳಿ ವರೆಗೂ ವಿಸ್ತಾರ ವ್ಯತ್ಯಾಸ ಇದೆಯಲ್ಲದೆ ಇತರ ವ್ಯತ್ಯಾಸಗಳೂ ಇವೆ. ಮೈಸೂರು ಕೈಗಾರಿಕೆಯಲ್ಲಿ ಬಹಳ ಪ್ರಗತಿ ಪಡೆದಿದೆ. ಮೈಸೂರು, ತಿರುವಾಂಕೂರು ಮತ್ತು ಕೊಚ್ಚಿನ್ ವಿದ್ಯೆಯಲ್ಲಿ ಬ್ರಿಟಿಷ್ ಭಾರತ ಕ್ಕಿಂತ ಮುಂದೆ ಇವೆ. ಆದರೆ ಅನೇಕ ಸಂಸ್ಥಾನಗಳು ಬಹಳ ಹಿಂದುಳಿದಿವೆ, ಕೆಲವಂತೂ ಕೇವಲ ಪಾಳೆಯಗಾರಿಕೆ, ಎಲ್ಲ ಕಡೆಯೂ ನಿರಂಕುಶಾಧಿಕಾರ, ಕೆಲವು ಕಡೆ ಚುನಾಯಿತ ಶಾಸನಸಭೆ ಗಳಿದ್ದರೂ ಅವುಗಳ ಅಧಿಕಾರ ಅಲ್ಪ ಪ್ರಮುಖ ಸಂಸ್ಥಾನವಾದ ಹೈದರಾಬಾದಿನಲ್ಲಿ ಪ್ರಜೆಗಳಿಗೆ ಯಾವ ಮೂಲಭೂತ ಹಕ್ಕುಗಳೂ ಇಲ್ಲದೆ ನಿರಂಕುಶ ಪಾಳೆಯಗಾರಿಕೆ ತಾಂಡವವಾಡುತ್ತಿದೆ. ರಾಜಪುತಾನ ಮತ್ತು ಪಂಜಾಬಿನ ಸಂಸ್ಥಾನಗಳಲ್ಲೂ ಇದೇ ರೀತಿ, ಮೂಲಭೂತ ಹಕ್ಕುಗಳ ಅಭಾವವು ಎಲ್ಲ ಸಂಸ್ಥಾನಗಳಲ್ಲೂ ಸಾಮಾನ್ಯ ಪರಿಸ್ಥಿತಿ, ಸಂಸ್ಥಾನಗಳೆಲ್ಲವೂ ಒಂದು ಕಡೆಯಲ್ಲಿ ಇಲ್ಲ, ಭಾರತದ ದೇಶಾದ್ಯಂತವೂ ಹರಡಿ, ಸಂಸ್ಥಾನೇತರ ಭಾರತದಿಂದ ಸುತ್ತುವರಿಯಲ್ಪಟ್ಟ ದ್ವೀಪ ಗಳಂತಿವೆ. ಅನೇಕ ಸಂಸ್ಥಾನಗಳು ಅರೆಬರೆಯ ಆರ್ಥಿಕ ಸ್ವಾತಂತ್ರದಿಂದ ಸಹ ಇರಲಾರವು. ಉಳಿದ ದೊಡ್ಡ ಸಂಸ್ಥಾನಗಳು ಸಹ ಸುತ್ತಲಿನ ಪ್ರಾಂತ್ಯಗಳ ಸಹಕಾರವಿಲ್ಲದೆ ಯಾವ ಆರ್ಥಿಕ ಸ್ವಾತಂತ್ರವನ್ನೂ ಅನುಭವಿಸಲಾರವು. ಸಂಸ್ಥಾನಕ್ಕೂ, ಸಂಸ್ಕಾನೇತರ ಭಾರತಕ್ಕೂ ಆರ್ಥಿಕ ಘರ್ಷಣೆ ಉಂಟಾದರೆ ವ್ಯಾಪಾರವನ್ನು ಕಟ್ಟು ಮಾಡಿ, ಕೇವಲ ಅರ್ಥಿಕ ದಿಬ್ಬಂಧನದಿಂದಲೇ ಆ ಸಂಸ್ಥಾನವನ್ನು ದಾರಿಗೆ ತರಬಹುದು, ಅತಿ ದೊಡ್ಡ ಸಂಸ್ಥಾನವನ್ನು ಸಹ ಪ್ರತ್ಯೇಕಿಸಿ ಒಂದು ಸ್ವತಂತ್ರ ರಾಜ್ಯವೆಂದು ನೋಡಲು ಸಾಧ್ಯವಿಲ್ಲ, ಸ್ವತಂತ್ರವಾಗಿ ಬಾಳಲು ಅವಕ್ಕೆ ಶಕ್ತಿಯಿಲ್ಲ, ಮತ್ತು ಅದರಿಂದ ಉಳಿದ ಭಾರತಕ್ಕೂ ಅಪಾರ ಹಾನಿ, ಭಾರತಾದ್ಯಂತ ಶತ್ರುಗಳ ಪಾಳೆಯಗಳಾಗುತ್ತವೆ; ತಮ್ಮ ರಕ್ಷಣೆಗೆಂದು ಹೊರಗಿನ ಯಾವ ಶಕ್ತಿಯನ್ನು ಅವಲಂಬಿಸಿದರೂ ಸ್ವತಂತ್ರ ಭಾರತಕ್ಕೆ ಅದು ಸದಾ ಮಹಾ ವಿಪತ್ತು, ಸಂಸ್ಥಾನಗಳನ್ನೂ ಒಳಗೊಂಡ ಅಖಂಡ ಭಾರತದ ರಾಜಕೀಯ ಮತ್ತು ಆರ್ಥಿಕ ನೀತಿಯ ಒಂದು ಪರಮಾಧಿಕಾರದ ಅಧೀನದಲ್ಲಿ ಇಲ್ಲದೆ ಇದ್ದರೆ, ಈ ಸಂಸ್ಥಾನಗಳು ಇದು ವರೆಗೆ ಉಳಿಯುತ್ತಲೂ ಇರಲಿಲ್ಲ. ಸಂಸ್ಥಾನಗಳ ಮತ್ತು ಸಂಸ್ಥಾನೇತರ ಭಾರತದ ಮಧ್ಯೆ ಏಳುವ ಘರ್ಷಣೆಗಳಲ್ಲದೆ ಸಂಸ್ಥಾನಗಳ ಪ್ರಜೆಗಳೇ ಈಗ ತಮ್ಮ ನಿರಂಕುಶ ರಾಜರುಗಳಿಂದ ಸ್ವಾತಂತ್ರ್ಯ ವನ್ನು ಕೇಳುತ್ತಿದಾರೆ. ಬ್ರಿಟಿಷರ ಸಹಾಯದಿಂದ ಈ ಪ್ರಯತ್ನವನ್ನು ತಡೆಗಟ್ಟಲಾಗುತ್ತಿದೆ. ಹತ್ತೊಂಭತ್ತನೆಯ ಶತಮಾನದಲ್ಲಿ ಅಂದಿನ ಪರಿಸ್ಥಿತಿಯಲ್ಲಿ ಸಹ ಈ ಸಂಸ್ಥಾನಗಳಿಗೆ ಎಡೆ ಇರಲಿಲ್ಲ. ಇಂದಿನ ಆಧುನಿಕ ಕಾಲದಲ್ಲಿ ಭಾರತವನ್ನು ಬೇರೆ ಬೇರೆ ಸ್ವತಂತ್ರ ರಾಜ್ಯಗಳನ್ನಾಗಿ ಛಿದ್ರಮಾಡುವ ಯತ್ನವನ್ನು ಊಹಿಸಲು ಸಹ ಸಾಧ್ಯವಿಲ್ಲ. ಸದಾ ಪರಸ್ಪರ ಘರ್ಷಣೆಗೆ ಎಡೆ ಗೊಟ್ಟಂತಾಗುವುದಲ್ಲದೆ ಯಾವ ಆರ್ಥಿಕ ಯೋಜನೆಯ, ಸಾಂಸ್ಕೃತಿಕ ಪ್ರಗತಿಯ ಸಾಧ್ಯವಾಗು ವುದಿಲ್ಲ. ಹತ್ತೊಂಭತ್ತನೆಯ ಶತಮಾನದ ಆದಿಭಾಗದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯೊಂದಿಗೆ ಒಪ್ಪಂದಮಾಡಿಕೊಂಡು ಈ ಸಂಸ್ಥಾನಗಳು ಜನ್ಮತಾಳಿದಾಗ ಯೂರೋಪ್ ಖಂಡದಲ್ಲೆಲ್ಲ ಸಣ್ಣ ಸಣ್ಣ ಪಾಳೆಯ ಪಟ್ಟುಗಳಿದ್ದವೆಂಬುದನ್ನು ಮರೆಯಲಾಗದು. ಅನೇಕ ಯುದ್ಧಗಳು ಮತ್ತು ರಾಜ ಕೀಯ ವಿಪ್ಲವಗಳು ಯೂರೋಪಿನ ರೂಪವನ್ನೇ ವ್ಯತ್ಯಾಸಗೊಳಿಸಿವೆ. ಆದರೆ ಪರದಾಸ್ಯದ ಹೊರೆ

  • ಜನತಾ ವಿದ್ಯಾಭ್ಯಾಸ ತಿರುವಾಂಕೂರಿನಲ್ಲಿ ೧೮೦೧ ರಲ್ಲೇ ಆರಂಭವಾಯಿತು, ಇಂಗ್ಲೆಂಡಿನಲ್ಲಿ ಆರಂಭವಾ ದದ್ದು ೧೮೭೦ರಲ್ಲಿ, ತಿರುವಾಂಕೂರಿನಲ್ಲಿ ಗಂಡಸರಲ್ಲಿ ಶೇಕಡ ೫೮ ಜನರೂ, ಹೆಂಗಸರಲ್ಲಿ ೪೧ ಜನರೂ ವಿದ್ಯಾವಂತರು, ಬ್ರಿಟಿಷ್ ಇಂಡಿಯದ ಸಂಖ್ಯೆಗಿಂತ ನಾಲ್ಕರಷ್ಟು ಹೆಚ್ಚು, ತಿರುವಾಂಕೂರಿನಲ್ಲಿ ಸಾರ್ವಜನಿಕ ಆರೋಗ್ಯವೂ ಉತ್ತಮವಿದೆ, ಮಹಿಳೆಯರು ಸಾರ್ವಜನಿಕ ಕ್ಷೇತ್ರಗಳಲ್ಲಿ ಮತ್ತು ಚಟುವಟಿಕೆಗಳಲ್ಲಿ ಪ್ರಮುಖಪಾತ್ರ ವಹಿಸುತ್ತಾರೆ,