ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತದರ್ಶನ ಕುತೂಹಲ ತೃಪ್ತಿಗೊಂಡ ಮೇಲೆ ಇತರ ಬಹುಮಾನ ನಜರುಗಳಂತ ಅವನ್ನೂ ಉಗ್ರಾಣಕ್ಕೆ ಸೇರಿಸ ಲಾಯಿತಂತೆ. ಆದರೆ ಇದು ಕಲ್ಕತ್ತೆಯಲ್ಲಿನ ಸರಕಾರಕ್ಕೆ ತಿಳಿದು ಬಂದ ಒಡನೆ ರೆಸಿಡೆಂಟನ ಅಜಾಗ ರೂಕತೆಗೆ ಅಸಮಾಧಾನ ವ್ಯಕ್ತಪಡಿಸಿ ದೇಶೀಯ ಸಂಸ್ಥಾನದಲ್ಲಿ ಮುದ್ರಣಯಂತ್ರ ತರಿಸಿದ್ದಕ್ಕೆ ಕಟುವಾಗಿ ಟೀಕೆ ಮಾಡಿದರಂತೆ! ಸರಕಾರ ಇಷ್ಟ ಪಟ್ಟರೆ ಕೂಡಲೆ ಆ ಮುದ್ರಣ ಯಂತ್ರವನ್ನು ಗುಪ್ತವಾಗಿ, ಚೂರು ಚೂರು ಮಾಡಿಸುತ್ತೇನೆ ಎಂದು ರೆಸಿಡೆಂಟ್ ತಿಳಿಸಿದನೆಂದು ಒಂದು ಕತೆ ಇದೆ. - ಖಾಸಗಿ ಮುದ್ರಣ ಮಂದಿರಗಳನ್ನು ಸ್ಥಾಪಿಸಲು ಯಾವ ಪ್ರೋತ್ಸಾಹವು ದೊರೆಯದಿದ್ದರೂ, ಮುದ್ರಣ ಮಂದಿರವಿಲ್ಲದೆ ಸರಕಾರಕ್ಕೆ ಕೆಲಸ ನಡೆಸುವುದು ಅಸಾಧ್ಯವಾಯಿತು. ಆದ್ದರಿಂದ ಕಲ್ಕತ್ತ ಮದ್ರಾಸ್ ಮುಂತಾದ ಕಡೆಗಳಲ್ಲಿ ಸರಕಾರಿ ಮುದ್ರಣ ಮಂದಿರಗಳಾದವು. ಮೊದಲನೆಯ ಖಾಸಗಿ ಮುದ್ರಣ ಮಂದಿರವನ್ನು ಸ್ಥಾಪಿಸಿದವರು ಶ್ರೀರಾಮಪುರದ ಬ್ಯಾಪ್ಟಿಸ್ಟ್ ಮತಪ್ರಚಾರಕರು, ಮೊದ ಲನೆಯ ವೃತ್ತ ಪತ್ರಿಕೆ ಹೊರಟಿದ್ದು ೧೮೭೦ರಲ್ಲಿ ಒಬ್ಬ ಆ೦ಗ್ಲೀಯನಿಂದ. ಈ ಎಲ್ಲ ಪರಿವರ್ತನೆಗಳಿಂದ ಭಾರತೀಯ ಮನಸ್ಸಿನಮೇಲೆ ಕ್ರಮೇಣ ಮಹತ್ಪರಿಣಾಮವಾಗಿ ನವಚೈತನ್ಯ ಮೂಡಿತು. ಈ ಯೂರೋಪಿನ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದವರು ಒಂದು ಸಣ್ಣ ಪಂಗಡ ಮಾತ್ರ, ಭಾರತದ ಜನತೆಯು ಯೂರೋಪಿಯನ್ ಸಂಸ್ಕೃತಿಗಿಂತ ಭಾರತೀಯ ದಾರ್ಶ ನಿಕ ಹಿನ್ನೆಲೆಯೇ ಶ್ರೇಷ್ಠವೆಂದು ನಂಬಿ ಆ ಹಿನ್ನೆಲೆಯ ಆಶ್ರಯದಲ್ಲಿಯೇ ನಡೆಯಿತು. ಪಾಶ್ಚಿ ಮಾತ್ಯದ ನಿಜವಾದ ಪ್ರೌಢಿಮೆ ಮತ್ತು ಪ್ರಭಾವ ನಿತ್ಯಜೀವನದ ಪ್ರಾಯೋಗಿಕ ಪದ್ದತಿಯಲ್ಲ. ಪೌರ್ವಾತ್ಯ ಜೀವನಕ್ಕಿಂತ ಅದು ನಿಜವಾಗಿಯೂ ಪ್ರಗತಿಪರವಿತ್ತು. ರೈಲುಗಾಡಿ, ಮುದ್ರಣಯಂತ್ರ ಇತರ ಯಂತ್ರೋಪಕರಣಗಳು, ಹೆಚ್ಚು ವಿನಾಶಕಾರಕವಾದ ಯುದ್ದ ಪದ್ದತಿ-ಮುಂತಾದ ಹೊಸ ಕೌಶಲವನ್ನು ಅಲ್ಲಗಳೆಯುವಂತಿರಲಿಲ್ಲ. ತಿಳಿದೂ ತಿಳಿಯದಂತೆ ಅಪ್ರತ್ಯಕ್ಷವಾಗಿ ಇವೆಲ್ಲವೂ ಹಿಂದಿನ ಭಾರತೀಯ ಪದ್ಧತಿಗೆ ಎದುರು ನಿಂತು ಜನರ ಮನಸ್ಸಿನಲ್ಲಿ ಒಂದು ವಿರೋಧ ಭಾವನೆಯನ್ನುಂಟು ಮಾಡಿದವು. ಎಲ್ಲಕ್ಕೂ ಹೆಚ್ಚಾಗಿ ಹಿಂದಿನ ಭೂಸ್ವಾಮ್ಯದ ಪದ್ಧತಿಯು ಹಾಳಾಯಿತು, ಸ್ವಂತ ಆಸ್ತಿ ಮತ್ತು ಜಮೀನುದಾರಿ ಪದ್ಧತಿಗಳು ಬಂದವು. ಹಣಕಾಸಿನ ಆರ್ಥಿಕ ನೀತಿಯಿಂದ ಭೂಮಿ ಯನ್ನು ಮಾರಲು ಅವಕಾಶ ದೊರೆಯಿತು. ದುಡ್ಡಿನ ಪ್ರಭಾವದಿಂದ ಸಹಸ್ರಾರು ವರ್ಷಗಳಿಂದ ನಡೆದು ಬಂದ ಸಂಪ್ರದಾಯ ನುಚ್ಚು ನೂರಾಯಿತು. ಬ್ರಿಟಿಷರ ಆಳ್ವಿಕೆಯು ಇತರ ಪ್ರಾಂತ್ಯಗಳಿಗೆ ಹರಡುವ ಮುಂಚೆ, ಐವತ್ತು ವರ್ಷಗಳ ಮೊದಲೇ ಬಂಗಾಳ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿದ್ದರಿಂದ ಭೂಸ್ವಾಮ್ಯ, ಉದ್ಯೋಗ, ವಿದ್ಯಾಭ್ಯಾಸ ಮತ್ತು ಮಾನಸಿಕ ಪದ್ಧತಿಗಳ ಪರಿವರ್ತನೆಯನ್ನು ಕಂಡು, ಅನುಭವಿಸಿದ್ದು ಬಂಗಾಲದಲ್ಲೇ ಎಲ್ಲಕ್ಕಿಂತ ಮೊದಲು. ಆದ್ದರಿಂದ ಬ್ರಿಟಿಷ್ ಭಾರತೀಯ ಜೀವನ ಸಂಪರ್ಕದಲ್ಲಿ ಹದಿನೆಂಟನೆಯ ಶತಮಾನದ ಕೊನೆ ಮತ್ತು ಹತ್ತೊಂಭತ್ತನೆಯ ಶತಮಾನದ ಆರಂಭದಲ್ಲಿ ಬಂಗಾಲ ಬಹಳ ಪ್ರಮುಖ ಪಾತ್ರ ವಹಿಸಿತು. ಬಂಗಾಲ ಬ್ರಿಟಿಷ್ ಅಧಿಕಾರದ ಕೇಂದ್ರ ಮತ್ತು ಹೃದಯ ಮಾತ್ರ ಆಗಿತ್ತಲ್ಲದೆ ಬ್ರಿಟಿಷ್ ಅಧಿಕಾರ ಚಕ್ರದ ನೆರಳಿನಲ್ಲಿ ಭಾರತದ ಇತರ ಪ್ರಾಂತ್ಯಗಳಿಗೆ ಹರಡಿದ ಇಂಗ್ಲಿಷ್ ವಿದ್ಯಾವಂತ ಭಾರತೀಯ ಅಧಿಕಾರಿವರ್ಗದ ಮೊದಲ ಪಡೆಗಳನ್ನು ತಯಾರುಮಾಡಿತು. ಹತ್ತೊಂಭತ್ತನೆಯ ಶತಮಾನದಲ್ಲಿ ಬಂಗಾಲದಲ್ಲಿ ಅನೇಕ ಮಹಾವ್ಯಕ್ತಿಗಳು ಜನ್ಮತಾಳಿದರು, ಉಳಿದ ಭಾರತಕ್ಕೆ ಅವರು ಸಂಸ್ಕೃತಿ ಮತ್ತು ರಾಜಕೀಯ ವಿಚಾರಗಳಲ್ಲಿ ಮಾರ್ಗದರ್ಶಕರಾದುದೂ ಮಾತ್ರವಲ್ಲದೆ ಅವರ ಪ್ರಯತ್ನದಿಂದ ಹೊಸ ರಾಷ್ಟ್ರೀಯ ಆಂದೋಲನವು ಕ್ರಮೇಣ ರೂಪುಗೊಂಡಿತು. ಬಂಗಾಲ ಬ್ರಿಟಿಷ್ ಆಳ್ವಿಕೆಯ ಬಹುಕಾಲದ ಅನುಭವ ಪಡೆದಿತ್ತು; ಮಾತ್ರವಲ್ಲದೆ ಅದರ ಆರಂಭದ ಕಾಠಿಣ್ಯ ವೈಪರೀತ್ಯ, ಸಡಿಲು ಸ್ವಭಾವದ ಅನುಭವವನ್ನೂ ಪಡೆದಿತ್ತು. ಉತ್ತರ ಮತ್ತು ಮಧ್ಯ ಭಾರತ