________________
ಈ ಭಾರತ ದರ್ಶನ ಶ್ರೀಮಂತ ಮನೆತನಗಳು ದಿವಾಳಿಯಾಗಿದ್ದವು. ಅವರ ಸ್ಥಾನದಲ್ಲಿ ಹೊಸ ಜಮೀನುದಾರರು ಬಂದರು. ಇವರಿಗೆ ಹಿಂದಿನವರಂತೆ ಭೂಮಿಯೊಂದಿನ ಹಳೆಯ ಬಾಂಧವ್ಯವಾಗಲಿ ಸಂಪರ್ಕವಾಗಲಿ ಇರಲಿಲ್ಲ. ಹಿಂದಿನವರ ಸದ್ದು ಣಗಳು ಯಾವುವೂ ಇಲ್ಲದೆ ದುರ್ಗುಣಗಳೆಲ್ಲ ಇದ್ದವು. ಅನೇಕ ರೀತಿ ಯಿಂದ ರೈತರು ಕ್ಷಾಮ ಡಾಮರಗಳಿಗೆ ಈಡಾಗಿ ಬಡತನದ ಬೇಗೆಗೆ ಬಲಿಯಾದರು. ಕಸಬುದಾರರೆಲ್ಲ ಸಂಪೂರ್ಣ ನಾಶವಾದರು. ಸ್ಮಶಾನ ರಣ ಹದ್ದುಗಳಂತೆ ಬ್ರಿಟಿಷ್ ಆಡಳಿತದ ಶಿಶುಗಳಾಗಿ, ಅವರಿಂದ ಅನೇಕ ರೀತಿ ಪ್ರೋತ್ಸಾಹ ಪಡೆದ ಹೊಸ ಪಂಗಡಗಳು, ಗುಂಪುಗಳು ನಿರ್ಮಾಣವಾದವು. ಬ್ರಿಟಿಷ್ ವ್ಯಾಪಾರ ಮತ್ತು ಕೈಗಾರಿಕೆಗಳ ಮಧ್ಯಸ್ಥಗಾರರಾಗಿ ಆ ಕೈಗಾರಿಕೆಯ ಎಂಜಲಿನಿಂದ ಲಾಭ ಪಡೆದ ವರ್ತಕರಿದ್ದರು. ಬ್ರಿಟಿಷರ ಅನುಗ್ರಹವೇ ತಮ್ಮ ಏಳಿಗೆ ಎಂದು ನಂಬಿ ಅನೇಕ ವಿಧದಲ್ಲಿ ಪಾಶ್ಚಾತ್ಯ ರನ್ನು ಅನುಕರಿಸುತ್ತಿದ್ದ ಇಂಗ್ಲಿಷ್ ವಿದ್ಯಾವಂತರು ನೌಕರಿ ಮತ್ತು ಇತರ ಕಸಬುಗಳಲ್ಲಿ ತುಂಬಿ ದರು. ಈ ಜನರಲ್ಲಿ ಹಿಂದೂ ಸಮಾಜದ ಸಾಂಪ್ರದಾಯಿಕ ಆಚಾರ ವ್ಯವಹಾರಗಳಿಗೆ ಮತ್ತು ಕಟ್ಟುನಿಟ್ಟುಗಳಿಗೆ ವಿರೋಧ ಹುಟ್ಟಿತು. ಇಂಗ್ಲಿಷರ ಮನೋವೈಶಾಲ್ಯದಿಂದ ಮತ್ತು ಸಂಸ್ಥೆಗಳಿ೦ದ ಸ್ಫೂರ್ತಿ ಪಡೆಯಲೆತ್ನಿಸಿದರು.
- ಇದೆಲ್ಲ ಬಂಗಾಳದ ಉನ್ನತ ಹಿಂದೂವರ್ಗದಲ್ಲಿ ಮಾತ್ರ. ಸಾಮಾನ್ಯ ಹಿಂದೂ ಜನತೆಯ ಮೇಲೆ ಇದರಿಂದ ಯಾವ ಪರಿಣಾಮವೂ ಆಗಲಿಲ್ಲ. ಹಿಂದೂ ಪ್ರಮುಖರು ಜನಕೋಟಿಯ ಕಡೆ ಗಮನ ವನ್ನೂ ಕೊಡಲಿಲ್ಲ. ಬಹಳ ಸ್ವಲ್ಪ ಜನರನ್ನು ಬಿಟ್ಟರೆ ಮುಸ್ಲಿಮರ ಮೇಲೂ ಯಾವ ಪರಿಣಾಮ ಆಗಲಿಲ್ಲ. ಅವರು ಉದ್ದೇಶಪಟ್ಟು ನೂತನ ಶಿಕ್ಷಣ ಪದ್ಧತಿಯಿಂದ ದೂರ ನಿಂತರು. ಮೊದಲೇ ಅವರ ಆರ್ಥಿಕ ಸ್ಥಿತಿಯು ಬಹಳ ಹೀನವಿತ್ತು. ಅದು ಈಗ ಇನ್ನೂ ಹದಗೆಟ್ಟಿತು, ೧೯ನೆಯ ಶತಮಾನದಲ್ಲಿ ಬಂಗಾಳದಲ್ಲಿ ಹಿಂದೂಗಳಲ್ಲಿ ಕೆಲವು ಅತ್ಯಂತ ಪ್ರತಿಭಾವಂತರು ಜನ್ಮ ತಾಳಿದರೂ ಮುಸ್ಲಿಮರಲ್ಲಿ ಒಬ್ಬ ಪ್ರಮುಖ ವ್ಯಕ್ತಿಯ ಹುಟ್ಟಲಿಲ್ಲ. ಹಿಂದೂ ಮುಸ್ಲಿಂ ಇಬ್ಬರಲ್ಲೂ ಸಾಮಾನ್ಯ ಜನರಲ್ಲಿ ಯಾವ ವ್ಯತ್ಯಾಸವೂ ಆಗಲಿಲ್ಲ, ಅವರ ಆಚಾರವ್ಯವಹಾರ, ಜೀವನರೀತಿ, ಭಾಷೆ, ಬಡತನದ ಬೇಗೆ ಮತ್ತು ಸಂಕಟ ಇಬ್ಬರಿಗೂ ಸಮಾನವಿತ್ತು. ಬಂಗಾಳದ ಹಿಂದೂ ಮುಸ್ಲಿಮರ ಎಲ್ಲ ಮಟ್ಟದ ಜನರಲ್ಲಿ ಧಾರ್ಮಿಕ ಮತ್ತು ಇತರ ಭೇದ ಪ್ರಭೇದಗಳು ಕಂಡಂತೆ ಭಾರತದಲ್ಲಿ ಬೇರೆಲ್ಲ ನಾವು ಕಾಣಲಾರೆವು. ಪ್ರಾಯಶಃ ಮುಸ್ಲಿಮರಲ್ಲಿ ನೂರಕ್ಕೆ ೯೮ರಷ್ಟು ಜನರು ಕೆಳಮಟ್ಟದ ಹಿಂದೂ ಸಮಾಜದಿಂದ ಮತಾಂತರ ಹೊಂದಿದವರು. ಜನಸಂಖ್ಯೆಯಲ್ಲಿ ಮುಸ್ಲಿಮರು ಸ್ವಲ್ಪ ಹೆಚ್ಚು ಇರ ಬಹುದು, (ಈಗ ಬಂಗಾಳದಲ್ಲಿ ೫೩% ಮುಸ್ಲಿಮರೂ ೪೬% ಹಿಂದುಗಳೂ, ೧% ಇತರರೂ ಇದಾರೆ).
ಬ್ರಿಟಿಷರ ಸಂಪರ್ಕದಿಂದ ಒದಗಿದ ಈ ಎಲ್ಲ ಆರಂಭದ ಪರಿಣಾಮಗಳು ಮತ್ತು ಅವುಗಳಿಂದ ಬಂಗಾಳದಲ್ಲಿ ಆದ ಎಲ್ಲ ಆರ್ಥಿಕ, ಸಾಮಾಜಿಕ, ಬೌದ್ಧಿಕ ಮತ್ತು ರಾಜಕೀಯ ಚಳವಳಿಗಳು ಭಾರ ತದ ಇತರ ಕಡೆಗಳಲ್ಲೂ ಉದ್ಭವಿಸಿವೆ. ಹಿಂದಿನ ಶ್ರೀಮಂತ ವರ್ಗವೂ, ಆರ್ಥಿಕ ಪದ್ಧತಿಯೂ ಇತರ ಕಡೆಗಳಲ್ಲಿ ಪೂರ್ಣ ನಾಶವಾಗಲಿಲ್ಲ, ಕ್ರಮೇಣ ಹೀನಸ್ಥಿತಿಗೆ ಬಂದಿತು. ನಿಜವಾಗಿ ನೋಡಿದರೆ ದಂಗೆಗೆ ಅವರೇ ಕಾರಣರು ಮತ್ತು ಸೋತರೂ ಸ್ವಲ್ಪ ಮಟ್ಟಿಗೆ ಜೀವಂತ ಉಳಿದರು. ಉತ್ತರ ಹಿಂದೂಸ್ಥಾನದ ಮುಸಲ್ಮಾನರ ಸಂಸ್ಕೃತಿ ಮತ್ತು ಆರ್ಥಿಕ ಸ್ಥಿತಿಯು ಬಂಗಾಳದ ಅವರ ಸೋದರರಿ ಗಿಂತ ಉತ್ತಮವಿತ್ತು, ಆದರೆ ಅವರೂ ಇಂಗ್ಲಿಷ್ ವಿದ್ಯಾಭ್ಯಾಸದಿಂದ ದೂರ ಸರಿದರು. ಹಿಂದೂಗಳು ಸುಲಭವಾಗಿ ಈ ವಿದ್ಯೆ ಕಲಿತು ಪಾಶ್ಚಾತ್ಯರ ಪ್ರಭಾವಕ್ಕೊಳಗಾದರು. ಸರ್ಕಾರದ ಕೆಳ ನೌಕರಿಗಳಲ್ಲಿ ಮತ್ತು ಇತರ ವೃತ್ತಿಗಳಲ್ಲಿ ಮುಸ್ಲಿಮರಿಗಿಂತ ಹಿಂದೂಗಳೇ ಹೆಚ್ಚು ಜನ ಸೇರಿದರು. ಪಂಜಾಬಿನಲ್ಲಿ ಮಾತ್ರ ಅಷ್ಟು ವ್ಯತ್ಯಾಸ ಆಗಲಿಲ್ಲ. - ೧೮೫೭-೫೮ರ ದಂಗೆ ಎದ್ದು ದೂ ಆಯಿತು, ಅಡಗಿಸಿದುದೂ ಆಯಿತು. ಆದರೆ ಬಂಗಾಳಕ್ಕೆ ಅದರ ಬಿಸಿ ಸ್ವಲ್ಪವೂ ತಗಲಲಿಲ್ಲ. ಇಂಗ್ಲಿಷ್ ವಿದ್ಯಾಭ್ಯಾಸ ಪಡೆದ ಬಹು ಸಂಖ್ಯಾಕ ಹಿಂದೂ