ಬಹು ದೇವತಾವಾದ, ಮತ್ತು ಜನರ ಬಳಕೆಯಲ್ಲಿನ ಪೂಜಾಪದ್ಧತಿ ಎಲ್ಲವೂ ನಿಂದಾರ್ಹವಾದವು. ವೇದಗಳಿಗೂ ತಮ್ಮದೇ ಒಂದು ಅರ್ಥಕೊಟ್ಟರು. ಇಸ್ಲಾಂಮತ್ತು ಕ್ರೈಸ್ತಮತಗಳ, ಮುಖ್ಯವಾಗಿ ಇಸ್ಲಾಂ ಧರ್ಮದ ಪ್ರಾಬಲ್ಯ ತಡೆಗಟ್ಟುವುದೇ ಅದರ ಮುಖ್ಯ ಉದ್ದೇಶವಿತ್ತು, ಒಳಗಿನ ದೋಷ ಗಳ ನಿವಾರಣೆ ಮಾಡಬೇಕೆಂಬ ಸುಧಾರಣಾ ದೃಷ್ಟಿಯೂ ಇತ್ತು. ಪರಧರ್ಮಗಳಿಗೆ ಜನರು ಬಲಿ ಬೀಳಬಾರದೆಂಬ ಸ್ವಧರ್ಮರಕ್ಷಣೆಯ ದೃಷ್ಟಿಯೂ ಇತ್ತು. ಹಿಂದೂ ಧರ್ಮಕ್ಕೆ ಮತಾಂತರ ಮಾಡಿ ಕೊಳ್ಳುವ ಪದ್ದತಿಯನ್ನು ಆಚರಣೆಗೆ ತಂದರು. ಇದರಿಂದ ಮತಾಂತರ ಮಾಡಿಕೊಳ್ಳುತ್ತಿದ್ದ ವಿಧರ್ಮಿಗಳಿಗೂ ಇವರಿಗೂ ಘರ್ಷಣೆ ಆರಂಭವಾಯಿತು. ಇಸ್ಲಾಂ ಧರ್ಮದಂತೆಯೇ ಆರಸಮಾ ಜದ ಧರ್ಮವನ್ನೂ ರಚಿಸಿದ್ದರೂ ಅನ್ಯಧರ್ಮಿಯರು ಹಿಂದೂ ಧರ್ಮದ ಮೇಲೆ ಮಾಡುತ್ತಿದ್ದ ದಾಳಿಯನ್ನು ತಡೆಗಟ್ಟಲು ಹಿಂದೂ ಎನ್ನು ವುದನ್ನೆ ರಕ್ಷಣೆ ಮಾಡುವುದು ಅದರ ಕಾರವಾಯಿತು. ಇದು ಮುಖ್ಯವಾಗಿ ಪಂಜಾಬ್ ಮತ್ತು ಸಂಯುಕ್ತ ಪ್ರಾಂತ್ಯದ ಮಧ್ಯಮವರ್ಗದ ಹಿಂದೂಗಳಲ್ಲಿ ಹೆಚ್ಚು ಹರಡಿತು. ಒಂದು ಕಾಲದಲ್ಲಿ ಸರ್ಕಾರವು ಅದನ್ನು ರಾಜಕೀಯ ಕ್ರಾ೦ತಿಯ ಚಳವಳಿ ಎಂದು ಭಾವಿಸಿತ್ತು, ಆದರೆ ಅನೇಕ ಸರಕಾರದ ಅಧಿಕಾರಿಗಳು ಅದರ ಅವಲಂಬಿಗಳಾದ ಕಾರಣ ಅದ ಕ್ಕೊಂದು ಗೌರವ ದೊರೆಯಿತು. ಬಾಲಕ ಬಾಲಕಿಯರಲ್ಲಿ ವಿದ್ಯಾ ಪ್ರಚಾರ, ಮಹಿಳೆಯರ ಸ್ಥಿತಿ, ಸುಧಾರಣೆ, ದಲಿತವರ್ಗದ ಸ್ಥಾನಮಾನಗಳ ಉನ್ನತಿಗಾಗಿ ಉತ್ತಮ ಸೇವೆ ಮಾಡಿದೆ.
ಸ್ವಾಮಿ ದಯಾನಂದನ ಸಮಕಾಲೀನನಾಗಿ ಬಂಗಾಲದಲ್ಲಿ ಇನ್ನೊಂದು ಬೇರೆ ರೀತಿಯ ಮಹಾವ್ಯಕ್ಕಿ ಅವತಾರಮಾಡಿ ತನ್ನ ಜೀವನ ರೀತಿಯಿಂದ ಅನೇಕ ಇಂಗ್ಲಿಷ್ ವಿದ್ಯಾವಂತರಮೇಲೆ ಅತ್ಯಂತ ಪರಿಣಾಮ ಮಾಡಿದನು. ಆ ವ್ಯಕ್ತಿಯೇ ಶ್ರೀರಾಮಕೃಷ್ಣ ಪರಮಹಂಸ, ಪಂಡಿತನಲ್ಲ. ದಿದ್ದರೂ ಸರಳ, ಶ್ರದ್ಧಾ ಜೀವಿಯಾಗಿದ್ದನು. ಸಮಾಜ ಸುಧಾರಣೆಯೇ ಆತನ ಗುರಿಯಾಗಿರಲಿಲ್ಲ. ಚೈತನ್ಯ ಮತ್ತು ಇತರ ಭಕ್ತಿ ಪಂಥದವರ ಮಾರ್ಗಾನುವರ್ತಿಯಾಗಿದ್ದನು. ಅವನ ದೃಷ್ಟಿ ಮುಖ್ಯ ವಾಗಿ ಧಾರ್ಮಿಕವಿತ್ತು. ಆದರೆ ಉದಾರಭಾವನೆಯಿಂದ, ಆತ್ಮಸಾಕ್ಷಾತ್ಕಾರ ಪಡೆಯಲು ಮುಸ್ಲಿಂ ಮತ್ತು ಕ್ರೈಸ್ತ ಸಾಧುಗಳ ಬಳಿ ಹೋಗಿ ಅವರಸಂಗಡ ಕೆಲವು ವರ್ಷ ವಾಸಮಾಡಿ, ಅವರ ಆಚರಣೆ ಯಂತೆ ನಡೆದನು. ಕೊನೆಗೆ ಕಲ್ಕತ್ತ ಬಳಿ ದಕ್ಷಿಣೇಶ್ವರದಲ್ಲಿ ನೆಲಸಿ ತನ್ನ ವ್ಯಕ್ತಿತ್ವ ಮತ್ತು ಆದರ್ಶ ಗಳಿಂದ ಅನೇಕರನ್ನು ಆಕರ್ಷಿಸಿದನು. ಆತನನ್ನು ನೋಡ ಹೋದವರು, ಮತ್ತು ಹಾಸ್ಯ ಮಾಡು ತಿದ್ದವರೇ ಆತನ ಪ್ರಭಾವಕ್ಕೆ ಒಳಗಾದರು. ಪಾಶ್ಚಾತ್ಯ ಪದ್ಧತಿಗೆ ಮನಸೋತವರೆಲ್ಲ ಈತನನ್ನು ನೋಡಿ ತಾವು ಅದುವರೆಗೆ ಕಾಣದ ಯಾವುದೋ ಶಕ್ತಿಯನ್ನು ಆತನಲ್ಲಿ ಕಂಡರು, ಧರ್ಮಶ್ರದ್ದೆಯ ಮುಖ್ಯ ಅಂಶಗಳಿಗೆ ಪ್ರಾಧಾನ್ಯತೆ ಕೊಟ್ಟು, ಹಿಂದೂಧರ್ಮ ಮತ್ತು ವಿವಿಧದರ್ಶನ ಶಾಖೆಗಳ ಮೂಲ ತತ್ವಗಳ ಸಂಬಂಧ ತೋರಿಸಿ, ಎಲ್ಲವನ್ನೂ ತಾನೇ ಆಚರಿಸಿ ತೋರಿಸಿದನು, ಇತರ ಮತಗಳನ್ನೂ ತಾನು ಆಚರಿಸಿದನು. ಎಲ್ಲ ಜಾತಿಯನ್ನೂ ವಿರೋಧಿಸಿ ಸತ್ಯವೇ ಎಲ್ಲ ಮಾರ್ಗಗಳ ಗುರಿ ಎಂದು ತೋರಿಸಿದನು, ಏಷ್ಯ ಮತ್ತು ಯೂರೋಪ್ ಇತಿಹಾಸದ ಪ್ರಾಚೀನಕಾಲದ ಋಷಿಗಳಂತೆ ಇದ್ದನು. ಇಂದಿನ ಆಧುನಿಕ ಯುಗಕ್ಕೆ ಅರ್ಥವಾಗುವುದು ಕಷ್ಟವಾದರೂ ಭಾರತದ ಚಿತ್ರವಿನ್ಯಾಸ ವೈವಿಧ್ಯಕ್ಕೆ ಹೊಂದಿಕೊಂಡು, ಭಾರತೀಯರನೇಕರಿಗೆ ಆತನಲ್ಲಿ ಒಂದು ಭಗವದಂಶದ ಜ್ಯೋತಿ ಇದೆ ಎಂಬ ನಂಬಿಕೆ ಕೊಟ್ಟಿದ್ದಾನೆ. ಆತನನ್ನು ಕಂಡವರೆಲ್ಲರೂ ಆತನ ಪ್ರಭಾವಕ್ಕೆ ಒಳಗಾದರು ಆತನನ್ನು ಕಾಣದವರನೇಕರು ಆತನ ಜೀವನ ಕಥೆಯನ್ನು ಓದಿಕೇಳಿಯೇ ಆತನ ಪ್ರಭಾವಕ್ಕೆ ಒಳಗಾಗಿದ್ದಾರೆ. ಶ್ರೀರಾಮಕೃಷ್ಣನ ಮತ್ತು ಆತನ ಶಿಷ್ಯ ವಿವೇಕಾನಂದನ ಜೀವನ ಚರಿತ್ರೆಯನ್ನು ಬರೆದಿರುವ ರೋಮಾರೋಲ ಅಂಥವರಲ್ಲಿ ಒಬ್ಬ.
ವಿವೇಕಾನಂದನು ತನ್ನ ಶಿಷ್ಯ ಸೋದರರೊಂದಿಗೆ ಸೇವೆಯನ್ನೇ ಗುರಿಯಾಗಿಟ್ಟುಕೊಂಡ. ಜಾತಿ ರಹಿತವಾದ ರಾಮಕೃಷ್ಣ ಮಠವನ್ನು ಸ್ಥಾಪಿಸಿದ. ಸನಾತನ ಧರ್ಮಾಭಿಮಾನಿಯಾಗಿ, ಭಾರತೀಯ