ರಾಜನೀತಿ, ಸುಲ್ತಾನ ಮತ್ತು ಖಿಲಾಫತ ಪದವಿಗಳ ಮುಕ್ತಾಯ, ಧರ್ಮರಹಿತ ರಾಜ್ಯಾಂಗ ರಚನೆ, ಧರ್ಮಾಧಿಕಾರಿಗಳ ತಂಡಗಳ ವಿಸರ್ಜನೆ, ನೋಡಿ ಧರ್ಮನಿಷ್ಠ ಮುಸಲ್ಮಾನರಿಗೆ ಆತನ ಮೇಲಿದ್ದ ಗೌರವ ಕಡಮೆಯಾಯಿತು, ಮತ್ತು ಈ ಆಧುನಿಕ ನೀತಿಯ ವಿರುದ್ದವಾಗಿ ಒಳಗೊಳಗೇ ಅಸಮಾಧಾನವೂ ಹುಟ್ಟಿತು. ಆದರೆ ಅದೇ ನೀತಿಯ ಫಲವಾಗಿ ಹಿಂದೂ ಮುಸಲ್ಮಾನ ಯುವಕರಲ್ಲಿ ಆತನ ಮೇಲೆ ವಿಶ್ವಾಸ ಅಧಿಕವಾಯಿತು. ದಂಗೆಯ ಕಾಲದಿಂದ ಭಾರತೀಯ ಮುಸ್ಲಿಂ ಮನೋರಂಗದಲ್ಲಿ ಮೂಡಿ ಬಂದಿದ್ದ ಕನಸಿನ ಕಳಶವನ್ನೇ ಕೆಮಾಲ ಪಾಷಾ ನುಚ್ಚುನೂರು ಮಾಡಿದನು. ಪುನಃ ಅವರ ಮನಸ್ಸಿನಲ್ಲಿ ಒಂದು ಶೂನ್ಯತೆ ಹುಟ್ಟಿತು. ಅನೇಕ ಮುಸಲ್ಮಾನರು ರಾಷ್ಟ್ರೀಯ ಚಳವಳಿಯಲ್ಲಿ ಧುಮಿಕಿ ಈ ನಿರಾಶಾ ಭಾವನೆ ಕಳೆದುಕೊಂಡರು, ಕೆಲವರು ಮೊದಲೇ ಸೇರಿದ್ದರು, ಆದರೆ ಇನ್ನೂ ಕೆಲವರು ಅನುಮಾನ ದಿಂದ ಮುಂದೆ ನೋಡುತ್ತ ತಟಸ್ಥರಾಗಿ ನಿಂತರು. ಹಳೆಯ ನವಾಬಗಿರಿಯ ಮನೋಭಾವನೆಗೂ, ಆಧುನಿಕ ಮನೋಭಾವನೆಗೂ ನಿಜವಾದ ಹೋರಾಟ ಆರಂಭವಾಯಿತು. ಖಿಲಾಫತ್ ಚಳವಳಿಯಿಂದ ನವಾಬ ಶಾಹಿ ನಾಯಕತ್ವ ನಾಶವಾಗಿತ್ತು. ಆದರೆ ಅದಕ್ಕೂ ಸಾಮಾನ್ಯ ಜನತೆಯ ಸಾಮಾಜಿಕ ಆರ್ಥಿಕ ಪರಿ ಸ್ಥಿತಿ ಮತ್ತು ಆವಶ್ಯಕತೆಗಳಿಗೂ ಯಾವ ಪ್ರತ್ಯೇಕ ಸಂಬಂಧವೂ ಇಲ್ಲದ ಕಾರಣ ಭಾರತದ ಖಿಲಾಫತ್ ಚಳುವಳಿಯ ಬುಡವೇ ಭದ್ರವಿರಲಿಲ್ಲ. ಅದರ ಕೇಂದ್ರ ಬೇರೆ ಎಲ್ಲೊ ಇತ್ತು. ಆಧಾರ ಸ್ತಂಭವೇ ಉರುಳಿದ್ದರಿಂದ ಕಟ್ಟಡವೂ ಕುಸಿದು ಬಿದ್ದು ಮುಸ್ಲಿಂ ಜನತೆ ದಾರಿಕಾಣದೆ ಕಂಗೆಟ್ಟಿತು. ಯಾವ ರಾಜ ಕೀಯವೂ ಅವರಿಗೆ ಬೇಡವಾಯಿತು. ಇದುವರೆಗೆ ತಲೆಮರೆಸಿ ಅಡಗಿಕೊಂಡಿದ್ದ ಹಳೆಯ ನವಾಬರು ಗಳು ಸದಾ ತಮ್ಮ ಬೆಂಗಾವಲಿಗಿದ್ದ ಬ್ರಿಟಿಷ್ ರಾಜತಂತ್ರದ ಪ್ರೋತ್ಸಾಹದಿಂದ, ಪುನಃ ಪ್ರಖ್ಯಾತಿಗೆ ಬಂದರು. ಆದರೆ ಕಾಲಸ್ಥಿತಿ ಪರಿವರ್ತನೆಯಾಗಿದ್ದರಿಂದ ಏಕೈಕ ನಾಯಕತ್ವ ಅವರಿಗೆ ಲಭಿಸಲಿಲ್ಲ. ತಡವಾಗಿ ಆದರೂ ಮುಸ್ಲಿಮರಲ್ಲೂ ಒಂದು ಮಧ್ಯಮ ವರ್ಗ ಬೆಳೆಯುತ್ತಲಿತ್ತು, ಅಲ್ಲದೆ ರಾಷ್ಟ್ರೀಯ ಮಹಾಸಭೆಯ ನೇತೃತ್ವದಲ್ಲಿ ನಡೆದ ರಾಜಕೀಯ ಆಂದೋಲನದ ಅನುಭವ ವಿಶೇಷ ವ್ಯತ್ಯಾಸಮಾಡಿತ್ತು.
ಮುಸ್ಲಿಂ ಜನತೆಯ ಮತ್ತು ಹೊಸದಾಗಿ ರೂಪುಗೊಳ್ಳುತ್ತಿದ್ದ ಮಧ್ಯಮವರ್ಗದ ಮನೋಭಾವನೆಗೆ ಕಾಲಸ್ಥಿತಿಯೇ ಕಾರಣವಾದರೂ ಮಧ್ಯಮವರ್ಗದ ಮತ್ತು ಮುಖ್ಯ ಯುವಕರ ಮನೋಭಾವನೆ ರೂಪು ಗೊಳಿಸುವುದರಲ್ಲಿ ಸರ್ ಮಹಮದ್ ಇಕ್ಸಲ್ ಪ್ರಮುಖ ಪಾತ್ರ ವಹಿಸಿದನು. ಸಾಮಾನ್ಯ ಜನರಿಗೆ ಆತನ ಪರಿಚಯವೇ ಇರಲಿಲ್ಲ. ಇಕ್ಬಲ್ ಉರ್ದು ಭಾಷೆಯಲ್ಲಿ ಬರೆದ ರೋಮಾಂಚಕಾರಕ ರಾಷ್ಟ್ರೀಯ ಗೀತ ಗಳು ಬಹಳ ಜನಜನಿತವಾದುವು. ಬಾಲ್ಕನ್ ಯುದ್ದಗಳ ಕಾಲದಲ್ಲಿ ಆತನ ದೃಷ್ಟಿ ಎಲ್ಲ ಇಸ್ಲಾ೦ ವಿಷಯ ಗಳ ಕಡೆ ತಿರುಗಿತು. ಆಗಿನ ಕಾಲದ ಸ್ಥಿತಿ ಮತ್ತು ಮುಸ್ಲಿಂ ಜನತೆಯ ಮನೋಭಾವನೆಗಳಿಂದ ಆತನ ಮೇಲೆ ಮಹತ್ಪರಿಣಾಮವಾಯಿತು. ಆತನೂ ಸಹ ತನ್ನ ಕೃತಿಗಳಿಂದ ಈ ಭಾವನೆಗಳ ಬೆಳೆವಣಿಗೆಗೆ ಮತ್ತು ತೀಕತೆಗೆ ಪುಷ್ಟಿ ಕೊಟ್ಟನು. ಆದರೆ ಒಬ್ಬ ಮಹಾಜನನಾಯಕನಾಗಲು ಆತನಿಗೆ ಎಂದೂ ಸಾಧ್ಯವಿರಲಿಲ್ಲ. ಆತನೊಬ್ಬ ಕವಿ, ಜ್ಞಾನಿ ಮತ್ತು ದಾರ್ಶನಿಕ. ಹಳೆಯ ಶ್ರೀಮಂತಿಕೆಯ ಮೇಲೆ ವಿಶ್ವಾಸ ; ಮತ್ತು ಮೂಲತಃ ಕಾಶ್ಮೀರದ ಬ್ರಾಹ್ಮಣ ಕುಲಕ್ಕೆ ಸೇರಿದವನು. ಉರ್ದು ಮತ್ತು ಪಾರಸಿ ಭಾಷೆಗಳಲ್ಲಿ ಬರೆದ ಆತನ ಸುಂದರ ಕವನಗಳಿಂದ ಮುಸ್ಲಿಂ ವಿದ್ಯಾವಂತ ವರ್ಗಕ್ಕೆ ಒಂದು ದಾರ್ಶನಿಕ ಹಿನ್ನೆಲೆ ದೊರೆಯಿತು, ಮತ್ತು ಪುನಃ ಪ್ರತ್ಯೇಕಭಾವನೆಗೆ ಪ್ರೋತ್ಸಾಹ ದೊರೆಯಿತು. ಆತನ ಜನಪ್ರಿಯತೆಗೆ ಆತನ ಶ್ರೇಷ್ಠ ಕಾವ್ಯವೇ ಕಾರಣವಾದರೂ, ಮುಸ್ಲಿಂ ಮನಸ್ಸಿನ ಶೂನ್ಯತೆಯನ್ನು ನಾಶಮಾಡಿ ಒಂದು ನೆಲೆ ಯನ್ನು ಕೊಟ್ಟುದು ಇನ್ನೂ ಮುಖ್ಯ ಕಾರಣವಾಯಿತು. ಹಳೆಯ ಬೃಹದಿಸ್ಲಾಂ ಆದರ್ಶದಲ್ಲಿ ಯಾವ ಅರ್ಥವೂ ಇರಲಿಲ್ಲ. ಖಿಲಾಫತ್ತೇ ನಿರ್ಮೂಲವಾಗಿತ್ತು. ಪ್ರತಿಯೊಂದು ಇಸ್ಲಾಂ ರಾಷ್ಟ್ರದಲ್ಲಿ, ಮುಖ್ಯ ವಾಗಿ ತುರ್ಕಿಯಲ್ಲಿ ರಾಷ್ಟ್ರೀಯ ಚಳವಳಿಯ ಪ್ರಾಬಲ್ಯ ಹೆಚ್ಚಿತ್ತು, ಇತರ ಇಸ್ಲಾಂ ಜನರ ಕಡೆ ಅವರಲ್ಲಿ ಯಾರಿಗೂ ಆಸಕ್ತಿ ಇರಲಿಲ್ಲ. ಇತರ ಕಡೆಗಳಂತೆ ಏಷ್ಯದಲ್ಲಿ ಸಹ ರಾಷ್ಟ್ರೀಯ ಭಾವನೆಯೇ ಪ್ರಬಲಶಕ್ತಿ ಯಾಯಿತು. ಭಾರತದಲ್ಲಿ ರಾಷ್ಟ್ರೀಯ ಚಳವಳಿ ಬಲಗೊಂಡು ಮೇಲಿಂದ ಮೇಲೆ ಬ್ರಿಟಿಷರ ಅಧಿಕಾರಕ್ಕೆ ಪೆಟ್ಟು ಕೊಡಲು ಪ್ರಯತ್ನ ಪಟ್ಟಿತ್ತು. ಈ ರಾಷ್ಟ್ರೀಯ ಭಾವನೆಯು ಭಾರತೀಯ ಮುಸ್ಲಿಂ ಜನಮನದ