ಈ ಪುಟವನ್ನು ಪ್ರಕಟಿಸಲಾಗಿದೆ
೩೨೬
ಭಾರತ ದರ್ಶನ

ಹಿಂದೂ ಮುಸ್ಲಿ೦ ಪ್ರಶ್ನೆಯ ಭಿನ್ನಾಭಿಪ್ರಾಯದಿಂದ ಅಲ್ಲ, ಈ ಹೊಸ ಪ್ರಗತಿಪರ ಭಾವನೆ ಆತನಿಗೆ ಸರಿಬೀಳದ್ದ ರಿಂದ ಮತ್ತು ಕಾಂಗ್ರೆಸ್‌ನಲ್ಲಿ ಮನಬಂದಂತೆ ಉಡುಪು ಧರಿಸಿ ಹಿಂದೂಸ್ಥಾನಿಯಲ್ಲಿ ಮಾತನಾಡುವ ಸಾಮಾನ್ಯ ಜನರ ನಾಯಕತ್ವ ಆತನಿಗೆ ಒಪ್ಪಿಗೆಯಾಗಲಿಲ್ಲವಾದ್ದರಿಂದ ಆತನ ರಾಜಕೀಯವೆಲ್ಲ ಶಾಸನ ಸಭೆಯೋ ಅಥವ ಸಮಿತಿಯ ಕೊಠಡಿಗೋ ಶೋಭಿಸುವ ಉನ್ನತ ಮಟ್ಟದ್ದು, ಕೆಲವು ವರ್ಷ ರಾಜಕೀಯ ರಂಗದಲ್ಲಿ ಆತನಿಗೆ ಸ್ಥಾನವಿಲ್ಲದೆ ಭಾರತವನ್ನೇ ಬಿಟ್ಟು ಹೋಗಬೇಕೆಂದು ತೀರ್ಮಾನಿಸಿದ. ಇಂಗ್ಲೆಂಡಿನಲ್ಲಿ ನೆಲೆಸಿ ಅಲ್ಲಿಯೇ ಕೆಲವು ವರ್ಷಗಳನ್ನು ಕಳೆದ.

ಗಾಂಧೀಜಿ ನಮ್ಮನ್ನು ಹಳ್ಳಿಗಳಿಗೆ ಅಟ್ಟಿದರು. ಸಹಸ್ರಾರು ಜನರು ಆತನ ಈ ಹೊಸ ಸಂದೇಶ ವನ್ನು ಭಾರತದ ಜನಕೋಟಿಗೆ ಸಾರಿದ್ದರಿಂದ ಗ್ರಾಮಜೀವನದಲ್ಲಿ ಒಂದು ನವಚೈತನ್ಯ ಉಂಟಾಯಿತು. ರೈತನು ತನ್ನ ಸುಷುಪ್ತ ಜೀವನದಿಂದ ಹೊಡೆದೆದ್ದು ಕಾರ್ಯತತ್ಪರನಾದನು. ನಮ್ಮ ಮೇಲೂ ಅಷ್ಟೇ ಮಹತ್ಪರಿಣಾಮವಾಯಿತು. ಹಳ್ಳಿಗನ ಮಣ್ಣು ಗುಡಿಸಿಲಿನ ಸದಾ ಆತನ ಬೆನ್ನ೦ಟದ ಹಸಿವೆಯ ಕೂಗಿನ ಪರಿಚಯ ನಮಗೆ ಆದದ್ದು ಇದೇ ಮೊಟ್ಟ ಮೊದಲು, ಪುಸ್ತಕ ಅಥವ ಪ್ರೌಢ ಉಪನ್ಯಾಸಗಳಿಗಿಂತ ಹೆಚ್ಚಾಗಿ ಭಾರತೀಯ ಅರ್ಥಶಾಸ್ತ್ರವು ಈ ನಮ್ಮ ಗ್ರಾಮಭೇಟಗಳಿಂದ ಹೆಚ್ಚು ಅರ್ಥವಾಗಲಾರಂಭಿಸಿತು. ನಮ್ಮ ಭಾವೋದ್ರಿಕ್ತ ಅನುಭವಕ್ಕೆ ಇಲ್ಲದ ಪುಷ್ಟಿ ಮತ್ತು ಸಮರ್ಥನೆ ದೊರೆತವು ; ಆದ್ದರಿಂದ ಮುಂದೆ ನಮ್ಮ ದೃಷ್ಟಿ ಎಷ್ಟೇ ಬೇರೆಯಾಗಲಿ ನಮ್ಮ ಹಿಂದಿನ ಜೀವನ ಮತ್ತು ಮೌಲ್ಯಗಳಿಗೆ ಅಂಟಿಕೊಂಡಿರುವುದು, ಅಸಾಧ್ಯವಾಯಿತು.

ಆರ್ಥಿಕ, ಸಾಮಾಜಿಕ ಮತ್ತು ಇತರ ವಿಷಯಗಳಮೇಲೆ ಗಾಂಧೀಜಿ ಅಭಿಪ್ರಾಯಗಳು ಕ್ರಾಂತಿ ಕಾರಕವಿದ್ದು ವು. ಅದನ್ನೆಲ್ಲ ಅವರು ಕಾಂಗ್ರೆಸ್ಸಿನಮೇಲೆ ಹೊರಿಸಲು ಪ್ರಯತ್ನಿಸಲಿಲ್ಲ. ಆ ಅಭಿಪ್ರಾಯ ಗಳನ್ನು ಸಮರ್ಥಿಸಲು ಯತ್ನ ಮಾಡಿದರು. ಈ ಪ್ರಯತ್ನದಲ್ಲಿ ಸ್ವಲ್ಪ ವ್ಯತ್ಯಾಸವನ್ನೂ ಅವರ ಲೇಖನ ಗಳಲ್ಲಿ ಕಾಣಬಹುದು. ಕೆಲವನ್ನು ಕಾಂಗ್ರೆಸ್ಸಿನ ಧೈಯಗಳನ್ನಾಗಿ ಮಾಡಲೆತ್ನಿಸಿದರು. ಜನತೆಯ ಸಂಗಡಲೇ ಹೋಗಬೇಕೆಂದು ಬಹಳ ಎಚ್ಚರಿಕೆಯಿಂದ ಮುಂದುವರಿದು, ಕೆಲವು ಸಮಯದಲ್ಲಿ ಕಾಂಗ್ರೆಸ್ಸಿಗಿಂತ ಬಹಳ ಮುಂದುವರಿದು ಒಮ್ಮೊಮ್ಮೆ ಹಿಂಜರಿಯಬೇಕಾಯಿತು. ಅನೇಕರು ಅವರೊಂದಿಗೆ ಪೂರ್ಣ ಸಮ್ಮತಿಸಲಿಲ್ಲ; ಕೆಲವರು ಮೂಲದೃಷ್ಟಿಯಲ್ಲೇ ಭಿನ್ನಾಭಿಪ್ರಾಯ ತಾಳಿದರು. ಆದರೂ ಕಾಂಗ್ರೆಸ್ ಸಮ್ಮತಿಸಿ ರೂಪಿಸಿದ ಅವರ ಅಭಿಪ್ರಾಯಗಳಲ್ಲದೆ ಅಂದಿನ ಪರಿಸ್ಥಿತಿಗೆ ಬೇರೆ ಮಾರ್ಗವಿಲ್ಲೆಂದು ಬಹು ಸಂಖ್ಯಾತ ಜನರು ಮಾನ್ಯ ಮಾಡಿದರು. ಎರಡು ರೀತಿಯಲ್ಲಿ ಅವರ ಪ್ರತಿಯೊಂದು ಯೋಚನೆಯ ಹಿನ್ನೆಲೆಯು ಅಸ್ಪಷ್ಟವಾದರೂ ಅವುಗಳ ಪರಿಣಾಮ ಅಸಾಧ್ಯವಿತ್ತು. ಪ್ರತಿಯೊಂದು ಕಾರ್ಯವೂ ಭಾರತದ ಜನಕೋಟಿಗೆ ಎಷ್ಟರಮಟ್ಟಿಗೆ ಉಪಯಕ್ತ ಎಂಬುದು ಒಂದು ; ಮತ್ತು ನಮ್ಮ ಗುರಿ ಎಷ್ಟೇ ಉತ್ತಮವಿರಲಿ ಸಾಧನೆಯ ಮಾರ್ಗದ ಪರಿಣಾಮ ಅದರಮೇಲೆ ಆಗುವುದರಿಂದ ಸಾಧನೆಯ ಮಾರ್ಗವೂ ಅಲಕ್ಷೆ ಮಾಡ ಲಾಗದ ಅತಿ ಮುಖ್ಯ ವಿಷಯ ಎಂಬುದು ಇನ್ನೊಂದು.

ಗಾಂಧೀಜಿ ಮುಖ್ಯವಾಗಿ ಧರ್ಮಜೀವಿ; ಅವರ ಪ್ರತಿಯೊಂದು ರಕ್ತ ಕಣವೂ ಶುದ್ದ ಹಿಂದೂ ಆದರೂ ಅವರ ಧರ್ಮ ಯಾವ ಒಂದು ಸಿದ್ಧಾಂತ, ಪದ್ದತಿ ಅಥವ ಪೂಜಾವಿಧಾನವನ್ನು ಅವಲಂಬಿಸಿರಲಿಲ್ಲ.*

——————
*೧೯೨೮ರಲ್ಲಿ ನಡೆದ ಅಂತರ ರಾಷ್ಟ್ರೀಯ ಧರ್ಮ ಸಮ್ಮೇಳನದಲ್ಲಿ ಗಾಂಧೀಜಿ ಈ ರೀತಿ ಹೇಳಿದರು, ಅನೇಕ ವರ್ಷಗಳ ಅಭ್ಯಾಸ ಮತ್ತು ಅನುಭವದಿಂದ ನನ್ನ ತೀರ್ಮಾನ ಈ ರೀತಿ ಇದೆ-(೧) ಎಲ್ಲ ಧರ್ಮಗಳಲ್ಲೂ ಸತ್ಯವಿದೆ (೨) ಎಲ್ಲ ಧರ್ಮಗಳಲ್ಲೂ ಸ್ವಲ್ಪ ಲೋಪವೂ ಇದೆ (೩) ಹಿಂದೂ ಧರ್ಮದಲ್ಲಿರುವಂತೆ ಎಲ್ಲ ಧರ್ಮಗಳಲ್ಲೂ ನನಗೆ ಮಮತ ಇದೆ, ನನ್ನ ಧರ್ಮಕ್ಕೆ ಎಷ್ಟು ಗೌರವ ಇದೆಯೂ ಅಷ್ಟೇ ಗೌರವ ಇತರ ಧರ್ಮಗಳಿಗೂ ನಾನು ಕೂಡು ನೆ, ಮಹಾಂತರ ಸಾಧ್ಯವಿಲ್ಲ, ಇತರರಿಗಾಗಿ ನಾವು ಮಾಡುವ ಪ್ರಾರ್ಥನೆ “ದೇವರೆ, ನನಗೆ ತೋರಿದ ಬೆಳಕನ್ನು ಇವರಿಗೆ ತೋರು ಎಂದಲ್ಲ. ಆದರೆ ಉನ್ನತ ಪ್ರಗತಿಗೆ ಬೇಕಾದ ಎಲ್ಲ ಸತ್ಯವನ್ನೂ, ಬೆಳಕನ್ನೂ ಕೊಡು” ಎಂದು.