ಈ ಪುಟವನ್ನು ಪ್ರಕಟಿಸಲಾಗಿದೆ
೩೨೮
ಭಾರತ ದರ್ಶನ

ಎಂದರೆ ಜನಸಾಮಾನ್ಯದೊಡನೆ ಏಕೀಭಾವ, ಅವರೊಂದಿಗೆ ಆತ್ಮೀಯತೆ ಮತ್ತು ಭಾರತದ ದಲಿತರು ದೀನ ಹೀನರು ಮಾತ್ರವಲ್ಲದೆ ಪ್ರಪಂಚದ ಎಲ್ಲ ದಲಿತವರ್ಗದೊಡನೆ ಅದ್ಭುತ ಸಹಾನುಭೂತಿ, ದಲಿತ ಜನರ ಉದ್ದಾರದ ಎದುರು ಇತರ ಎಲ್ಲ ಪ್ರಶ್ನೆಗಳಂತೆ ಧರ್ಮದ ಪ್ರಶ್ನೆ ಸಹ ಅವರಿಗೆ ಕಿರಿದಾಯಿತು. ಅರೆ ಹೊಟ್ಟೆಯ ಜನಾಂಗಕ್ಕೆ ಧರ್ಮ, ಕಲೆ ಅಥವ ಸಂಸ್ಥೆ ಯಾವುದೂ ಬೇಕಿಲ್ಲ" ಎಂದರು. ಅರೆಹೊಟ್ಟೆಯ ಜನಕೋಟಿಗೆ ಯಾವುದು ಉಪಯುಕ್ತವೋ ಅದೇ ನನಗೆ ಸುಂದರ, ಜೀವಧಾರಣೆಗೆ ಅವಶ್ಯವಾದ ಮೂಲ ವಸ್ತು ಮೊದಲು, ಆಮೇಲೆ ಎಲ್ಲ ಗಾಂಭೀಯ್ಯ, ಅಲಂಕಾರ, ನನಗೆ ಬೇಕಾದ್ದು ಜನಕೋಟಿಗೆ ಹಿಡಿಸುವ ಕಲೆ ಮತ್ತು ಸಾಹಿತ್ಯ' ಎಂದರು. ಜೀವನಕ್ಕೆ ಗತಿ ಇಲ್ಲದೆ ಸಂಕಟದಲ್ಲಿ ಮುಳುಗಿದ್ದ ಜನಕೋಟಿಯ ಗೋಳು ಸದಾ ಅವರ ಎದುರಿನಲ್ಲಿತ್ತು. ಇತರ ಎಲ್ಲ ಕಾರವೂ ಆ ಬಾಳಿನ ಸುತ್ತ ಹೆಣೆದುಕೊಂಡಂತೆ ಕಂಡವು.” ಕೊಟ್ಯಂತರ ಜನರಿಗೆ ಅಪಾರ ಸಂಕಟ ; ಇಲ್ಲದಿದ್ದರೆ ಸ್ಮಶಾನ ಶಾಂತಿ, ಪ್ರತಿಯೊಬ್ಬನ ಕಣ್ಣೀರು ಒರಸುವುದೇ ನನ್ನ ಹಿರಿಯಾಸೆ” ಎಂದರು.

ಪೂರ್ಣ ಆತ್ಮವಿಶ್ವಾಸದಿಂದ ತುಂಬಿ ಒಂದು ಬಗೆಯ ಅಸಾಧಾರಣ ಶಕ್ತಿಯುಳ್ಳ ಈ ಅದ್ಭುತ ಕಾರ್ಯಶೀಲ ವ್ಯಕ್ತಿ ಪ್ರತಿಯೊಬ್ಬ ಮಾನವನ ಸಮಾನತೆ ಮತ್ತು ಸ್ವಾತಂತ್ರ್ಯಕ್ಕಾಗಿ ನಿಂತು, ಎಲ್ಲವನ್ನೂ ಕಡುಬಡವನ ದೃಷ್ಟಿಯಿಂದ ಅಳೆಯುತ್ತ ಭಾರತದ ಜನತೆಯ ಹೃದಯವನ್ನು ಸೂರೆಗೊಂಡು ಅಯಸ್ಕಾಂತ ಶಿಲೆಯಂತೆ ಅವರನ್ನು ಆಕರ್ಷಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಅವರ ಹಿಂದಿನ ಜೀವನಕ್ಕೂ ಮುಂದಿನ ಜೀವನಕ್ಕೂ ಸಂಬಂಧ ಕಲ್ಪಿಸಿ, ಇಂದಿನ ದುರಂತ ಬಾಳನ್ನು ಮುಂದಿನ ಆಶಾದಾಯಕ ಜೀವನಕ್ಕೆ ಒಂದು ಹಂತವನ್ನಾಗಿ ಮಾಡುವಂತೆ ಅವರಿಗೆ ಕಂಡರು. ಸಾಮಾನ್ಯ ಜನರಿಗೆ ಮಾತ್ರವಲ್ಲದೆ ವಿದ್ಯಾವಂತರಿಗೆ ಮತ್ತು ಇತರರಿಗೆ ಸಹ ತಮ್ಮ ಮನಸ್ಸು ಎಷ್ಟೇ ಬಗೆ ಕದಡಿ ಭ್ರಮೆಗೊಂಡು ತಮ್ಮ ಜೀವನದ ಅಭ್ಯಾಸ ಗಳನ್ನೆಲ್ಲ ಬಿಡಬೇಕಾಗಿ ಬಂದರೂ ಅವರಿಗೂ ಅದೇ ರೀತಿ ಗಾಂಧೀಜಿ ಕಂಡರು. ಆದ್ದರಿಂದ ತನ್ನ ಅನುಯಾಯಿಗಳಲ್ಲಿ ಮಾತ್ರವಲ್ಲದೆ ವಿರೋಧಿಗಳಲ್ಲಿ ಮತ್ತು ಯಾರ ಯೋಚನೆ ಮತ್ತು ಕಾರ್ಯನೀತಿಯೂ ಇಲ್ಲದ ತಟಸ್ಥರಲ್ಲಿ ಸಹ ಒಂದು ಮಾನಸಿಕ ಕ್ರಾಂತಿಯನ್ನು ಉಂಟುಮಾಡಿದರು.

ಕಾಂಗ್ರೆಸ್ಸಿನ ಮೇಲೆ ಗಾಂಧೀಜಿಯ ಪ್ರಭಾವವು ಬಹಳವಿದ್ದರೂ ಕಾಂಗ್ರೆಸ್ಸಿನಲ್ಲಿ ಅನೇಕ ಅಭಿಪ್ರಾಯದ ಮತ್ತು ಸುಲಭವಾಗಿ ಈ ಕಡೆ ಆಕಡೆ ತಿರುಗಿಸಲಾಗದ ಜನರಿದ್ದ ಬಹು ಮುಖ ಸಂಸ್ಥೆಯಾಗಿ ಕಾಂಗ್ರೆಸ್ ಒಂದು ಕ್ರಾಂತಿಕಾರಕ ಕಾರ್ಯಶೀಲ ಸಂಸ್ಥೆಯಾಗಿದ್ದುದರಿಂದ ಆ ಪ್ರಭಾವವು ಬಹಳ ವಿಶಿಷ್ಟ ರೀತಿಯದಿತ್ತು. ಇತರರ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು ಗಾಂಧೀಜಿ ಕೆಲವು ವೇಳೆ ತಮ್ಮ ನಿಲುವನ್ನು ಸಡಿಲಿಸುತ್ತಿದ್ದರು. ಕೆಲವು ವೇಳೆ ವಿರೋಧ ತೀರ್ಮಾನ ಒಪ್ಪುತ್ತಿದ್ದರು. ತಮಗೆ ಅತಿಮುಖ್ಯ ವಿಷಯಗಳೆಂದು ಕಂಡಾಗ ಮಾತ್ರ ಜಗ್ಗುತ್ತಿರಲಿಲ್ಲ. ಅನೇಕ ವೇಳೆ ಕಾಂಗ್ರೆಸ್ಸಿಗೂ ಅವರಿಗೂ ಭಿನ್ನಾಭಿಪ್ರಾಯ ಬಂದಾಗ ಕಾಂಗ್ರೆಸ್ಸಿನಿಂದ ದೂರ ಸರಿಯುತ್ತಿದ್ದರು. ಆದರೆ ಯಾವಾಗಲೂ ಭಾರತದ ಸ್ವಾತಂತ್ರ ಮತ್ತು ರಾಷ್ಟ್ರೀಯ ಹೋರಾಟದ ಪ್ರತಿನಿಧಿಯಾಗಿ ಭಾರತದ ಬಂಧನ ಶಾಶ್ವತಗೊಳಿಸಲು ಪ್ರಯತ್ನಿಸಿದ ಎಲ್ಲ ಶಕ್ತಿಗಳನ್ನೂ ಎದುರಿಸುವ ಪರಮ ಶತ್ರುವಾದರು. ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯವಿದ್ದರೂ ಜನರು ಅವರ ನಾಯಕತ್ವ ಒಪ್ಪಿ ಹಿಂಬಾಲಿಸಿದರು. ಪ್ರತ್ಯಕ್ಷ ಹೋರಾಟವಿಲ್ಲದಿದ್ದಾಗ ಎಲ್ಲ ಸಮಯದಲ್ಲೂ ಅವರ ನಾಯಕತ್ವ ಒಪ್ಪಲಿಲ್ಲ. ಆದರೆ ಹೋರಾಟ ಅನಿವಾರವಾದಾಗ ಎಲ್ಲ ಭಿನ್ನಾಭಿಪ್ರಾಯ ಮಾಯವಾಗಿ ಅವರೇ ಏಕೈಕ ನಾಯಕರಾಗುತ್ತಿದ್ದರು.

ಈ ರೀತಿ ೧೯೨೦ರಲ್ಲಿ ಭಾರತ ರಾಷ್ಟ್ರೀಯ ಮಹಾಸಭೆಯೂ ಬಹುಮಟ್ಟಿಗೆ ಇಡೀದೇಶವೂ ಈ ಹೊಸ ಅನುಭವವಿಲ್ಲದ ಮಾರ್ಗ ಹಿಡಿದು ಬ್ರಿಟಿಷ್ ಆಳರಸರೊಂದಿಗೆ ಪದೇ ಪದೇ ಹೋರಾಟಕ್ಕೆ ನಿಂತವು. ಈ ಹೊಸಮಾರ್ಗದಲ್ಲಿ ಮತ್ತು ಅಂದಿನ ಸನ್ನಿವೇಶದಲ್ಲಿ ಘರ್ಷಣೆ ಅನಿವಾರವಾಯಿತು; ಆದರೆ ಇದರ ಹಿನ್ನೆಲೆ ಒಂದು ರಾಜಕೀಯ ಕೌಶಲ್ಯ ಅಥವ ಚದುರಂಗದಾಟವಾಗಿರದೆ, ಭಾರತದ ಜನಶಕ್ತಿಯನ್ನು ವೃದ್ಧಿಗೊಳಿಸುವುದಾಗಿತ್ತು. ಸ್ವಾತಂತ್ರ್ಯಗಳಿಸಿ ಉಳಿಸಿಕೊಳ್ಳಬೇಕಾದ್ದೂ ಅದೇ ಶಕ್ತಿಯಿಂದ ಎಂದು ಶಾಸನ ಭಂಗ ಚಳವಳಿಗಳು ಒಂದರ ಮೇಲೊಂದು ಬಂದವು. ಅಪಾರ ಆತ್ಮತ್ಯಾಗಮಾಡಿ ನೋವು