ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ ೨
೩೪೫

ಅಲ್ಪಸಂಖ್ಯಾತರು ಬಹು ಸಂಖ್ಯಾತರಾಗಲು ಸಾಧ್ಯವಿರಲಿಲ್ಲ. ಪ್ರತ್ಯೇಕ ಚುನಾವಣೆಗಳಿಂದ ಅಲ್ಪ ಸಂಖ್ಯಾತರಿಗೆ ಹಾನಿಯಾಯಿತೇ ಹೊರತು ಉಪಯೋಗವಾಗಲಿಲ್ಲ. ಬಹು ಸಂಖ್ಯಾತರಿಗೆ, ಅವರ ಚುನಾವಣೆಯಲ್ಲಿ ಯಾವ ಆಸಕ್ತಿಯೂ ಇರಲಿಲ್ಲ. ಪ್ರತಿಯೊಬ್ಬ ಅಭ್ಯರ್ಥಿಯೂ ಎಲ್ಲ ಪಂಗಡಗಳ ಸಲಹೆ ಕೇಳಬೇಕಾದ ಜಂಟ ಚುನಾವಣೆಯಲ್ಲಿ ಪರಸ್ಪರ ವಿಚಾರವಿನಿಮಯಕ್ಕೆ, ಮಾತುಕತೆಗೆ ಅವಕಾಶವಿದೆ; ಪ್ರತ್ಯೇಕ ಚುನಾವಣೆಯಲ್ಲಿ ಇದಕ್ಕೆ ಅವಕಾಶವೇ ಇಲ್ಲ. ಬಹು ಸಂಖ್ಯಾಕರಿಗೂ, ಭಿನ್ನ ಧರ್ಮಿಯ ಅಲ್ಪ ಸಂಖ್ಯಾತರಿಗೂ ಯಾವುದಾದರೂ ವಿಶೇಷ ಪ್ರಶ್ನೆಯಮೇಲೆ ಭಿನ್ನಾಭಿಪ್ರಾಯ ಒದಗಿದರೆ ಆ ಪ್ರಶ್ನೆಯನ್ನು ಬಹುಮತದಿಂದ ತೀರ್ಮಾನಿಸದೆ ಯಾವುದಾದರೂ ನಿಷ್ಪಕ್ಷಪಾತ ನ್ಯಾಯಾಲಯ ಅಥವ ಅಂತರ ರಾಷ್ಟ್ರೀಯ ನ್ಯಾಯಾಲಯದ ತೀರ್ಪಿಗೆ ಬಿಡಬೇಕೆಂದೂ, ಆ ತೀರ್ಮಾನವನ್ನು ಇಬ್ಬರೂ ಒಪ್ಪಬೇಕೆಂದೂ ಸಹ ಕಾಂಗ್ರೆಸ್ ಹೇಳಿತು.

ಪ್ರಜಾಸತ್ತೆಯ ಆಡಳಿತದಲ್ಲಿ ಕೋಮುವಾರು ಅಲ್ಪ ಸಂಖ್ಯಾಕರಿಗೆ ಅಥವ ಪಂಗಡಕ್ಕೆ ಇದಕ್ಕಿಂತ ಏನು ಹೆಚ್ಚು ರಕ್ಷಣೆಕೊಡಬೇಕೋ ನನಗೆ ತಿಳಿಯದು. ಕೆಲವು ಪ್ರಾಂತಗಳಲ್ಲಿ ಮುಸ್ಲಿಮರೇ ಬಹು ಸಂಖ್ಯೆಯಲ್ಲಿ ಇದ್ದರು. ಆ ಪ್ರಾಂತಗಳಿಗೆ ಪೂರ್ಣ ಪ್ರಾಂತಾಡಳಿತ ದೊರೆತು ಇದ್ದ ಕಾರಣ ಅಖಿಲಭಾರತದ ದೃಷ್ಟಿಗೆ ಹೊಂದಿಕೊಂಡು ತಮ್ಮ ಪ್ರಾಂತದಲ್ಲಿ ತಮಗೆ ಇಷ್ಟ ಬಂದಂತೆ ನಡೆಯಲು ಪೂರ್ಣ ಅಧಿಕಾರವಿತ್ತು, ಕೇಂದ್ರ ಸರಕಾರದಲ್ಲಿ ಮುಸ್ಲಿಮರಿಗೆ ಬಲವಾದ ಪ್ರಾತಿನಿಧ್ಯ ಸಿದ್ದವಿದ್ದೇ ಇತ್ತು. ಸಂಖ್ಯಾಕ ಮುಸ್ಲಿಂ ಪ್ರಾಂತಗಳಲ್ಲಿ ಈ ಪ್ರಶ್ನೆ ತಿರುಗಮುರುಗವಾಯಿತು. ಅಲ್ಲಿ ಹಿಂದುಗಳು ಮತ್ತು ಸೀ೩ ರು ರಕ್ಷಣೆ ಕೇಳಲಾರಂಭಿಸಿದರು. ಈ ರೀತಿ ಪಂಜಾಬದಲ್ಲಿ ಹಿಂದೂ-ಮುಸ್ಲಿಂ-ಸೀಖ ಈ ರೀತಿ ತ್ರಿಕೋಣ ಪ್ರಶ್ನೆಯಾಯಿತು. ಮುಸ್ಲಿಮರಿಗೆ ಪ್ರತ್ಯೇಕ ಚುನಾವಣೆ ಕೊಟ್ಟರೆ ತಮಗೂ ವಿಶೇಷ ರಕ್ಷಣೆ ಕೊಡಬೇಕೆಂದರು. ಒಂದು ಬಾರಿ ಪ್ರತ್ಯೇಕ ಚುನಾವಣೆ ಆಚರಣೆಗೆ ಬಂದಮೇಲೆ ಅದಕ್ಕೆ ಗಡಿಯಾಗಲಿ ಮಿತಿಯಾಗಲಿ ಎಲ್ಲಿ ? ಒಂದು ಗುಂಪಿಗೆ ವಿಶೇಷ ಪ್ರಾತಿನಿಧ್ಯ ಕೊಡಬೇಕಾದರೆ ಇನ್ನೊಂದು ಗುಂಪಿನ ಪ್ರಾತಿನಿಧ್ಯ ಕಸಿದುಕೊಳ್ಳಲೇಬೇಕು; ಆ ಗುಂಪಿನ ಜನಸಂಖ್ಯೆಯ ಪ್ರಮಾಣಕ್ಕನುಸಾರ ಬರಬೇಕಾದ ಪ್ರಾತಿನಿಧ್ಯ ಕಡಮೆಯಾಗಲೇ ಬೇಕು. ಇದರಿಂದ ಅತಿ ವಿಚಿತ್ರ ಪರಿಣಾಮವಾಯಿತು ; ಅದರಲ್ಲೂ ಯುರೋಪಿಯನರಿಗೆ ವಿಶೇಷ ಪ್ರಾತಿನಿಧ್ಯವಿದ್ದೆ ಬಂಗಾಲದಲ್ಲಿ ಸಾಮಾನ್ಯ ಕ್ಷೇತ್ರಗಳ ಸಂಖ್ಯೆಯು ಹಾಸ್ಯಾಸ್ಪದವಾಯಿತು. ಭಾರತದ ರಾಜಕೀಯ ಮತ್ತು ಸ್ವಾತಂತ್ರ್ಯದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಂಗಾಲದ ನಾಯಕರಿಗೆ ಪ್ರಾಂತ ಶಾಸನ ಸಭೆಯಲ್ಲಿನ ತಮ್ಮ ಅತ್ಯಲ್ಪ ಪ್ರಾತಿನಿಧ್ಯದಿಂದ ತಮ್ಮ ರೆಕ್ಕೆಯನ್ನೇ ಕತ್ತರಿಸಿರುವುದಾಗಿಯೂ, ಅದರಿಂದ ಯಾವ ಪ್ರಯೋಜನವೂ ಇಲ್ಲವೆಂದೂ ಇದೆಲ್ಲವನ್ನೂ ಶಾಸನದ ಮೂಲಕ ನಿಬಂಧಿಸಿರುವುದಾಗಿಯೂ ಮನವರಿಕೆಯಾಯಿತು.

ಕಾಂಗ್ರೆಸ್ಸು ಅನೇಕ ತಪ್ಪುಗಳನ್ನು ಮಾಡಿದೆ. ಆದರೆ ಅವೆಲ್ಲ ಕಾರ್ಯಪ್ರವೇಶದಲ್ಲಿ ಅಥವ ಕಾರ್ಯಾರಂಭದಲ್ಲಿ, ಕೇವಲ ರಾಜಕೀಯ ಕಾರಣಗಳಿಗಾಗಿ ಪ್ರಗತಿಗೆ ಅಡ್ಡ ಬಂದ ಈ ಕೋಮುವಾರು ಪ್ರಶ್ನೆಯನ್ನು ಏನಾದರೂ ಮಾಡಿ ಇತ್ಯರ್ಥಪಡಿಸಬೇಕೆಂದು ಕಾಂಗ್ರೆಸ್ ಬಹಳ ಕಾತರವಿತ್ತು. ಆದರೆ ಅದೇ ಕೋಮು ವಾರು ಸಂಸ್ಥೆಗಳಲ್ಲಿ ಇರಲಿಲ್ಲ. ತಮ್ಮ ಪಂಗಡದ ವಿಶೇಷ ಬೇಡಿಕೆಗಳಿಗೆ ಒತ್ತಾಯ ಮಾಡುತ್ತ ಸರ್ಕಾರದ ಪ್ರಾಶಸ್ತ್ರ ಪಡೆದೇ ಅದು ಬಾಳಬೇಕಾಗಿತ್ತು, ಇದರಿಂದ ಅವುಗಳಲ್ಲಿ ಒಂದು ಬಗೆಯ ಹಕ್ಕುದಾರಿ ಭಾವನೆ ಬೆಳೆಯಲಾರಂಭಿಸಿತು. ಕಾಂಗ್ರೆಸ್ಸಿನಲ್ಲಿ ಹಿಂದೂಗಳೇ ಬಹುಸಂಖ್ಯಾಕರಿದ್ದರೂ, ಮುಸ್ಲಿಮರ ಸೀಖರ ಕ್ರಿಶ್ಚಿಯನರ ಸಂಖ್ಯೆ ದೊಡ್ಡದಿತ್ತು. ಆದ್ದರಿಂದ ರಾಷ್ಟ್ರೀಯ ಭಾವನೆಯಿಂದ ಕದಲುವುದು ಅದಕ್ಕೆ ಸಾಧ್ಯವಿರಲಿಲ್ಲ. ರಾಷ್ಟ್ರದ ಸ್ವಾತಂತ್ರವೂ ಮತ್ತು ಸರ್ವ ತಂತ್ರ ಸ್ವತಂತ್ರ ಪ್ರಜಾಸತ್ತಾತ್ಮಕ ರಾಜ್ಯಸ್ಥಾಪನೆಯೂ ಮುಖ್ಯ ಗುರಿಯಾಯಿತು. ಅತಿ ವಿಶಾಲವೂ ವೈವಿಧ್ಯ ಭರಿತವೂ ಆದ ಭಾರತದಲ್ಲಿ ಬಹುಮತಕ್ಕೆ ಪೂರ್ಣ ಅಧಿಕಾರ ಕೊಟ್ಟು ಅಲ್ಪ ಸಂಖ್ಯಾತರನ್ನು ಅದುಮಲು ಅವಕಾಶವಿರುವ ಸರ್ವ ಸಾಮಾನ್ಯ ಪ್ರಜಾ ಪ್ರಭುತ್ವ ಸ್ಥಾಪಿಸುವುದು ಸಾಧ್ಯವಿದ್ದರೂ ಅದು ಯೋಗ್ಯವೂ ಅಲ್ಲ, ಉಚಿತವೂ ಅಲ್ಲ ಎಂದು ಕಾಂಗ್ರೆಸ್ ನಿಶ್ಚಯಿಸಿತ್ತು. ಒಗ್ಗಟ್ಟು ದೇಶದಲ್ಲಿ ಅತ್ಯಗತ್ಯವಿತ್ತು ; ಆದರೆ ಭಾರತೀಯ ಜೀವನದ ಸಂಸ್ಕೃತಿ ಸಂಪತ್ತನ್ನೂ