ಈ ಪುಟವನ್ನು ಪ್ರಕಟಿಸಲಾಗಿದೆ
೩೬೨
ಭಾರತ ದರ್ಶನ

ನನಗೆ ಬಿಡುಗಡೆಯಾಗಿ ನಾಲ್ಕು ತಿಂಗಳು ಮಾತ್ರ ಹೊರಗೆ ಇದ್ದೆ. ಆದರೆ ಇತರರಂತೆ ನನಗೂ ಇದು ಬಹಳ ವಿಷಮಕಾಲ, ಹೊಸ ಪರಿಸ್ಥಿತಿಗಳು ಏನೇನೋ ಉದ್ಭವಿಸಿದ್ದವು. ಶಾಂತಿಸಾಗರದಲ್ಲಿ ಯುದ್ಧ ಆರಂಭವಾಗಿ ಭಾರತದ ಮೇಲಿನ ಮುತ್ತಿಗೆಯ ಭಯ ಹುಟ್ಟಿತ್ತು. ರಾಜಕೀಯ ವಾತಾವರಣ ತಿಳಿಯಾಗುವವರೆಗೆ, ಹಳೆಯ ಎಳೆಗಳನ್ನು ಎತ್ತಿಕೊಂಡು ಯೋಜನಾಸಮಿತಿಯ ಕಾರ್ ಮುಂದುವರಿಸುವುದು ಅಸಾಧ್ಯವೆನಿಸಿತು. ಅಷ್ಟರಲ್ಲಿ ಪುನಃ ಸೆರೆಮನೆಗೆ ಹಿಂದಿರುಗಿದೆ.

೭, ಕಾಂಗ್ರೆಸ್ ಮತ್ತು ಕೈಗಾರಿಕೆ : ದೊಡ್ಡ ಕೈಗಾರಿಕೆ ಮತ್ತು ಗ್ರಾಮೋದ್ಯೋಗ

ಗಾಂಧೀಜಿಯ ನೇತೃತ್ವದಲ್ಲಿ ಕಾಂಗ್ರೆಸ್ ಗ್ರಾಮ ಕೈಗಾರಿಕೆಗಳ ಪುನುರುಜೀವನಕ್ಕೆ ಮುಖ್ಯವಾಗಿ ಕೈನೂಲು ಮತ್ತು ಕೈಮಗ್ಗದ ಕೈಗಾರಿಕೆಗೆ ಬಹಳ ಕಾಲದಿಂದ ಪ್ರಾಮುಖ್ಯತೆ ಕೊಟ್ಟಿತ್ತು. ಆದರೆ ದೊಡ್ಡ ಕೈಗಾರಿಕೆಗಳ ಬೆಳೆವಣಿಗೆಯನ್ನು ಕಾಂಗ್ರೆಸ್ ಯಾವಾಗಲೂ ವಿರೋಧಿಸಿರಲಿಲ್ಲ; ಶಾಸನ ಸಭೆಗಳಲ್ಲಿ ಮತ್ತು ಇತರ ಕಡೆಗಳಲ್ಲಿ ಅವಕಾಶದೊರೆತಾಗಲೆಲ್ಲ ಆ ಬೆಳವಣಿಗೆಗೆ ಪ್ರೋತ್ಸಾಹ ಕೊಟ್ಟಿತ್ತು. ಕಾಂಗ್ರೆಸ್ ಪ್ರಾಂತ ಸರಕಾರಗಳು ದೊಡ್ಡ ಕೈಗಾರಿಕೋದ್ಯಮಗಳ ಬೆಳೆವಣಿಗೆಯನ್ನು ಪ್ರೋತ್ಸಾಹಿಸಿದ್ದವು. ೧೯೨೦ ರ ನಂತರ ತಾತಾ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಕಷ್ಟದಲ್ಲಿದ್ದಾಗ ಶಾಸನ ಸಭೆಗಳ ಕಾಂಗ್ರೆಸ್ ಸದಸ್ಯರ ಒತ್ತಾಯದಿಂದ ಸರಕಾರ ಸಹಾಯ ಮಾಡಲು ಮನಸ್ಸು ಮಾಡಿತು. ಭಾರತೀಯ ಹಡಗು ನಿರ್ಮಾಣ ಕೈಗಾರಿಕೆ ಮತ್ತು ಹಡಗಿನ ಸಾರಿಗೆಯ ಪ್ರಶ್ನೆಗಳು ಇಂಡಿಯಾ ಸರಕಾರ ಮತ್ತು ರಾಷ್ಟ್ರೀಯರ ಅಭಿಮತದ ಮಧ್ಯೆ ಸದಾ ಘರ್ಷಣೆಯ ವಿಷಯಗಳಾಗಿದ್ದವು. ಇತರ ಎಲ್ಲ ಭಾರತೀಯ ಪಕ್ಷಗಳಂತೆ ಕಾಂಗ್ರೆಸ್ ಸಹ ಭಾರತೀಯ ಹಡಗು ಸಾರಿಗೆಗೆ ಪೂರ್ಣ ಸಹಾಯ ಕೊಡಬೇಕೆಂದು ಹೋರಾಡಿತು. ಬ್ರಿಟಿಷ್ ಹಡಗು ಸಾರಿಗೆ ಕಂಪೆನಿಗಳ ಪ್ರತಿಷ್ಠಿತ ಹಕ್ಕುಗಳ ರಕ್ಷಣೆಗೆ ಸರಕಾರ ನಿಶ್ಚಯಿಸಿತ್ತು. ಭಾರತೀಯ ಕಂಪನಿಗಳಿಗೆ ಬೇಕಾದ ಎಲ್ಲ ಬಂಡವಾಳ, ಉದ್ಯೋಗ ನಿಪುಣರು, ಆಡಳಿತ ದಕ್ಷತೆ ಇದ್ದರೂ ಸರಕಾರದ ಪಕ್ಷಪಾತದಿಂದ ಬೆಳೆಯಲು ಅವಕಾಶ ದೊರೆಯಲಿಲ್ಲ. ಎಲ್ಲೆಲ್ಲಿ ಬ್ರಿಟಿಷ್ ಕೈಗಾರಿಕೆ, ವ್ಯಾಪಾರ ಮತ್ತು ಬಂಡವಾಳವಿತ್ತೋ ಅಲ್ಲೆಲ್ಲ ಈ ಪಕ್ಷಪಾತವಿತ್ತು.

ಭಾರತೀಯ ಕೈಗಾರಿಕೆಗೆ ಬೆಳೆಯಲು ಅವಕಾಶ ಆಗಬಾರದೆಂದು ದೊಡ್ಡ ಕೇಂದ್ರೀಕೃತ ಕೈಗಾರಿಕಾ ಸಂಸ್ಥೆಯಾದ ಇಂಪೀರಿಯಲ್ ಕೆಮಿಕಲ್ ಇಂಡಸ್ಟ್ರೀಸ್ ಕಂಪೆನಿಗೆ ಬಹುಕಾಲದಿಂದ ಭಾರತಸರಕಾರದ ಸೌಲಭ್ಯ, ಕೆಲವು ವರ್ಷಗಳ ಕೆಳಗೆ ಪಂಜಾಬಿನ ಅದಿರುಗಳ ಉಪಯೋಗಕ್ಕೆ ದೀರ್ಘಕಾಲದ ಗುತ್ತಿಗೆ ಕೊಡಲಾಗಿತ್ತು. ಆ ಒಪ್ಪಂದದ ಷರತ್ತು ಒಂದು ಚಿದಂಬರರಹಸ್ಯ. ಪ್ರಾಯಶಃ ಬಹಿರಂಗಪಡಿಸಿದರೆ ಸಾರ್ವಜನಿಕ ಹಿತಕ್ಕೆ ವಿರುದ್ದವೆಂದೋ ಏನೋ!

ಕಾಂಗ್ರೆಸ್ ಸರಕಾರಗಳು “ಪವರ್ ಆಲ್ಕೊಹಾಲ್” ಕೈಗಾರಿಕೆಯನ್ನು ಪ್ರೋತ್ಸಾಹಿಸಬೇಕೆಂದು ಕಾತರವಿದ್ದವು. 'ಇದು ಅನೇಕ ದೃಷ್ಟಿಯಿಂದ ಅವಶ್ಯವಿದ್ದರೂ ಸಂಯುಕ್ತ ಪ್ರಾಂತ ಮತ್ತು ಬಿಹಾರದಲ್ಲಿ ಇನ್ನೂ ಹೆಚ್ಚಿನ ಕಾರಣಗಳಿದ್ದವು. ಅಲ್ಲಿನ ಅನೇಕ ಸಕ್ಕರೆ ಕಾರ್ಖಾನೆಗಳಲ್ಲಿ ವಿಶೇಷ ಪ್ರಮಾಣದಲ್ಲಿ ಕಾಕಂಬಿ ಒಂದು ನಿಷ್ಟ್ರಯೋಜಕ ಶೇಷವಸ್ತುವಾಗಿ ಉಳಿದಿತ್ತು. ಇದನ್ನು ಉಪಯೋಗಿಸಿ “ಪವರ್ ಪವರ್ ಆಲ್ಕೊಹಾಲ್” ತಯಾರಿಸಬೇಕೆಂದಿದ್ದರು. ತಯಾರಿಕೆಯ ವಿಧಾನವೂ ಸುಲಭವಿತ್ತು ಮತ್ತು ಬರಸೆಲ್ ಕಂಪೆನಿಗೆ ಏಟು ಬೀಳುತ್ತದೆಂಬ ಒಂದು ದೊಡ್ಡ ತೊಂದರೆ ಹೊರತು ಬೇರೆಯಾವ ಆತಂಕವೂ ಇರಲಿಲ್ಲ. ಆದರೆ ಇಂಡಿಯಾ ಸರಕಾರ ಆ ವಿದೇಶೀಕಂಪೆನಿಗೇ ಪ್ರೋತ್ಸಾಹಕೊಡಲು, ಭಾರತದಲ್ಲಿ ಪವರ್ ಆಲೊಹಾಲ್ ತಯಾರಿಕೆಗೆ ಅವಕಾಶಕೊಡಲಿಲ್ಲ. ಬರ ಕೈತಪ್ಪಿ, ಎಣ್ಣೆ ಮತ್ತು ಪೆಟ್ರೋಲ್ ಸರಬರಾಯಿ ತಪ್ಪಿದಮೇಲೆ ಯುದ್ಧ ಆರಂಭವಾದ ಮೂರುವರ್ಷದ ನಂತರ ಭಾರತದಲ್ಲೂ ಪವರ್ ಆಲ್ಗೊಹಾಲ್ ತಯಾರಿಸಬೇಕಾಗಿತ್ತೆಂದು ಇಂಡಿಯಾ ಸರಕಾರಕ್ಕೆ ಜ್ಞಾನೋದಯ ಆಯಿತು. ಅದರ ಪರಿಣಾಮವಾಗಿ ೧೯೪೨ರಲ್ಲಿ ಅಮೆರಿಕನ್ ಗ್ರೇಡಿ ಸಮಿತಿಯ ನೇಮಕವಾಯಿತು.

ಈ ರೀತಿ ಕೈಗಾರಿಕೋದ್ಯಮದ ಬೆಳೆವಣಿಗೆಗೆ ಕಾಂಗ್ರೆಸ್ಸು ಸದಾ ಪ್ರೋತ್ಸಾಹ ಕೊಡುತ್ತ