ಭೂಮಿಯಮೇಲಿನ ಒತ್ತಡ ಕಡಮೆ ಮಾಡುವುದಕ್ಕೆ ಬಡತನ ನಿವಾರಿಸಿ ಜನತೆಯ ಜೀವನಮಟ್ಟ ಹೆಚ್ಚಿಸುವುದಕ್ಕೆ, ದೇಶದ ರಕ್ಷಣೆಯ ಭದ್ರತೆ ಮತ್ತು ಇನ್ನೂ ಅನೇಕ ಕಾರಣಗಳಿಂದ ಟ್ರಾಕ್ಟರುಗಳೂ ಯಂತ್ರಗಳೂ ಬೇಕೆನ್ನುವವನು ನಾನು; ಭಾರತವನ್ನು ಆದಷ್ಟು ಬೇಗ ಯಂತ್ರೀಕರಣಮಾಡಬೇಕೆನ್ನು ವವನು; ಆದರೆ ಯಂತ್ರೀಕರಣದ ಪೂರ್ಣ ಉಪಯೋಗಪಡೆಯಲು ಮತ್ತು ಅದರಿಂದ ಒದಗುವ ಅನರ್ಥ ತಪ್ಪಿಸಿಕೊಳ್ಳಲು ಬಹಳ ಎಚ್ಚರದಿಂದ ತಯಾರಿಸಿದ ಯೋಜನೆಯೂ, ಸಮಜೋಡಣೆಯೂ ಅತ್ಯವಶ್ಯಕ. ತಮ್ಮದೇ ಆದ ಪ್ರಾಚೀನ ಸಂಪ್ರದಾಯ ವೈಶಿಷ್ಟಉಳ್ಳ ಭಾರತ, ಚೀನ ಮುಂತಾದ ಎಲ್ಲ ಹಿಂದೆಬಿದ್ದ ರಾಷ್ಟ್ರಗಳಿಗೆ ಈ ಯೋಜನೆ ಇಂದು ಅತ್ಯವಶ್ಯಕ.
ಚೀನರ ಕೈಗಾರಿಕಾ ಸಹಕಾರ ಸಂಘಗಳ ಇಂಡಸ್ಕೊ ಚಳವಳಿ ಕಂಡು ನಾನು ಮುಗ್ಗನಾದೆ. ಅಂತಹ ಒಂದು ಕಾರ್ಯಕ್ರಮ ಇಲ್ಲಿಯೂ ಅತ್ಯವಶ್ಯಕ. ಭಾರತೀಯ ಹಿನ್ನೆಲೆಗೆ ಅದು ಹೊಂದಿಕೊಳ್ಳುತ್ತದೆ, ಸಣ್ಣ ಕೈಗಾರಿಕೆಗಳಿಗೆ ಪ್ರಜಾಸತ್ತಾತ್ಮಕರೂಪ ಕೊಡುತ್ತದೆ; ಮತ್ತು ಸಹಕಾರ ಮನೋಭಾವ ಬೆಳೆಸುತ್ತದೆ. ದೊಡ್ಡ ಕೈಗಾರಿಕೆಗಳಿಗೆ ಪರಿಪೋಷಕವಾಗಬಹುದು. ಭಾರತದಲ್ಲಿ ದೊಡ್ಡ ಕೈ ಕಾರಿಕೆಗಳನ್ನು ನಾವು ಎಷ್ಟೇ ಬೆಳೆಸಿದರೂ ಸಣ್ಣ ಮತ್ತು ಗೃಹಕೈಗಾರಿಕೆಗಳಿಗೆ ಬೇಕಾದಷ್ಟು ಅವಕಾಶವಿದೆ. ಸೋವಿಯಟ್ ರಷ್ಯದಲ್ಲಿ ಸಹ ಸ್ವಂತ ಕೆಲಸಗಾರರ ಸಹಕಾರ ಸಂಸ್ಥೆಗಳು ದೇಶದ ಕೈಗಾರಿಕಾ ಪ್ರಗತಿಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದೆ.
ವಿದ್ಯುಚ್ಛಕ್ತಿಯ ಹೆಚ್ಚು ಬಳಕೆಯಿಂದ ಸಣ್ಣ ಕೈಗಾರಿಕೆ ಬೆಳಸಿದರೆ ಅವು ದೊಡ್ಡ ಕೈಗಾರಿಕೆಗಳೊಂ ದಿಗೆ ಯಶಸ್ವಿಯಾಗಿ ಪೈಪೋಟಿ ಸಹ ನಡೆಸಬಹುದು. ಕೈಗಾರಿಕೆ ವಿಕೇಂದ್ರೀಕರಣ ಆಗಬೇಕೆಂಬ ವಾದ ಸಹ ಇದೆ. ಹೆನ್ರಿ ಫೋರ್ಡ್ ಇದನ್ನು ಸಮರ್ಥಿಸಿದ್ದಾನೆ. ದೊಡ್ಡ ದೊಡ್ಡ ಕೈಗಾರಿಕಾ ನಗರಗಳಲ್ಲಿ ಜೀವಿಸುವುದರಿಂದ ಭೂಮಿಯ ಸಂಪರ್ಕ ತಪ್ಪಿ ಅನೇಕ ಮಾನಸಿಕ ಮತ್ತು ದೈಹಿಕ ದುಷ್ಪರಿಣಾಮಗಳಾಗು ಇವೆ ಎಂದು ವಿಜ್ಞಾನಿಗಳ ಮತ. ಇನ್ನು ಕೆಲವರು ಮಾನವಕುಲ ಉಳಿಯಬೇಕಾದರೆ ಮಣ್ಣಿಗೆ ಮರಳ ಬೇಕು, ಹಳ್ಳಿಗಳಿಗೆ ಹಿಂದಿರುಗಬೇಕು ಎಂದು ವಾದಿಸಿದ್ದಾರೆ. ಅದೃಷ್ಟವಶಾತ್ ವಿಜ್ಞಾನದ ಸಹಾಯ ದಿಂದ ಜನರು ಭೂಮಿಯ ಸವಿಾಪವೇ ಇದ್ದು ಆಧುನಿಕ ನಾಗರಿಕ ಜೀವನ ಮತ್ತು ಸಂಸ್ಕೃತಿಯ ಎಲ್ಲ ಸೌಲಭ್ಯಗಳನ್ನೂ ಅನುಭವಿಸಲು ಸಾಧ್ಯವಿದೆ.
ಅದು ಏನೆ ಇರಲಿ ಭಾರತದಲ್ಲಿ ನಮ್ಮ ಎದುರಿನ ಮುಖ್ಯ ಪ್ರಶ್ನೆ ಎಂದರೆ ಪರದಾಸ್ಯ ಮತ್ತು ಬ್ರಿಟಿಷ್ ಬಂಡವಾಲಗಾರರ ಆರ್ಥಿಕ ಬಿಗಿತದ ಮಧ್ಯೆ ಜನಸಾಮಾನ್ಯದ ಬಡತನ ನಿವಾರಿಸಿ ಸ್ವಾವಲಂಬನ ಭಾವನೆ ಯನ್ನು ಹೇಗೆ ಹುಟ್ಟಿಸಬೇಕೆಂದು ಗ್ರಾಮ ಕೈಗಾರಿಕೆಗಳನ್ನು ಯಾವಾಗ ಬೇಕಾದರೂ ಅಭಿವೃದ್ಧಿ ಪಡಿಸ ಬಹುದೆಂದು ವಾದಿಸುವವರೂ ಅನೇಕರಿದ್ದಾರೆ. ಆದರೆ ನಮ್ಮ ಇಂದಿನ ಪರಿಸ್ಥಿತಿಯಲ್ಲಿ ನಮಗೆ ಇರು ವುದು ಅದು ಒಂದೇ ಮಾರ್ಗ, ನಾವು ಅನುಸರಿಸಿದ ಮಾರ್ಗ ಅತ್ಯುತ್ತಮವಿಲ್ಲದಿರಬಹುದು. ಸಮಸ್ಯೆಯಂತೂ ಅತಿ ವಿಶಾಲವೂ, ಜಟಿಲವೂ ಕಷ್ಟತಮವೂ ಆದುದು ; ಸದಾ ಸರಕಾರದ ಮುಟ್ಟುಗೋಲಿನ ಭಯ ಇದ್ದೇ ಇತ್ತು. ತಪ್ಪು ಮಾಡಿ ತಿದ್ದಿಕೊಂಡು ಕ್ರಮೇಣ ಮುಂದುವರಿಯ ಬೇಕಾಗಿತ್ತು. ಮೊದಲಿನಿಂದಲೂ ಕೈಗಾರಿಕಾ ಸಹಕಾರಸಂಘ ಏರ್ಪಡಿಸಿ ಗ್ರಾಮಗಳಲ್ಲಿ ಮತ್ತು ಉದ್ಯೋಗ ನಿಪುಣರ ಮತ್ತು ವಿಜ್ಞಾನಿಗಳ ಸಲಹೆಯಿಂದ ಮನೆಗಳಲ್ಲಿ ಸಣ್ಣ ಯಂತ್ರೋಪಕರಣಗಳನ್ನು ಉಪಯೋಗಿಸಿ ಮುಂದುವರಿದಿದ್ದರೆ ಒಳ್ಳಿತಾಗುತ್ತೆಂದು ನನ್ನ ಭಾವನೆ. ಈ ಸಂಸ್ಥೆಗಳಲ್ಲಿ ಈಗ ಸಹಕಾರ ತತ್ವ ಆಚರಣೆಯಲ್ಲಿದೆ.
"ಕೈನೂಲಿನ ಕೈಮಗ್ಗದ ಬಟ್ಟೆ ತಯಾರಿಕೆಯ ಪ್ರೋತ್ಸಾಹಕ್ಕಾಗಿ ಗಾಂಧಿಜಿ ನಡೆಸುತ್ತಿರುವ ಪ್ರಚಂಡ ಚಳವಳಿಯು ಹಿಂದಿನ ಅನಾಗರಿಕ ಜೀವನವನ್ನು ಪುನರುತ್ಥಾನಗೊಳಿಸಬೇಕೆಂಬ ಹುಚ್ಚು ಭಾವೋದ್ರೇಕವಲ್ಲ ಗ್ರಾಮ ಜೀವನದ ಬಡತನ ನಿವಾರಿಸಿ ಆರ್ಥಿಕಮಟ್ಟ ಉನ್ನತಿಗೇರಿಸಲು ಕೈಗೊಂಡ ಸಾಧ್ಯತಮ ಪ್ರಯತ್ನ” ಎಂದು ಅರ್ಥಶಾಸ್ತ್ರಜ್ಞ ಜಿ.ಡಿ.ಎಚ್. ಕೋಲ್ ಹೇಳುತ್ತಾನೆ. ಆ ಪ್ರಯತ್ನವೇ