ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ ೨
೩೬೯

ಸಣ್ಣ ಸಣ್ಣ ಕೆಲಸಮಾಡತಕ್ಕವು. ಸರಕಾರದ ನೀತಿಯಿಂದ ತಾತಾಕಾರ್ಖಾನೆಯ ಬೆಳೆವಣಿಗೆ ಸಹ ನಿಧಾನವಾಯಿತು. ಮೊದಲನೆಯ ಪ್ರಪಂಚಯುದ್ದ ಸಮಯದಲ್ಲಿ ರೈಲ್ವೆ ಎಂಜಿನ್ಗಳು, ಪ್ರಯಾಣಿಕರ ಮತ್ತು ಸಾಮಾನಿನ ಗಾಡಿಗಳು ಸಾಲದಾದವು. ತಾತಾಕಂಪೆನಿ ಎಂಜಿನ್‌ಗಳ ತಯಾರಿಕೆಗೆಂದು ಯಂತ್ರೋಪ ಕರಣಗಳನ್ನು ಸಹ ತರಿಸಿದರು. ಆದರೆ ಯುದ್ಧ ಮುಗಿದೊಡನೆ ಇಂಡಿಯ ಸರಕಾರ ಮತ್ತು ಅದರ ಅಂಗವಾದ ರೈಲ್ವೆ ಬೋರ್ಡ್ ಬ್ರಿಟಿಷ್ ಕೈಗಾರಿಕೆಗೆ ಪ್ರೋತ್ಸಾಹಕೊಡಲು ನಿರ್ಧರಿಸಿದರು. ಭಾರತದ ರೈಲ್ವೆಗಳೆಲ್ಲ ಸರಕಾರದ ಅಧೀನವೊ, ಬ್ರಿಟಿಷ್ ಕಂಪೆನಿಗಳ ಅಧೀನವೊ ಇದ್ದುದರಿಂದ ತಾತಾಕಂಪೆನಿ ತಮ್ಮ ಎಂಜಿನ್ ತಯಾರಿಕೆಯ ಉದ್ಯಮ ನಿಲ್ಲಿಸಬೇಕಾಯಿತು.

ಕೈಗಾರಿಕೆಯಲ್ಲಾಗಲಿ ಅಥವ ಬೇರೆ ಯಾವ ರೀತಿಯಲ್ಲೇ ಆಗಲಿ ಭಾರತ ಪ್ರಗತಿಪಡೆಯ ಬೇಕಾದರೆ ಮೂರು ಮುಖ್ಯ ಅವಶ್ಯಕತೆಗಳಿವೆ. ದೊಡ್ಡ ದೊಡ್ಡ ಯಂತ್ರಗಳ ತಯಾರಿಕೆ, ವಿಜ್ಞಾನ ಸಂಶೋಧನ ಮಂದಿರಗಳು ಮತ್ತು ವಿದ್ಯುಚ್ಛಕ್ತಿಯ ಉತ್ಪಾದನೆ. ಎಲ್ಲ ಯೋಜನೆ ಇವೇ ತಳಹದಿಯಾಗಬೇಕು. ರಾಷ್ಟ್ರೀಯ ಯೋಜನಾ ಸಮಿತಿಯೂ ಇವುಗಳಿಗೇ ಪ್ರಾಮುಖ್ಯತೆ ಕೊಟ್ಟಿತು. ಇವು ಮೂರಕ್ಕೂ ನಮ್ಮಲ್ಲಿ ಅಭಾವ ; ಆದ್ದರಿಂದ ಯಾವ ಕೈಗಾರಿಕಾ ಪ್ರಗತಿಯೂ ನಮಗೆ ಸಾಧ್ಯವಿರಲಿಲ್ಲ. ಸರಕಾರವು ದೂರದೃಷ್ಟಿಯ ಉದಾರ ನೀತಿ ಅನುಸರಿಸಿದ್ದರೆ ಈ ಕೊರತೆ ನಿವಾರಿಸಬಹುದಿತ್ತು. ಆದರೆ ರಾಷ್ಟ್ರದ ಪ್ರಗತಿ ವಿರುದ್ದ ಪ್ರತಿಗಾಮಿ ಮನೋಭಾವದ ನೀತಿ ಅನುಸರಿಸಿ ಸರಕಾರವು ದೊಡ್ಡ ಕೈಗಾರಿಕೆಗಳ ಯಂತ್ರ ನಿರ್ಮಾಣ ಕಾರಕ್ಕೆ ಅವಕಾಶಕೊಡಲಿಲ್ಲ. ಪ್ರಪಂಚದ ಎರಡನೆ ಯುದ್ಧ ಆರಂಭವಾದಾಗಲೂ ಆ ಯಂತ್ರೋಪಕರಣ ತರಿಸಲು ಅವಕಾಶ ಕೊಡಲಿಲ್ಲ. ಆಮೇಲೆ ಹಡಗುಗಳಿಲ್ಲವೆಂಬ ನೆಪ ತಂದೊಡ್ಡಿದರು. ಬಂಡವಾಳಕ್ಕಾಗಲಿ ಉದ್ಯೋಗ ಕು ಶ ಲ ರಿ ಗಾ ಗ ಲಿ ಕೊರತೆ ಇರಲಿಲ್ಲ. ಬೇಕಾಗಿದ್ದುದು ಯಂತ್ರ ಸಾಮಗ್ರಿ ಮಾತ್ರ ; ಕೈಗಾರಿಕೋದ್ಯಮಿಗಳು ಮೇಲಿಂದಮೇಲೆ ಬೊಬ್ಬೆ ಇಡುತ್ತಲೇ ಇದ್ದರು. ಯಂತ್ರೋಪಕರಣ ತರಿಸಲು ಅವಕಾಶಕೊಟ್ಟಿದ್ದರೆ ಭಾರತದ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದು ಹಾಗಿರಲಿ ದೂರ ಪ್ರಾಚ್ಯದ ಯುದ್ದದ ಕತೆಯೇ ಬೇರೆಯಾಗುತ್ತಿತ್ತು. ವಿಮಾನಗಳನ್ನೆಲ್ಲ ಅಥವ ಬಹುತ್ರನ ಮತ್ತು ವೆಚ್ಚದಿಂದ ತರಬೇಕಾಗಿದ್ದ ಅತ್ಯವಶ್ಯಕ ವಸ್ತುಗಳನ್ನೆಲ್ಲ ಭಾರತದಲ್ಲಿಯೆ ತಯಾರಿಸಬಹುದಿತ್ತು. ಚೀಣಾ ಮತ್ತು ಪೌರ್ವಾತ್ಯ ದೇಶಗಳಿಗೆ ಭಾರತವು ಶಸ್ತ್ರಾಗಾರವಾಗಬಹುದಾಗಿತ್ತು. ಭಾರತದ ಕೈಗಾರಿಕಾ ಪ್ರಗತಿಯೂ ಕೆನಡ ಮತ್ತು ಆಸ್ಟ್ರೇಲಿಯಗಳಷ್ಟೆ ಮುಂದುವರಿಯಬಹುದಿತ್ತು. ಯುದ್ಧ ಪರಿಸ್ಥಿತಿಯ ಅವಶ್ಯಕತೆ ಎಷ್ಟೇ ಆತುರವಿದ್ದರೂ ಬ್ರಿಟಿಷ್ ಕೈಗಾರಿಕೆಗಳ ಭವಿಷ್ಯದ ಅವಶ್ಯಕತೆಗಳಿಗೇ ಪ್ರಾಮುಖ್ಯತೆ ದೊರೆಯಿತು. ಯುದ್ಧಾನಂತರದ ದಿನಗಳಲ್ಲಿ ಬ್ರಿಟಿಷ್ ಕೈಗಾರಿಕೆ ಗಳೊಂದಿಗೆ ಪೈಪೋಟಿಗೆ ನಿಲ್ಲಬಹುದಾದ ಯಾವ ಕೈಗಾರಿಕೆಗೂ ಭಾರತದಲ್ಲಿ ಅವಕಾಶ ದೊರೆಯಲಿಲ್ಲ. ಇದರಲ್ಲಿ ಮುಚ್ಚುಮರೆಯೇನೂ ಇರಲಿಲ್ಲ. ಬ್ರಿಟಿಷ್ ಪತ್ರಿಕೆಗಳಲ್ಲಿ ಬಹಿರಂಗವಾಗಿಯೇ ಈ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಭಾರತದಲ್ಲಿ ಅದನ್ನೆ ಎತ್ತಿ ತೋರಿಸಿ ಪ್ರತಿಭಟಿಸುತ್ತಲೂ ಇದ್ದರು.

ತಾತಾಕಂಪೆನಿಯ ಸ್ಥಾಪಕರಾದ ಜಮಷೆಡ್ಡಿ ತಾತಾ ಬೆಂಗಳೂರಲ್ಲಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ಭಾರತೀಯ ವಿಜ್ಞಾನ ಸಂಶೋಧನಾ ಮಂದಿರ ಆರಂಭಿಸಿ ತಮ್ಮ ದೂರದೃಷ್ಟಿ ತೋರಿಸಿದ್ದರು. ಭಾರತದಲ್ಲಿ ಸಂಶೋಧನಾಲಯಗಳಿಗೆ, ಇದೇ ಮೊದಲನೆಯದು, ಉಳಿದುವೆಲ್ಲ ಅತ್ಯಲ್ಪಗುರಿಯ ಸರಕಾರಿ ಸಂಸ್ಥೆಗಳು, ಅಮೆರಿಕೆಯ ಸಂಸ್ಥಾನಗಳಲ್ಲಿ, ಸೋವಿಯಟ್ ರಷ್ಯದಲ್ಲಿ ಸಾವಿರಾರು ಸಂಶೋಧನಾಲಯಗಳಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ವಿಶೇಷ ವಿಜ್ಞಾನ ಸಂಶೋಧನ ಮಂದಿರಗಳಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ ನಡೆಯುತ್ತಿದ್ದರೂ ಬೆಂಗಳೂರಿನ ವಿಜ್ಞಾನ ಸಂಶೋಧನಾಲಯ ಮತ್ತು ಕೆಲವು ವಿಶ್ವವಿದ್ಯಾನಿಲಯಗಳನ್ನು ಬಿಟ್ಟರೆ ಭಾರತದಲ್ಲಿ ಈ ಸಂಶೋಧನಾ ಕಾವ್ಯವನ್ನು ಅಲಕ್ಷೆ ಮಾಡಲಾಯಿತು. ಎರಡನೆಯ ಯುದ್ಧದ ಆರಂಭವಾದ ಮೇಲೆ ಸಂಶೋಧನೆಗೆ ಕೊಟ್ಟ ಅಲ್ಪ ಪ್ರೋತ್ಸಾಹದಿಂದ ಉತ್ತಮ ಪ್ರತಿಫಲ ದೊರೆತಿದೆ.

26