ಈ ಪುಟವನ್ನು ಪ್ರಕಟಿಸಲಾಗಿದೆ
೩೭೬
ಭಾರತ ದರ್ಶನ

ಈ ಮಧ್ಯೆ ಯೂರೋಪಿನಲ್ಲಿ ಪ್ರಚಂಡ ಬದಲಾವಣೆಗಳಾಗಿ ಹಿಟ್ಲರ್ ಅಧಿಕಾರಕ್ಕೆ ಬಂದು ನಾಜಿತತ್ವವು ಬಲಗೊಂಡಿತ್ತು. ಈ ಬದಲಾವಣೆಗಳನ್ನು ಕಂಡು ಕಾಂಗ್ರೆಸ್ ಅಸಮಾಧಾನಗೊಂಡು ತಕ್ ಕ್ಷಣವೇ ಅದನ್ನು ಖಂಡಿಸಿತು. ಹಿಟ್ಲರ್ ಮತ್ತು ಆತನ ನೀತಿ ಎಂದರೆ ಕಾಂಗ್ರೆಸ್ಸು ಪ್ರಬಲವಾಗಿ ವಿರೋಧಿಸುತ್ತಿದ್ದ ಸಾಮ್ರಾಜ್ಯವಾದ ಮತ್ತು ಜನಾಂಗದ್ವೇಷದ ಘನೀಭೂತ ಅಪರಾವತಾರವೆಂದು ಕಾಂಗ್ರೆಸ್ಸಿಗೆ ತೋರಿತು. ಚೀನಾಪರ ಸಹಾನುಭೂತಿ ಇದ್ದುದರಿಂದ ಜಪಾನರ ಮಂಚೂರಿಯಾ ಆಕ್ರಮಣವನ್ನು ಕಾಂಗ್ರೆಸ್ಸು ಪ್ರಬಲವಾಗಿ ವಿರೋಧಿಸಿ ಖಂಡಿಸಿತು. ಅಬಿಸೀನಿಯಾ, ಸ್ಪೇನ್, ಚೀಣ ಜಪಾನ್ ಯುದ್ಧ, ಜೆಕೊಸೊವೇಕಿಯಾ ಮತ್ತು ಮ್ಯೂನಿಚ್ ಘಟನೆಗಳು ಕಾಂಗ್ರೆಸ್ಸಿನ ಈ ಮನೋಭಾವನೆಗೆ ಪುಷ್ಟಿ ಕೊಟ್ಟುದಲ್ಲದೆ, ಯುದ್ದದ ಭಯವನ್ನೂ ಹೆಚ್ಚಿಸಿದವು.

ಆದರೆ ಮುಂಬರುವ ಈ ಯುದ್ದವು ಹಿಟ್ಲರ್ ಅಧಿಕಾರಕ್ಕೆ ಬರುವ ಮುಂಚೆ ಯೋಚಿಸಿದ್ದ ಯುದ್ಧಕ್ಕಿಂತ ತೀರ ಭಿನ್ನವಿತ್ತು. ಆದರೂ ಬ್ರಿಟಿಷರ ನೀತಿ ಎಲ್ಲ ಫ್ಯಾಸಿಸ್ಟ್ ಮತ್ತು ನಾಜಿ ತತ್ವದ ಪರ ಇದ್ದುದರಿಂದ ಅದು ಏಕಾಏಕಿ ಸ್ವಾತಂತ್ರ ಮತ್ತು ಪ್ರಜಾಪ್ರಭುತ್ವದ ಪರ ತಿರುಗುತ್ತದೆಂದು ನಂಬುವುದು ಸಹ ಕಷ್ಟವಿತ್ತು. ಇತರ ಸನ್ನಿವೇಶ ಏನೆ ಒದಗಲಿ ತನ್ನ ಸಾಮ್ರಾಜ್ಯ ದೃಷ್ಟಿ ಮತ್ತು ಸಾಮ್ರಾಜ್ಯ ಅಧಿಕಾರದ ಮೋಹ ಮಾತ್ರ ಬ್ರಿಟನ್ನು ಬಿಡುವಂತಿರಲಿಲ್ಲ ಮತ್ತು ಯಾವ ಯಾವ ನೀತಿಗೆ ರಷ್ಯದ ಬೆಂಬಲವಿತ್ತೊ ಅವೆಲ್ಲಕ್ಕೂ ಮೂಲ ವಿರೋಧವಿದ್ದೇ ಇತ್ತು. ಆದರೆ ಬ್ರಿಟಿಷರು ಹಿಟ್ಲರ್‌ನನ್ನೂ ಎಷ್ಟೇ ತೃಪ್ತಿ ಪಡಿಸಿದರೂ ಯೂರೋಪಿನ ಹಿಂದಿನ ಸಮತೂಕವನ್ನೆಲ್ಲ ತಲೆಕೆಳಗೆ ಮಾಡಿ ಯೂರೋಪಿನಲ್ಲಿ ಒಂದು ಪ್ರಬಲ ಶಕ್ತಿ ಯಾಗುತ್ತ ಬ್ರಿಟಿಷ್ ಸಾಮ್ರಾಜ್ಯದ ತಾಯಿ ಬೇರುಗಳಿಗೇ ಕೊಡಲಿ ಪೆಟ್ಟು ಕೊಡಲಾರಂಭಿಸಿದನು. ಜರ್ಮನಿಗೂ ಬ್ರಿಟನ್ನಿಗೂ ಯುದ್ಧ ಅನಿವಾದ್ಯವೆಂದು ತೋರಿತು. ಆ ಸನ್ನಿವೇಶ ಏನಾದರೂ ಒದಗಿದರೆ ನಮ್ಮ ನೀತಿ ಏನು? ನಮ್ಮ ನೀತಿಯ ಎರಡೂ ತತ್ವಗಳನ್ನು ಪಾಲಿಸುವುದು ಹೇಗೆ? ಬ್ರಿಟಿಷರ ಸಾಮ್ರಾಜ್ಯ ಶಕ್ತಿಯನ್ನು ವಿರೋಧಿಸುವುದೆ ? ಅಥವ ಫ್ಯಾಸಿಸ್ಸು ಮತ್ತು ನಾಜಿ ತತ್ವವನ್ನು ವಿರೋಧಿಸುವುದೇ? ಆಗ ನಮ್ಮ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಭಾವನೆಗಳೆಲ್ಲಿ ಮತ್ತು ಅವುಗಳಿಗೆ ಯಾವ ಸ್ಥಾನ? ಅಂದಿನ ಪರಿಸ್ಥಿತಿಯಲ್ಲಿ ಒಂದು ನಿರ್ಧಾರಕ್ಕೆ ಬರುವುದು ನನಗೆ ಬಹಳ ಕಷ್ಟ ಕೆಲಸವಾಯಿತು. ಆದರೆ ಬ್ರಿಟನ್ನು ಭಾರತದಲ್ಲಿ ತನ್ನ ಸಾಮ್ರಾಜ್ಯ ನೀತಿ ಬಿಟ್ಟು ಜನಾಭಿಪ್ರಾಯದಂತೆ ನಡೆಯುವುದಾಗಿ ಭರವಸೆಕೊಟ್ಟು ಒಂದು ಹೆಜ್ಜೆ ಮುಂದೆ ಬಂದಿದ್ದರೆ ನಮಗೆ ಯಾವ ಕಷ್ಟವೂ ಇರಲಿಲ್ಲ.

ರಾಷ್ಟ್ರೀಯ ಭಾವನೆಗೂ ಅಂತರ ರಾಷ್ಟ್ರೀಯ ಭಾವನೆಗೂ ಘರ್ಷಣೆಯಾಗಿದ್ದರೆ ರಾಷ್ಟ್ರೀಯ ಭಾವನೆಗೇ ಗೆಲವು ಖಂಡಿತ. ಎಲ್ಲ ದೇಶಗಳಲ್ಲಿ ಎಲ್ಲ ವಿಷಮ ಕಾಲಗಳಲ್ಲೂ ರಾಷ್ಟ್ರೀಯ ಭಾವನೆಗೇ ಬೆಂಬಲ, ಪರದಾಸ್ಯದಲ್ಲಿ ತೊಳಲು, ಅನೇಕ ವರ್ಷಗಳ ಹೋರಾಟದ ಸಂಕಟ ಮತ್ತು ನೋವಿನಿಂದ ನರಳುವ ದೇಶದಲ್ಲಂತೂ ಅದು ಯಾರಿಂದಲೂ ತಡೆಯಲಾಗದ ಅನಿವಾರ, ಇಂಗ್ಲೆಂಡ್ ಮತ್ತು ಫ್ರಾನ್ಸ್ ಎರಡೂ ಸ್ಪೇನ್ ಜನತಾ ರಾಜ್ಯಕ್ಕೆ ದ್ರೋಹ ಮಾಡಿದ್ದವು; ಜೆಕೊಸ್ಟೋನಿಯವನ್ನು ನಡುನೀರಿನಲ್ಲಿ ಕೈ ಬಿಟ್ಟಿದ್ದವು. ತಮ್ಮ ರಾಷ್ಟ್ರೀಯ ಹಕ್ಕು ಬಾಧ್ಯತೆಗಳಿಗೆ ಧಕ್ಕೆ ಬಾರದಿರಲೆಂದು ಅಂತರ ರಾಷ್ಟ್ರೀಯ ನೀತಿಯನ್ನು ಬಲಿ ಕೊಟ್ಟಿದ್ದವು. ಆದರೆ ಅವರ ಆಶೆಗಳೆಲ್ಲ ಮಣ್ಣು ಗೂಡಿ ಆಮೇಲೆ ತಮ್ಮ ದಾರಿ ತಪ್ಪೆಂದು ತಿಳಿಯಿತು. ಇಂಗ್ಲೆಂಡ್, ಫ್ರಾನ್ಸ್, ಮತ್ತು ಚೀಣಾ ದೇಶಗಳೊಂದಿಗೆ ಪೂರ್ಣ ಸಹಾನುಭೂತಿ ಇದ್ದರೂ, ಮತ್ತು ನಾಜಿ ತತ್ವ, ಜಪಾನೀ ಸೈನ್ಯ ಮತ್ತು ಆಕ್ರಮಣ ನೀತಿಗೆ ಪೂರ್ಣ ವಿರೋಧವಿದ್ದರೂ ಅಮೆರಿಕೆಯ ಸಂಯುಕ್ತ ಸಂಸ್ಥಾನ ಯಾವ ಗೋಜಿಗೂ ಹೋಗದೆ ತನ್ನ ಪಾಡಿಗೆ ತಾನು ಇತ್ತು. ಪರ್ ಹಾರ್ಬರ್ ಘಟನೆಯೇ ಅಮೆರಿಕೆಯ ಸಂಯುಕ್ತ ಸಂಸ್ಥಾನವನ್ನು ಯುದ್ದಕ್ಕೆ ತಳ್ಳಿತು. ಅಂತರ ರಾಷ್ಟ್ರೀಯ ಭಾವನೆಯೇ ಮೂರ್ತಿವೆತ್ತಂತೆ ಇದ್ದ ರಷ್ಯ ಸಹ ಕೇವಲ ರಾಷ್ಟ್ರೀಯ ಭಾವನೆಯನ್ನೇ ತಾಳಿ ತನ್ನ ಸ್ನೇಹಿತರನ್ನು ಮತ್ತು .ತನ್ನೊಂದಿಗೆ ಸಹಾನುಭೂತಿಯುಳ್ಳವರನ್ನು ವಿಸ್ಮಯಗೊಳಿಸಿತು. ಯಾವ ಮುಂಜಾಗ್ರತೆಗೂ ಅವಕಾಶ ಕೊಡದೆ ಏಕಾಏಕಿ ಜರ್ಮನ್ ಸೈನ್ಯಪಡೆಗಳು ರಷ್ಯದ ಮೇಲೆ ಧಾಳಿ ಮಾಡಿದಾಗಲೇ ಸೋವಿಯಟ್ ರಷ್ಯ