ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ ೩
೩೭೯

ಉಪಯೋಗ ದೊರೆಯಬೇಕಾದರೆ ದಾಸ್ಯದ ಕಟ್ಟು ಕಳಚಿ, ಸ್ವಾತಂತ್ರ ಪಡೆದು ಸಮಾನರಾಗಿ ಕಲೆತಾಗ ಮಾತ್ರ ಅದು ಸಾಧ್ಯವೆನಿಸಿತು.

ಕೆಲವು ಬ್ರಿಟಿಷ್‌ ಡೊಮಿನಿಯನ್‌ಗಳಲ್ಲಿ ಮತ್ತು ಕಾಲೊನಿಗಳಲ್ಲಿ ಇದ್ದ ವರ್ಣಭೇದ ಭಾರತೀಯರಿಗೆ ಕೊಡುತ್ತಿದ್ದ ತೊಂದರೆಗಳೇ ಆ ಗುಂಪಿನಿಂದ ಹೊರಬೀಳಬೇಕೆಂದು ನಮ್ಮನ್ನು ಪ್ರೇರಿಸಿತು. ಅದರಲ್ಲೂ ದಕ್ಷಿಣ ಆಫ್ರಿಕ ಯಾವಾಗಲೂ ನಮಗೊಂದು ಹುಣ್ಣಾಯಿತು. ಪೂರ್ವ ಆಫ್ರಿಕ ಮತ್ತು ಕೆನ್ಯಾ ಬ್ರಿಟನ್ನಿನ ಅಧೀನ ರಾಷ್ಟ್ರಗಳಾಗಿದ್ದವು. ಕೆನಡ, ಆಸ್ಟ್ರೇಲಿಯ, ನ್ಯೂಜಿಲೆಂಡ್ ಜನರೊಡನೆ ನಮ್ಮ ವ್ಯಕ್ತಿ ಸಂಬಂಧ ಹಿತವಾಗಿಯೇ ಇತ್ತು. ಬ್ರಿಟಿಷರ ದುರಹಂಕಾರ ಮತ್ತು ಸಂಕುಚಿತ ಸಾಮಾಜಿಕ ನೀತಿ ಈ ಹೊಸ ಜನರಲ್ಲಿ ಇರಲಿಲ್ಲ.

ಭಾರತದ ಸ್ವಾತಂತ್ರದ ವಿಷಯ ಪ್ರಸ್ತಾಪಿಸುವಾಗ ನಮ್ಮಲ್ಲಿ ಯಾವ ಪ್ರತ್ಯೇಕ ಮನೋಭಾವ ನೆಯೂ ಇರಲಿಲ್ಲ. ಹಿಂದಿನ ಯುಗದ ರಾಷ್ಟ್ರೀಯ ಸ್ವಾತಂತ್ರ ಮುಂದೆ ಸಾಧ್ಯವಿಲ್ಲ ಎಂದು ಇತರರನೇಕರಿಗಿಂತ ಮೊದಲೇ ನಾವು ಅರಿತಿದ್ದೆವು. ಪರಸ್ಪರ ಸಹಕಾರದ ನೂತನ ಯುಗದ ಅವಶ್ಯಕತೆಯನ್ನೂ ಅರಿತಿದ್ದೆವು. ಇತರ ರಾಷ್ಟ್ರಗಳಂತೆ ಯಾವುದಾದರೂ ಒಂದು ಅಂತರರಾಷ್ಟ್ರೀಯ ಚೌಕಟ್ಟಿನೊಳಗೆ ನಮ್ಮ ಸ್ವಾತಂತ್ರವನ್ನೂ ಮಿತಿಗೊಳಿಸಲು ನಾವು ಸದಾ ಸಿದ್ಧರಿರುವುದಾಗಿ ಪದೇ ಪದೇ ಸ್ಪಷ್ಟಪಡಿಸಿದೆವು. ಆ ಚೌಕಟ್ಟು ಇಡೀ ಪ್ರಪಂಚದ್ದಾದರೆ ಉತ್ತಮ, ಆದರೆ ಎಷ್ಟು ಹೆಚ್ಚಿನ ಭಾಗವಾದರೆ ಅಷ್ಟು ಉತ್ತಮ. ಅಥವ ಪ್ರಾದೇಶಿಕವಾದರೂ ಆಗಬಹುದು ಎಂದು ಭಾವಿಸಿದೆವು. ಬ್ರಿಟಿಷ್ ಕಾಮನ್‌ವೆಲ್ತ್ ಈ ಯಾವ ಚೌಕಟ್ಟಿನೊಳಗೂ ಬರುವಂತೆ ಇರಲಿಲ್ಲ, ಪ್ರಪಂಚದ ದೊಡ್ಡ ಚೌಕಟ್ಟಿನಲ್ಲಿ ಅದೂ ಒಂದು ಭಾಗವಾಗಲು ಮಾತ್ರ ಸಾಧ್ಯವಿತ್ತು.

ಉಗ್ರ ರಾಷ್ಟ್ರವಾದಿಗಳಾದರೂ ನಮಗೆ ಇಷ್ಟು ಅಂತರರಾಷ್ಟ್ರೀಯ ದೃಷ್ಟಿ ಬಂದುದೇ ಒಂದು ಆಶ್ಚಯ್ಯ. ಪರದಾಸ್ಯದಲ್ಲಿನ ಯಾವ ದೇಶದ ರಾಷ್ಟ್ರೀಯ ಚಳವಳಿಗೂ ನಮ್ಮ ಹತ್ತಿರ ಸುಳಿಯಲು ಸಹ ಸಾಧ್ಯವಿಲ್ಲ ; ಅವರ ಸಾಮಾನ್ಯ ನೀತಿ ಎಲ್ಲ ಅಂತರರಾಷ್ಟ್ರೀಯ ತೊಡಕುಗಳಿಂದ ದೂರವಿರಬೇಕೆಂದೇ, ಸ್ಪೇನ್ ಜನತಾ ರಾಜ್ಯ, ಚೀಣಾ, ಅಬಿಸೀನಿಯಾ, ಜೆಕೊಸೊವೇಕಿಯಾ ರಾಷ್ಟ್ರಗಳಿಗೆ ನಾವು ತೋರಿದ ಸಹಾನುಭೂತಿಗೆ ನಮ್ಮನ್ನು ಭಾರತದಲ್ಲೂ ಆಕ್ಷೇಪಿಸಿದರು. ಅದರಿಂದ ಪ್ರಬಲ ರಾಷ್ಟ್ರಗಳಾದ ಜರ್ಮನಿ, ಇಟಲಿ, ಜಪಾನ್ ನಮಗೆ ಶತ್ರುಗಳಾಗುತ್ತಾರೆ ಎಂದರು; ಬ್ರಿಟನ್ನಿನ ಪ್ರತಿಯೊಂದು ಶತ್ರು ರಾಷ್ಟ್ರವನ್ನೂ ನಮ್ಮ ಮಿತ್ರರಾಷ್ಟ್ರವೆಂದು ಪರಿಗಣಿಸಬೇಕೆಂದರು ; ಅಧಿಕಾರ ಮತ್ತು ಅದರ ಉಪಯೋಗದ ಅವಕಾಶವೇ ಮುಖ್ಯವಾಗಿರುವ ರಾಜಕೀಯದಲ್ಲಿ ತಾತ್ವಿಕ ದೃಷ್ಟಿಗೆ ಅವಕಾಶವಿಲ್ಲವೆಂದರು. ಆದರೆ ಈ ವಿರೋಧವೆಲ್ಲ ಕಾಂಗ್ರೆಸ್ಸಿನ ಪ್ರಚಂಡ ಜನಬಲದ ಎದುರಿನಲ್ಲಿ ಸದ್ದಿಲ್ಲದೆ ಅಡಗಿಹೋಯಿತು. ಮುಸ್ಲಿಂ ಲೀಗ್ ಮಾತ್ರ ತುಟಿಪಿಟ್ಟೆನ್ನದೆ ಇಂತಹ ಅಂತರರಾಷ್ಟ್ರೀಯ ಪ್ರಶ್ನೆಗಳ ಮೇಲೆ ಬಾಯಿಗೆ ಬೀಗ ಹಾಕಿಕೊಂಡಿರುತ್ತಿತ್ತು.

೧೯೩೮ರಲ್ಲಿ ಕಾಂಗ್ರೆಸ್ಸು, ಕೆಲವು ವೈದ್ಯರನ್ನು ವೈದ್ಯ ಸಲಕರಣೆಗಳೊಂದಿಗೆ ಚೀಣಾದ ಸಹಾಯಕ್ಕೆ ಕಳುಹಿಸಿಕೊಟ್ಟಿತು. ಈ ಪಡೆಯು ಅನೇಕ ವರ್ಷಗಳ ಕಾಲ ಅಲ್ಲಿ ಉತ್ತಮ ಕೆಲಸಮಾಡಿತು. ಇದನ್ನು ಏರ್ಪಡಿಸಿದಾಗ ಸುಭಾಷ್ ಚಂದ್ರ ಬೋಸ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಜಪಾನ್, ಜರ್ಮನಿ ಅಥವ ಇಟಲಿಯ ವಿರುದ್ದ ಕಾಂಗ್ರೆಸ್ ಯಾವ ಕೆಲಸವನ್ನೂ ಮಾಡಬಾರದೆಂದು ಅವರ ಅಭಿಪ್ರಾಯವಿತ್ತು. ಆದರೂ ಕಾಂಗ್ರೆಸ್ಸಿನ ಮತ್ತು ದೇಶದ ಅಭಿಪ್ರಾಯಕ್ಕಾಗಲಿ ಅಥವ ಚೀನಾಕ್ಕೆ ಮತ್ತು ಫ್ಯಾಸಿಸ್ಟ್ ಅಥವ ನಾಜಿ ಆಕ್ರ ಮಣಕ್ಕೆ ಬಲಿಯಾದ ಇತರ ರಾಷ್ಟ್ರಗಳಿಗೆ ಕಾಂಗ್ರೆಸ್ ಪದೇ ಪದೇ ತೋರಿದ ಸಹಾನುಭೂತಿಗೇ ಆಗಲಿ ಅವರು ಅಡ್ಡಿ ಬರಲಿಲ್ಲ. ಅವರ ಅಧ್ಯಕ್ಷತೆಯಲ್ಲಿ ಅವರಿಗೆ ಇಷ್ಟವಿಲ್ಲದ ಅನೇಕ ನಿರ್ಣಯಗಳಾದವು. ವಿರೋಧ ಪ್ರದರ್ಶನಗಳನ್ನು ಏರ್ಪಡಿಸಿದೆವು; ದೇಶದಲ್ಲಿ ಅವುಗಳಿಗೆ ಇದ್ದ ಬೆಂಬಲವನ್ನರಿತು ಅವರು ಸುಮ್ಮನಿದ್ದರು. ಕಾಂಗ್ರೆಸ್ ಕಾರಕಾರಿ ಸಮಿತಿಯಲ್ಲಿ ಅವರಿಗೂ ಇತರ ಸದಸ್ಯರಿಗೂ ವಿದೇಶಾಂಗ ನೀತಿ ಮತ್ತು ಒಳಾಡಳಿತ ನೀತಿಯಲ್ಲಿ ತೀವ್ರ ಭಿನ್ನಾಭಿಪ್ರಾಯಗಳಿತ್ತು ; ಇದರಿಂದ ೧೯೩೯ರಲ್ಲಿ ಒಡಕು ಹುಟ್ಟಿತು. ಆಮೇಲೆ