ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ ೩
೩೯೭

ಸಮಯದಲ್ಲಿ ಉಗ್ರ ಸ್ವರೂಪ ತಾಳಿ ಎಲ್ಲ ಕಡೆಯಿಂದ ಉಲ್ಬಣಗೊಂಡೋ ಇನ್ನು ಕೆಲವು ವೇಳೆ ಸೌಮ್ಯವಾಗಿಯೋ ಅಂತೂ ಸದಾ ನಡೆಯುತ್ತಲೇ ಇರುತ್ತದೆ. ಈ ಪ್ರಾಂತಗಳಲ್ಲಿ ಕಾಂಗ್ರೆಸ್ ಸರಕಾರಗಳು ಇದ್ದಾಗ ಈ ಹೋರಾಟ ಸ್ವಲ್ಪ ಸೌಮ್ಯವಾಗಿತ್ತು. ಈಗ ಗರಿಗೆದರಿಕೊಂಡು ಪುನಃ ಆರಂಭವಾಗಿದೆ. ಪ್ರಮುಖ ಕಾಂಗ್ರೆಸ್ ನಾಯಕರನ್ನೂ ಶಾಸನ ಸಭೆಗಳ ಸದಸ್ಯರನ್ನೂ ಸೆರೆಮನೆಗೆ ಕಳುಹಲು ಆಜ್ಞೆ ಮಾಡಬೇಕೆಂದರೆ ಸಿವಿಲ್ ಸರ್ವಿಸ್ ಅಧಿಕಾರಿಗಳಿಗೆ ಒಂದು ವಿಶೇಷ ಆನಂದ. ಅದೇನೆ ಇರಲಿ, ನಿರ್ದಿಷ್ಟ ಕಾರ್ಯಕ್ರಮ ಅನಿವಾರ್ಯವಾಯಿತು; ಸುಮ್ಮನಿರುವುದೇ ಒಂದು ದೌರ್ಬಲ್ಯವೆನಿಸಿತು. ಕಾರ್ಯಕ್ರಮ ಏನೇ ಆದರೂ ನಮ್ಮ ಮೂಲ ನೀತಿಗನುಗುಣವಾಗಿ ಅದು ಒಂದು ಬಗೆಯ ಶಾಸನ ಭಂಗವೇ ಆಗಬೇಕಾಯಿತು. ಆದರೂ ಸಾರ್ವ ಜನಿಕ ಚಳವಳಿಗೆ ಅವಕಾಶ ಕೊಡದಂತೆ ಎಚ್ಚರ ತೆಗೆದುಕೊಂಡು ಕೆಲವು ಆರಿಸಿದ ಪ್ರಮುಖ ವ್ಯಕ್ತಿಗಳು ಮಾತ್ರ ಶಾಸನ ಭಂಗಮಾಡಬೇಕೆಂದು ನಿರ್ಧರಿಸಿದೆವು. ಸಾರ್ವಜನಿಕ ಸತ್ಯಾಗ್ರಹದ ಬದಲು ವ್ಯಕ್ತಿ ಸತ್ಯಾಗ್ರಹ ಹೂಡಿದೆವು. ಅದು ಒಂದು ನೈತಿಕ ಪ್ರತಿಭಟನೆಯಾಗಿತ್ತು. ಆಡಳಿತವರ್ಗ ಉರುಳಿಸಲು ಯತ್ನಿಸದೆ ಸುಲಭವಾಗಿ ಸತ್ಯಾಗ್ರಹಿಗಳನ್ನು ಸೆರೆಮನೆಗೆ ಕಳುಹಿಸಲು ಅವಕಾಶ ಕಲ್ಪಿಸಿಕೊಟ್ಟುದು ರಾಜಕಾರಣಿಯ ದೃಷ್ಟಿಗೆ ಆಶ್ಚರ್ಯವೆನಿಸಬಹುದು. ಉಗ್ರ ರಾಜಕೀಯ ಚಳವಳಿ ಅಥವ ಕ್ರಾಂತಿಯು ಬೇರೆ ಎಲ್ಲಿಯೂ ಈ ರೀತಿ ನಡೆದಿಲ್ಲ. ಆದರೂ ಕ್ರಾಂತಿಕಾರಕ ರಾಜಕೀಯ ಹೋರಾಟ ಸಹ ಉನ್ನತ ನೈತಿಕ ಮಟ್ಟದಲ್ಲಿ ನಡೆಯಬೇಕೆಂದು ಗಾಂಧಿಜಿಯ ನೀತಿಯೇ ಆ ರೀತಿ ಇತ್ತು. ಏನು ಚಳವಳಿ ನಡೆದರೂ ಆತನೇ ನಮ್ಮ ಸೇನಾನಾಯಕ. ಬ್ರಿಟಿಷರ ನೀತಿಗೆ ತಲೆಬಾಗದೆ, ಸ್ವಯಂಪ್ರೇರಣೆಯ ದೃಢ ನಿರ್ಧಾರದಿಂದ ಬರುವ ಸಂಕಟ ಎಲ್ಲ ಅನುಭವಿಸಿ ನಮ್ಮ ಪ್ರತಿಭಟನೆ ತೋರಿಸಬೇಕೆಂದೂ, ಗಲಭೆ ಎಬ್ಬಿಸುವುದು ನಮ್ಮ ಉದ್ದೇಶವಲ್ಲವೆಂದೂ ಆತನ ರೀತಿ.

ಈ ವ್ಯಕ್ತಿ ಸತ್ಯಾಗ್ರಹ ಬಹಳ ಸಣ್ಣದಾಗಿ ಆರಂಭವಾಯಿತು. ಪ್ರತಿಯೊಬ್ಬ ವ್ಯಕ್ತಿಯೂ ಕೆಲವು ಪರೀಕ್ಷೆಗೆ ಗುರಿಯಾಗಿ ಗಾಂಧೀಜಿಯ ಅನುಮತಿ ಪಡೆದೇ ಸತ್ಯಾಗ್ರಹ ಮಾಡಬೇಕಾಗಿತ್ತು. ಆ ರೀತಿ ಆರಿಸಿ ಬಂದವರು ಯಾವುದೋ ಒಂದು ಆಜ್ಞೆ ಮುರಿದು ಬಂಧಿತರಾಗಿ ಶಿಕ್ಷೆಗೆ ಗುರಿಯಾಗುತ್ತಿದ್ದರು. ಮೊದಲು ಕಾರ್ಯಸಮಿತಿಯ ಸದಸ್ಯರು, ಪ್ರಾಂತ ಸರಕಾರಗಳ ಮಂತ್ರಿಮಂಡಲದ ಸದಸ್ಯರು, ಶಾಸನ ಸಭೆಗಳ ಸದಸ್ಯರು, ಅಖಿಲ ಭಾರತ ಮತ್ತು ಪ್ರಾಂತ ಕಾಂಗ್ರೆಸ್ ಸಮಿತಿ ಸದಸ್ಯರು, ಈ ರೀತಿ ಆಯ್ಕೆ ಆಯಿತು. ಈ ರೀತಿ ವೃತ್ತವು ವಿಶಾಲಗೊಳ್ಳುತ್ತ ೨೫-೩೦ ಸಾವಿರ ಸ್ತ್ರೀ ಪುರುಷರು ಸೆರೆಮನೆ ಸೇರಿದರು. ಇವರಲ್ಲಿ ಶಾಸನ ಸಭೆಗಳ ಅಧ್ಯಕ್ಷರುಗಳೂ, ಪ್ರಾಂತ ಶಾಸನ ಸಭೆಗಳ ಸದಸ್ಯರೂ ಇದ್ದರು. ಶಾಸನ ಸಭೆಗಳ ಕರ್ತವ್ಯ ನಿರ್ವಹಣೆಗೆ ಸರಕಾರವು ಅವಕಾಶ ಕೊಡದಿದ್ದರೆ ನಿರಂಕುಶಾಧಿಕಾರಕ್ಕೆ ತಲೆಬಾಗುವುದಕ್ಕಿಂತ ಸೆರೆಮನೆ ಸೇರುವುದೇ ಮೇಲೆಂದು ಈ ರೀತಿ ಪ್ರತಿಭಟನೆ ತೋರಿಸಿದೆವು.

ಸತ್ಯಾಗ್ರಹದಲ್ಲಿ ಭಾಗವಹಿಸಿದವರಲ್ಲದೆ ಅನೇಕ ಸಹಸ್ರಾರು ಜನರನ್ನು ಯಾವುದೋ ಭಾಷಣ ಅಥವ ಇತರ ಕಾರಣಗಳಿಗಾಗಿ ಬಂಧಿಸಿ ಶಿಕ್ಷಿಸಿದ್ದರು; ಅಥವ ವಿಚಾರಣೆ ಇಲ್ಲದೆ ಸೆರೆಮನೆಗೆ ಸೇರಿಸಿದ್ದರು. ಮೊದಲೇ ನನ್ನ ಒಂದು ಭಾಷಣದಿಂದ ಬಂಧನವಾಗಿ ನನಗೆ ನಾಲ್ಕು ವರ್ಷ ಶಿಕ್ಷೆಯಾಗಿತ್ತು.

೧೯೪೦ನೆ ಅಕ್ಟೋಬರ್ ನಿಂದ ಒಂದು ವರ್ಷ ಮೇಲ್ಪಟ್ಟು ನಾವೆಲ್ಲ ಸೆರೆಮನೆಯಲ್ಲಿದ್ದೆವು. ಸಾಧ್ಯವಾದ ಮಟ್ಟಿಗೆ ಯುದ್ಧದ, ಮತ್ತು ಪ್ರಪಂಚದ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಪ್ರಯತ್ನಪಟ್ಟೆವು. ಅಧ್ಯಕ್ಷ ರೂಸ್‌ವೆಲ್ಟ್ನ ಚತುರ್ ಸ್ವಾತಂತ್ರ್ಯಗಳ ವಿಷಯ ಓದಿದೆವು; ಅಟ್ಲಾಂಟಿಕ್ ಪ್ರಣಾಳಿಕೆಯ ವಿಷಯ ಕೇಳಿದೆವು; ಸ್ವಲ್ಪ ದಿನಗಳಲ್ಲಿಯೇ ಭಾರತಕ್ಕೆ ಅದು ಅನ್ವಯಿಸುವುದಿಲ್ಲವೆಂದೂ ಕೇಳಿದೆವು.
——————
* ಯುದ್ಧಕ್ಕೆ ಮುಂಚಿನಿಂದಲೂ ಅನೇಕರು ಬಿಡುವಿಲ್ಲದೆ ಸೆರೆಮನೆಯಲ್ಲಿ ಕೊಳೆಯುತ್ತಿದ್ದಾರೆ. ಕೆಲವು ನನ್ನ ಯುವಕ ಸ್ನೇಹಿತರು ಹದಿನೈದು ವರ್ಷಗಳಿಂದ ಇನ್ನೂ ಅಲ್ಲೇ ಇದ್ದಾರೆ. ಶಿಕ್ಷೆಯಾದಾಗ ಹುಡುಗರಾಗಿದ್ದು ಈಗ ಮುದುಕರೂ ಮಧ್ಯವಯಸ್ಕರೋ ಆಗಿದ್ದಾರೆ ಸಂಯುಕ್ತ ಪ್ರಾಂತದ ಸೆರೆಮನೆಗಳಲ್ಲಿ ಅನೇಕರನ್ನು ನೋಡಿದ್ದೇನೆ. ನಾನು ಹೋಗಿ ಕೆಲವು ದಿನಗಳಿದ್ದು ಹೊರಗೆ ಬಂದಿದ್ದೇನೆ. ಅವರು ಮಾತ್ರ ಅಲ್ಲಿಯೇ ಉಳಿದಿದ್ದಾರೆ. ಸಂಯುಕ್ತ ಪ್ರಾಂತದವಾದರೂ ಪಂಜಾಬಿನಲ್ಲಿ ಶಿಕಪಡದವರು. ಆದ್ದರಿ೦ದ ಪಂಜಾಬ್ ಸರಕಾರ ಅವನ್ನು ಬಿಡುಗಡೆ ಮೂಡಬೇಕು. ಸಂಯುಕ್ತ ಪ್ರಾಂತದ ಕಾಂಗ್ರೆಸ್ ಸರಕಾರ ಅವರ ಬಿಡುಗಡೆಗೆ ಸಲಹೆ ಮಾಡಿಧರೂ ಪಂಜಾಬ್ ಸರಕಾರ ಒಪ್ಪಲಿಲ್ಲ.