ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೩

೪೦೫

ಏನೇ ಇರಲಿ, ಇದುವರೆಗಿನ ಶ್ರೀಮಂತ ಸಮಾಜ ರಚನೆ, ಅದರಲ್ಲಿ ಅವರ ವಿಶೇಷ ಸ್ಥಾನ ಮತ್ತು ಹಕ್ಕು ಬಾಧ್ಯತೆಗಳು ಎಲ್ಲ ತಲೆಕೆಳಗೆ ಆಗುತ್ತವೆ ಎಂಬುದು ನಿಶ್ಚಯವಾಯಿತು. ರೈತ ಮತ್ತು ಕೂಲಿಗಾರರಿಗೆ ಆ ಭಯ ಯಾವುದೂ ಇರಲಿಲ್ಲ; ಏಕೆಂದರೆ ಕಳೆದುಕೊಳ್ಳಬೇಕಾದ್ದು ಅವನಲ್ಲಿ ಏನೂ ಇರಲಿಲ್ಲ. ಇಂದಿನ ಗೋಳಿನ ಬಾಳು ತಪ್ಪಿದರೆ ಯಾವ ಬಾಳಾದರೇನು ಎನ್ನುವಂತಿದ್ದ.

ಭಾರತದಲ್ಲಿ ಚೀನದ ಮೇಲೆ ಯಾವಾಗಲೂ ತುಂಬ ಸಹಾನುಭೂತಿ ಇತ್ತು; ಜಪಾನಿನ ಮೇಲೆ ಸ್ವಲ್ಪ ವಿರೋಧವೂ ಇತ್ತು. ಫೆಸಿಫಿಕ್ ಯುದ್ಧದಿಂದ ಚೀನಾಕ್ಕೆ ಸ್ವಲ್ಪ ಸಹಾಯವಾಗಬಹುದೆಂದು ಮೊದಲು ಯೋಚಿಸಿದೆವು. ನಾಲ್ಕೂವರೆ ವರ್ಷಗಳ ಕಾಲ ಚೀನ ಏಕಾಂಗಿಯಾಗಿ ಜಪಾನಿನ ಮೇಲೆ ಯುದ್ಧ ಮಾಡಿತ್ತು. ಈಗ ಅದಕ್ಕೆ ಪ್ರಬಲ ರಾಷ್ಟ್ರಗಳ ಸ್ನೇಹ ದೊರೆತು ಅದರ ಹೊರೆಯೂ, ಅದಕ್ಕಿಂತ ಹೆಚ್ಚು ಅದರ ಅಪಾಯವೂ ಕಡಮೆಯಾಗಬೇಕು. ಆದರೆ ಮುನ್ನುಗ್ಗುತ್ತಿದ್ದ ಜಪಾನ್ ಸೇನೆಗಳ ಎದುರಿನಲ್ಲಿ ಬ್ರಿಟಿಷ್ ಚಕ್ರಾಧಿಪತ್ಯವು ಕಣ್ಣು ಮಿಟುಕಿಸುವುದರಲ್ಲಿ ಪುಡಿಪುಡಿಯಾಯಿತು, ಮತ್ತು ಮಿತ್ರ ರಾಷ್ಟ್ರಗಳಿಗೆ ಮೇಲಿಂದ ಮೇಲೆ ಪೆಟ್ಟು ಬಿತ್ತು. ಹಾಗಾದರೆ ಈ ಆಡಂಬರದ ವ್ಯೂಹವೆಲ್ಲ ಬುಡವಿಲ್ಲದ, ಸತ್ವ ಶೂನ್ಯ ಇಸ್ಪೀಟಿನ ಮನೆಯೇನು? ಯಾವ ಆಧುನಿಕ ಯುದ್ಧ ಸಲಕರಣೆಗಳಿಲ್ಲದೆ ಅನೇಕ ವರ್ಷ ಜಪಾನಿನ ಆಕ್ರಮಣ ಎದುರಿಸಿ ಹೋರಾಡುತ್ತಿದ್ದ ಚೀನಾದೊಂದಿಗೆ ಹೋಲಿಸಿದೆವು. ಚೀನದ ಮೇಲೆ ಜನರ ಅಭಿಮಾನ ಹೆಚ್ಚಿತು. ಜಪಾನಿನ ಮೇಲೆ ವಿಶ್ವಾಸವಿಲ್ಲದಿದ್ದರೂ ಏಷ್ಯದ ಒಂದು ರಾಷ್ಟ್ರದ ಶಕ್ತಿಯ ಎದುರಿನಲ್ಲಿ ಬಹು ಕಾಲದಿಂದ ಬೇರು ಬಿಟ್ಟಿದ್ದ ಯುರೋಪ್ ರಾಷ್ಟ್ರಗಳ ಸಾಮ್ರಾಜ್ಯ ದೇಶಗಳು ನಿರ್ನಾಮವಾದುದನ್ನು ಕಂಡು ಸ್ವಲ್ಪ ತೃಪ್ತಿಯೂ ದೊರೆಯಿತು. ಪೌರ್ವಾತ್ಯ ಏಷ್ಯದವನು ಎಂಬ ಜನಾಂಗ ಭೇದ ಭಾವನೆಯು ಬ್ರಿಟಿಷರಲ್ಲೂ ಇತ್ತು. ಸೋಲು ಮತ್ತು ಸಂಕಟ ಪರಂಪರೆಯ ಅನುಭವ ಬಹು ಕಹಿಯಾಗಿತ್ತು. ಆದರೆ ಏಷ್ಯದ ಒಂದು ಪೌರ್ವಾತ್ಯ ರಾಷ್ಟ್ರದಿಂದ ಒದಗಿದ ಆ ಕಹಿಯು ಇನ್ನೂ ಕಟುವಾಯಿತು. ಅತ್ಯುನ್ನತ ಆಂಗ್ಲ ಪದಪೀಧರನೊಬ್ಬನು “ಪ್ರಿನ್ಸ್ ಆಫ್ ವೇಲ್ಸ್ ಮತ್ತು ರಿಪಲ್ಸ್ ಯುದ್ಧ ಹಡಗುಗಳು ಸೀತವರ್ಣದ ಜಪಾನರಿಂದ ಮುಳುಗುವ ಬದಲು ಜರ್ಮನರಿಂದ ಮುಳುಗಿದ್ದರೆ ಅಷ್ಟು ದುಃಖವಾಗುತ್ತಿರಲಿಲ್ಲ' ಎಂದು ಹೇಳಿದನು.

ಚೀನದ ಮಹಾ ಸೇನಾನಿ ಚಾಂಗ್ ಕೈಷೇಕ್ ಮತ್ತು ಸತಿ ಚಾಂಗ್ ಕೈಷೇಕ್ ಭಾರತಕ್ಕೆ ಬಂದಾಗ ಭಾರತದಲ್ಲಿ ಒಂದು ದೊಡ್ಡ ಸಮಾರಂಭವೇ ಆಯಿತು. ಭಾರತ ಸರಕಾರದ ಅತಿಥಿಗಳಾಗಿದ್ದ ಕಾರಣ ಅವರ ಇಷ್ಟ ಮತ್ತು ಮರ್ಯಾದೆ ಅರಿತು ಅವರು ಜನರೊಂದಿಗೆ ಹೆಚ್ಚು ಬೆರೆಯಲು ಸಾಧ್ಯವಾಗಲಿಲ್ಲ; ಆದರೂ ಆ ಸಂದಿಗ್ಧ ಸಮಯದಲ್ಲಿ ಅವರು ಭಾರತಕ್ಕೆ ಬಂದುದೂ, ಭಾರತದ ಸ್ವಾತಂತ್ರ್ಯಕ್ಕಾಗಿ ಅವರು ಸಹಾನುಭೂತಿ ತೋರಿಸಿದುದೂ, ಭಾರತವು ತನ್ನ ರಾಷ್ಟ್ರೀಯತೆಯ ಚೌಕಟ್ಟಿನ ಸಂಕುಚಿತ ಆವರಣದಿಂದ ಹೊರ ಬಿದ್ದು ಜಟಿಲ ಅಂತರ ರಾಷ್ಟ್ರೀಯ ಸಮಸ್ಯೆಗಳ ಸ್ವರೂಪ ಅರಿತುಕೊಳಲ್ಕು ಹೆಚ್ಚು ಸಹಾಯಕವಾಯಿತು. ಭಾರತ ಮತ್ತು ಚೀಣಗಳ ಮಧ್ಯೆ ಇದ್ದ ಬಾಂಧವ್ಯ ಹೆಚ್ಚು ಮಧುರವಾಯಿತು; ಸಾಮಾನ್ಯ ಶತ್ರುವಿನೆದುರು ಚೀಣದ ಮತ್ತು ಇತರ ರಾಷ್ಟ್ರಗಳೊಡನೆ ಭುಜಕ್ಕೆ ಭುಜ ಕೊಟ್ಟು ನಿಲ್ಲಬೇಕೆಂಬ ಬಯಕೆ ಬಲವತ್ತರ ವಾಯಿತು. ಭಾರತದ ಎದುರಿನ ಅಂದಿನ ವಿಪತ್ತಿನಿಂದ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಭಾವನೆಗಳಿಗಿದ್ದ ಅಂತರ ಕಡಮೆಯಾಯಿತು; ಮಧ್ಯೆ ಇದ್ದ ಒಂದೇ ಒಂದು ಅಡ್ಡ ಗೋಡೆ ಎಂದರೆ ಬ್ರಿಟಿಷ್ ಸರ್ಕಾರದ ನೀತಿ.

ಇಂಡಿಯ ಸರಕಾರಕ್ಕೆ ಸನ್ನಿಹಿತ ಸಂಕಟಗಳ ಸ್ಪಷ್ಟ ಅರಿವು ಆಗಿತ್ತು. ವಿಷಮಕಾಲದ ಕಳವಳ ಕಾತರತೆಗಳಿಂದ ಅವರ ಮನಸ್ಸು ತಳಮಳಿಸಿರಬೇಕು. ಆದರೂ ಭಾರತದಲ್ಲಿ ಬ್ರಿಟಿಷರು, ತಮ್ಮ ಮೊದಲಿನ ರಾಜಠೀವಿಯ ಜೀವನ, ಕುರುಡು ಹಟಮಾರಿತನದ ನಿರಾತಂಕ ಅಧಿಕಾರದರ್ಪ, ಇವುಗಳ ಮಧ್ಯೆ ತಮ್ಮ ದೃಷ್ಟಿಯಲ್ಲಾಗಲಿ, ಕಾರ್ಯಾಚರಣೆಯಲ್ಲಾಗಲಿ ಯಾವ ವ್ಯತ್ಯಾಸವನ್ನೂ ತೋರಲಿಲ್ಲ. ಆತುರ ಅಥವ ವೇಗ ಭಾವನೆಯಾಗಲಿ, ವಿಷಮ ಪರಿಸ್ಥಿತಿ ಅಥವ ಕಾರ್ಯತುರದ ಅರಿವಾಗಲಿ ಯಾವುದೂ ಅವರಿಗೆ ಇರಲಿಲ್ಲ; ಅವರು ಕಟ್ಟಿದ ವ್ಯೂಹರಚನೆ ಎಲ್ಲ ಪುರಾತನ ಕಾಲದ್ದು ; ಅದರ ಧ್ಯೇಯವೂ ಬೇರೆ. ಅವರ