ಕಳೆದ ಎರಡು ವರ್ಷಗಳಲ್ಲಿ ಸಾರ್ವಜನಿಕ ಶಾಂತಿ ರಕ್ಷಣೆಗೆಂದು ಸರ್ಕಾರವು ಈ ಎಲ್ಲ ಮತ್ತು ಇನ್ನೂ ಅನೇಕ ಉಪಾಯಗಳನ್ನು ಅನುಸರಿಸಿದೆ. ಸೈನ್ಯದ ಅಧೀನ ಮತ್ತು ಆಡಳಿತಕ್ಕೆ ಒಳಪಟ್ಟ ದೇಶದಲ್ಲಿ ಎಲ್ಲ ರಾಜಕೀಯ ಮತ್ತು ಸಾರ್ವಜನಿಕ ಜೀವನವೂ ಉಡುಗಿ ಹೋಗುತ್ತದೆ; ಆದರೆ ಈ ಬಲಾತ್ಕಾರದ ದಬ್ಬಾಳಿಕೆಯಿಂದ ಹೋಗದ ಚಿಹ್ನೆ ನಾಶವಾಗುವ ಬದಲು ಪ್ರಬಲಿಸುತ್ತದೆ; ಅಲ್ಲದೆ ಭಾರತವೂ ಬಹಳ ರೋಗಗ್ರಸ್ತವಾಗಿದೆ. ಸರಕಾರದೊಂದಿಗೆ ಸದಾ ಸಹಕಾರನೀಡಿದ ಪ್ರಮುಖ ಭಾರತೀಯ ಸಂಪ್ರದಾಯ ಶರಣರು ಸಹ ತಾತ್ಕಾಲಿಕ ಬಾಯಿಕಟ್ಟಿದ ಅಗ್ನಿ ಪರ್ವತವು ಪುನಃ ಯಾವಾಗ ಸಿಡಿಯುವುದೋ ಎಂದು ಭಯಗೊಂಡಿದ್ದಾರೆ. ಬ್ರಿಟಿಷ್ ಸರಕಾರದ ಮೇಲೆ ಇಷ್ಟು ಕಹಿ ಮನಸ್ಸು ಬೇರೆ ಯಾವಾಗಲೂ ಇರಲಿಲ್ಲವೆಂದು ತಿಳಿಸಿದ್ದಾರೆ.
ಈ ಎರಡು ವರ್ಷಗಳಲ್ಲಿ ನಮ್ಮ ಜನರು ಹೇಗೆ ಬದಲಾಯಿಸಿದ್ದಾರೆ, ಅವರ ಭಾವನೆಗಳೇನು ಎಂಬುದು ಅವರ ಸಂಪರ್ಕ ದೊರೆಯುವವರೆಗೆ ನನಗೆ ತಿಳಿಯುವಂತೆ ಇಲ್ಲ; ನಾನು ಹೇಳಲಾರೆ. ಆದರೆ ಈಚಿನ ಅನುಭವಗಳು ಅವರ ಮೇಲೂ ಅನೇಕ ರೀತಿ ಮಹತ್ಪರಿಣಾಮ ಮಾಡಿರಬೇಕು. ನಾನು ನನ್ನ ಮನಸ್ಸಿನಲ್ಲೇ ಚರ್ವಿತಚರ್ವಣ ಮಾಡಿಕೊಂಡಿದ್ದೇನೆ. ಈ ಎಲ್ಲ ಘಟನೆಗಳಿಗೆ ನನ್ನ ಸ್ವಾಭಾವಿಕ ಪ್ರತಿಕ್ರಿಯೆ ಏನೆಂದು ಯೋಚಿಸಿದ್ದೇನೆ. ಇಂಗ್ಲೆಂಡಿನಲ್ಲಿ ಅನೇಕ ಸ್ನೇಹಿತರಿದ್ದು ಅನೇಕ ಹಳೆಯ ನೆನಪುಗಳು ನನ್ನ ಮನಸ್ಸನ್ನು ಸೆಳೆಯುತ್ತಿರುವುದರಿಂದ ಇಂಗ್ಲೆಂಡಿಗೆ ಭೇಟಿ ಕೊಡಲು ಯೋಚಿಸಿದ್ದೆ. ಆದರೆ ಈಗ ಆ ಆಸೆಯೇ ಇಲ್ಲ, ಯೋಚಿಸಲು ಸಹ ಮನಸ್ಸು ಬರುವುದಿಲ್ಲ. ಇಂಗ್ಲೆಂಡಿನಿಂದ ಎಷ್ಟು ದೂರ ಇದ್ದರೆ ಅಷ್ಟು ಒಳ್ಳೆಯದೆಂದು ತೋರುತ್ತದೆ. ಇಂಗ್ಲೀಷ್ ಜನರೊಂದಿಗೆ ಭಾರತದ ಸಮಸ್ಯೆ ಚರ್ಚಿಸಲೂ ಇಷ್ಟವಿಲ್ಲ. ಆಮೇಲೆ ಕೆಲವು ಸ್ನೇಹಿತರನ್ನು ನೆನಸಿಕೊಂಡಾಗ ಮನಸ್ಸು ಸ್ವಲ್ಪ ಮೃದುವಾಯಿತು. ಇಡೀ ಜನಾಂಗವನ್ನೇ ಈ ರೀತಿ ನಿಂದಿಸುವುದು ಎಂತಹ ಮಹಾಪರಾಧ ಎಂದುಕೊಂಡೆ. ಈ ಯುದ್ಧದಲ್ಲಿ ಇಂಗ್ಲೀಷ್ ಜನರು ಅನುಭವಿಸಿದ ಭಯಂಕರ ಸಂಕಟ, ನಿತ್ಯದ ಗೋಳಿನಬಾಳು, ಅನೇಕ ಪ್ರಿಯ ಬಂಧುಗಳ ಸಾವುನೋವು, ಇವುಗಳನ್ನೆಲ್ಲ ಜ್ಞಾಪಿಸಿಕೊಂಡೆ, ಇದರಿಂದ ನನ್ನ ಮನಸ್ಸಿನ ಕಹಿ ಸ್ವಲ್ಪ ಕಡಮೆಯಾಯಿತು. ಆದರೂ ಮೂಲ ಪ್ರತಿಕ್ರಿಯೆ ಮಾಯಲಿಲ್ಲ. ಪ್ರಾಯಶಃ ಕಾಲಗತಿಯಿಂದ ಭವಿಷ್ಯವು ಸರಿಯಾದಂತೆ ಅದು ಮಾಯವಾಗಿ ಬೇರೊಂದು ದೃಷ್ಟಿ ಬರಬಹುದು. ಆದರೆ ಇಂಗ್ಲೆಂಡಿನಲ್ಲಿ ಇಂಗ್ಲಿಷ್ ಜನರಲ್ಲಿ ಇಷ್ಟು ಸಮಾಪ ಬಾಂಧವ್ಯವಿದ್ದ ನನ್ನ ಭಾವನೆಯೇ ಈ ರೀತಿಯಾದಮೇಲೆ ಅದಾವುದೂ ಇಲ್ಲದ ಇತರ ಭಾರತೀಯರ ಮನಸ್ಸು ಹೇಗಿರಬೇಕು?
೬. ಭಾರತದ ರೋಗ: ಕ್ಷಾಮ
ಭಾರತದ ಮನಸ್ಸು ಮತ್ತು ದೇಹ ಎರಡೂ ರೋಗಗ್ರಸ್ತವಾದವು. ಯುದ್ಧ ಸಮಯದಲ್ಲಿ ಕೆಲವರು ಅಪಾರ ಧನ ಸಂಪಾದಿಸಿದ್ದರೂ ಉಳಿದವರ ಮೇಲೆ ಅಸಹನೀಯ ಹೊರೆ ಬಿದ್ದು ಅವರ ಬೆನ್ನು ಮೂಳೆ ಮುರಿದಿತ್ತು. ಅದರ ನೆನಪಿಗೋ ಎಂಬಂತೆ ಬಂಗಾಲಿ, ಪೂರ್ವ ಮತ್ತು ದಕ್ಷಿಣ ಭಾರತಗಳಲ್ಲಿ ಭಯಂಕರ ಕಾಮ ಹರಡಿತು. ಬ್ರಿಟಿಷರ ೧೭೦ ವರ್ಷಗಳ ಆಡಳಿತದಲ್ಲಿ ಇಷ್ಟು ಭೀಕರ ಕ್ಷಾಮ ಯಾವಾಗಲೂ ಒದಗಲಿಲ್ಲ. ಅವರ ಆಡಳಿತದ ಆರಂಭದಲ್ಲಿ ೧೭೭೬ ರಿಂದ ೧೭೮೦ ರವರೆಗೆ ಬಂಗಾಲಿ ಮತ್ತು ಬಿಹಾರದಲ್ಲಿ ಒದಗಿದ ಕ್ಷಾಮಕ್ಕೆ ಮಾತ್ರ ಹೋಲಿಸಬಹುದಿತ್ತು. ಅದರ ಹಿಂದೆಯೇ ಕಾಲರಾ ಮತ್ತು ಮಲೇರಿಯಾ ಸಾಂಕ್ರಾಮಿಕ ಜಾಡ್ಯಗಳು ಹುಟ್ಟಿ, ಇತರ ಪ್ರಾಂತಗಳಿಗೂ ಹರಡಿ ಈಗಲೂ ಸಹಸ್ರಗಟ್ಟಲೆ ಜನರು ಸಾಯುದಾರೆ, ಕ್ಷಾಮಡಾಮರಗಳಿಂದ ಕೋಟ್ಯಂತರ ಜನರು ಸತ್ತಿದ್ದರೂ ಇನ್ನೂ ಆ ಮಹಾಮಾರಿಯ ಉಪದ್ರವ ತಪ್ಪಿಲ್ಲ; ಜನರು ಸಾಯುತ್ತಲೇ ಇದ್ದಾರೆ.*
* ೧೯೪೩-೪೪ ರ ಬಂಗಾಳ ಕ್ಷಾಮದಲ್ಲಿ ಮಡಿದ ಜನರ ಅಂದಾಜುಗಳನ್ನು ವಿವಿಧ ಜನರು ವಿವಿಧ ರೀತಿ