ಈ ಪುಟವನ್ನು ಪ್ರಕಟಿಸಲಾಗಿದೆ

೩೦

ಭಾರತ ದರ್ಶನ

ಫೆಬ್ರುವರಿ ೨೮ನೆ ದಿನ ಬೆಳಗಿನ ಜಾವ ಅವಳ ಉಸಿರು ಅಡಗಿತು. ಇ೦ದಿರ ಅಲ್ಲಿಯೇ ಇದ್ದಳು * ಮತ್ತು ಈ ಕೊನೆಯ ದಿನಗಳಲ್ಲಿ ಸದಾ ನಮ್ಮ ಆಪ್ತ ಸ್ನೇಹಿತ ಡಾಕ್ಟರ್ ಅತಲ್ ಸಹ ನಮ್ಮೊಂದಿಗೆ ಇದ್ದರು.

ಸ್ವಿಜಲ್ಲೆ೦ಡಿನ ಹತ್ತಿರದ ಪಟ್ಟಣಗಳ ಸ್ನೇಹಿತರುಗಳು ಬಂದರು. ಲಾಸೆನ್ನಿನ ಸ್ಮಶಾನಕ್ಕೆ ಅವ ಳನ್ನು ಒಯ್ದ ವು. ಅಷ್ಟು ಬಾರಿ ಅಷ್ಟು ಚೆನ್ನಾಗಿ ನಗುತ್ತಿದ್ದ ಆ ಮುದ್ದು ಮುಖ, ಸುಂದರ ದೇಹ, ನಾಲ್ಕನಿಮಿಷಗಳಲ್ಲಿ ಸುಟ್ಟು ಬೂದಿಯಾಯಿತು. ಆ ಪ್ರತಿಭಾವಂತ, ಉಜ್ವಲ, ಜೀವಂತ ವ್ಯಕ್ತಿಯ ಮೃತ ಉಳಿಕೆ ಒಂದು ಸಣ್ಣ ಮಡಿಕೆಯಲ್ಲಿ.

೬ ಮುಸೋಲಿನಿ : ಪುನರಾಗಮನ

ಲಾಸನ್ ಮತ್ತು ಯೂರೋಪಿನಲ್ಲಿ ನನ್ನನ್ನು ಬಂಧಿಸಿದ್ದ ಕಟ್ಟು ಕಡಿದು ಹೋಯಿತು. ಅಲ್ಲಿ ಇರಬೇಕಾದ ಅಗತ್ಯವೂ ಇರಲಿಲ್ಲ. ನಿಜವಾಗಿ ನೋಡಿದರೆ ನನ್ನ ಜೀವನದ ಇನ್ನೂ ಏನೋ ಒಂದು ಕಟ್ಟು ಕಡಿದು ಹೋಯಿತು. ಅದರ ಅರಿವು ನನಗೆ ಈಚೀಚೆಗೆ ಕ್ರಮೇಣ ಆಗಿದೆ. ಆ ದುರ್ದಿನಗಳಲ್ಲಿ ನನ್ನ ಮನಸ್ಸೇ ಸರಿಯಿರಲಿಲ್ಲ. ಇಂದಿರ ಮತ್ತು ನಾನು ಕೆಲವು ದಿನಗಳನ್ನು ಶಾಂತಿ ಯಿಂದ ಕಳೆಯೋಣವೆಂದು ಮಾಂಟ್ರಿಗೆ ಹೋದೆವು.

ಮಾಂಟ್ರಿಯಲ್ಲಿದ್ದಾಗ ಲಾಸೆನ್ನಿನ ಇಟಲಿ ರಾಯಭಾರಿ ನನ್ನ ನ್ನು ಕಾಣಲು ಬಂದ. ನನ್ನ ನಷ್ಟಕ್ಕಾಗಿ ಮುಸೋಲಿನಿಯ ಅನುತಾಪವನ್ನು ಸೂಚಿಸಲೆಂದೇ ಅಲ್ಲಿಗೆ ಬಂದ. ನನಗೆ ಆಶ್ಚರವಾಯಿತು, ಏಕೆಂದರೆ ಮುಸೊಲಿನಿಯನ್ನು ನಾನು ನೋಡಿರಲಿಲ್ಲ ಮತ್ತು ನನಗೂ ಅವನಿಗೂ ಯಾವ ಪರಿಚ ಯವೂ ಇರಲಿಲ್ಲ ; ನನ್ನ ವಂದನೆಗಳನ್ನು ಆತನಿಗೆ ತಿಳಿಸಿ ಎಂದು ಹೇಳಿದೆ.

ಕೆಲವು ವಾರಗಳ ನಂತರ ರೋಮ್ ನಗರದಿಂದ ನನ್ನ ಸ್ನೇಹಿತ ಒಬ್ಬ ಬಂದು ಮುಸ್ಟೋಲಿನಿ ನನ್ನ ನು ನೋಡಬೇಕೆಂದಿದ್ದಾನೆ ಎಂದು ತಿಳಿಸಿದ. ಆಗ ರೋಮ್ ಗೆ ಹೋಗುವ ಯೋಚನೆಯೇ ಇರಲಿಲ್ಲ ; ಅದೇ ರೀತಿ ತಿಳಿಸಿದೆ. ಸ್ವಲ್ಪ ದಿನಗಳಾದ ಮೇಲೆ ವಿಮಾನದಲ್ಲಿ ಇಂಡಿಯಕ್ಕೆ ಹೊರಡ ಬೇಕೆಂದಿದ್ದಾಗ ಪುನಃ ಅದೇ ವಿಷಯ ; ಮತ್ತು ಸ್ವಲ್ಪ ಹೆಚ್ಚು ಆಸಕ್ತಿಯೂ ಮತ್ತು ಒತ್ತಾಯವೂ ಅದರಲ್ಲಿ ಇತ್ತು. ಈ ಭೇಟಿಯಿಂದ ತಪ್ಪಿಸಿಕೊಳ್ಳ ಬೇಕೆಂದಿದ್ದೆ ; ಆದರೂ ಅಗೌರವ ಮಾಡಲು ಇಷ್ಟ ವಿರಲಿಲ್ಲ ; ಆದರೆ ಮುಸೋಲಿನಿಯ ಮೇಲಿದ್ದ ತಾತ್ಸಾರವನ್ನು ಬದಿಗಿಡಲೂಬಹುದಾಗಿತ್ತು. ಏಕೆಂದರೆ ಈ - ಹೂಚೆ ' ಎಂಥ ಮನುಷ್ಯ ಎಂದು ತಿಳಿದುಕೊಳ್ಳಬೇಕೆಂಬ ಕುತೂಹಲವೇನೊ ಇತ್ತು. ಆದರೆ ಆಗ ಅಬಿಸೀನಿಯ ಆಕ್ರಮಣ ನಡೆಯುತ್ತಿತ್ತು. ನಾನು ಆತನನ್ನು ಭೇಟಿಮಾಡುವುದೆಂದರೆ ಅನೇಕ ಊಹಾಪೋಹಗಳಿಗೆ ಆಸ್ಪದ ಕೊಟ್ಟಂತೆ. ಫ್ಯಾಸಿಸ್ಟ್ ಪ್ರಚಾರಕ್ಕೆ ಅಷ್ಟೇ ಸಾಕು. ನಾನು ಏನು ನಿರಾಕರಿಸಿದರೂ ಅದಕ್ಕೆ ಬೆಲೆ ಏನು ? ಇಟಲಿಗೆ ಹೋದ ಭಾರತೀಯ ವಿದ್ಯಾರ್ಥಿಗಳು ಮತ್ತು ಇತರರನ್ನು, ಅವನ ಇಷ್ಟಕ್ಕೆ ವಿರೋಧವಾಗಿ ಕೆಲವು ವೇಳೆ ಅವರಿಗೆ ಏನೂ ತಿಳಿಯದಂತೆ ಈ ರೀತಿ ದುರುಪಯೋಗಪಡಿಸಿದ್ದು ನನಗೆ ತಿಳಿದಿತ್ತು. ೧೯೩೧ ರಲ್ಲಿ - ಜಮ್ಮೇಲ್ -ಡಿ-ಇಟಲಿ' ಎಂಬ ಪತ್ರಿಕೆ ಪ್ರಕಟಿಸಿದ್ದ - ಗಾಂಧಿ-ಮುಸೊಲಿನಿ ಭೇಟಿಯ ' ಸುಳ್ಳಿನ ಕಂತೆಯೂ ನನ್ನೆದುರು ಇತ್ತು. ಆದ್ದರಿಂದ ನನ್ನ ಸ್ನೇಹಿತನಿಗೆ ವ್ಯಸನ ಸೂಚಿಸಿ, ಆಮೇಲೆ ಪತ್ರ ಬರೆದು, ಯಾವ ತಪ್ಪನ್ನೂ ತಿಳಿದುಕೊಳ್ಳಬಾರದೆಂದು ಟೆಲಿಫೋನ್ ಮೂಲಕ ತಿಳಿಸಿದೆ. ಇದೆಲ್ಲ ಕಮಲ ಸಾಯುವ ಮುಂಚೆ, ಆಕೆ ಸತ್ತ ನಂತರ ಯಾವುದು ಹೇಗೆ ಇದ್ದರೂ ನನ್ನ ಮನಸ್ಸು ಭೇಟಿಮಾಡುವ ಸ್ಥಿತಿಯಲ್ಲಿಲ್ಲವೆಂದು ಪುನಃ ತಿಳಿಸಿದೆ.

ನಾನು ಹೊರಡುವ ಕೆ.ಎಲ್.ಎಂ. ವಿಮಾನ ರೋಮ್ ಮುಖಾಂತರ ಹೋಗುತ್ತಿದ್ದುದರಿಂದಲೂ, ನಾನು ಅಲ್ಲಿ ಒಂದು ಸಂಜೆ ಮತ್ತು ರಾತ್ರಿ ಕಳೆಯುವದು ಅನಿವಾರ್ಯವಾದದ್ದರಿಂದಲೂ ಇಷ್ಟೆಲ್ಲ ಅವಶ್ಯವಾಯಿತು. ಈ ಭೇಟಿಯನ್ನೂ ಮತ್ತು ಅಲ್ಲಿ ತಂಗುವುದನ್ನೂ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ.