ಬುದ್ಧಿ ಬರಬಾರದೆ? ಇನ್ನೂ ರಾಜಕೀಯ ಶತಾದೇಯಗಳು, ವಿಶೇಷ ಪ್ರಾತಿನಿಧ್ಯಗಳು, ರಾಜಕೀಯ ಸಮತೋಲನೆ, ಪ್ರತಿಬಂಧಕಗಳು, ವಿಶಿಷ್ಟ ಪಂಗಡಗಳ ಹಕ್ಕುದಾರಿ, ಹೊಸ ಹಕ್ಕುದಾರಿಗಳ ಸ್ಥಾಪನೆ, ತಾವು ಮುಂದುವರಿಯಲು ಇಷ್ಟ ಅಥವ ಸಾಧ್ಯವಿಲ್ಲದೆ ಇದ್ದರೂ ಇತರರ ಪ್ರಗತಿಗೆ ಅಡ್ಡ ಬರುವುದು, ಬಂಡವಾಳಗಾರಿಕೆ, ವಿಶೇಷ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ವಿರೋಧ ಮೇಲೆ ಮೇಲೆ ತೋರು ಗಾಣಿಕೆಯ ಕೆಲವು ಬದಲಾವಣೆಗಳಿಂದ ಭಾರತದ ಇಂದಿನಂತೆ ಮುಂದುವರಿದರೆ ಸಾಕೆಂಬ ಭಾವನೆ ಈ ರೀತಿ ಯೋಚಿಸುವವರೇ ಭಾರತದಲ್ಲಿ ಇನ್ನೂ ಅನೇಕರಿದ್ದಾರೆ. ಇದು ಮೂರ್ಖತನದ ಮಾರ್ಗ.
ಇಂದಿನ ಸಮಸ್ಯೆಗಳೇ ಬೃಹದಾಕಾರ ತಾಳಿ ನಮ್ಮ ಮನಸ್ಸು ಕದಡಿವೆ. ಆದರೂ ದೂರದೃಷ್ಟಿಯಿಂದ ಅವುಗಳಿಗೆ ವಿಶೇಷ ಮಹತ್ವ ಕೊಡಬಾರದು. ಬುರುಗಿನ ಬೆಟ್ಟದಂತೆ ಮೇಲೆ ತೇಲುವ ಕುಲ್ಲಕ ವಿಷಯಗಳ ಕೆಳಗೆ ಪ್ರಬಲ ಪ್ರಳಯಾಂತಕ ಶಕ್ತಿಗಳು ಪ್ರವಹಿಸುತ್ತಿರಬಹುದು. ಆದ್ದರಿಂದ ಇಂದಿನ ಸಮಸ್ಯೆ ಸ್ವಲ್ಪ ಬದಿಗಿಟ್ಟು ದೂರ ದೃಷ್ಟಿಯಿಂದ ಭವಿಷ್ಯದ ಭವ್ಯತೆ ನೋಡಿದರೆ ಭಾರತವು ಸ್ವತಂತ್ರ ಅಂಗಾಂಗ ರಾಜ್ಯಗಳ ಶಕ್ತಿಯುತ ಸಂಯುಕ್ತ ರಾಜ್ಯವಾಗಿ, ನೆರೆಯವರೊಂದಿಗೆ ಸ್ನೇಹದಿಂದ ಬಾಳಿ, ಪ್ರಪಂಚ ಸಮಸ್ಯೆಗಳಲ್ಲಿ ಪ್ರಮುಖ ಪಾತ್ರವಹಿಸಿ, ಮುಂದುವರಿಯುವ ದಿವ್ಯ ನೋಟ ಕಾಣಬಹುದು. ಪ್ರಪಂಚದಲ್ಲಿ ತಮ್ಮ ಕಾಲಮೇಲೆ ತಾವು ನಿಲ್ಲಬಹುದಾದಷ್ಟು ಸಂಪತ್ಸಮೃದ್ಧಿ ಮತ್ತು ಶಕ್ತಿಯುಳ್ಳ ಅತ್ಯಲ್ಪ ಸಂಖ್ಯೆಯ ರಾಷ್ಟ್ರಗಳಲ್ಲಿ ಭಾರತವೂ ಒಂದು. ಇಂದು ಅಂಥ ರಾಷ್ಟ್ರಗಳೆಂದರೆ ಅಮೆರಿಕೆಯ ಸಂಯುಕ್ತ ಸಂಸ್ಥಾನಗಳು ಮತ್ತು ಸೋವಿಯಟ್ ರಷ್ಯ, ತನ್ನ ಸಾಮ್ರಾಜ್ಯ ಸಂಪತ್ತು ಸೇರಿದರೆ ಮಾತ್ರ ಬ್ರಿಟನ್ ಆ ಶ್ರೇಣಿಯಲ್ಲಿ ಸೇರಿಸಬಹುದು. ಆಗಲೂ ಪ್ರಪಂಚದ ಮೂಲೆ ಮೂಲೆಗಳಲ್ಲಿ ಹರಡಿ ಅಸಮಾಧಾನದಿಂದ ತುಂಬಿದ ಸಾಮ್ರಾಜ್ಯ ಒಂದು ದೌರ್ಬಲ್ಯ, ಆ ಶ್ರೇಣಿಯಲ್ಲಿ ಸೇರಲು ಚೀಣಾ ಮತ್ತು ಭಾರತ ಎರಡು ದೇಶಗಳಿಗೂ ಶಕ್ತಿ ಇದೆ. ಎರಡರಲ್ಲೂ ಒಂದು ಬಗೆಯ ಐಕಮತ್ಯ; ಒಂದೇ ಬುಡಕಟ್ಟು, ಅಪಾರ ಪ್ರಕೃತಿ ಸಂಪತ್ತು, ಜನಸಂಪತ್ತು, ಕಾರ್ಯ ಕೌಶಲ್ಯ ಮತ್ತು ಶಕ್ತಿಗಳು ಇವೆ. ಕೈಗಾರಿಕೋದ್ಯಮದ ಪ್ರಗತಿಗೆ ಪ್ರಾಯಶಃ ಭಾರತದ ಪ್ರಕೃತಿ ಸಂಪತ್ತು ನಾನಾರೀತಿಯಿಂದ ಹೆಚ್ಚು ಸಮೃದ್ಧವಿದೆ. ಪರದೇಶಗಳಿಗೆ ಬೇಕಾದ ಸಾಮಾನು ಕಳುಹಿಸಿ ತನಗೆ ಬೇಕಾದ ಸಾಮಾನು ಪರದೇಶಗಳಿಂದ ತರಿಸಿಕೊಳ್ಳಲು ಬೇಕಾದ ಸಾಧನ ಸಂಪತ್ತೂ ಇದೆ. ಈ ನಾಲ್ಕು ರಾಷ್ಟ್ರ ಬಿಟ್ಟರೆ ಬೇರೆ ಯಾವ ರಾಷ್ಟ್ರಕ್ಕೂ ಇಂದಾಗಲಿ ಮುಂದಾಗಲಿ ಆ ಸೌಲಭ್ಯವಿರುವುದಿಲ್ಲ. ಯೂರೋಪಿನಲ್ಲಿ ಅಥವ ಇತರ ಕಡೆ ಅನೇಕ ರಾಷ್ಟ್ರಗಳು ಸೇರಿ ದೊಡ್ಡ ಸಂಯುಕ್ತ ರಾಷ್ಟ್ರಗಳಾಗಬಹುದು, ಒಂದುಗೂಡಬಹುದು ಮತ್ತು ಬಹುರಾಷ್ಟ್ರ ರಾಜ್ಯ ಸ್ಥಾಪಿಸಬಹುದು.
ಹಿಂದೆ ಅಟ್ಲಾಂಟಿಕ್ ಸಾಗರವಿದ್ದಂತೆ ಮುಂದೆ ಪೆಸಿಫಿಕ್ ಸಾಗರ ಪ್ರಪಂಚದ ಜೀವನಾಡಿಯಾಗಬಹುದು. ಪೆಸಿಫಿಕ್ ಸಾಗರದ ರಾಷ್ಟವಲ್ಲದಿದ್ದರೂ ಭಾರತವು ಮುಂದೆ ಅಲ್ಲಿ ವಿಶೇಷ ಪ್ರಭಾವ ಬೀರುತ್ತದೆ. ಹಿಂದೂ ಸಾಗರ, ಆಗ್ನೆಯ ಏಷ್ಯ ಮತ್ತು ಮಧ್ಯ ಪ್ರಾಚ್ಯಗಳವರೆಗಿನ ಆರ್ಥಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ಭಾರತ ಒಂದು ದೊಡ್ಡ ಕೇಂದ್ರವಾಗುತ್ತದೆ. ಅತಿವೇಗದಿಂದ ಪ್ರಗತಿಹೊಂದುವ ಪ್ರಪಂಚದ ಒಂದು ಮುಖ್ಯ ಭಾಗದಲ್ಲಿ ಅದಕ್ಕಿರುವ ಸ್ಥಾನಬಲದಿಂದ ಮುಂದೆ ಭಾರತಕ್ಕೆ ಆರ್ಥಿಕ ಮತ್ತು ಆಯಕಟ್ಟಿನ ಪ್ರಾಮುಖ್ಯತೆ ದೊರೆಯುತ್ತದೆ. ಭಾರತದ ಅಕ್ಕ ಪಕ್ಕದ ಹಿಂದೂ ಸಾಗರದ ರಾಷ್ಟ್ರಗಳಾದ ಇರಾಣ, ಇರಾಕ್, ಆಫ್ಘಾನಿಸ್ಥಾನ, ಭಾರತ, ಸಿಂಹಳ, ಬರ್ಮ, ಮಲಯ, ಜಾವ ಮುಂತಾದ ರಾಷ್ಟ್ರಗಳು ಪ್ರಾದೇಶಿಕ ದೃಷ್ಟಿಯಿಂದ ಒಟ್ಟುಗೂಡಿದರೆ ಅಲ್ಪ ಸಂಖ್ಯಾತರ ಪ್ರಶ್ನೆಯೇ ಉಳಿಯುವುದಿಲ್ಲ; ಉಳಿದರೂ ಬೇರೊಂದು ದೃಷ್ಟಿಯಿಂದ ನೋಡಬೇಕಾಗುತ್ತದೆ.
ಕ್ರಮೇಣ ಭಾರತವು ಮಧ್ಯ ಪ್ರಾಚ್ಯವನ್ನೆಲ್ಲ ಒಳಗೊಂಡು, ಪೂರ್ವದಲ್ಲಿ ಚೀನಾ ಜಪಾನ್‌ಗಳ ಜನತಾರಾಜ್ಯ ಪಶ್ಚಿಮದಲ್ಲಿ ಈಜಿಪ್ಟ್-ಅರೇಬಿಯಾ-ತುರ್ಕಿಗಳ ಹೊಸ ಸಂಯುಕ್ತ ರಾಷ್ಟ್ರಕ್ಕೂ, ಮತ್ತು ಉತ್ತರದಲ್ಲಿ ಸೋವಿಯಟ್ ರಷ್ಯ ಈ ಮಧ್ಯೆ ರಾಷ್ಟ್ರೀಯತೆ ಮೇರೆ ಮೀರಿದ ಒಂದು ಬೃಹದ್ರಾಷ್ಟವಾಗಲು ಅವಕಾಶವಿದೆ; ಭಾರತ ಒಂದು ಏಕರಾಷ್ಟ್ರೀಯತಾತೀತ ರಾಜ್ಯ ಎಂದು ಜಿ,ಡಿ,ಎಚ್, ಕೋಲ್