ಈ ಪುಟವನ್ನು ಪ್ರಕಟಿಸಲಾಗಿದೆ

೪೮೮

ಭಾರತ ದರ್ಶನ

ಭವಿಷ್ಯ ಪ್ರಪಂಚ ಹಿಂದಿನದಕ್ಕಿಂತ ತೀರ ಹೊಸದಾಗಬೇಕೆಂದೂ, ಇಲ್ಲದಿದ್ದರೆ ಇನ್ನೂ ಭಯಂಕರ ಯುದ್ಧ ಮತ್ತು ವಿಪತ್ತುಗಳೇ ನಿಶ್ಚಯವೆಂದೂ ನಂಬಿದವರು ಇಂಗ್ಲೆಂಡ್, ಅಮೆರಿಕ ಮತ್ತು ಇತರ ದೇಶಗಳಲ್ಲಿ ಅನೇಕರು ಇದ್ದಾರೆ. ಆದರೆ ಅಧಿಕಾರ ಮತ್ತು ಶಕ್ತಿ ಕೈಲಿ ಇರುವವರಮೇಲೆ ಈ ಭಾವನೆಗಳು ಹೆಚ್ಚು ಯಾವ ಪರಿಣಾಮವನ್ನೂ ಮಾಡಿರುವಂತೆ ತೋರುವುದಿಲ್ಲ; ತಮಗೆ ಮೀರಿದ ಶಕ್ತಿಗಳಿಗೆ ತಾವೇ ಸೆರೆಯಾಗಿದ್ದಾರೆ. ಇಂಗ್ಲೆಂಡ್, ಅಮೆರಿಕ ಮತ್ತು ರಷ್ಯಗಳಲ್ಲಿ ಪುನಃ ಹಿಂದಿನ ಅಧಿಕಾರ ಲಾಲನೆಯ ಬೃಹದ್ರಾಜಕೀಯಕ್ಕೆ ಆರಂಭವಾಗುತ್ತಿದೆ. ಅಮೆರಿಕದ ಪ್ರಸಿದ್ಧ ಪ್ರಪಂಚ ರಾಜನೀತಿಜ್ಞನಾದ ಎನ್.ಜೆ. ಸ್ಪೈಕ್‌ಮನ್ ಈಚಿನ ತನ್ನ ಒಂದು ಗ್ರಂಥದಲ್ಲಿ ವಿದೇಶಾಂಗ ವ್ಯವಹಾರ ನಡೆಸುವ ರಾಜನೀತಿಜ್ಞರು ನ್ಯಾಯಪರತೆ, ನಿಷ್ಪಕ್ಷಪಾತ ದೃಷ್ಟಿ ಮತ್ತು ಸಹನ ಶಕ್ತಿ ಎಲ್ಲಿ ಎಲ್ಲವೂ ತಮ್ಮ ಅಧಿಕಾರದಾಸೆಗೆ ಎಷ್ಟರ ಮಟ್ಟಿಗೆ ಅವು ವಿರೋಧ ಬರುವುದಿಲ್ಲವೊ ಅಷ್ಟರಮಟ್ಟಿಗೆ ಮಾತ್ರ. ತಮ್ಮ ಅಧಿಕಾರ ಹೆಚ್ಚಿಸಲು ಬೇಕಾದ ನೈತಿಕ ಬೆಂಬಲ ಪಡೆಯಲು ಅವುಗಳನ್ನೇ ಸಾಧನ ಮಾಡಿಕೊಳ್ಳುತ್ತಾರೆ; ಅವುಗಳಿಂದ ಅಧಿಕಾರ ಮೊಟಕು ಆಗುವ ಸಂಭವ ಬಂದರೆ ನಿರುಪಯೋಗ ವಸ್ತುಗಳೆಂದು ಅವನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ. ಅಧಿಕಾರದ ಅನ್ವೇಷಣೆ ನೈತಿಕ ಉನ್ನತಿ ಸಾಧನೆಗೆ ನಡೆಯುತ್ತಿಲ್ಲ; ಆದರೆ ಅಧಿಕಾರ ಸಾಧನೆಗೆ ಸಹಾಯವಾಗುವಂತೆ ನೈತಿಕತತ್ವಗಳ ದುರುಪಯೋಗ ಆಗುತ್ತಿದೆ.” ಎಂದು ಬರೆದಿದ್ದಾನೆ.*

ಈ ಭಾವನೆ ಅಮೆರಿಕನ್ನರ ಭಾವನೆಯನ್ನು ಪ್ರತಿಬಿಂಬಿಸುತ್ತಿಲ್ಲ; ಅದು ಒಂದು ಪ್ರಬಲ ಪಂಗಡದ ಅಭಿಪ್ರಾಯ, ಪ್ರಪಂಚವನ್ನೆಲ್ಲ ಅಟ್ಲಾಂಟಿಕ್ ಜನತೆ, ರಷ್ಯನರು, ಚೀಣರು, ದಕ್ಷಿಣ ಏಷ್ಯದಲ್ಲಿ ಹಿಂದೂ ಮುಸ್ಲಿಮರು ಎಂದು ಮೂರು ನಾಲ್ಕು ಜನ ಸಮುದಾಯ ಪ್ರದೇಶಗಳಾಗಿ ವಿಂಗಡಿಸಬಹುದೆಂಬ ವಾಲ್ಟರ್ ಲಿಪ್‌ಮನ್ನನ ಕನಸು ಸಹ ಇನ್ನೂ ವಿಶಾಲವ್ಯಾಪ್ತಿಯ ಅಧಿಕಾರಲಾಲಸೆಯ ಪ್ರಪಂಚ ರಾಜನೀತಿ; ಅದ ರಿಂದ ಪ್ರಪಂಚಶಾಂತಿ ಅಥವ ಸಹಕಾರ ಸಾಧನೆಯಾಗುತ್ತೆಂದು ಹೇಗೆ ಭಾವಿಸುತ್ತಾನೋ ನಾನರಿಯೆ ಇದರಲ್ಲಿ ಭವಿಷ್ಯದ ಒಲವು ಯಾವ ಕಡೆಗೆ? ಇವೆರಡು ನೀತಿಗಳು ಒಂದುಗೂಡಿ ಯಾವ ಪರಿಣಾಮವಾಗುತ್ತದೆ? ಜನತೆಯ ಅಭಿಪ್ರಾಯ ಏನೇ ಇರಲಿ ವಿದೇಶಾಂಗ ನೀತಿ ವಿಶೇಷ ತಜ್ಞರ ಕೈಲಿರುವ ಅತಿಗಹನ ವಿಷಯ. ಹಳೆಯ ಸಂಪ್ರದಾಯಗಳಿಗೆ ಬಿಡದೆ ಅಂಟಿಕೊಳ್ಳುವುದೇ ಆ ತಜ್ಞರ ಇಂದಿನ ಮನೋಭಾವನೆ; ತಮ್ಮ ರಾಷ್ಟ್ರಗಳನ್ನು ಹೊಸ ಅಪಾಯಕ್ಕೆ ಗುರಿಮಾಡುವ ಯಾವ ನೂತನ ರೀತಿಯೂ ಅವರಿಗೆ ಬೇಕಿಲ್ಲ. ವಾಸ್ತವಿಕತೆ ಇರಲೇಬೇಕು. ಏಕೆಂದರೆ ಯಾವ ರಾಷ್ಟ್ರದ ಒಳಾಡಳಿತ ಅಥವ ವಿದೇಶಾಂಗ ನೀತಿಯೂ ಎಷ್ಟೇ ಉನ್ನತ ಮತ್ತು ಉದಾರವಿದ್ದರೂ ಕೇವಲ ತಾತ್ವಿಕ ಕಲ್ಪನೆಗಳ ಮೇಲೆ ನಿಲ್ಲುವಂತಿಲ್ಲ. ಆದರೆ ಗತ ಕಾಲದ ಒಳಕರಟವನ್ನ ನಂಬಿದ ಇಂದಿನ ಸಮಸ್ಯೆಗಳ ಕಠಿಣ ಪರಿಸ್ಥಿತಿ ಅರಿಯಲು ನಿರಾಕರಿಸುವ ವಾಸ್ತವಿಕತೆ ನನಗೆ ಅರ್ಥವಾಗುವುದಿಲ್ಲ. ಇಂದಿನ ನಿಜವಾದ ವಾಸ್ತವಿಕತೆ ರಾಜಕೀಯ ಮತ್ತು ಆರ್ಥಿಕ ಮಾತ್ರವಲ್ಲದೆ ಅನೇಕ ಜನರ ಭಾವನೆ ಮತ್ತು ಪ್ರೇರಣೆಗಳ ಪರಿಣಾಮವಾಗಿದೆ, ಆ ವಾಸ್ತವಿಕತೆಯು, ಅನೇಕರ ಆದರ್ಶ ತತ್ತ್ವಗಳಿಗಿಂತ ಮತ್ತು ಇಂದಿನ ಮತ್ತು ನಾಳಿನ ಸಮಸ್ಯೆಗಳಿಗಿಂತ ಭಾವಪ್ರಧಾನವೂ ದೂರವೂ ಇದೆ.

ಇಂದಿನ ವಿಶ್ವ ರಾಜಕೀಯ ವಾಸ್ತವವಾದಿಯ ಲಂಗರು. ಅದರ ಹೃದಯ ಭೂಮಿ ಅಂಥ ಕಂಠಭೂಮಿ ಎಂಬ ಶೋಷಣೆಯೇ ರಾಷ್ಟ್ರೀಯತ್ವದ ಅಭಿವೃದ್ಧಿಗೂ, ನಾಶಕ್ಕೂ ಕಾರಣವೆಂದು ಹೇಳಲಾಗಿದೆ. ಈ
——————
ಇವರಲ್ಲಿ ಯಾರಿಗೂ ಅಧೀನ ಸಾಮ್ರಜ್ಯ ಬಿಟ್ಟುಕೊಡಲು ಇಷ್ಟವಿಲ್ಲದ್ದರಿಂದ ಮತ್ತು ಜಪಾನಿನ ಪ್ರಭಾವಕ್ಕೆ ಒಳಗಾದ ಪ್ರದೇಶ ನಾಶಮಾಡಲು ಮಲಯ ಬ್ರಿಟಿಷರಿಗೂ, ಈಸ್ಟ್ ಇಂಡೀಸ್ ದ್ವೀಪಗಳು ಡಚ್ಚರಿಗೂ ಫ್ರೆಂಚ್ ಇಂಡೋ ಚೀನಾ ಫ್ರೆಂಚರಿಗೂ ಸೇರಬೇಕಾದ್ದು ಅತ್ಯವಶ್ಯಕ. ಆದ್ದರಿಂದ ಈ ವಿಷಯದಲ್ಲಿ ಅಮೆರಿಕನರ ಮನಸ್ಸಿನಲ್ಲಿ ಯಾವ ಅನುಮಾನಕ್ಕೆ ಎಡೆಕೊಟ್ಟರೂ ಈ ಮೂರು ರಾಷ್ಡ್ರಗಳೂ ದೊಡ್ಡ ತಪ್ಪು ಮಾಡಿದಂತೆ ಆಗುತ್ತದೆ ಮತ್ತು ನಂಬಿಕೆ ದ್ರೋಹ ಮಾಡಿದಂತಾಗುತ್ತದೆ" ಎಂದು ಹೇಳಿದ.
America's Strategy in World Politics.