ಈ ಪುಟವನ್ನು ಪ್ರಕಟಿಸಲಾಗಿದೆ
೩೮
ಭಾರತ ದರ್ಶನ

ಅಂತಹ ಒಂದು ಶಕ್ತಿಯ ಧ್ರುವ ಜಲಾಶಯ ಯಾವುದಾದರೂ ಇತ್ತೆ ? ಇದ್ದರೆ ಅದು ಬತ್ತಲು ಕಾರಣವೇನು ಅಥವ ಅದನ್ನು ತುಂಬಲು ಕಾಣದ ಶಕ್ತಿ ಮೂಲಗಳೇನಾದರೂ ಇದ್ದು ವೆ ? ಇಂದಿನ ಸ್ಥಿತಿಯೇನು ? ಈಗಲೂ ನಮಗೆ ನವಚೈತನ್ಯ ಕೊಟ್ಟು ಬಲವಂತರನ್ನಾಗಿ ಮಾಡುವ ಅಂತಹ ಶಕ್ತಿ ಮೂಲಗಳು ಬತ್ತದೆ ಉಳಿದಿವೆಯೆ ? ನಮ್ಮದು ಪುರಾತನ ಜನಾಂಗ ಅಥವ ಅನೇಕ ಜನಾಂಗಗಳ ಒಂದು ಬಗೆಯ ಮಿಶ್ರಣ. ನಮ್ಮ ಜನಪದದ ನೆನಪುಗಳು ಇತಿಹಾಸದ ಉಗಮದ ವರೆಗೂ ಮುಟ್ಟಿದೆ. ನಮ್ಮ ಉತ್ಕಾಂತಿ ಕಾಲವೆಲ್ಲ ಮುಗಿದು ನಮ್ಮ ಬಾಳಿನ ಕೊನೆಯ ದಿನಗಳಿಗೆ ಬಂದಿದ್ದೇವೆಯೆ ? ನಿಕ್ಷೇತನರು, ಶಕ್ತಿಹೀನರು, ಸೃಷ್ಟಿ ಶೂನ್ಯರು ಆಗಿ, ಶಾಂತಿ, ನಿದ್ರೆ ಎರಡಿದ್ದರೆ ಸಾಕೆಂದು ಕಾಲತಳ್ಳುವ ಮುದುಕರಂತೆ ನಮ್ಮ ಬಾಳಿನ ಸಂಜೆಯಲ್ಲಿದ್ದೇವೆಯೆ ?

ಪರಿವರ್ತನೆಯಿಲ್ಲದೆ ಯಾವ ಜನವೂ, ಜನಾಂಗವೂ ಮುಂದುವರಿಯುವುದಿಲ್ಲ. ಸದಾ ಇತರ ರೊಂದಿಗೆ ಸಂಪರ್ಕವಿಟ್ಟು ಕೊಂಡು ನಿದಾನವಾಗಿ ಪರಿವರ್ತನವಾಗುತ್ತಲೇ ಇರುತ್ತದೆ, ನಾಶವೂ ಹತ್ತಿರವಿದ್ದಂತೆ ಕಾಣ ಬಹುದು ; ಹೊಸ ಜನಾಂಗವಾಗಬಹುದು ಅಥವ ಹಳೆಯದೇ ಸ್ವಲ್ಪ ಪರಿವರ್ತನೆ ಹೊಂದಿ ಪುನರುಜ್ಜಿವನ ಪಡೆಯಬಹುದು. ಹಿಂದಿನ ಜನತೆಗೂ ಇಂದಿನ ಜನತೆಗೂ ಸಂಪೂರ್ಣ ಭೇದವಿರಬಹುದು ; ಅಥವ ಭಾವನೆಗಳ ಧೈಯಗಳ ಜೀವನಾಡಿಗಳು ಒಟ್ಟುಗೂಡಬಹುದು,

ಅನೇಕ ಸುಪ್ರತಿಷ್ಠಿತ ಪ್ರಾಚೀನ ನಾಗರಿಕತೆಗಳು ಮಾಯವಾದ ಅಥವ ಏಕಾಏಕಿ ನಾಶವಾದ ಅನೇಕ ನಿದರ್ಶನಗಳು ಚರಿತ್ರೆಯಲ್ಲಿವೆ ಮತ್ತು ಅವುಗಳ ಸ್ಥಾನವನ್ನೂ ಪ್ರಬಲವಾದ ಹೊಸ ಸಂಸ್ಕೃತಿ ಗಳು ಆಕ್ರಮಿಸಿಕೊಂಡಿವೆ. ಒಂದು ನಾಗರಿಕತೆ ಅಥವ ಜನತೆಗೆ ಜೀವದಾಯಕವಾದ ಅ೦ತಶಕ್ತಿ ಅಥವ ಪ್ರಾಣಶಕ್ತಿ ಯಾವುದಾದರೂ ಇದೆಯೆ ? ಮತ್ತು ಮುದುಕ ಮದವಣಿಗನಾಗಲು ಯತ್ನಿ ಸಿದಂತ ಆ ಶಕ್ತಿಯಿಲ್ಲದೆ ಇತರ ಎಲ್ಲ ಪ್ರಯತ್ನವೂ ನಿಷ್ಪ ಯೋಜಕವೆ ?

ಪ್ರಪಂಚದ ಇಂದಿನ ಜನಾಂಗಗಳಲ್ಲಿ ಈ ಒಂದು ಜೀವಶಕ್ತಿಯನ್ನು ಅಮೆರಿಕನ್ನರು, ರಷ್ಯನ್ನರು ಚೀನೀಯರಲ್ಲಿ ಮಾತ್ರ ಕಂಡಿದ್ದೇನೆ, ಎಂತಹ ವಿಚಿತ್ರ ಜೋಡಣೆ ! ಅಮೆರಿಕನ್ನರ ಮೂಲ ಪುರಾತನ ಪ್ರಪಂಚದಲ್ಲಿದ್ದರೂ ಪ್ರಾಚೀನತೆಯ ಹೊರೆ ಮತ್ತು ತೊಡರುಗಳು ವಿಧಿ ನಿಷೇಧಗಳು ಯಾವುದೂ ಇಲ್ಲದ ಹೊಸ ಜನಾಂಗ ಅವರದು. ಅವರ ಅಪಾರ ಚಟುವಟಿಕೆ ಸುಲಭವಾಗಿ ಅರ್ಥವಾಗುತ್ತದೆ. ಅವರಂತೆಯೇ ಕೆನಡ, ಆಸ್ಟ್ರೇಲಿಯ, ನ್ಯೂಜಿಲೆಂಡ್ ಜನರು ಹಳೆಯ ಪ್ರಪಂಚದಿಂದ ದೂರವಾಗಿ, ಹೊಸ ಜೀವನದ ಸವಿಯನ್ನನುಭವಿಸುತ್ತಿದಾರೆ.

ರಷ್ಯನ್ರು ಹೊಸ ಜನಾಂಗವಲ್ಲ, ಆದರೂ ಮೃತ್ಯು ಒದಗಿದಂತೆ ಹಳೆಯದೆಲ್ಲ ಸಂಪೂರ್ಣ ನಾಶ ವಾಗಿದೆ. ಇಡೀ ಜನಾಂಗವೇ ಪ್ರಪಂಚದ ಇತಿಹಾಸದಲ್ಲಿ ಎಂದೂ ಕಾಣದ ಪುನರವತಾರವನ್ನು ಪಡೆ ದಿದೆ. ಪುನಃ ನವಯುವಕರಂತೆ ಅದ್ಭುತ ಸತ್ವ ಶಾಲಿಗಳೂ ಶಕ್ತಿವಂತರೂ ಆಗಿ ಪ್ರಪಂಚವನ್ನೆ ಬೆರಗು ಮಾಡಿದ್ದಾರೆ. ಈಗ ಪುನಃ ಅವರೂ ತಮ್ಮ ಮೂಲವನ್ನು ಅಗೆಯಲು ಆರಂಭಿಸಿದ್ದಾರೆ. ಆದರೂ ಎಲ್ಲ ದೃಷ್ಟಿಯಿಂದ ಹೊಸಜನ ಹೊಸ ಜನಾಂಗ, ಹೊಸ ಸಂಸ್ಕೃತಿ,

ದಲಿತ ಜನತೆಯ ಶಕ್ತಿ ಮತ್ತು ಸಾಮರ್ಥ್ಯದ ಮೂಲವನ್ನು ಹುಡುಕುವ ಪ್ರಯತ್ನದಲ್ಲಿ ಏನೇ ಅಡ್ಡಿ ಬರಲಿ ಅದನ್ನು ಲಕ್ಷಿಸುವುದಿಲ್ಲವೆಂದು ಸಂಕಲ್ಪ ಮಾಡಿದರೆ ಒಂದು ಜನಾಂಗ ಹೇಗೆ ಪುನರುಜ್ಜಿ ವನವಾಗಬಹುದು, ನವಯುವಕನಂತೆ ಶಕ್ತಿಯುತವಾಗಬಹುದು ಎಂದು ರಷ್ಯ ತೋರಿಸಿಕೊಟ್ಟಿದೆ. ಈ ಭಯಂಕರ ವಿನಾಶಕಾರಕ ಯುದ್ದದಿಂದ, ಯುದ್ದದಲ್ಲಿ ಅಳಿದುಳಿದ ಕೆಲವು ರಾಷ್ಟ್ರಗಳು ನವಚೈತನ್ಯ ಪಡೆಯಬಹುದು.

ಚೀನೀಯರು ಇವರೆಲ್ಲರಿಗೂ ತೀರ ಭಿನ್ನ. ಅದು ಹೊಸ ಜನಾಂಗವಲ್ಲ ಅಥವ ರಷ್ಯನರಂತೆ ಬುಡಮೇಲಾಗಿ ಪರಿವರ್ತನೆಯ ನೋವನ್ನು ತಿಂದಿಲ್ಲ. ಏಳು ವರ್ಷಗಳ ಯುದ್ದದಿಂದ ಅವರಲ್ಲಿಯೂ ಪರಿವರ್ತನೆ ಆಗಿರಲೇ ಬೇಕು, ಆದರೆ ಅದು ಈ ಯುದ್ದದ ಫಲವಾಗಿಯೋ ಅಥವ ಬೇರೆ ಕಾರಣ ಗಳಿಗಾಗಿಯೋ ಅಥವ ಎರಡೂ ಕಾರಣಗಳಿಂದಲೂ ನಾನರಿಯೆ, ಆದರೆ ಚೀನೀಯರ ಕಾರ್ಯ