೯. ಜನತೆಯ ಸಂಸ್ಕೃತಿ.
ಈ ರೀತಿ ಭಾರತ ಜನಕೋಟಿಯ ಇಂದಿನ ಜೀವನ ನಾಟಕವನ್ನು ನೋಡಿದೆ. ಅವರ ದೃಷ್ಟಿ ಭವಿತವ್ಯದ ಕಡೆ ಇದ್ದರೂ ಗತಕಾಲಕ್ಕೂ ಅವರ ಜೀವನಕ್ಕೂ ಇರುವ ಬಾಂಧವ್ಯದ ಎಳೆಗಳನ್ನು ಕಾಣಲಾರದಿರಲಿಲ್ಲ. ಎಲ್ಲೆಲ್ಲೂ ಅವರ ಜೀವನದ ಮೇಲೆ ಮಹಾ ಪರಿಣಾಮಕಾರಿಯಾದ ಒಂದು ಸಾಂಸ್ಕೃತಿಕ ಹಿನ್ನೆಲೆಯನ್ನು ಕಂಡೆ. ಜನತೆಯ ದರ್ಶನ, ಸಂಪ್ರದಾಯ, ಇತಿಹಾಸ, ಪುರಾಣ, ಕತೆ ಇವೆಲ್ಲವುಗಳ ಸಮರಸ ಮಿಶ್ರಣವೇ ಈ ಹಿನ್ನೆಲೆ, ಅವುಗಳನ್ನು ಪ್ರತ್ಯೇಕಿಸುವ ಎಲ್ಲೆ ಯ ಗೆರೆಯನ್ನು ಎಳೆಯಲು ಸಾಧ್ಯವಿರಲಿಲ್ಲ. ಅನಕ್ಷರಸ್ಥರಾದ ನಿರಕ್ಷರ ಕುಕ್ಷಿಗಳಲ್ಲಿ ಸಹ ಈ ಹಿನ್ನೆಲೆಯನ್ನು ಕಾಣಬಹುದಿತ್ತು. ನಮ್ಮ ಮಹಾಪುರಾಣಗಳಾದ ರಾಮಾಯಣ ಮತ್ತು ಮಹಾಭಾರತ ಮತ್ತು ಇತರ ಪುರಾಣಗಳು, ಅವುಗಳ ಲೋಕ ಪ್ರಿಯ ಭಾಷಾಂತರಗಳು ಸಂಗ್ರಹಗಳು ಜನಜನಿತವಾಗಿದ್ದವು. ಅವುಗಳ ಪ್ರತಿಯೊಂದು ಕತೆ, ಘಟನೆ, ನೀತಿ ಜನಮನದಲ್ಲಿ ನಾಟಿ ಅದಕ್ಕೊಂದು ಪುಷ್ಟಿ ಯನ್ನು ಘನತೆಯನ್ನು ಕೊಟ್ಟಿದ್ದವು. ಅಕ್ಷರಜ್ಞಾನವಿಲ್ಲದ ಹಳ್ಳಿಯ ಜನರನೇಕರು ನೂರಾರು ಶ್ಲೋಕಗಳನ್ನು ಬಾಯಿಪಾಠ ಹೇಳುತ್ತಿದ್ದರು. ಅವರ ಸಂಭಾಷಣೆಯಲ್ಲಿ ಆ ಪುರಾಣಗಳಿಂದ ಯಾವುದೋ ಕತೆಯನ್ನೊ, ನೀತಿಯನ್ನೊ ವಿಪುಲವಾಗಿ ತೆಗೆದು ತೋರಿಸುತ್ತಿದ್ದರು. ಹಳ್ಳಿಗರು ನಾಲ್ಕು ಜನ ಸೇರಿದ ಕಡೆ ಇಂದಿನ ಒಂದು ಸಾಮಾನ್ಯ ವಿಷಯಕ್ಕೆ ಸಹ ಅ೦ತಹ ಒಂದು ಸಾಹಿತ್ಯ ಸ್ವರೂಪಕೊಡುತ್ತಿದ್ದು ದು ಆಶ್ಚರ್ಯವಾಗುತ್ತಿತ್ತು. ಲಿಖಿತ ಇತಿಹಾಸದ ನಿಶ್ಚಿತ ಘಟನೆಗಳ ಫಲವಾಗಿ ನನ್ನ ಮನಸ್ಸಿನಲ್ಲಿ ಚಿತ್ರಗಳು ಮೂಡಿದ್ದರೆ ಬರಹಗಾರನಲ್ಲದ ಹಳ್ಳಿಯ ರೈತನ ಮನಸ್ಸಿನಲ್ಲಿ ಸಹ ಇತಿಹಾಸದಿಂದ ಅಲ್ಲದಿದ್ದರೂ, ಪುರಾಣ, ಸಂಪ್ರದಾಯ, ಪೌರಾಣಿಕ ನಾಯಕನಾಯಕಿಯರುಗಳ ಪರಿಚಯದಿಂದ ನಿರ್ಮಿತವಾದ ಒಂದು ಚಿತ್ರಶಾಲೆ ಇದೆ ಎಂಬ ಅರಿವು ನನಗೆ ಬಂದಿತು; ಮತ್ತು ಅದು ತಕ್ಕಷ್ಟು ಸ್ಪಷ್ಟವೂ ಇತ್ತು.
ಅವರ ಮುಖಗಳನ್ನು ಅವರ ಶರೀರಗಳನ್ನು ನಡಗೆಯನ್ನು ಗಮನಿಸಿದೆ. ಅನೇಕ ಮುಖಗಳಲ್ಲಿ ತೀಕ್ಷಬುದ್ದಿ ಯನ್ನು ಕಾಣಬಹುದಿತ್ತು. ಅನೇಕರು ಆಜಾನುಬಾಹುಗಳಾಗಿ, ಎತ್ತರವಾಗಿ, ದೃಢ ಕಾಯರಾಗಿದ್ದರು, ಸ್ತ್ರೀಯರಲ್ಲಿ ವಿಲಾಸ ವಿನಯ, ಗಾಂಭೀರ್ ಸೈರ್ಯ ಮತ್ತು ಅನೇಕ ವೇಳೆ ಒಂದು ಸಂಕಟದ ದೃಷ್ಟಿ ಯೂ ಕಾಣುತ್ತಿತ್ತು. ಸೌಂದರ್ಯವೆಲ್ಲ ಸಾಮಾನ್ಯವಾಗಿ ಸ್ವಲ್ಪ ಆರ್ಥಿಕ ಸ್ಥಿತಿ ಉತ್ತಮವಿರುವ ಮೇಲ್ಲರಗತಿಯ ಜನರಲ್ಲಿ. ಒಂದೊಂದು ವೇಳೆ ಹಳ್ಳಿಯ ರಸ್ತೆಯಲ್ಲಿ ಅಥವ ಹಳ್ಳಿಯ ಮಧ್ಯೆ ಹಾಯ್ದು ಹೋಗುವಾಗ ಒಬ್ಬ ಸುಂದರ ಪುರುಷನನ್ನೊ, ಸ್ತ್ರೀಯನ್ನೂ ನೋಡಿ ಯಾವುದೋ ಪ್ರಾಚೀನ ಮಂಡೋದಕ ಚಿತ್ರವನ್ನು ಕಂಡಂತೆ ಚಕಿತನಾಗುತ್ತಿದ್ದೆ. ಭಾರತವು ಶತಮಾನಗಳಿಂದ ಅನುಭವಿಸಿದ ಸಂಕಟ ಮತ್ತು ಗಂಡಾಂತರಗಳ ಮಧ್ಯೆ ಈ ಚಿತ್ರ ಇನ್ನೂ ಅಚ್ಚಳಿಯದೆ ಹೇಗೆ ಉಳಿಯಿತು ಮತ್ತು ಸಾಗಿ ಬಂತು ಎಂಬುದೇ ಆಶ್ಚರ್ಯ, ಸನ್ನಿವೇಶ ಉತ್ತಮಗೊಂಡರೆ, ಉತ್ತಮ ಅವಕಾಶ ದೊರೆತರೆ ಈ ಜನದಿಂದ ಏನುತಾನೆ ಸಾಧಿಸಲು ಅಸಾಧ್ಯ. ಎಲ್ಲಿ ನೋಡಿದರೂ ಬಡತನ ಮತ್ತು ಅದರ ಅನಂತ ಪರಿಣಾಮ ಪರ೦ಪರೆ ; ಎಲ್ಲರ ಮುಖದ ಮೇಲೂ ಅದರ ಪೈಶಾಚಿಕ ಮುದ್ರೆ, ಬಡತನ ಜೀವನವನ್ನೆ ಹಿಸುಕಿ ವಿಕಾರಗೊಳಿಸಿ ದುಷ್ಕೃತಿಗೆ ತಳ್ಳಿತ್ತು. ಈ ವಿಕಾರ, ನಿರಂತರ ಅಭಾವ ಮತ್ತು ಅಭದ್ರತೆಯಿಂದ ಅನೇಕ ದುರ್ಗುಣಗಳಿಗೆ ಎದೆ ಸಿಕ್ಕಿತು. ಇದನ್ನೆಲ್ಲ ನೋಡುವುದಕ್ಕೆ ಬಹಳ ಸಂಕಟವಾಗುತ್ತಿತ್ತು ; ಆದರೂ ಇವೇ ಭಾರತದ ನಿಜಸ್ಥಿತಿಗೆ ಮೂಲಕಾರಣ. ಆಗುವುದು ಆಗುತ್ತೆ ಹೋಗುವುದು ಹೋಗುತ್ತೆ ಎಂಬ ಮನೋಭಾವ ಬಹಳ ಬೆಳೆದಿತ್ತು. ಆದರೂ ಸಹಸ್ರಾರು ವರ್ಷಗಳ ಸಂಸ್ಕೃತಿಯ ಫಲವಾಗಿ ಯಾವ ಸಂಕಟವೂ ಅಳಿಸಲಾರದ ಒಂದು ನನ್ನ ತೆ ಒಂದು ಸಭ್ಯತೆ ಅವರಲ್ಲಿ ಇತ್ತು.
೧೦. ಎರಡು ಜೀವನ
ಈ ರೀತಿ ಮತ್ತು ಇನ್ನೂ ಅನೇಕ ರೀತಿಯಿಂದ ಇಂದಿನ ಮತ್ತು ಹಿಂದಿನ ಭಾರತದ ದರ್ಶನ