ಈ ಪುಟವನ್ನು ಪ್ರಕಟಿಸಲಾಗಿದೆ
೫೨
ಭಾರತ ದರ್ಶನ

ಇಂಡಿಯದಲ್ಲಿ ಅಷ್ಟು ಪ್ರಾಚೀನಕಾಲದಲ್ಲಿಯೇ ಹತ್ತಿಯಿಂದ ಬಟ್ಟೆ ತಯಾರಿಸುತ್ತಿದ್ದರು. ಮಾರ್ಷಲ್ ಸಿಂಧು ಕಣಿವೆಯ ನಾಗರಿಕತೆಯನ್ನು ಅದೇ ಕಾಲದ ಈಜಿಪ್ಟ್ ಮತ್ತು ಮೆಸೊ ಪೊಟೇಮಿಯ ನಾಗರಿಕತೆಗಳೊಂದಿಗೆ ತುಲನಮಾಡುತ್ತ “ ಈ ರೀತಿ ಕೆಲವು ಮುಖ್ಯ ಅಂಶಗಳನ್ನೇ ತಿಳಿಸಬೇಕಾದರೆ ಆ ಕಾಲದಲ್ಲಿ ಬಟ್ಟೆ ತಯಾರಿಕೆಗೆ ಹತ್ತಿಯನ್ನು ಉಪಯೋಗಿಸುತ್ತ ಇದ್ದು ದು ಇಂಡಿಯದಲ್ಲಿ ಮಾತ್ರ ; ಮುಂದೆ ೨,೦೦೦-೩,೦೦೦ ವರ್ಷಗಳವರೆಗೂ ಅದು ಪಾಶ್ಚಾತ್ಯ ದೇಶಗಳಿಗೆ ಹರಡಲೇ ಇಲ್ಲ. ಮೊಹೆಂಜೋದಾರೋದಲ್ಲಿ ಕಾಣುವ ಸುಸಜ್ಜಿತ ಸ್ನಾನಘಟ್ಟಗಳನ್ನು, ಭವ್ಯವಾದ ಕಟ್ಟಡಗಳನ್ನು ಈಜಿಪ್ಟ್, ಮೆಸೊಪೊಟೇಮಿಯಗಳಲ್ಲಾಗಲಿ, ಪಶ್ಚಿಮ ಏಷ್ಯದ ಇತರ ಯಾವ ದೇಶಗಳಲ್ಲಿಯೇ ಆಗಲಿ ಎಲ್ಲಿಯೂ ಕಾಣಲಾರೆವು. ಆ ದೇಶಗಳಲ್ಲಿ ಅಪಾರ ಹಣ, ಬುದ್ಧಿ ಶಕ್ತಿಯೆಲ್ಲ ದೇವರುಗಳಿಗೆ ಸುಂದರ ದೇವಾಲಯಗಳನ್ನು ಕಟ್ಟುವದರಲ್ಲಿ ಅಥವ ರಾಜರುಗಳ ಅರಮನೆ ಅಥವ ಗೋರಿಗಳ ನಿರ್ಮಾಣ ಕಾರ್ಯದಲ್ಲಿ ವೆಚ್ಚವಾಗುತ್ತಿತ್ತು. ಸಾಮಾನ್ಯ ಜನರಿಗೆ ಸಣ್ಣ ಮಣ್ಣಿನ ಗುಡಿಸಲುಗಳೇ ಗತಿಯಾಗಿತ್ತು. ಸಿಂಧು ನದಿ ಕಣಿವೆಯಲ್ಲಿ ಈ ಚಿತ್ರ ವ್ಯತ್ಯಸ್ತವಾಗಿತ್ತು. ವಿಶಾಲವಾದ ಅಚ್ಚು ಕಟ್ಟಾದ ಸುಂದರ ಸೌಧಗಳು ನಿರ್ಮಾಣವಾಗುತ್ತಿದ್ದುದು ಸಾಮಾನ್ಯ ಜನರ ಸೌಖ್ಯಕ್ಕೆ ” ಎಂದಿದ್ದಾರೆ. ಈ ಸಾರ್ವಜನಿಕ ಮತ್ತು ಖಾಸಗಿ ಸ್ನಾನಘಟ್ಟಗಳು, ಉತ್ತಮ ಚರಂಡಿ ವ್ಯವಸ್ಥೆ ಮೊಹೆಂಜೊದಾರೋದಲ್ಲಿ ಮೊದಲು ಬೆಳಕಿಗೆ ಬಂದಿರುವುದು. ಸುಟ್ಟ ಇಟ್ಟಿಗೆಯಿಂದ ಕಟ್ಟಿದ ಎರಡು ಮಹಡಿಮನೆಗಳಲ್ಲಿ ಸ್ನಾನದ ಮನೆಗಳು, ಆಳುಗಳಿಗೆ ವಾಸದ ಮನೆ, ವಿಶ್ರಾಂತಿ ಗೃಹಗಳು ಮುಂತಾದುವನ್ನು ನೋಡಬಹುದು.

ಈ ಭೂಗರ್ಭಶೋಧನೆಯನ್ನು ಸ್ವತಃ ನಡೆಸಿ, ಸಿಂಧು ಕಣಿವೆಯ ನಾಗರಿಕತೆಯ ವಿಷಯದಲ್ಲಿ ಸರ್ವಪಾರಂಗತನೆನಿಸಿದ ಮಾರ್ಷಲ್ ಇನ್ನೊಂದು ಕಡೆ "ಸಿಂಧು ಕಣಿವೆಯ ನಾಗರಿಕತೆಯಲ್ಲಿ ಕಾಣುವ ಧರ್ಮ ಮತ್ತು ಕಲೆಗೆ ಒಂದು ಮಹತ್ತರ ವೈಶಿಷ್ಟವಿದೆ, ಪ್ರತ್ಯೇಕ ಭಾವಮುದ್ರೆ ಇದೆ. ಅಲ್ಲಿ ದೊರೆತ ಮಣ್ಣಿನ ಸಾಮಾನಿನ ಕುರಿಗಳು, ನಾಯಿಗಳು ಮತ್ತು ಇತರ ಪ್ರಾಣಿಗಳ ಮಾದರಿಗಳು, ಮುದ್ರೆಗಳ ಮೇಲಿನ ಇಳಿಕೆತ್ತನೆಗಳು, ಅದರಲ್ಲೂ ಮುಖ್ಯವಾಗಿ ಕೆತ್ತನೆ ಕಲೆಯ ಕುಸುರಿ ಕೆಲಸದಲ್ಲಿ, ಅಕೃತಿ ಮತ್ತು ರೇಖಾ ವಿನ್ಯಾಸದಲ್ಲಿ ಬೇರೆ ಎಲ್ಲಿಯೂ ಮಾರಿಸಲಾಗದ ಒಂದು ವಿಶಿಷ್ಟ ರೀತಿಯ ಭವ್ಯತೆ ಮತ್ತು ಕೌಶಲ್ಯ ಬೀರುವ ಸಣ್ಣ ಕೋಡಿನ ಹಿಣಿಲು ಹೋರಿಗಳು-ಇವುಗಳನ್ನು ಇತರ ದೇಶಗಳ ಸಮಕಾಲೀನ ನಾಗರಿಕತೆಯಲ್ಲಿ ಎಲ್ಲಿಯೂ ಕಾಣಲಾರೆವು. ಹರಪ್ಪದಲ್ಲಿ ದೊರೆ ತಿರುವ ಮನುಷ್ಯನ ಎರಡು ಪ್ರತಿಮೆಗಳ ಸುಂದರ ಶಿಲ್ಪ ಕುಶಲತೆಗೆ ಸಾಮ್ಯವನ್ನು ಕಾಣಬೇಕಾದರೆ ಪುರಾತನ ಗ್ರೀಸಿಗೇ ಬರಬೇಕು, ಸಿಂಧು ಜನರ ಮತಧರ್ಮವನ್ನು ಇತರ ದೇಶಗಳ ಜನರಲ್ಲಿಯೂ ಕಾಣಬಹುದು. ಇತಿಹಾಸ ಪೂರ್ವ ಯುಗದ, ಇತಿಹಾಸ ಕಾಲದ ಯಾವ ಧರ್ಮವನ್ನು ತೆಗೆದು ಕೊಂಡರೂ ಸಾಮಾನ್ಯವಾಗಿ ಈ ಹೋಲಿಕೆ ಇದ್ದೇ ಇದೆ. ಒಟ್ಟಿನಲ್ಲಿ ಅವರ ಧರ್ಮ ಇಂದಿನ ಹಿಂದೂ ಧರ್ಮಕ್ಕಿಂತ ತೀರ ಭಿನ್ನ ವಲ್ಲದ ಭಾರತೀಯ ಧರ್ಮ” ಎಂದಿದ್ದಾರೆ.

ಈ ರೀತಿ ಸಿಂಧು ಕಣಿವೆಯ ನಾಗರಿಕತೆಗೂ ಆ ಕಾಲದ ಪರ್ಷಿಯ, ಮೆಸೊಪೊಟೇಮಿಯ ಈಜಿಪ್ಟ್ ನಾಗರಿಕತೆಗಳಿಗೂ ವ್ಯಾಪಾರ ಮತ್ತು ಇತರ ಬಾಂಧವ್ಯ ಇತ್ತು ; ಅವುಗಳಿಗಂತ ಎಷ್ಟೋ ವಿಧದಲ್ಲಿ ಮುಂದುವರಿದಿತ್ತು. ಅದು ಶ್ರೀಮಂತ ವರ್ತಕರ, ಪಟ್ಟಣಿಗರ ನಾಗರಿಕತೆ, ವರ್ತಕರು ತುಂಬಿ ಬಲಿಷ್ಠರಾಗಿ ಪ್ರಭಾವಶಾಲಿಗಳಾಗಿದ್ದರು. ಇಂದೂ ಇಂಡಿಯದ ಅನೇಕ ಪಟ್ಟಣಗಳಲ್ಲಿ ಕಾಣಬಹುದಾದಂತೆ ಬೀದಿಗಳ ಎರಡು ಕಡೆಗಳಲ್ಲೂ ಅಂಗಡಿಗಳ ಸಾಲುಗಳಿದ್ದವು. ಪ್ರೊಫೆಸರ್ ಟೈಲ್ಸ್: "ಸಿಂಧುನಗರದ ಕುಶಲಕರ್ಮಿಗಳು ವ್ಯಾಪಾರಕ್ಕಾಗಿ ಸಾಮಾನುಗಳನ್ನು ತಯಾರಿಸುತ್ತಿದ್ದರು. ವ್ಯಾಪಾರದ ಸೌಕಯ್ಯಕ್ಕೆ ಯಾವುದಾದರೂ ನಾಣ್ಯ ಬಳಕೆಯಲ್ಲಿ ಅಥವ ಬೆಲೆ ನಿಗದಿಯೇನಾದರೂ ಇತ್ತೆ ಎಂದು ಹೇಳಲು ಸಾಧ್ಯವಿಲ್ಲ. ವಿಶಾಲವಾಗಿ, ಅಚ್ಚುಕಟ್ಟಾಗಿರುವ ಅನೇಕ ಮನೆಗಳಲ್ಲಿ ಕಾಣುವ ಉಗ್ರಾಣಗಳನ್ನು ನೋಡಿದರೆ ಅವು ವರ್ತಕರ ಮನೆಗಳೇ ಆಗಿರಬೇಕು ಎಂದು