ಒಂದು ಮಹಾಸಾಗರ, ಇಂಡಿಯದಲ್ಲಿ ಕಟ್ಟು ನಿಟ್ಟಾದ ಜಾತಿ ಪದ್ಧತಿ ಮತ್ತು ಒಂದು ಬಗೆಯ ಬಹಿಷ್ಕಾರ ನೀತಿ ಕಂಡುಬಂದರೂ ಈ ರೀತಿ ವಿದೇಶೀಯರನ್ನು ಅವರ ನಾಗರಿಕತೆಯನ್ನು ಜೀರ್ಣಿಸಿ ಕೊಳ್ಳುವ ಅದ್ಭುತಶಕ್ತಿಯಿರುವದು ಅತ್ಯಾಶ್ಚರ್ಯಕರವಾಗಿದೆ. ಪ್ರಾಯಶಃ ಈ ಒಂದು ಶಕ್ತಿಯಿಂದಲೇ ತನ್ನ ಜೀವನಶಕ್ತಿಯನ್ನು ಳಿಸಿಕೊಂಡು ಕಾಲಕಾಲಕ್ಕೆ ನವಶಕ್ತಿಯನ್ನು ಪಡೆದು ಪುಷ್ಟಿ ಪಡೆಯುತ್ತಿದ್ದಿ ತೆಂದು ಕಾಣುತ್ತದೆ. ಮುಸ್ಲಿಮರು ಬಂದಾಗಲೂ ಅವರಮೇಲೂ ಅಸಾಧ್ಯ ಪರಿಣಾಮವಾಯಿತು. ವಿನ್ಸೆಂಟ್ ಸ್ಮಿತ್ ಹೇಳುವಂತೆ “ಈ ವಿದೇಶೀಯರು (ಮುಸ್ಲಿ೦ ತುರ್ಕಿ ಜನ) ಸಹ ತಮ್ಮ ಹಿಂದೆ ಬಂದ ಶಕರು ಮತ್ತು ಯೂ-ಚಿಗಳಂತೆ ಹಿಂದೂ ಧರ್ಮದ ಅದ್ಭುತ ಸಮೀಕರಣಶಕ್ತಿಗೆ ಒಳಗಾಗಿ ಕ್ರಮೇಣ ಹಿಂದೂಗಳಂತೆಯೇ ಆದರು” ಎಂದಿದಾನೆ.
೩. ಹಿಂದೂಧರ್ಮ ಎಂದರೇನು ?
ಮೇಲಿನ ಅವತರಣಿಕೆಯಲ್ಲಿ ವಿನ್ಸೆಂಟ್ ಸ್ಮಿತ್ 'ಹಿಂದೂಧರ್ಮ' 'ಹಿಂದೂಗಳಂತಾದರು? ಎಂದಿದಾನೆ. ಭಾರತ ಸಂಸ್ಕೃತಿಯ ವಿಶಾಲ ದೃಷ್ಟಿಯಿಂದ ಅಲ್ಲದಿದ್ದರೆ ಈ ಪದ ಪ್ರಯೋಗಗಳು ಸರಿಯಲ್ಲವೆಂದು ನನ್ನ ಅಭಿಮತ. ಇಂದಿನ ಸಂಕುಚಿತ ಜಾತೀಯ ದೃಷ್ಟಿಯಲ್ಲಿ ಮೋಸಹೋಗ ಬಹುದು, 'ಹಿಂದೂ' ಎಂಬ ಶಬ್ದ ಪುರಾತನ ಸಾಹಿತ್ಯದಲ್ಲಿ ಎಲ್ಲಿಯೂ ಬಂದಿಲ್ಲ. ಎಂಟನೆಯ ಶತ ಮಾನದ ಒಂದು ತಂತ್ರ ಗ್ರಂಥದಲ್ಲಿ ಹಿಂದೂ ಎಂದರೆ ಒಂದು ಬುಡಕಟ್ಟಿ ನಜನ ಎಂದು ಹೇಳಿರುವಂತೆ ಕೇಳಿದ್ದೇನೆ. ಜಾತಿಯ ಪ್ರಶ್ನೆಯೇ ಅಲ್ಲಿ ಇಲ್ಲ. ಆದರೆ ಅವೆಸ್ತ'ದಲ್ಲಿ ಮತ್ತು ಪಾರ್ಸಿ ಸಾಹಿತ್ಯದಲ್ಲಿ ಅನೇಕ ಬಾರಿ ಬಂದಿರುವದರಿಂದ ಆ ಶಬ್ದ ತುಂಬ ಹಳೆಯದಿರಬೇಕು. ಪಶ್ಚಿಮ ಮತ್ತು ಮಧ್ಯ ಏಷ್ಯದ ಜನರು ಆಗ ಮತ್ತು ಸಾವಿರಾರು ವರ್ಷಗಳ ನಂತರ ಸಹ ಇಂಡಿಯ' ಶಬ್ದಕ್ಕೆ ಪ್ರತಿಯಾಗಿ ಸಿಂಧೂ ನದಿಯ ಈಚೆ ವಾಸಮಾಡುವ ಜನರಿಗೆ 'ಹಿಂದೂ' ಎಂದು ಕರೆಯುತ್ತಿದ್ದರು. ಅದು ಇಂಡಸ್ ನದಿಯ ಈಗಿನ ಮತ್ತು ಪ್ರಾಚೀನ ಭಾರತೀಯ ಹೆಸರಾದ ( ಸಿಂಧೂ' ಎಂಬ ಹೆಸರಿನಿಂದ ಉತ್ಪನ್ನವಾಗಿದೆ, ಈ “ಸಿಂಧು' ಶಬ್ದದಿಂದಲೇ ಹಿಂದೂ, ಹಿಂದೂಸ್ತಾನ್, ಇ೦ಡಾಸ್, ಇಂಡಿಯಾ ಪದಗಳು ಹುಟ್ಟಿದವು. ಏಳನೆಯ ಶತಮಾನದಲ್ಲಿ ಇ೦ಡಿ೦ಾದೇಶಕ್ಕೆ ಬಂದ ಚೀನಾ ಯಾತ್ರಿಕನಾದ ಇ೦ಗ್ನು ಉತ್ತರದ ಜನ ಎಂದರೆ ಮಧ್ಯ ಏಷ್ಯದ ಜನ ಇಂಡಿಯಕ್ಕೆ ಹಿಂದು (ಸಿನ್-ಟು) ಎಂದು ಕರೆಯುತ್ತಾರೆ. ಆದರೆ ಅದು ಬಳಕೆಯಲ್ಲಿರುವ ಹೆಸರಲ್ಲ, ಇಂಡಿಯಕ್ಕೆ ತಕ್ಕ ಹೆಸರೆಂದರೆ (ಆರ್ಯದೇಶ' ಎಂದಿದಾನೆ. ಜಾತಿಯನ್ನು ಹೇಳಲು 'ಹಿಂದೂ' ಶಬ್ದ ಉಪಯೋಗಕ್ಕೆ ಬಂದುದು ಇತ್ತೀಚೆಗೆ.
ಭಾರತದಲ್ಲಿ ಮತವನ್ನು ಒಂದು ಸನಾತನ ಸಮಗ್ರ ಹೆಸರಿನಿಂದ ಆತ್ಯ ಧರ್ಮ ಎಂದು ಕರೆಯುತ್ತಿದ್ದರು. ಧರ್ಮ ಎನ್ನುವದು ಮತಕ್ಕಿಂತಲೂ ಹೆಚ್ಚು ಅರ್ಥಗರ್ಭಿತ ಶಬ್ದ. ಅದರ ಮೂಲಶಬ್ದದ ಅರ್ಥ ಧಾರಣ ಎಂದು. ಅದು ಒಂದು ವಸ್ತುವಿನ ಆ೦ತರಿಕ ರಚನೆ, ಆ೦ತರಿಕ ಜೀವನದ ನಿಯಮ, ನೀತಿ ನಿಯಮಗಳು, ನ್ಯಾಯಧರ್ಮ, ಮಾನವನ ಕರ್ತವ್ಯ ಮತ್ತು ಹೊರೆಗಳ ಸಮಗ್ರ ಭಾವನೆ. ಆರ್ಯಧರ್ಮ ಎಂದರೆ ಇ೦ಡಿಯದಲ್ಲಿ ಹುಟ್ಟಿದ ಎಲ್ಲ ಧರ್ಮಗಳ-ವೈದಿಕ ಮತ್ತು ಅವೈದಿಕ ಸಾರ. ಬೌದ್ಧರು, ಜೈನರು ಮತ್ತು ವೇದಮತಾವಲಂಬಿಗಳು ಎಲ್ಲರೂ ಆ ಶಬ್ದವನ್ನು ಉಪಯೋಗಿಸಿದರು. ಬುದ್ಧನು ತನ್ನ ನಿರ್ವಾಣ ಮಾರ್ಗವನ್ನು ಆರ್ಯಮಾರ್ಗ' ಎಂದು ಕರೆದು ಇರುತ್ತಾನೆ.
ಪೂರ್ವ ಕಾಲದಲ್ಲಿ ವೈದಿಕ ಧರ್ಮ ಎಂದರೆ ಮುಖ್ಯವಾಗಿ ವೇದಗಳನ್ನೇ ಮೂಲ ಮತ್ತು ಪ್ರಮಾಣವಾಗಿಟ್ಟು ಕೊಂಡು ಹುಟ್ಟಿದ ಎಲ್ಲ ದರ್ಶನಗಳು, ನೀತಿಬೋಧೆಗಳು, ವಿಧಿಗಳು ಮತ್ತು ಸಂಪ್ರದಾಯಗಳು ಮಾತ್ರ ಎಂಬ ನಂಬಿಕೆಯೂ ಇತ್ತು. ಈ ರೀತಿ ವೇದಗಳನ್ನು ಆಧಾರವೆಂದು ನಂಬಿದವರೆಲ್ಲ ವೈದಿಕ ಧರ್ಮದವರು ಎಂದು ಕರೆಯಬಹುದು.
ಸನಾತನ ಧರ್ಮ ಎಂದರೆ ಪೂರ್ವಕಾಲದ ಧರ್ಮ ಎಂದು ಅರ್ಥ. ಇದು ಬೌದ್ಧ ಮತ, ಜೈನ ಮತಗಳನ್ನೊಳಗೊಂಡು ಎಲ್ಲ ಭಾರತೀಯ ಮತಗಳಿಗೂ ಅನ್ವಯಿಸುತ್ತದೆ, ಆದರೆ ಈಗ ಹಿಂದೂಗಳಲ್ಲಿ ಪೂರ್ವಾಚರಣೆಯಲ್ಲಿದ್ದೇವೆ ಎಂದು ನಂಬಿರುವ ಶಾಸ್ತ್ರ ನಿಷ್ಠ ಪಂಗಡಗಳಿಗೆ ಮಾತ್ರ ಅನ್ವಯಿಸುತ್ತದೆ.