ಈ ಪುಟವನ್ನು ಪ್ರಕಟಿಸಲಾಗಿದೆ
೫೮
ಭಾರತ ದರ್ಶನ

ಇಸ್ರೇಲ್ ಸಾಹಿತ್ಯಗಳಿಗಿಂತ ಮುಂಚಿನದು. ನಮಗೆ ಇದುವರೆಗೆ ದೊರೆತಿರುವ ಮಾನವನ ಮನೋ ಭಾವನೆಗಳ ಮೊದಲ ಸಾಕು ಎನ್ನು ವುದರಲ್ಲಿ ಯಾವ ಸಂದೇಹವೂ ಇಲ್ಲ. “ಆರ್ಯ ಮನುಜನ ಮೊದಲವಾಣಿ” ಎಂದಿದ್ದಾನೆ ಮ್ಯಾಕ್ಸ್ ಮುಲ್ಲರ್,

ಸಂಪತ್ಸಮೃದ್ಧ ಭಾರತದಲ್ಲಿ ಆರ್ಯನು ವಲಸೆ ಬಂದು ನೆಲಸಿದಾಗ ಹಾಡಿದ ಗೀತಗಳೇ ವೇದ ಗಳು, ಮೂಲ ಬುಡಕಟ್ಟು ಒಂದೇ ಇದ್ದು ಇರಾಣದಲ್ಲಿ ಅವೆಸ್ತ ಆಗಿದ್ದದ್ದು ಭರತಭೂಮಿಯಲ್ಲಿ ವಿಸ್ತಾರಗೊಂಡು ವೇದಗಳಾದುವು. ವೇದಗಳ ಭಾಷೆಗೂ, ಅವೆಸ್ತ ಭಾಷೆಗೂ ಹೆಚ್ಚು ಸಾಮ್ಯವಿದೆ. ಪುರಾಣಗಳ ಸಂಸ್ಕೃತ ಭಾಷೆಗಿಂತ ಅವೆಸ್ತ ಭಾಷೆಗೂ ವೇದಭಾಷೆಗೂ ಸಮಾಜ ಬಾಂಧವ್ಯವಿದೆ.

ಮೂಲ ಧರ್ಮಗ್ರಂಥಗಳು ಅಪೌರುಷೇಯ ಎಂದು ಎಲ್ಲ ಧರ್ಮಿಗಳು ನಂಬಿರುವಾಗ ವಿವಿಧ ಧರ್ಮಗ್ರಂಥಗಳನ್ನು ಅವಲೋಕಿಸುವುದೆಂತು ? ವಿಭಜನೆ ಮಾಡಿ, ವಿಮರ್ಶೆಮಾಡಿ, ಅದೂ ಒಂದು ಮಾನವ ಸ್ವಭಾವ ವಿವರಣೆ ಎಂದು ನೋಡುವುದೆಂದರೆ ಧರ್ಮಭೀರುಗಳ ಕೋಪಾನಲಕ್ಕೆ ತುತ್ತಾಗ ಬೇಕು. ಆದರೆ ವಿಧಿಯಿಲ್ಲ.

ಧರ್ಮ ಗ್ರಂಥಗಳ ಅಭ್ಯಾಸ ನನಗೆ ರುಚಿಸುವುದಿಲ್ಲ. ತಮ್ಮ ದೃಷ್ಟಿ ಯ ನೇರಕ್ಕೆ ನೋಡುವ ಮಾರ್ಗ ನನಗೆ ಸರಿತೋರುವುದಿಲ್ಲ. ಧರ್ಮಾಚರಣೆಯ ಬಾಹ್ಯಾಧಾರಗಳಿ೦ದ ಮೂಲಕ್ಕೆ ಹೋಗಲು ಪ್ರೋತ್ಸಾಹ ದೊರೆಯಲಿಲ್ಲ. ಆದರೂ ತಿಳಿಯದೆ ಇರುವುದು ಒಂದು ಗುಣವಲ್ಲ, ದೋಷ, ಅನೇಕವೇಳೆ ದೊಡ್ಡ ಲೋಪ. ಆದ್ದರಿಂದ ಈ ಗ್ರಂಥಗಳ ಕಡೆ ಮನಸ್ಸು ಓಡುತ್ತದೆ. ಕೆಲವಂತೂ ಮಾನವ ಕೋಟಿಯಮೇಲೆ ಮಹತ್ಪರಿಣಾಮ ಮಾಡಿದೆ ; ಅಷ್ಟು ಪರಿಣಾಮಕಾರಿಯಾಗಿರಬೇಕಾದರೆ ಅದರಲ್ಲಿ ಏನೋ ಒಂದು ಆತ್ಮಶಕ್ತಿ, ಆತ್ಮಸತ್ವ, ಜೀವಂತ ಶಕ್ತಿ ಮೂಲ ಇರಲೇಬೇಕು. ಅವುಗಳ ಬಹು ಭಾಗ ಓದಲು ತುಂಬ ಕಷ್ಟ ವಾಯಿತು, ಎಷ್ಟೇ ಪ್ರಯತ್ನ ಪಟ್ಟರೂ ಆಸಕ್ತಿಯೇ ಹುಟ್ಟುತ್ತಿರಲಿಲ್ಲ. ಆದರೆ ಕೆಲವು ಭಾಗಗಳ ಅದ್ಭುತ ಸೌಂದಯ್ಯದಿಂದ ಮುಕ್ತನಾದೆ. ಯಾವುದೋ ಒಂದುವಾಕ್ಯ, ಶಬ್ದ ಸಮುಚ್ಚಯ ಮಿಂಚಿನ ಹೊಳೆಯಂತೆ ನನ್ನ ಮನಸ್ಸಿನಲ್ಲಿ ಸುಳಿದು, ನಾಟಿ, ಆಗ ನಿಜವಾದ ಮಹತ್ತಿನ ಸಾಮಾ ಜ್ಯದ ಸ್ವಾನುಭವವಾಗುತ್ತಿತ್ತು. ಬುದ್ಧ ಅಥವ ಕ್ರಿಸ್ತನ ಕೆಲವು ಮಾತುಗಳಲ್ಲಿ ಒಂದು ಅಪೂರ್ವವಾದ ಅರ್ಥ ಹೊಳೆದು ಸಾವಿರಾರು ವರ್ಷಗಳ ಕೆಳಗೆ ನುಡಿದಾಗ ಆ ಮಾತುಗಳು ಎಷ್ಟು ಸಮಂಜಸವೋ ಈಗಲೂ ಅಷ್ಟೇ ಸಮಂಜಸವೆಂದು ಸ್ಪಷ್ಟ ಕಾಣುತ್ತಿತ್ತು. ಕಾಲ ದೇಶಾತೀತವಾದ ಒಂದು ನಿತ್ಯತೆ, ಅ ಪ್ರತಿಹತ ಸತ್ಯ ಕಾಣುತ್ತಿತ್ತು. ಸಾಕ್ರಟೀಸನ ವಿಷಯ, ಚೀನಿ ದಾರ್ಶನಿಕರ ವಿಷಯ, ಉಪನಿಷತ್ತುಗಳು ಅಥವ ಭಗವದ್ಗೀತೆಯನ್ನು ಓದಿಗಾಗ ಈ ರೀತಿ ಅನುಭವವಾಗುತ್ತಿತ್ತು. ತತ್ವಶಾಸ್ತ್ರದಲ್ಲಾಗಲಿ, ಯಜ್ಞಯಾಗಾದಿ ವಿಧಿ ವಿವರಗಳಲ್ಲಾಗಲಿ, ನನ್ನೆದುರಿನ ಸಮಸ್ಯೆಗಳಿಗೆ ಅಪ್ಪ ಕೃತವಾದ ವಿಷಯಗಳಲ್ಲಿ ಆಗಲಿ ನನಗೆ ಯಾವ ಆಸಕ್ತಿಯೂ ಇರಲಿಲ್ಲ. ಪ್ರಾಯಶಃ ನಾನು ಓದಿದ ಅನೇಕ ಗ್ರಂಥಗಳ ಒಳ ಅರ್ಥ ನನಗೆ ತಿಳಿಯದೆ ಹೋಗಿದ್ದರೂ ಇರಬಹುದು. ಕೆಲವುಬಾರಿ ಎರಡ ನೆಯ ಸಲ ಓದಿದಾಗ ಹೆಚ್ಚು ಅರ್ಥವಾಗುತ್ತಿತ್ತು. ಕೆಲವು ಕ್ಲಿಷ್ಟ ಭಾಗಗಳನ್ನು ಅರ್ಥಮಾಡಿಕೊಳ್ಳಲು ಯಾವ ಪ್ರಯತ್ನವನ್ನೂ ಮಾಡಲಿಲ್ಲ. ನನಗೆ ಪ್ರಾಮುಖ್ಯ ತೋರದ ವಿಷಯಗಳನ್ನು ಬಿಟ್ಟು ಬಿಡು ತಿದ್ದೆ. ಉದ್ದನೆಯ ಟೀಕೆಗಳೂ, ಅನುಬಂಧಗಳೂ ಬೇಕಿರಲಿಲ್ಲ. ಚರ್ಚೆಮಾಡದೆ, ಅನುಮಾನ ಪಡದೆ, ಅಲ್ಲಿರುವುದೆಲ್ಲ ಸಂಪೂರ್ಣ ಸತ್ಯ, ಅದೊಂದು ಪವಿತ್ರ ಗ್ರಂಥ ಎಂದು ನಾನು ಯಾವ ಗ್ರಂಥ ವನ್ನೂ ಓದಲಿಲ್ಲ. ಆ ರೀತಿ ಓದಲು ಆರಂಭಿಸಿದೊಡನೆ ಅದು ನನ್ನ ಮನಸ್ಸಿಗೆ ಎಳ್ಳಷ್ಟೂ ಹಿಡಿಯು ತಿರಲಿಲ್ಲ. ಗ್ರಂಥಕರ್ತರು ಪ್ರಭಾವಶಾಲಿಗಳೂ, ದೂರದರ್ಶಿಗಳೂ ಆದ ಸಾಮಾನ್ಯ ಮಾನವರು. ಅವತಾರ ಪುರುಷರಲ್ಲ. ದೇವಾಂಶ ಪುರುಷರೂ ಅಲ್ಲ. ಮತ್ತು ನನಗೆ ನಿಶ್ಚಿತ ಜ್ಞಾನವಿಲ್ಲದವರಾದರೂ ನಮ್ಮಂತೆಯೇ ಹುಟ್ಟು ಸಾವಿಗೆ ಒಳಗಾದವರು ಎಂದು ಓದಲು ಆರಂಭಿಸಿದಾಗ ಮಾತ್ರ ಸಹೃದಯ ನಾಗಿ, ತೆರೆದ ಮನಸ್ಸಿನಿಂದ ಓದಲು ನನಗೆ ಸಾಧ್ಯವಾಗುತ್ತಿತ್ತು.

ನನ್ನ ದೃಷ್ಟಿಯಲ್ಲಿ ದೇವಾಂಶ ಸಂಭೂತ ಅಥವ ಅತಿಮಾನುಷ ವ್ಯಕ್ತಿಯಾಗಿ ಇರದೆ ಸಾಮಾನ್ಯ