ಈ ಪುಟವನ್ನು ಪ್ರಕಟಿಸಲಾಗಿದೆ
೬೦
ಭಾರತ ದರ್ಶನ

ದೇವತೆಗಳು, ಅನಂತರ ಏಕದೈವ ವಾದ, ಆಮೇಲೆ ಏಕದೈವವಾದದೊಂದಿಗೆ ಬೆರೆತ ಏಕತ್ವವಾದ
ಭಾವನೆ ಬೆಳೆದಂತೆ ಹೊಸಕ್ಷೇತ್ರ ದೊರೆಯುತ್ತದೆ; ಪ್ರಕೃತಿಯ ರಹಸ್ಯವನ್ನೆಳೆಯುವ ಪ್ರಯತ್ನ ನಡೆ
ಯುತ್ತದೆ; ವಿಚಾರಬುದ್ದಿ ಆರಂಭವಾಗುತ್ತದೆ. ಈ ಪ್ರಗತಿಯ ಹೊತ್ತಿಗೆ ಶತಮಾನಗಳು ಕಳೆಯು
ತ್ತವೆ. ಅಷ್ಟು ಹೊತ್ತಿಗೆ ವೇದಗಳ ಕಾಲ ಮುಗಿದು (ವೇದ+ಅಂತ = ಕೊನೆ) ವೇದಾಂತ ಅಥವ
ಉಪನಿಷದ್ದರ್ಶನಕ್ಕೆ ಬರುತ್ತೇವೆ.
ಮಾನವಕುಲಕ್ಕೆ ದೊರೆತ ಪ್ರಥಮಗ್ರಂಥವೆಂದರೆ ವೇದಗಳಲ್ಲಿ ಮೊದಲನೆಯದಾದ ಋಗ್ವೇದ.
ಅದರಲ್ಲಿ ಮಾನವನ ಮನಸ್ಸಿನ ಮೊದಲ ಭಾವನಾತರಂಗವನ್ನು, ಕಾವ್ಯಜ್ಯೋತಿಯನ್ನು, ಪ್ರಕೃತಿ
ಸೌಂದರ್ಯ ಮತ್ತು ರಹಸ್ಯಗಳ ವಿಷಯವಾಗಿ ಮನೋಮುಗ್ಧತೆಯನ್ನು ಕಾಣುತ್ತೇವೆ. ಈ
ಸನಾತನ ಗೀತಗಳಲ್ಲಿ ಡಾ. ಮ್ಯಾಕ್ನಿಕಲ್ ಹೇಳುವಂತೆ "ಸಾವಿರಾರು ವರ್ಷಗಳ ಹಿಂದೆ, ಈ ನಮ್ಮ
ಪ್ರಪಂಚದ ಉದ್ದೇಶವೇನು, ಅದರಲ್ಲಿ ಮನುಷ್ಯನ ಜೀವನದ ಉದ್ದೇಶವೇನು ಎಂಬ ಗುರಿಯನ್ನು
ತಿಳಿಯಹೊರಟ ಜನರ ಧೀರೋದಾತ್ತ ಸಾಹಸದ ಕತೆಗಳ ಬೇರುಗಳು ಇಲ್ಲಿ ಇವೆ. ಇಂಡಿಯ ಆ
ದಾರಿಯಲ್ಲಿ ಒಂದೇ ಸಮನೆ ನಡೆಯುತ್ತ ಬಂದಿದೆ” ಎಂದಿದಾನೆ.
ಆದರೂ ಋಗ್ವೇದದ ಮೊದಲಲ್ಲಿಯೇ ಸಿಂಧೂಕಣಿವೆಯ ನಾಗರಿಕತೆ, ಮೆಸೊಪೊಟೇಮಿಯ
ಮತ್ತು ಇತರ ನಾಗರಿಕತೆಗಳು ಬೆಳೆದು ನಾಗರಿಕ ಜೀವನ ನಡೆಸಿ ನಾಗರಿಕ ಭಾವನೆಗಳನ್ನು ಹರಡಿ
ಯುಗಾಂತರಗಳಾಗಿದ್ದವು. ಆದ್ದರಿಂದ ಋಗ್ವೇದದಲ್ಲಿನ " ಋಷಿಗಳಿಗೆ, ನಮ್ಮ ಪೂರ್ವಜರಿಗೆ,
ಪ್ರಥಮ ಮಾರ್ಗದರ್ಶಕರಿಗೆ ” ಎಂಬ ಅರ್ಪಣೆ ಬಹಳ ಉಚಿತವಿದೆ.
ರವೀಂದ್ರನಾಥ ಠಾಕೂರರು ಈ ವೇದಗೀತಗಳನ್ನು ವರ್ಣಿಸುತ್ತ "ಇವು ಜೀವನದಲ್ಲಿನ ಆಶ್ಚರ್ಯ
ಮತ್ತು ಭಯಗಳಿಗೆ ಆಗಿನ ಜನತೆ ತೋರಿದ ಸಾಮೂಹಿಕ ಪ್ರತಿಕ್ರಿಯೆಯ ಕಾವ್ಯಸಾಹಿತ್ಯ : ನಾಗರಿ
ಕತೆಯ ಮುಂಬೆಳಗಿನಲ್ಲೇ ಜೀವನ ಸಹಜವಾದ ಅನಂತ ರಹಸ್ಯವನ್ನು ಕಂಡ ಸಾಹಸಿಗಳ, ಸರಳ
ಜೀವಿಗಳ, ಎಚ್ಚತ್ತ ಜನರ ಭಾವನೆಗಳು; ಪಂಚ ಭೂತಗಳಿಗೆ, ಪ್ರತಿಯೊಂದು ಪ್ರಕೃತಿ ಶಕ್ತಿಗೆ
ಜೀವತ್ವವನ್ನು ಆರೋಪಿಸಿದ ಅವರ ನಿಷ್ಕಪಟ ಭಕ್ತಿ-ಧೀರರ, ಸಾಹಸಿಗಳ, ಸುಖಜೀವಿಗಳ
ಭಕ್ತಿ, ಜೀವನದ ರಹಸ್ಯಭಾವನೆ ಜೀವನಕ್ಕೊಂದು ಮೋಹಶಕ್ತಿಯನ್ನೇ ಕೊಟ್ಟಿತು ; ದಿಗ್ಭ್ರಮೆ
ಯಿಂದ ಜೀವನ ಹೊರೆಯಾಗಲಿಲ್ಲ. ಆಗಾಗ 'ಜ್ಞಾನಿಗಳು ಬೇರೆ ಬೇರೆ ಹೆಸರಿನಿಂದ ಕರೆದರೂ
ಸತ್ಯವು ಒಂದೇ' ಎಂದು ಆತ್ಮಾನುಭವದಿಂದ ಹೊರಟ ಕಿಡಿಗಳು ಆಗಾಗ ಕಂಡರೂ, ಆ ಭಕ್ತಿ
ವಾಸ್ತವ ವಿಶ್ವದ ವಿರೋಧ ವೈವಿಧ್ಯಗಳ ಚಿಂತೆಯಲ್ಲಿ ದಿಗ್ಭ್ರಮೆ ಹೊಂದದ ಜನಾಂಗದ ಭಕ್ತಿ"
ಎಂದಿದ್ದಾರೆ.
ಆದರೆ ಆ ಯೋಚನಾಪರಂಪರೆ ಕ್ರಮೇಣ ಬೆಳೆದು ಬಂದಿತು. ಕೊನೆಗೆ ವೇದಕರ್ತೃ "ಎಲೈ
ಭಕ್ತಿಯೇ, ನಮಗೆ ನಂಬಿಕೆಯನ್ನು ನೀಡು" ಎಂದಿದ್ದಾನೆ. 'ಕಾಣದ ದೇವರಿಗೆ' ಮ್ಯಾಕ್ಸ್ ಮುಲ್ಲರ್
ಎಂದು ಕರೆದಿರುವ ಸೃಷ್ಟಿ ಗೀತೆಯಲ್ಲಿ ಗೂಢವಾದ ಪ್ರಶ್ನೆಗಳನ್ನು ತುಂಬಿದ್ದಾನೆ.
೧. ಆಗ ಅಲ್ಲಿ ಇಲ್ಲದುದೂ ಇರಲಿಲ್ಲ, ಇದ್ದುದೂ ಇರಲಿಲ್ಲ. ವಾಯುಮಂಡಲವೂ ಇರಲಿಲ್ಲ.
ಅದರಾಚೆ ನಭೋಮಂಡಲವೂ ಇರಲಿಲ್ಲ. ಮುಚ್ಚಿರುವುದೇನು, ಎಲ್ಲಿ? ಆಶ್ರಯ
ದಾತನಾರು? ಅಳೆಯಲಾರದ ಆಳದ ಜಲವಿತ್ತೇನು?
೨.ಸಾವು ಇರಲಿಲ್ಲ, ಅಮೃತತ್ವವೂ ಇರಲಿಲ್ಲ. ಹಗಲು ರಾತ್ರಿಗಳ ಭೇದವೂ ಇರಲಿಲ್ಲ.
ಶೂನ್ಯ ಪ್ರಾಣವಿದ್ದರೂ, ಒಂದು ವಸ್ತು ಮಾತ್ರ, ಸಹಜ ಸ್ವಭಾವದಿಂದ ಉಸಿರಾಡುತ್ತಿತ್ತು.
ಅದು ಹೊರತು ಬೇರೊ೦ದಿರಲಿಲ್ಲ.
೩. ಕತ್ತಲು. ಕತ್ತಲಿನ ಮರೆಯಲ್ಲಿ ಎಲ್ಲವೂ ಅಭೇದ್ಯ ಪ್ರಳಯ. ಇದ್ದುದೆಲ್ಲವೂ ಶೂನ್ಯ,
ನಿರಾಕಾರ. ಅಗ್ನಿಶಕ್ತಿಯ ಮಹತ್ತಿನಿಂದ ವ್ಯಕ್ತಿಯ ಉತ್ಪತ್ತಿಯಾಯಿತು.
೪.ಆಮೇಲೆ, ಮೊದಲು ಹುಟ್ಟದ್ದು ಆಶೆ. ಆಶೆಯೇ ಬೀಜಮೂಲ, ಮತ್ತು ಉತ್ಸಾಹದ,