ಈ ಪುಟವನ್ನು ಪ್ರಕಟಿಸಲಾಗಿದೆ

೬೨

ಭಾರತ ದರ್ಶನ

ಲೇಖಕರು ಭಾರತೀಯರು ಪರಲೋಕಾಸಕ್ತರು ಎಂಬ ಭಾವನೆಯನ್ನು ಪುಷ್ಟಿಕರಿಸಿದ್ದಾರೆ. ಎಲ್ಲ ದೇಶಗಳಲ್ಲಿ ಬಡವರು ಮತ್ತು ಅದೃಷ್ಟ ಹೀನರು ಕ್ರಾಂತಿ ಪುರುಷರಾಗದಿದ್ದರೆ ಸ್ವಲ್ಪ ಮಟ್ಟಿಗಾದರೂ ಪರಲೋಕಸಾಧಕರಾಗಲೇ ಬೇಕು, ಕಾರಣ ಈ ಪ್ರಪಂಚದಲ್ಲಿ ಅವರಿಗೆ ಸ್ಥಾನವಿಲ್ಲ. ಪರದಾಸ್ಯ ದಲ್ಲಿರುವ ಜನರ ಗತಿಯೂ ಅಷ್ಟೇ,

ಮನುಷ್ಯ ಪ್ರಾಪ್ತ ವಯಸ್ಕನಾಗುತ್ತ ಬಂದಂತೆ ಬಾಹ್ಯ ವಾಸ್ತವಿಕ ಪ್ರಪಂಚದಲ್ಲಿ ಮಾತ್ರ ನಗ್ನ ನಾಗುವುದಿಲ್ಲ ; ತೃಪ್ತಿಯನ್ನೂ ಪಡೆಯಲಾರ, ಯಾವುದಾದರೊಂದು ಒಳ ಅರ್ಥ, ಮಾನಸಿಕ ಆತ್ಮ ತೃಪ್ತಿ ಬೇಕು. ಜನಾಂಗಗಳು, ನಾಗರಿಕತೆಗಳು ಪ್ರಬುದ್ಧಮಾನಕ್ಕೆ ಬಂದು, ಹಳತಾದ ಮೇಲೆ ಅವುಗಳಿಗೂ ಅದೇ ರೀತಿ ತೃಪ್ತಿ ಬೇಕು. ಪ್ರತಿಯೊಂದು ನಾಗರಿಕತೆಗೆ, ಪ್ರತಿಯೊಂದು ಜನಾಂಗಕ್ಕೆ ಈ ರೀತಿ ಬಾಹ್ಯ ಜೀವನ, ಅಂತರಂಗಜೀವನ ಎಂದು ಎರಡು ಸಮಾನಾಂತರ ವಾಹಿನಿಗಳಿವೆ. ಎಲ್ಲಿಯ ವರೆಗೆ ಎರಡೂ ಮಿಳಿತವಾಗಿ ಅಥವ ಸಮಾಪವರ್ತಿಯಾಗಿ ಪ್ರವಹಿಸುತ್ತವೆಯೋ ಅಲ್ಲಿಯವರೆಗೆ ಒಂದು ಸಮತೂಕ, ಚಿರಸ್ಥಾಯಿತ್ವ ಇರುತ್ತದೆ. ಅವು ದೂರವಾದೊಡನೆ ಮನಃಕ್ಷೇಶದ, ಆತ್ಮನಾಶದ ಹೋರಾಟ ಆರಂಭವಾಗುತ್ತದೆ.

ಋಗೈದ ಸಂಹಿತೆಗಳ ಕಾಲದಿಂದ ಜೀವನ ಮತ್ತು ಭಾವನೆಗಳ ಈ ಎರಡು ಲಹರಿಗಳ ಬೆಳ ವಣಿಗೆಯನ್ನೂ ಕಾಣುತ್ತೇವೆ. ಮೊದಮೊದಲಿನ ಸೂಕ್ತಗಳಲ್ಲಿ ಬಾಹ್ಯ ಪ್ರಪಂಚ, ಪ್ರಕೃತಿಯ ಸೌಂದಯ್ಯ ಮತ್ತು ರಹಸ್ಯ, ಜೀವನೋತ್ಸಾಹ ಮತ್ತು ಸತ್ವ ಇವುಗಳನ್ನೆ ಕಾಣುತ್ತೇವೆ. ಗ್ರೀಕರ ಒಲಿಂಪಸ್ ದೇವತೆಗಳಂತೆ ನಮ್ಮ ದೇವರುಗಳೂ ದೇವತೆಗಳೂ ತುಂಬ ಮಾನವಸಹಜ ಸ್ವಭಾವದವರು. ಮಾನವ ಸ್ತ್ರೀ ಪುರುಷರ ಸಂಗಡ ಬಂದು ಬೆರತು ಕೊಳ್ಳು ತ್ತಾರೆ. ಇಬ್ಬರ ಮಧ್ಯೆ ನಿರ್ದಿಷ್ಟ ಭೇದಭಾವನೆಯ ಗೆರೆ ಇಲ್ಲ. ಅನಂತರ ವಿಚಾರಶಕ್ತಿ ಮೂಡಿ, ಆಲೋಚನೆಗಾರಂಭವಾಗಿ ಬೇರೊಂದು ಪ್ರಪಂಚದ ರಹಸ್ಯ ಹಿರಿದಾಗುತ್ತದೆ. ಜೀವನವೇನೋ ಸಂತುಷ್ಟ ವಾಗಿ ಮುಂದುವರಿಯುತ್ತದೆ. ಆದರೆ ಅದರ ಬಾಹ್ಯ ಪ್ರಕಾಶನಗಳ ಕಡೆಗೆ ಒಂದು ತಾತ್ಸಾರಭಾವ ಮೂಡುತ್ತದೆ. ದೃಷ್ಟಿ ಅದೃಶ್ಯ ಪ್ರಪಂಚದೆಡೆ ತಿರುಗಿದಂತೆ ಸಾಧಾರಣವಾಗಿ ಕಂಡು, ಕೇಳಿ, ಅನುಭವಿಸಲಾಗದ ರೀತಿಯ ಒಂದು ಔದಾಸೀನ್ಯಭಾವನೆ ಜೀವನದ ಕಡೆ ಬೆಳೆಯುತ್ತದೆ. ಇವೆಲ್ಲದರ ಉದ್ದೇಶವೇನು ? ಪ್ರಪಂಚದ ಗುರಿ ಏನು ? ಗುರಿ ಇದ್ದರೆ ಮನುಷ್ಯ ಜೀವನವನ್ನು ಅದರೊಂದಿಗೆ ಸಮರಸಗೊಳಿಸುವುದು ಹೇಗೆ ? ವ್ಯಕ್ತ ಅವ್ಯಕ್ತ ಪ್ರಪಂಚಗಳಿಗೆ ಒಂದು ಸಮರಸದ ಸಂಬಂಧ ಕಲ್ಪಿಸಲು ಸಾಧ್ಯವೆ? ಆ ರೀತಿ ಜೀವನಕ್ಕೊಂದು ಸರಿಯಾದ ಮಾರ್ಗ ಕಂಡುಹಿಡಿಯಲು ಸಾಧ್ಯವೆ ?

ಈ ರೀತಿ ಇತರ ದೇಶಗಳಲ್ಲಿ ಕಂಡು ಬರುವಂತೆ ಇಂಡಿಯದಲ್ಲಿ ಸಹ ಭಾವನೆ ಮತ್ತು ಕಾವ್ಯಗಳ ದ್ವಂದ್ವ ವಾಹಿನಿಯನ್ನು ಜೀವನ ಸ್ವೀಕಾರ ಮತ್ತು ಜೀವನ ವಿಮುಖತೆಗಳನ್ನು - ಕಾಲ ಬದಲಾಯಿಸಿ ದಂತೆ ಒಂದು ಬಾರಿ ಜೀವನ ಸ್ವೀಕಾರಕ್ಕೆ ಪ್ರಾಮುಖ್ಯತೆ ಇನ್ನೊ೦ದುಬಾರಿ ಜೀವನ ವಿಮುಖತೆಗೆ ಪ್ರಾಮುಖ್ಯತೆ, ಈ ರೀತಿ ಒಟ್ಟಿಗೆ ಹರಿಯುವದನ್ನು ಕಾಣಬಹುದು. ಆದರೂ ಈ ಸಂಸ್ಕೃತಿಯ ಮೂಲ ಹಿನ್ನೆಲೆ ಪರಲೋಕದಲ್ಲಿ ; ಇಹಲೋಕದ ನಿವ್ರಯೋಜಕತೆಯಲ್ಲಿ, ದಾರ್ಶನಿಕ ಭಾಷೆಯಲ್ಲಿ ಪ್ರಪಂಚವೆಲ್ಲ ಮಾಯೆ ಎಂದಾಗ ಆ ಭಾವನೆ ಸಹ ನಿರಪೇಕ್ಷವಲ್ಲ. (ಪ್ಲೇಟೋನ ಸತ್ಯತೆಯ ನೆರಳಿ ನಂತೆ ಅದು) ಅಂತಿಮ ಸತ್ಯ ಎಂಬುದರ ಸಾಪೇಕ್ಷ ಭಾವನೆ ಮಾತ್ರ ಇದ್ದಂತೆ ಪ್ರಪಂಚವನ್ನು ಅಂಗೀ ಕರಿಸಿ, ಅದರ ಜೀವನ ನಡೆಸಿ, ಅದರ ನಾನಾ ಸೌಂದರ್ಯಾನುಭವವನ್ನು ಪಡೆಯಿತು. ತನ್ನ ಶಾಖೋಪ ಶಾಖೆಗಳಾದ ಅನೇಕ ಮತಗಳಲ್ಲಿ ಕಂಡು ಬರುವಂತೆ ಪ್ರಾಯಶಃ ಸೆಮಿಟಿಕ್ ಸಂಸ್ಕೃತಿಯೂ ಮತ್ತು ಆರಂಭ ದಿನಗಳ ಕೈಸ್ತ ಮತವೂ ಖಂಡಿತವಾಗಿಯೂ ಹೆಚ್ಚು ಪರೋಕ್ಷ ಮಾರ್ಗಿಗಳಾಗಿದ್ದವು. ಟ. ಇ. ಲಾರೆನ್ಸ್ ಹೇಳುವಂತೆ “ ಉಳಿದ ಅಥವ ಅಳಿದ ಎಲ್ಲ ಸೆಮಿಟಿಕ್ ಮತಗಳಲ್ಲಿದ್ದ ಸಾಮಾನ್ಯ ತಳಹದಿ ಎಂದರೆ ಪರಲೋಕ ಚಿಂತನೆ”. ಇದರಿಂದ ಸ್ವಚ್ಛಾ ಪ್ರವರ್ತನೆಗೆ ಇಲ್ಲವೆ ಆತ್ಮನಿಗ್ರಹಕ್ಕೆ ಎಡೆಯಾಯಿತು.