ಈ ಪುಟವನ್ನು ಪ್ರಕಟಿಸಲಾಗಿದೆ
೬೬
ಭಾರತ ದರ್ಶನ

ಭಾರತೀಯರು ವಿಶ್ಲೇಷಣ ರೀತಿಯಲ್ಲಿ ಬಹು ಚತುರರು. ತಮ್ಮ ಭಾವನೆಗಳನ್ನು, ಆಲೋಚನೆ ಗಳನ್ನು, ಜೀವನ ಕಾರ್ಯಗಳನ್ನು ವಿಂಗಡಿಸುವದರಲ್ಲಿ ತೀವ್ರ ಆಸಕ್ತರು, ಸಮಾಜವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಲ್ಲದೆ ವ್ಯಕ್ತಿ ಜೀವವನ್ನೂ ನಾಲ್ಕು ಭಾಗಗಳಾಗಿ ಮಾಡಿದರು. ಮೊದಲ ನೆಯದು ಬಾಲ್ಯ, ಬೆಳವಣಿಗೆ, ಜ್ಞಾನಾರ್ಜನೆ, ಆತ್ಮ ಶಿಕ್ಷಣ, ಆತ್ಮ ಸಂಯಮ ಮತ್ತು ಬ್ರಹ್ಮಚಯ್ಯದ ಶಿಷ್ಯವೃತ್ತಿ. ಎರಡನೆಯದು, ಪ್ರಪಂಚಾನುಭವದ ಗೃಹಸ್ಥಾಶ್ರಮ. ಮೂರನೆಯದು, ಸಮದೃಷ್ಟಿ ಯಿಂದ ಪ್ರಪಂಚ ಪರಿಜ್ಞಾನವನ್ನು ಪಡೆದು ನಿಷ್ಕಾಮ ಕರ್ಮದಿಂದ ಸಾರ್ವಜನಿಕ ಸೇವೆಯ ವಾನ ಪ್ರಸ್ಥ, ನಾಲ್ಕನೆಯದು ಪ್ರಪಂಚ ವಿಷಯಗಳಿಗೆ ದೂರವಾಗಿ ವಿರಕ್ತ ಜೀವನ ನಡೆಸುವ ಸಂನ್ಯಾಸ. ಈ ರೀತಿ ಮಾನವ ಸ್ವಭಾವ ಸಹಜವಾದ ಪೂರ್ಣ ಜೀವನಾಸಕ್ತಿ ಮತ್ತು ಜೀವನ ನಿರಸನ ದೃಷ್ಟಿ, ಎರಡನ್ನೂ ಜೀವನ ಕ್ರಮದಲ್ಲಿ ಸಮಂಜಸಗೊಳಿಸಿದರು.

ಚೀನಾದಂತೆ ಇಂಡಿಯದಲ್ಲಿ ಸಹ ವಿದ್ಯೆ ಮತ್ತು ಪಾಂಡಿತ್ಯಕ್ಕೆ ಬಹಳ ಗೌರವವಿತ್ತು. ಪಂಡಿತ ನಾದವನು ಮಹಾಜ್ಞಾನಿ ಮತ್ತು ಸದ್ಗುಣಿ ಎಂಬ ಭಾವನೆಯಿತ್ತು. ಜ್ಞಾನಿಗಳ ಎದುರಿನಲ್ಲಿ ಸಾಮಾ ಟರೂ, ಮಹಾವೀರರೂ ಶರಣಾಗತರಾಗುತ್ತಿದ್ದರು. ಪ್ರಾಚೀನ ಭಾರತೀಯ ಸಿದ್ದಾಂತದಂತೆ ಅಧಿಕಾರ ನಡೆಸತಕ್ಕವರಲ್ಲಿ ಸಂಪೂರ್ಣ ನಿಸ್ವಾರ್ಥತೆ ಅಸಾಧ್ಯ. ಅದರ ವೈಯಕ್ತಿಕ ಹಿತಾಹಿತಗಳು, ಮತ್ತು ಒಲವುಗಳಿಗೂ ಸಾರ್ವಜನಿಕ ಕರ್ತವ್ಯಕ್ಕೂ ಘರ್ಷಣೆಗಳಾಗುವ ಸಂಭವವಿತ್ತು. ಆದ್ದರಿ೦ದ ನೈತಿಕ ಉನ್ನತಿಯನ್ನು ಕಾಪಾಡಿಕೊಂಡು ಮೌಲ್ಯನಿರ್ಧಾರ ಮಾಡುವ ಕಾರ್ಯವನ್ನು ಜೀವನದಲ್ಲಿ ಯಾವ ಆಶೆ ಪ್ರತ್ಯಾಶೆಗಳು, ದಾಕ್ಷಿಣ್ಯಗಳು, ಯೋಚನೆಗಳೂ ಇಲ್ಲದೆ, ಒಂದು ನಿರ್ಲಿಪ್ತ ಭಾವನೆಯಿಂದ ಪ್ರಪಂಚದ ಸಮಸ್ಯೆಗಳನ್ನು ನೋಡಬಲ್ಲ ಸ್ವತಂತ್ರ ತತ್ವಜ್ಞಾನಿಗಳಿಗೆ ಒಪ್ಪಿಸಲಾಗಿತ್ತು. ಈ ಜ್ಞಾನ ಸಾಧಕರ, ತತ್ವ ಜ್ಞಾನಿಗಳ ಪಂಗಡಕ್ಕೆ ಸಮಾಜ ಜೀವನದಲ್ಲಿ ಉನ್ನತ ಸ್ಥಾನವಿತ್ತು. ಅವರು ಸರ್ವಮಾನ್ಯರಾಗಿ, ಪೂಜ್ಯರಾಗಿದ್ದರು. ಅವರ ತರುವಾಯ ಕರ್ಮವೀರರು, ರಾಷ್ಟ್ರಪತಿಗಳು, ಮಹಾ ಯೋಧರುಗಳು ; ಅವರು ಎಷ್ಟೇ ಶಕ್ತಿವಂತರಾಗಿದ್ದರೂ ತತ್ವಜ್ಞಾನಿಗಳಿಗಿದ್ದ ಗೌರವ ಅವರಿಗಿರಲಿಲ್ಲ. ಶ್ರೀಮಂತಿಕೆಗೆ ಇನ್ನೂ ಕಡಮೆ ಗೌರವ, ಯೋಧರಾದ ಕ್ಷತ್ರಿಯರಿಗೆ ಅತ್ಯುನ್ನತ ಗೌರವ ಸಲ್ಲದಿದ್ದರೂ ತುಂಬ ಮರ್ಯಾದೆ ಇತ್ತು. ಚೀನಾದಂತೆ ಭಾರತದಲ್ಲಿ ಅವರನ್ನು ನಿಕೃಷ್ಟರೆಂದು ಕಾಣುತ್ತಿರಲಿಲ್ಲ.

ಕ್ರೈಸ್ತ ಧರ್ಮದ ಪ್ರಾಬಲ್ಯದ ಕಾಲದಲ್ಲಿ ರೋಮನ್ ಕ್ರೈಸ್ತ ಧರ್ಮವು ತಾತ್ವಿಕ, ಧಾರ್ಮಿಕ, ನೈತಿಕ ಮುಂದಾಳುತನವನ್ನು ವಹಿಸಿಕೊಂಡು, ರಾಷ್ಟಧರ್ಮದ ಸಾಮಾನ್ಯ ನಿಯಮಗಳನ್ನು ಸಹ ವಿಧಿಸುತ್ತಿದ್ದಾಗ, ಮಧ್ಯಯುಗದ ಯೂರೋಪಿನಲ್ಲಿ ಸ್ವಲ್ಪ ಹೆಚ್ಚು ಕಡಮೆ ಇದೇ ಬಗೆಯ ಸಿದ್ದಾಂತ ಅನುಸರಣೆಯಲ್ಲಿತ್ತು. ಕಾರ್ಯತಃ ಪ್ರಾಪಂಚಿಕ ಅಧಿಕಾರದಲ್ಲಿ ರೋಮಿಗೆ ತುಂಬ ಆಸಕ್ತಿ ಇತ್ತು. ಕ್ರೈಸ್ತ ಗುರುಗಳು ಅಧಿಕಾರವೆಲ್ಲ ತಮ್ಮದೆನ್ನು ತ್ತಿದ್ದರು. ಭಾರತದಲ್ಲಿ, ಬ್ರಾಹ್ಮಣರು ಜ್ಞಾನಿಗಳನ್ನು, ದಾರ್ಶನಿಕರನ್ನು ಸಮಾಜಸೇವೆಗೆ ಕೊಡುವುದರ ಜೊತೆಗೆ ತಮ್ಮ ಅಸ್ತಿತ್ವದ ವೈಶಿಷ್ಟವನ್ನು ಕಾಪಾಡಿ ಕೊಳ್ಳಲು ಉದ್ಯುಕ್ತರಾದರು. ಒಂದು ರೂಢಮೂಲ ಶಕ್ತಿಯುತ ಪೌರೋಹಿತ್ಯದ ಪಂಗಡವಾದರು. ಆದರೂ ಈ ವರ್ಣಾಶ್ರಮ ಧರ್ಮವು ವಿವಿಧ ಪ್ರಮಾಣದಲ್ಲಿ ಭಾರತೀಯ ಜೀವನದ ಮೇಲೆ ಬಹಳ ಪರಿಣಾಮಮಾಡಿದೆ. ಜ್ಞಾನಿಯಾಗಿ, ದಾನಿಯಾಗಿ ಸದ್ದು ಣಿಯಾಗಿ, ಆತ್ಮಸಂಯಮಿಯಾಗಿ, ಪರರಿಗಾಗಿ ಆತ್ಮತ್ಯಾಗ ಮಾಡಲು ಸಿದ್ಧನಾಗಿ ಇರುವುದೇ ಮಾನವ ಜೀವನದ ಆದರ್ಶದ್ಧೇಯ ಎಂಬ ಭಾವನೆಗೆ ಕಾರಣವಾಗಿದೆ. ಎಲ್ಲ ಸುರಕ್ಷಿತ, ಪ್ರತಿಷ್ಠಿತ ಪಂಗಡಗಳಂತೆ ಬ್ರಾಹ್ಮಣರಲ್ಲಿ ಸಹ ಅನೇಕ ದುರ್ಗುಣಗಳು ಕಂಡುಬಂದಿವೆ. ಅನೇಕರಲ್ಲಿ ವಿದ್ಯೆಯೂ ಇಲ್ಲ ಗುಣವೂ ಇಲ್ಲ, ಆದರೂ ಜನತೆ ಅವರಿಗೆ ವಿಶೇಷ ಗೌರವವನ್ನು ತೋರಿಸುತ್ತಿದೆ. ಅದಕ್ಕೆ ಕಾರಣ ಅವರ ಅಧಿಕಾರ ಶಕ್ತಿಯಲ್ಲ, ಐಶ್ವರವೂ ಅಲ್ಲ. ಆದರೆ ಮೇಲಿಂದ ಮೇಲೆ ಮಹಾ ಮೇಧಾವಿಗಳು ಅವರಲ್ಲಿ ಅವತರಿಸಿರುವುದರಿಂದ ಮತ್ತು ಲೋಕಕಲ್ಯಾಣಕ್ಕಾಗಿ ಅವರು ಮಾಡಿರುವ ಸಾರ್ವಜನಿಕ ಸೇವೆ ಮತ್ತು ಆತ್ಮತ್ಯಾಗವು ಅಪಾರವಾಗಿರುವುದರಿಂದ, ಕಾಲಕಾಲಕ್ಕೆ ಜನ್ಮತಾಳಿದ ಮಹಾ ವಿಭೂತಿಗಳ ಮಾರ್ಗಗಳನ್ನು ಇಡೀ