ಈ ಪುಟವನ್ನು ಪ್ರಕಟಿಸಲಾಗಿದೆ
ಭಾರತ ಸಂಶೋಧನೆ
೭೫

ಪ್ರವೃತ್ತಿಗೆ ಒಂದು ಸೆರೆಮನೆಯಾಯಿತು : ಅದರಿಂದ ಬಹು ಕಷ್ಟಕ್ಕೆ ಸಿಕ್ಕಿದ್ದ ಸಾಮಾನ್ಯ ಕೀಳು ಜನರಿಗೆ ಮಾತ್ರವಲ್ಲ, ಆದರೆ ಉತ್ತಮ ವರ್ಗದವರಿಗೆ ಸಹ. ನಮ್ಮ ಇತಿಹಾಸ ಪರಂಪರೆಯ ಎಲ್ಲ ಕಾಲದಲ್ಲಿ ಅದೊಂದು ದೊಡ್ಡ ದೋಷ, ಜಾತಿಮತಗಳ ಕಾಠಿಣ್ಯತೆಯು ಬೆಳೆದು ಬಂದಂತೆ ಮನಸ್ಸಿನ ಕಾಠಿಣ್ಯತೆಯೂ ಬೆಳೆದು ಜನಾಂಗದ ಸೃಷ್ಟಿ ಶಕ್ತಿ ಅಡಗಿಹೋಯಿತು,

ಇನ್ನೊಂದು ವಿಚಿತ್ರ ಸಂಗತಿ ಎದ್ದು ಕಾಣುತ್ತದೆ. ಎಲ್ಲ ಬಗೆಯ ನಂಬಿಕೆ ಮತ್ತು ಸಂಪ್ರದಾಯ ಗಳು, ಎಲ್ಲ ಮತಾಂಧತೆ ಮತ್ತು ಮೌಡ್ಯಕ್ಕೆ ದೊರೆತ ವಿಶೇಷ ಮನ್ನಣೆಯಿಂದ ಹಾನಿಯೂ ಆಯಿತು. ಅದರಿಂದ ಅನೇಕ ದುಷ್ಟ ಪದ್ಧತಿಗಳು ಉಳಿಯಲು ಸಾಧ್ಯವಾಯಿತು. ಪ್ರಗತಿ ವಿರುದ್ಧವಾದ ಅನೇಕ ಸಂಪ್ರದಾಯಗಳ ಭಾರವನ್ನು ಕಿತ್ತೊಗೆಯಲು ಜನತೆಗೆ ಸಾಧ್ಯವಾಗಲಿಲ್ಲ. ಬೆಳೆಯುತ್ತಿದ್ದ ಪುರೋಹಿ ತರ ಪಂಗಡ ಈ ಸನ್ನಿವೇಶವನ್ನು ತಮ್ಮ ಸ್ವಾರ್ಥಕ್ಕೆ ದುರುಪಯೋಗ ಪಡಿಸಿಕೊಂಡು ಜನತೆಯ ಮೌಡ್ಯದ ತಳಹದಿಯ ಮೇಲೆ ತಮ್ಮ ಬಲವಾದ ಸ್ವಾರ್ಥದ ಕೋಟೆಯನ್ನು ಕಟ್ಟಿದರು. ಆದರೆ ಈ ಪುರೋಹಿತವರ್ಗ ಕ್ರೈಸ್ತ ಮಠದ ಕೆಲವು ಪಂಗಡಗಳ ಪ್ರಾಬಲ್ಯವನ್ನು ಎಂದೂ ಪಡೆಯಲಿಲ್ಲ, ಏಕೆಂದರೆ ಆ ಪದ್ಧತಿಗಳನ್ನು ಅನೇಕ ಧರ್ಮಸ್ಥಾಪಕರು ತೀವ್ರವಾಗಿ ಖಂಡಿಸಿದ್ದಾರೆ ; ಮತ್ತು ಬೇರೆ ಧರ್ಮವನ್ನು ಅವಲಂಬಿಸಲು ಅವಕಾಶವೂ ಇತ್ತು. ಆದರೆ ಸಾಮಾನ್ಯ ಜನರನ್ನು ಮರುಳುಮಾಡಿ ಸ್ವ ಪ್ರಯೋಜನ ಪಡೆಯಲು ತಕ್ಕಷ್ಟು ಶಕ್ತಿಯುತವಾಗಿತ್ತು.

ಈ ಸ್ವತಂತ್ರ ವಿಚಾರ ಮತ್ತು ಮತಾಂಧತೆ ಒಟ್ಟಿಗೆ ಜೊತೆಯಲ್ಲೇ ಉಳಿದುಬಂದವು ; ಅವುಗ ಳಿಂದ ವಿದ್ವತ್ತು ಮತ್ತು ಮತನಿರ್ಬಂಧದ ಆಚಾರಗಳು ಬೆಳೆದವು. ಯಾವಾಗಲೂ ಪ್ರಾಚೀನ ಗ್ರಂಥ ಗಳನ್ನೆ ಆಧಾರವಾಗಿ ಎತ್ತಿ ತೋರಿಸುತ್ತಿದ್ದರು. ಆದರೆ ವ್ಯತ್ಯಸ್ತ ಪರಿಸ್ಥಿತಿಗನುಗುಣವಾಗಿ ಅವುಗಳ ಸತ್ಯಾರ್ಥ ವಿವರಣೆಗೆ ಪ್ರಯತ್ನ ಮಾಡಲಿಲ್ಲ. ನಿರ್ಮಾಣಶಕ್ತಿ ಮತ್ತು ಆತ್ಮಶಕ್ತಿ ಕುಂದಿತು ; ಪೂರ್ಣ ಜೀವನ ಮತ್ತು ಅರ್ಥದ ತಿರುಳೆಲ್ಲ ಹೋಗಿ ಹೊರಗಿನ ಚಿಪ್ಪು ಮಾತ್ರ ಉಳಿಯಿತು. ಅರವಿಂದ ಘೋಷರು “ ಉಪನಿಷತ್ಕಾಲದ, ಬುದ್ಧನ ಕಾಲದ ಅಥವ ಇತ್ತೀಚಿನ ಆದರ್ಶಯುಗದ ಪ್ರಾಚೀನ ಭಾರತೀಯ ಯಾವನಾದರೂ ಇಂದಿನ ಭಾರತಕ್ಕೆ ಬಂದು, ಹದಿನೈದು ಆಣೆ ಸತ್ವವನ್ನು ತ್ಯಾಜ್ಯ ಮಾಡಿ ಉಳಿದ ಪ್ರಾಚೀನತೆಯ ಬಾಹ್ಯರೂಪು, ತಿರುಳಿಲ್ಲದ ಕರಟ ಮತ್ತು ಚಿಂದಿಯಲ್ಲಿ ಮೆರೆಯುವ ಭಾರತೀ ಯರ ಇಂದಿನ ಜೀವನವನ್ನು ನೋಡಿದರೆ ಮತ್ತು ಮಾನಸಿಕ ದೌರ್ಬಲ್ಯ, ನಿಶ್ಚಲತೆ, ಪ್ರಗತಿಶೂನ್ಯ ಪುನರುಕ್ತಿ, ವಿಜ್ಞಾನದ ವಿರತಿ, ಕಲೆಯ ಬಹುಕಾಲದ ಬಂಜೆತನ ನಿರ್ಮಾಣಶಕ್ತಿಯ ಬಹುತರ ಬಲಹೀನತೆಯನ್ನು ನೋಡಿದರೆ ವಿಸ್ಮಿತರಾಗುತ್ತಾರೆ” ಎಂದಿದ್ದಾರೆ.

೧೧. ಚಾರ್ವಾಕಮತ

ಗ್ರೀಸ್, ಇಂಡಿಯ ಮತ್ತು ಇತರ ಕಡೆಗಳಲ್ಲಿ ಎಲ್ಲೆಲ್ಲ ಪ್ರಪಂಚದ ಪ್ರಾಚೀನ ಸಾಹಿತ್ಯ ನಮಗೆ ದೊರೆಯದೆ ಇರುವುದು ನಮ್ಮ ದೊಡ್ಡ ದುರದೃಷ್ಟ. ಈ ಗ್ರಂಥಗಳೆಲ್ಲ ಮೂಲತಃ ಭೂರ್ಜ ಪತ್ರ ಅಥವ ತಾಳೆಗರಿಯಲ್ಲಿ ಬರೆದವುಗಳಾಗಿ ಆ ಮೇಲೆ ಕಾಗದದಲ್ಲಿ ಬರೆದಿರಬೇಕಾದ್ದರಿಂದ ಪ್ರಾಯಶಃ ಈ ಪರಿಸ್ಥಿತಿ ಅನಿವಾರ್ಯ: ಗ್ರಂಥದ ಕೆಲವು ಪ್ರತಿಗಳು ಮಾತ್ರ ಇರುತ್ತಿದ್ದವು. ಅವು ಕಳೆದು ಹೋದರೆ, ಅಥವ ನಾಶವಾದರೆ ಇತರ ಗ್ರಂಥಗಳಲ್ಲಿನ ಉಲ್ಲೇಖನಗಳಿಂದ ಅಥವ ಅದರ ಉದಾಹರಣೆ ಗಳಿಂದ ಅದನ್ನು ಕಂಡು ಹಿಡಿಯಬೇಕಾಗಿತ್ತು. ಇಷ್ಟಾದರೂ ಸುಮಾರು ೫೦-೬೦ ಸಾವಿರ ಸಂಸ್ಕೃತ ಗ್ರಂಥಗಳ ಕರಡು ಪ್ರತಿಗಳು, ಅಥವ ಅವುಗಳ ಭಿನ್ನ ಪ್ರತಿಗಳು ದೊರೆತು, ಪಟ್ಟಿ ಯಾಗಿವೆ ; ಹೊಸ ಶೋಧನೆಗಳು ನಡೆಯುತ್ತಲೇ ಇವೆ. ಅನೇಕ ಪುರಾತನ ಭಾರತೀಯ ಗ್ರಂಥಗಳು ಭಾರತದಲ್ಲಿ ದೊರೆತೇ ಇಲ್ಲ. ಚೀನೀ ಭಾಷೆಯಲ್ಲೋ, ತಿಬೆಟ್ ಭಾಷೆಯಲ್ಲೂ ಅವುಗಳ ಅನುವಾದಗಳು ದೊರೆ ತಿವೆ. ಪ್ರಾಯಶಃ ಗುರುಪೀಠಗಳ, ಮಠಗಳ, ವಿದ್ವಾಂಸರುಗಳ ಪುಸ್ತಕಭಂಡಾರಗಳನ್ನು ಶೋಧಿಸಿ ದರೆ ಅನೇಕ ಉದ್ಧಂಥಗಳು ದೊರೆಯಬಹುದು. ಈ ಕೆಲಸ ಮತ್ತು ಹಸ್ತ ಪ್ರತಿಗಳನ್ನು