ಈ ಪುಟವನ್ನು ಪ್ರಕಟಿಸಲಾಗಿದೆ
ಭಾರತ ಸಂಶೋಧನೆ
೭೯

ನನ್ನ ಬಾಲ್ಯದಲ್ಲಿ ನಾನು ಮೊದಲು ಕೇಳಿದ ಕಥೆಗಳು ಇನ್ನೂ ಜ್ಞಾಪಕದಲ್ಲಿವೆ. ಯೂರೋಪಿ ನಲ್ಲಿ ಅಥವ ಅಮೆರಿಕದಲ್ಲಿ ಮಕ್ಕಳು ಕೇಳುವ ಅದ್ಭುತ ಅಥವ ಸಾಹಸದ ಕಥೆಗಳಂತೆ ನನಗೆ ನನ್ನ ತಾಯಿಯೋ ಅಥವ ಮನೆಯ ಬೇರೆ ಮುದುಕಿಯರೂ ಈ ಪುರಾಣ ಕಥೆಗಳನ್ನು ಹೇಳಿರಬೇಕು. ನನಗೆ ಅವುಗಳಲ್ಲಿ ಅದ್ಭುತವೂ ಇತ್ತು ಸಾಹಸವೂ ಇತ್ತು. ಮತ್ತು ಅವರು ಪ್ರತಿ ವರ್ಷವೂ ರಾಮಾ ಯಣ ಕಥೆಯನ್ನು ಆಡಿ ತೋರಿಸುತ್ತಿದ್ದ ಬಯಲಾಟಗಳನ್ನು ನೋಡಲು ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಅದನ್ನು ನೋಡಲು ಅಸಂಖ್ಯಾತ ಜನರು ನೆರೆಯುತ್ತಿದ್ದರು. ಮೆರವಣಿಗೆಯಲ್ಲಿ ಹೋಗುತ್ತಿದ್ದರು. ಸ್ವಲ್ಪ ಒರಟು ಕಾಣಬಹುದು. ಆದರೆ ಅದು ಜಾತ್ರೆ ಸಮಯ ಮತ್ತು ಕಥೆಯು ಎಲ್ಲರಿಗೂ ಬಾಯಿಪಾಠವಾಗಿತ್ತು. ಈ ರೀತಿ ಭಾರತೀಯ ಪುರಾಣ ಕಥೆ ಮತ್ತು ಪ್ರಾಚೀನ ಪರಂಪರೆ ನನ್ನ ಮನಸ್ಸಿನಲ್ಲಿ ನುಸುಳಿ ನನ್ನ ಮನೋಭಾವನೆಯ ಇತರ ವಸ್ತುಗಳೊಂದಿಗೆ ಎಲ್ಲ ವಿಧದಲ್ಲಿ ಬೆರೆತು ಹೋಯಿತು. ಕತೆ ಎಲ್ಲವೂ ವಾಸ್ತವಿಕಸತ್ಯ ಎಂದು ಈ ಕಥೆಗಳಿಗೆ ನಾನು ಬಹಳ ಮಹತ್ವ ಕೊಡ ಲಿಲ್ಲ. ಆದರೆ ಪಶ್ಚಿಮ ಏಷ್ಯ ಮತ್ತು ಯೂರೋಪ್ ವಿಶೇಷ ಲಾಭ ಪಡೆದಿರುವ ಪ್ರಾಣಿಗಳ ಕಥೆಗಳ ಖನಿಯಂತಿರುವ ಪಂಚತಂತ್ರ ಮತ್ತು ಅರೇಬಿರ್ಯ ನೈಟ್ಸ್ ಕಥೆಗಳು ಎಷ್ಟು ಕಾಲ್ಪನಿಕ ಸತ್ಯವೋ ಈ ಕಥೆಗಳು ಅಷ್ಟೇ ಸತ್ಯವೆಂದು ಕಂಡವು.* ನಾನು ದೊಡ್ಡವನಾದಂತೆ ಇತರ ಚಿತ್ರಗಳು ನನ್ನ ಚಿತ್ರ ಭಿತ್ತಿಯಲ್ಲಿ ಮನೆಮಾಡಿದವು. ಭಾರತೀಯ ಮತ್ತು ಯೂರೋಪಿಯನ್ ರಂಜಕ ಕಥೆಗಳು, ಗ್ರೀಕ್ ಪುರಾಣ ಕಥೆಗಳು ಆ ರ್ಕನ ಟೋನ್ ಕಥೆ, ಪಾತಾಳದಲ್ಲಿ ಪಾಪಚ್ಚಿಯ ಕಥೆ, ಅಕ್ಷರ್ ಬೀರ್ಬಲ್ ಕಥೆ, ಷರ್ ಲಾಕ್ ಹೋಮ್ಸ್, ಕಿಂಗ್ ಆರ್ಥರ್ ಮತ್ತು ಅವನ ಶೂರರು, ಸಿಪಾಯಿ ದಂಗೆಯ ಯುವಕ ನಾಯಕಿ ಝಾನ್ಸಿ ರಾಣಿ, ರಜಪೂತರ ಧೈರ್ಯ ಮತ್ತು ಸಾಹಸದ ಕಥೆಗಳು ಇವು ಮತ್ತು ಇನ್ನೂ ಎಷ್ಟೋ ಕಥೆಗಳು ನನ್ನ ಮನಸ್ಸಿನಲ್ಲಿ ಕಲಸುಮೇಲೋಗರದಂತೆ ತುಂಬಿದವು. ಆದರೆ ಇವೆಲ್ಲದರ ಹಿನ್ನೆಲೆ ನಾನು ಬಾಲ್ಯದಲ್ಲಿಯೇ ಕೇಳಿ ನನ್ನ ಮನಸ್ಸಿನಲ್ಲಿ ನಾಟಿದ್ದ ಭಾರತೀಯ ಪುರಾಣ ಕಥೆಗಳು.

ಅನೇಕ ಪ್ರಭಾವಗಳಿ೦ದ ಹದವಾದ ನನ್ನ ಮನಸ್ಸಿನ ಸ್ಥಿತಿಯೇ ಹೀಗಾದಮೇಲೆ ಇತರರ ಮನಸ್ಸಿನ ಮೇಲೆ, ಅದರಲ್ಲೂ ಅಕ್ಷರಜ್ಞಾನವಿಲ್ಲದ ನಮ್ಮ ಸಾಮಾನ್ಯ ಜನಕೋಟಿಯ ಮೇಲೆ ನಮ್ಮ ಪುರಾಣಗಳು ಮತ್ತು ಸನಾತನ ಪರಂಪರೆಗಳು ಎಷ್ಟು ಪ್ರಭಾವ ಬೀರಿರಬೇಕೆಂಬುದನ್ನು ಅರಿತು ಕೊಂಡೆ. ಸಂಸ್ಕೃತಿ ಮತ್ತು ನೀತಿಯ ದೃಷ್ಟಿಗಳೆರಡರಿಂದಲೂ ಆ ಪ್ರಭಾವ ಬಹಳ ಒಳ್ಳೆಯದು. ಈ ಕಥೆಗಳ ಸೌಂದಯ್ಯ ಮತ್ತು ಕಲ್ಪನಾಸಂಕೇತವನ್ನು ಮತ್ತು ಅವುಗಳಲ್ಲಿ ಅಡಕವಾಗಿರುವ ರೂಪಕ ವನ್ನು ಕಡೆಗಣಿಸುವುದನ್ನು, ನಾಶಮಾಡುವುದನ್ನು ನಾನೆಂದೂ ಸಹಿಸಲಾರೆ.

——————

*ಪಂಚತಂತ್ರವು ಏಷ್ಯದ ಮತ್ತು ಯೂರೋಪಿನ ಭಾಷೆಗಳಲ್ಲಿ ಅಸಂಖ್ಯಾತವಾಗಿ ಅನುವಾದವಾಗಿ ಮತ್ತು ರೂಪಾಂತರವಾಗಿರುವ ಇತಿಹಾಸ ಬಹು ದೊಡ್ಡದು, ತೊಡಕು ಮತ್ತು ಆಶ್ಚರ್ಯಕರ, ಮೊದಲು ಪರ್ಷಿಯದ ದೊರೆ ಯಾದ ಖುಸ್ರೋ ಅನುಷಾನ್ನ ಅಪೇಕ್ಷೆಯಂತೆ 6 ನೆಯ ಶತಮಾನದ ಮಧ್ಯದಲ್ಲಿ ಸಂಸ್ಕೃತದಿಂದ ಪಹಲವಿ ಭಾಷೆಗೆ ಅನುವಾದವಾಯಿತು, ಮರುಕ್ಷಣ ಕ್ರಿ. ಶ. 570 ರಲ್ಲಿ ಸಿರಿರ್ಯ ಭಾಷೆಗೂ ಅನಂತರ ಅರಬ್ಬಿ ಭಾಷೆಗೂ ಅನುವಾದವಾಯಿತು. 11 ನೆಯ ಶತಮಾನದಲ್ಲಿ ಸಿರಿಯನ್, ಅರಬ್ಬಿ, ಪಾರ್ಸಿ ಭಾಷೆಗಳಲ್ಲಿ ಹೊಸ ಅನುವಾದಗ ಳಾಗಿ ಪಾರ್ಸಿ ಅನುವಾದ ಗ್ರಂಥಕ್ಕೆ 'ಕಾಲಿಯ ದಮನ್ ' ಎಂದು ಹೆಸರಾಯಿತು, ಈ ಅನುವಾದಗಳ ಮೂಲಕ ಪಂಚ ತಂತ್ರವು ಯೂರೋಪ್ ಸೇರಿತು. 11 ನೆಯ ಶತಮಾನದ ಅಂತ್ಯಭಾಗದಲ್ಲಿ ಸಿರಿಯನ್ ಭಾಷೆಯಿಂದ ಗ್ರೀಕ್ ಭಾಷಾಂ ತರವಾಯಿತು. ಅನಂತರ ಸ್ವಲ್ಪ ದಿನಗಳ ಮೇಲೆ ಹೀಬ್ರು ಭಾಷೆಯಲ್ಲಿ 15 ಮತ್ತು 16 ನೆಯ ಶತಮಾನಗಳಲ್ಲಿ ಅನೇಕ ಭಾಷಾಂತರಗಳು, ರೂಪಾಂತರಗಳು ಲ್ಯಾಟಿನ್, ಇಟಾಲಿರ್ಯ, ಸ್ಪಾನಿಷ್, ಜಲ್ಮನ್, ಸ್ವೀಡಿಷ್, ಡೇನಿಸ್, ಡಚ್, ಐಸ್‌ಲ್ಯಾಂಡಿಷ್, ಫ್ರೆಂಚ್, ಇಂಗ್ಲಿಷ್, ಹಂಗೇರಿಯನ್, ತುರ್ಕಿ, ಅನೇಕ ಸ್ಥಾ ನ್ ಭಾಷೆಗಳಲ್ಲಿ ಭಾಷಾಂತರ ಗಳಾದವು. ಈ ರೀತಿ ಪಂಚತಂತ್ರದ ಕಥೆಗಳು ಏಷ್ಯದ ಮತ್ತು ಯೂರೋಪ್ ಸಾಹಿತ್ಯದಲ್ಲಿ ಸೇರಿಹೋದವು.