ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೦೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಅಹಲ್ಯಾಬಾಯಿ. ಳು. ಆಗ ಅಹಲ್ಯಾಬಾಯಿಯು ಮಹೇಶ್ವರಿಯನ್ನು ನೋಡಿ ಹೀಗೆಂದಳು; “ ನಿನ್ನ ಗಂಡನ ಮತ್ತು ಮೈದುನನ ಧನವು ನಿನ್ನದೇ ಹೊರತು ನನ್ನದಲ್ಲ. ನಿನಗೆ ಅಪೇಕ್ಷೆ ಇಲ್ಲದ ನಕ್ಷ ಕ್ಕೆ, ನಿನ್ನ ಗಂಡನ ಹೆಸರಿರುವಹಾಗೆ ಏನಾದರೂ ಧರ್ಮಕಾರ ವನ್ನು ಈ ಧನದಿಂದ ಮಾಡಬಹುದು.” ಆ ಮಾತನ್ನು ಕೇಳಿ ಮಹೇಶ್ವರಿಯು ಗಂಡನ ಹೆಸರಿನಲ್ಲಿ ದೊಡ್ಡ ದೇವಾಲಯವ ನ್ನು ನದೀತೀರದಲ್ಲಿ ಕಟ್ಟಿಸಿದಳ೦ತೆ ! ಈಪ್ರಕಾರ ಮನೆಗೆ ಬಂದ ಧನವನ್ನು ನಿರಪೇಕ್ಷಾ ಬುದ್ದಿಯೊಡನೆ ಹಿಂದಿರುಗಿಸಿದ ಧನ್ಯಾತ್ಮಳಾದ ಇವಳನ್ನು ಎಷ್ಟು ಕೊಂಡಾಡಿದರೂ ಸಾಲದು. ಆರ್ಕಾಡು ಪಟ್ಟಣವನ್ನು ಜಯಿಸಿದಾಗ ಕೈವನೆಂಬ(CLIVE) ಇಂಗ್ಲಿಷ್ ಸೈನ್ಯಾಧಿಪತಿಯು, ತನ್ನ ಹತ್ತಿರ ಭದ್ರಪಡಿಸಲು ಕೊಟ್ಟಿದ್ದ ಒಡತೆಯನ್ನು ಸ್ವತ್ತು ಕರ್ತರಿಗೆ ವಾಪಸು ಕೊಟ್ಟ ನಂತೆ ! ಈ ಸ್ವಲ್ಪ ಔದಾರ್ಯಕ್ಕೋಸ್ಕರ ಇಂಗ್ಲಿಷ್ ಗ್ರಂ ಥಕಾರರು ಅವನ ಮೇಲೆ ಸದಾ ಸ್ತುತಿರೂಪವಾದ ವೃಷ್ಟಿ ಯನ್ನು ಸುರಿಸುತ್ತಿದ್ದಾರೆ. ಆದರೆ ಇಂಥವುಗಳೆಲ್ಲವೂ ಅಹ ಲ್ಯಾಬಾಯಿಯ ಔದಾರ್ಯ ಗುಣಗಳಲ್ಲಿ ಸ್ವಲ್ಪವಾದದ್ದೆಂದು ಈ ಬಹುದು. ಸ್ತ್ರೀಯಾಗಿದ್ದು ಗೊಲ್ಲಜಾತಿಯವಳಾಗಿದ್ದರೂ, ಇಂಥಾ ಸದಾಚಾರ ಸಂಪನ್ನತೆಯನ್ನೂ, ಶ್ರೇಸತ್ವವನ್ನೂ, ಅಧಿಕಾರವನ್ನೂ ಸಂಪಾದಿಸಿದ ಅಹಲೈಯನ್ನು ನಾರೀರತ್ನವೆಂ ದು ಏತಕ್ಕೆ ಹೇಳಬಾರದು ? ಈಕೆಯ ಸ್ವಭಾವದಲ್ಲಿ ಶಾಂತಿ ಯೂ, ಸೌಮ್ಯತೆಯೂ, ವಿಶೇಷವಾಗಿದ್ದು ತು, ಗತ್ವವು ಈಕೆ ಯನ್ನು ಯಾವಾಗಲೂ ಸ್ಪರ್ಶಿಸಿದ್ದಲ್ಲ. ಕಪಟವೆಂಬ ಮಾತು ಆಕೆಗೆ ತಿಳಿಯಲೇ ತಿಳಿಯದು. ಡಂಭವು ಈಕೆಯಲ್ಲಿ ಸ್ವಲ್ಪ