ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೦೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫ ಭಾರತ ಸಾಧ್ವ ಮಣಿಮಂಜರಿ, ವಾದರೂ ಇಲ್ಲದೆ ಇತ್ತು, ಅಸತ್ಯಭಾಷಣೆಯನ್ನು ಯಾವಾ ಗಲೂ ಆಡಿದವಳಲ್ಲ. ದುರಾಚಾರವೆಂಬ ಮಾತು ಇವಳಲ್ಲಿ ಇಲ್ಲವೇ ಇಲ್ಲ. ಕಾಲವನ್ನು ದುರುಪಯೋಗದಲ್ಲಿ ಕಳೆಯು ವುದು ಎಂಬ ಮಾತು ಆಕೆಯ ಸ್ವಪ್ನದಲ್ಲಿಯೂ ಕಂಡವಳಲ್ಲ. ಈ ಸಾದ್ವೀಮಣಿಯ ಯಾವ ಯಾವ ಸದ್ಗುಣಗಣಗಳನ್ನು ಅಧಿಕವಾಗಿ ವರ್ಣಿಸಬೇಕೋ ನಮಗೆ ತಿಳಿಯದೆ ಇಗೆ, ಸತ್ವ ಸದ್ಗುಣಗಳಿಗೂ ವಾಸಸ್ಥಾನಳಾದ ಅಹಲ್ಯಾಬಾಯಿಯ ಇ೦ಥ ಸದ್ದು ಣಗಳು ಅಧಿಕವಾಗಿತ್ತೆಂಬದಾಗಿಯಾಗಲಿ, ಅಂಥವು ಅಲ್ಪ ವಾಗಿತ್ತೆಂಬದಾಗಿಯಾಗಲಿ ಹೇಳಲು ಆಗುವುದಿಲ್ಲ. ರ್೩, ಅಹಲ್ಯಾಬಾಯಿಗೆ ಮಂಜಾಬಾಯಿ ಎಂಬ ಮಗಳು ಇದ್ದಳೆಂದು ಹಿಂದೆಯೇ ಬಂದಿದೆ. ಈಕೆಗೆ ಮ ಕ್ಯಾಬಾಯಿ ಎಂಬ ನಾಮಾಂತರವಿತ್ತು. ಈಕೆಗೆ ಮದುವೇ ಮಾಡಿ ಅಹಲ್ಯಾಬಾಯಿಯು ಅಳಿಯನನ್ನು ಮನೆಯಲ್ಲಿಯೇ ಇಟ್ಟುಕೊಂಡಳು. ಈ ಅಳಿಯನು ಬಹಳ ದಿನಗಳವರೆಗೂ ಬದುಕಿ, ಅಹಲ್ಯಾಬಾಯಿಯ ಮರಣಕ್ಕೆ ಸ್ವಲ್ಪ ದಿನಗಳ ಮುಂ ಚಿತವಾಗಿಯೇ ಮರಣಹೊಂದಿದನು. ಒಡನೇ ಮುಕಾ ಬಾಯಿ ಸಹಗಮನಕ್ಕೆ ಸಿದ್ಧಳಾದಳು. ಆಗ ಅಹಲ್ಯಾಬಾ ಯಿಯು ತನ್ನ ಕುಮಾರಿಯನ್ನು ಸಹ ಗಮನಮಾಡಕೂಡ ದೆಂದು ನಯಭಯದೊಡನೆ ಹೇಳಿ ನೋಡಿದಳು, ಅದರಿಂದ ಎಷ್ಟು ಮಾತ್ರವೂ ಪ್ರಯೋಜನವಿಲ್ಲದೇ ಹೋಯಿತು. ತಾಯಿ .ಯ ಮಾತನ್ನು ಕೇಳದೆ ಮುಕ್ತಾಬಾಯಿಯು ಪತಿಯೊಡನೆ ಸಹಗಮನವನ್ನು ಮಾಡಿದಳು. ೪೦. ಈ ಪ್ರಕಾರ ಮಗಳ, ಅಳಿಯನೂ ಗುತಿಹೊಂ