ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೩೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

se ಮಹಾರಾಣಿ ಲಕ್ಷ್ಮೀಬಾಯಿ. ವನು, ತರುವಾಯ ಇವನನ್ನು ದೊಡ್ಡವನನ್ನಾಗಿ ಮಾ ಡುವುದೂ, ಇವನಿಗೆ ವಿದ್ಯಾಬುದ್ದಿಗಳನ್ನು ಹೇಳಿಸುವುದೂ, ಇವನನ್ನು ಒಳ್ಳೆಯ ಪ್ರಕಾಶಮಾನಕ್ಕೆ ತರುವುದೂ ಕಂಪೆ ನಿಯವರ ಭಾರವಾಗಿರುವುದು, ನಾನು ಇದಕ್ಕಿಂತಲೂ ಹೆಚ್ಚಾಗಿ ಹೇಳತಕ್ಕದೇನಿರುವುದು ? ಹೀಗೆ ಹೇಳಿ ಮ ಗವನ್ನು ಮೆಕಾಲೆದೊರೆಯವರ ಕೈಗೆ ಕೊಟ್ಟಳು. ಒಡ ನೆಯೆ ಆತನು ಮ ವನ್ನು ಸಿಂಹಾಸನದಮೇಲೆ ಕುಳ್ಳಿ ರಿಸಿ, ( ರಾಮವರ್ಮರು ರಾಜ್ಯಕ್ಕೆ ಇಂದಿನಿಂದ ದೊರೆ ಯಾದರು. ಇವರು ಯುಕ್ತವಯಸ್ಸುಳ್ಳವರಾಗುವವರೆಗೂ ರಾಣಿ ಲಕ್ಷ್ಮೀಬಾವಿಯವರು ಪಾಲನಕರ್ಿ (IRegent) ಯಾಗಿ ರಾಜ್ಯವನ್ನು ಮಾಡುವರು; ” ಎಂದು ಎಲ್ಲರಿಗೂ ತಿಳಿಸಿ, ಅದೇ ಸಮಯದಲ್ಲಿ ಮೆಕಾಲೆ ದೊರೆಯವರು ದಿರ್ವಾಗಿರಿಯನ್ನು ಬಿಟ್ಟರು. ದೆವರ' ಸದ್ಯನಾಭರವರು ಹೊಸ ದಿ.5ಾನರಾದರು. ಆದರೆ ಆ ದಿವಾನನು ಅಧಿಕಾರ ವನ್ನು ಕೆಲವು ದಿನಗಳು ಮಾತ್ರ ಅನುಭವಿಸಿ, ಐದಾರು ತಿಂಗಳಲ್ಲಿ ಸ್ಫೋಟಕ ರೋಗದಿಂದ ಮೃತಿಹೊಂದಿದನು. ೧೭. ಅನಂತರ ಒಂದು ವರ್ಷಕ್ಕೆ ರಾಣಿಯವರಿಗೆ ಎರಡನೇ ಮಗನು ಹುಟ್ಟಿದನು. ಆ ಆನಂದವು ಬಹಳ ದಿನಗಳಿರಲಿಲ್ಲ-ಏಕೆಂದರೆ ? ರಾಶಿಯವರಿಗೆ ಬಾಣಂತಿ ರೋ ಗವು ಪ್ರಾಪ್ತವಾಗಿ, ಎರಡು ತಿಂಗಳಲ್ಲಿಯೇ ಅದು ಅಸಾಧ್ಯ ವಾಯಿತು -ಅನೇಕ ವೈದ್ಯರು ಹಲವು ಔಷಧಗಳನ್ನು ಕೊ ಟ್ಟರು. ಆದರೂ ಅದರಿಂದ ಗುಣವೇನೂ ಆಗದೆ ವ್ಯಾಧಿ ಯು ಹೆಚ್ಚು ತೇಲೇ ಇತ್ತು. ಬದುಕುವನೆಂಬ ಆಸೆಯು ಉಡುಗಿತು. ತರುವಾಯ ಒಂದುದಿನ ಲಕ್ಷ್ಮೀಬಾಯಯು