ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೩೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ ಲಕ್ಷ್ಮೀಬಾಯಿ, ಗಲು, ಶುದ್ಧಾಂತಃಕರಣದಿಂದ ಅವರ ರಾಜ್ಯವನ್ನು ಅವ ರಿಗೆ ಕೊಟ್ಟು, ಕೃತಾರ್ಥಳಾಗಮಾ ! ನಾನಾದರೆ ಹೊರ ಡುವಳಾಗಿರುವೆನು, ನನಗೋಸ್ಕರ ದುಃಖಪಡಕೂಡದು.?? ಈಪ್ರಕಾರ ಅಕ್ಕನಾದ ಲಕ್ಷ್ಮೀಬಾಯಿಯು ಅಂತ್ಯಕಾಲ ದಲ್ಲಿ ಇಂಥ ಉಪದೇಶವನ್ನು ಮಾಡಲು ಹೇಳಿ, ಆ ಕೋ ಮಲಾಂತಃ ಕರಣಳಾದ ಹದಿನೆಳುವರ್ಷದ ಅಬಲೆಯು ದುತಿಖಾತಿರೇಕದಿಂದ ಬಾಯಿಂದ ಮಾತುಕೊರಡದೆ ಗದ್ದದ ಕಂಠದಿಂದ 11 ಅಕ್ಕಾ ! ನೀವು ಹೇಳಿದಹಕಾರ ಮಾಡು ವೆನು ನಿಮ್ಮ ಆಜ್ಞೆಯನ್ನು ಎಷ್ಟು ಮಾತ್ರವೂ ತಪ್ಪದೆ ನಡೆದುಕೊಳುವೆನು, ನೀನುಮಾತ್ರ ನನ್ನನ್ನು ಬಿಟ್ಟು ಹೋಗುವಿಯೋ ? ” ಎಂದು ದುಃಷಿಸತೊಡಗಿದಳು, ಆಗ ಅಲ್ಲಿನವರೆಲ್ಲರೂ ದುಃಖಿಸಿದರು. ಆಮೇಲೆ ಎರಡು ದಿನಗ ಳಿಗೆ ಲಕ್ಷ್ಮೀಬಾಯಿಯು ನರ ಸುಖಗಳನ್ನು ಬಿಟ್ಟು ಶಾಂತ ಸುಖವನ್ನನುಭವಿಸುವುದಕ್ಕೆ ಹೋದಳು ! ಮಲ ಬಾರು ದೇಶವೆಲ್ಲವೂ ಆಗ ದುಃಖಸಮುದ್ರದಲ್ಲಿ ಮುಳು ಗಿತು. ತಿರುವಾಂಕೂರಿನಲ್ಲಿ ಪ್ರತಿ ಮನೆಯಲ್ಲಿಯ ರೋ ದನ ಮಾಡುವಹಾಗೆ ಪ್ರಜೆಗಳೆಲ್ಲಾ ರೋದನ ಮಾಡಿದರು. ರಾಣಿ ಲಕ್ಷ್ಮೀಬಾಯಿಯವರು ನಾಲ್ಕು ಸಂವತ್ಸರಗಳೇ ರಾಜ್ಯಭಾರಮಾಡಿದ್ದು, ಆದರೆ ಈಕೆಯ ರಾಜ್ಯಭಾರದಲ್ಲಿ ಅನುಭವಿಸಿದಷ್ಟು ಸೌಖ್ಯವನ್ನು ಪ್ರಜೆಗಳು ಹಿಂದೆ ಗತಿ ಸಿದ ಯಾವರಾಜರ ಪರಿಪಾಲನೆಯಲ್ಲಿಯೂ ಅನುಭವಿಸಿರ ಲಿಲ್ಲ, ಆಕೆಯು ಪ್ರಜೆಗಳನ್ನು (ಆತ್ಯುನರ್ವಭೂತಾನಿ?” ಎಂಬಂತೆ ಕಾಪಾಡುತಿದ್ದಳು.