ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೬೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತ ಸಾಧೈ ಮಣಿಮಂಜರಿ. ಇಂದೂರು ಸಂಸ್ಥಾನದ ಮಹಾರಾಣಿ ಅಹಲ್ಯಾಬಾ?) - -೦------ ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ | ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ || --- ಈ ಅದ್ವಿತೀಯಳಾದ ಸಾಭೀಮಣಿಯ ಚರಿತ್ರೆಯು ಮನೋರಂಜಕವಾದರೂ, ಹೃದಯ, ದ್ರಾವಕವುಳ್ಳಂಥಾದ್ದಾಗಿ ಯೂ; ಅನುಕಂಸನೀಯವಾದರೂ, ಅನುಕರಣವಾದದ್ದಾಗಿ ಯ, ವೀರರಸ ರಹಿತವಾದರೂ, ಶಾಂತಿರಸ ಪರಿಷ್ಟುತವಾ ಗಿಯೂ ಇರುವ ಮೂರು ಅಂಕಗಳ ನಾಟಕವೆಂದು ಹೇಳಬಹು ದು, ಈ ನಾಟಕದಲ್ಲಿ ಕೆಲವು ಭಾಗವು ದುಃಖರೂಪವಾದ ಅಂಧಕಾರದೊಡನೆ ವ್ಯಾಪ್ತವಾಗಿದ್ದರೂ, ಅಹಲ್ಯಾಬಾಯಿಯ ಸದ್ಗುಣಗಳೆ೦ಬ ಚ೦ದ್ರ ಕಿರಣಗಳಿಂದ ಪ್ರಕಾಶಿತವಾದ್ದರಿಂದ, ರಮ್ಯವಾಗಿ ಇರುತ್ತದೆ. ಈ ಮೂರಂಕಗಳು ಯಾವುವೆಂದ ರೆ-(೧) ಅಹಲ್ಯಾಬಾಯಿಯ ಜನನ ಮತ್ತು ಬಾಲ್ಯ, (೨) ಆಕೆಯ ಸಂಸಾರ ಸುಖ. (೩) ಆಕೆಯ ವೈಧವ್ಯವೂ ಮತ್ತು ರಾಜ್ಯವಾಳುವಿಕೆಯ, ಈ ಮೂರು ಅಂಕಗಳಲ್ಲಿ ರುವ ಸಂಗತಿಗಳನ್ನು ಬೇರೆಬೇರೆಯಾಗಿ ವಿಚಾರಮಾಡೋಣ.