ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೭೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತ ಸಾಧೈ ಮಣಿಮಂಜರಿ. ವಡೀ ಎಂಬ ಗ್ರಾಮದಲ್ಲಿ ಒಂದು ದೊಡ್ಡ ಆಂಜನೇಯ ದೇವ ಸ್ಥಾನ ಸಿಕ್ಕಿತು. ಪೇಷ್ಮೆಯು ಆ ಗ್ರಾಮಕ್ಕೆ ಬಂದಾಗ ಲೆಲ್ಲಾ ಆ ಗುಡಿಯಲ್ಲಿಯೇ ಇಳಿಯುತ್ತಿದ್ದನು. ಆದ್ದರಿಂದ ಈಗಲೂ ಕೂಡ ರಘನಾಥರಾವು ಇಲ್ಲಿಯೇ ಇಳಿದನು. ಆದಿನ, ಮಠದ ಉಪಾಧ್ಯಾಯನು ಹುಡುಗರಿಗೆಲ್ಲಾ ರಜವನ್ನು ಕೊಟ್ಟು, ತಾನು ರಘನಾಥರಾಯನ ಸವಿಾಸಕ್ಕೆ ಹೋಗಿ ಮಾತನಾಡುತಿದ್ದನು. ಒಂದು ನಿಮಿಷವೂ ಈ ಗುರುವನ್ನು ಬಿಟ್ಟರದ ಅಹಲ್ಯಯು ಆಗ ಉಪಾಧ್ಯಾಯರ ಹತ್ತಿರ ಬಂದು, ಕೂತುಕೊಂಡಳು. ಶೃಂಗಾರ ಪ್ರಬಂಧಗಳಿಂದ ಕೂಡಿ ವರ್ಣಿಸಿದ ಸ್ತ್ರೀಯರ ಹಾಗೆ ಅಹಲ್ಯ ಚಂದ್ರಮುಖಿಯಲ್ಲದೆ ಹೋದರೂ, ಆಕೆಯ ವಲಸಿದ ಮೇಲೆ ಸ್ವಾಭಾವಿಕವಾಗಿ ರಾಜ ಚಿಹ್ನೆಗಳಿದ್ದುದರಿಂದ, ಆಕೆಯು ನೋಡುವವರಿಗೆ ಬಹು ರಮ್ಯವಾಗಿಯೇ ಇರುತ್ತಿದ್ದಳು. ಆಗಲುಪಾಧ್ಯಾಯನು ಈಕೆ ಯ ವೃತ್ತಾಂತವನ್ನೆಲ್ಲ ಹೇಳಿ, ಈಕೆಯ ಸುಗುಣ ಸಂಪದ ವನ್ನು ಬಹಳವಾಗಿ ಕೊಂಡಾಡಿದನು. ಅಸ್ಟ್ರಲ್ಲಿಯೇ ಖಂಡೇರಾವಿಗೆ ಈಕೆಯ ಯೋಗ್ಯಳಾದ ಭಾರೈಯೆಂದು ನಿಶ್ಚಯಿಸಿ, ರಘನಾಥರಾಯನು ಖಂಡೇ ರಾಯನ ತಂದೆ ಯಾದ ಮಲ್ಲಾರಿ ರಾಯನ ಸಮ್ಮತಿಯನ್ನು ಕೇಳಿ, ಅವನ ಸಮ್ಮತಿಯನ್ನು ತೆಗೆದುಕೊಂಡು, ಆನಂದರಾಯನಂ ಕರೆಸಿ, ಮಹೂರ್ತವನ್ನು ನಿಶ್ಚಯಿಸಿ, ಶುಭಮುಹೂರ್ತದೊಳಗೆ ಅಹ ಲ್ಯಾಖಂಡೇರಾಯರಿಬ್ಬರಿಗೂ ವಿವಾಹವನ್ನು ಮಾಡಿದನು. ಹೀಗೆ ಬಡವನ ಮಗಳಾದ ಅಹಲ್ಯಯು ಒಬ್ಬ ಮಂಡಲಾಧೀ ಊರನಹೆಂಡತಿಯಾದಳು. ಆದ್ದರಿಂದ ಇನ್ನು ನಾವು ಈಕೆ