ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೯೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ಭಾರತಸಾಲ್ವಿಮಣಿ ಮಂಜರಿ. ಸುವುದೂ, ರಾಜ್ಯವನ್ನು ಚೋರಭಯದಿಂದ ಕಾಪಾಡುವುದೂ, ಮೊದಲಾದ,ಯುದ್ದ ಸಂಬಂಧವಾದ ಕೆಲಸವೆಲ್ಲವನ್ನೂ ಇವನು ನೋಡುತಿದ್ದನು. ರಾಜ್ಯದ ಇತರ ಸಂಗತಿಗಳೆಲ್ಲವನ್ನೂ ಅಹಲ್ಯಾಬಾಯಿಯವರೇ ನೋಡಿಕೊಳ್ಳುತ್ತಿದ್ದರು. ತುಕ್ಕೋ ಜಿಯು ಅಹಲ್ಯಾಬಾಯಿಯವರನ್ನು ಸ್ವಂತ ತಾಯಿಯಹಾಗೆ ನೋಡುತ್ತಿದ್ದನು. ಅಹಲ್ಯಾಬಾಯಿಯವರು ಅವನಲ್ಲಿ ಅಧಿಕ ವಿಶ್ವಾಸವುಳ್ಳವರಾಗಿ ವರ್ತಿಸುತ್ತಿದ್ದರು. ಮೂವತ್ತು ವರುಷ ಗಳವರೆಗೂ, ಇಬ್ಬರೂ ರಾಜ್ಯಭಾರ ಮಾಡಿದರು. ಆದರೆ ಅವನು ಅಷ್ಟು ಕಾಲದಲ್ಲಿ ಒಂದು ದಿನವಾದರೂ, ಅಹಲ್ಯಾಬಾ ಯಿಯವರ ಆಜ್ಞೆಯನ್ನು ಉಲ್ಲಂಘಿಸಿದವನಲ್ಲ. ಅಹಲ್ಯಾಬಾ ಯಿಯೂ ಅವನನ್ನು ಒಂದು ಮಾತನ್ನಾದರೂ ಅಡಿದವಳಲ್ಲ. ೩0. ಅಹಲ್ಯಾಬಾಯಿಯ ದಿನಚರ್ಯೆಗಳು:-ಇವಳು ಅತ್ಯಂತನಿಖೆಯಿಂದ ಕಾರ್ಯಗಳನ್ನು ಮಾಡುತಿದ್ದಳು. ಸೋಮಾರಿತನವೆನ್ನುವ ಮಾತು ಅವಳ ಸ್ವಪ್ನದಲ್ಲಾದರೂ ಇಲ್ಲದೆ ಇತ್ತು. ಅವಳು ಪ್ರತಿಕಾರವನ್ನೂ ಗೊತ್ತುಮಾಡಿ ಕೊಂಡಿರುವ ಕಾಲಕ್ಕೆ ತಪ್ಪದೆ ಮಾಡುತ್ತಿದ್ದಳು. ಅನಂತರ ಅವಳು ಯೋಚನೆ ಮಾಡಿದ ಕೆಲಸವನ್ನು ತಪ್ಪಗೆ ಮಾಡುತ್ತಿ ದ್ದಳು. ಇವಳು ಪ್ರತಿನಿತ್ಯವೂ ಸೂಯ್ಯೋದಯಕ್ಕೆ ಮುಂಚೆ ಯೇ ಎದ್ದು ನಿತ್ಯಕರ್ಮಗಳನ್ನು ನಿರ್ವತಿ್ರಸಿಕೊಂಡು, ಸ್ನಾನ ವನ್ನು ಮಾಡಿ, ಸ್ವಂತವಾಗಿ ದೇವತಾರ್ಚನೆಯನ್ನು ಮಾಡು ವಳು. ಆಮೇಲೆ ಪುರಾಣಶ್ರವಣವನ್ನು ಮಾಡಿ, ಬ್ರಾಹ್ಮಣರಿಗೂ, ಭಿಕ್ಷುಕರಿಗೂ ದಾನಧರ್ಮಗಳನ್ನು ಮಾಡುತ್ತಿದ್ದಳು. ತರು ವಾಯ ಊಟವನ್ನು ಮಾಡುವಳು. ಇವರ ಜಾತಿಯಲ್ಲಿ