ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೯೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಅಹಲ್ಯಾಬಾಯಿ. ೪ನೇಕಗಳನ್ನು ಮಾಡಿರುವಳು. ಈ ಕ್ಷೇತ್ರಗಳಲ್ಲಿ ಈಕೆಯ ಹೆಸರಿನಲ್ಲಿ ಅನೇಕ ಧರ್ಮಕೃತ್ಯಗಳು ಜರುಗುತ್ತಿರುವುವು. ಈ ವಲ ಕ್ಷೇತ್ರ ಬ್ರಾಹ್ಮಣರಿಗೆ ಮಾತ್ರ ಆಕೆ ದಾನಗಳನ್ನು ಮಾಡು ತಿರಲಿಲ್ಲ. ಆತ್ಮ ಎಂಬ ಶಬ್ದವನ್ನು ಬಿಟ್ಟು, ವಿಶ್ವ ಎಂಬ ಶಬ್ದ ವನ್ನು ಧರಿಸಿ, ಸ್ವಕುಟುಂಬವನ್ನೂ, ವಿಶ್ವವನ್ನೇ ಕುಟುಂಬ ವಾಗಿ ತಿಳಿದು, ಸ್ವಬಾಲಕರಲ್ಲಿ ಅನುರಾಗವನ್ನು ತಗ್ಗಿಸಿ, ಪ್ರಪಂ ಚದ ಸಮಸ್ತ ಪ್ರಾಣಿ ಕೋಟಿಗಳನ್ನು ತನ್ನ ಬಾಲಕರಹಾಗೆ ಗ್ರಹಿಸಿ, ಆತ್ಮವಿಷಯದುಃಖಕ್ಕೆ ವ್ಯಸನ ಪಡದೆ, ವಿಶ್ವ ವಿಷಯ ದುಃಖಗಳಿಗೆ ಅಶ್ರುಬಿಂದುಗಳನ್ನು ಸುರಿಸುತ್ತ, ಜಗತ್ತಿನಲ್ಲಿ ಈ ನಗೆ ಉಂಟಾಗಿರುವ ಮಾನಾವಮಾನಗಳನ್ನು ಲಕ್ಷ್ಯಮಾಡದೆ ಈ ಜಗತ್ತಿನ ಹಿತಾರ್ಥವಾಗಿ ಜನ್ಮವನ್ನು ಸಾರ್ಥಕಪಡಿಸುವ ವಿಶ್ವ ಕಟುಂಬಿಗಳಾದ ಮಹನೀಯರ ಗುಂಪಿನಲ್ಲಿ ಈ ಅಹಲ್ಲಾ ಬಾಯಿಯು ಒಬ್ಬಳಾದ್ದರಿಂದ, ಆಕೆಯು ಶೂದ್ರರಿಗೂ, ಕಂಡಾ ಲರಿಗೂ, ಸಬಪಕ್ಷಗಳಿಗೂ ಸದಾಂತವನ್ನೇ ಮಾಡುತ್ತಿದ್ದಳು. ಮರಣಹೊಂದಿದ ಪುತ್ರಾದಿಗಳಿಗಾಗಿ ದುಃಖವುಂಟಾದಾಗ ಆಕೆ ತನಗೆ ತಾನೇ ಹೀಗೆ ಉಪದೇಶ ಮಾಡಿಕೊಳ್ಳುವಳು. ಸತ್ತು ಹೋದ ಮಗನು ಒಬ್ಬನೇ ಅಲ್ಲದೆ ನಿನ್ನ ದುಃಖಕ್ಕೂ ನಿನ್ನ ಉ ದ್ಯೋಗ, ಪ್ರೇಮಕ್ಕೂ, ಚಿಂತೆಗೂ ಪಾತ್ರರಾದ ಸುತಸಂ ಘವು ಈ ಜಗತ್ತಿನಲ್ಲಿ ಅನೇಕವಾಗಿರುವುದು. ಈ ಜಗತ್ತಿನಲ್ಲಿ ಎಲ್ಲರಿಗೂ ದುಃಖ ನಿವಾರಣೆ ಮಾಡಿ, ಎಲ್ಲರಿಗೂ ಸುಖವನ್ನುಂ ಟುಮಾಡುವುದು. ಲಾಲಿಸುವುದು. ಎಲ್ಲರನ್ನೂ ಪಾಲಿಸಿದರೆ ಎಲ್ಲರೂ ನಿನ್ನ ಮಕ್ಕಳ ಆದ್ದರಿಂದ ವ್ಯಕ್ತಿವಿಷಯವಾದ ಶೋ ಕವನ್ನು ಬಿಡು. ಹೀಗೆ ಮಾಡಿದರೆ ದುಃಖಪಟ್ಟವರ ದುಃಖ