ಭಾಷಾಮಯಧರ್ಮಸಿನ್ನು ಸಾರ. ೧೬ “A YA+PM (AM-2 +v/vvvvvvvvvv ಆ ತಿಥಿಯನ್ನೇ ಗ್ರಹಿಸಬೇಕು. ಆದರೆ ಅಸ್ತಮಯಾನಂತರದಲ್ಲಿ ಮೂ ರುಗಳಿಗೆಯ ರೂಪವಾಗಿರುವ ಸಂಧ್ಯಾಕಾಲವನ್ನು ಕಳೆದೇ ಭೋಜನ ಮಾಡಬೇಕು. ಸಂಧ್ಯಾಕಾಲದಲ್ಲಿ ಭೋಜನ, ನಿದ್ರೆ, ಮೈದುನ, ಅಧ್ಯ ಯನ, ಇವುಗಳು ನಿಷೇಧಿಸಲ್ಪಟ್ಟಿವೆ. ಯತಿಗಳಿಗು, ಅಪುತ್ರವಂತರಿಗು ಅಪಕರಿಗು ವಿಧವೆಯರಿಗೂ, ರಾತ್ರಿಯಲ್ಲಿ ಭೋಜನವು ನಿಷಿದ್ಧವಾಗಿ ರುವುದರಿಂದ ಅವರು ನಕ್ಕವನ್ನು ಸಾಯಾಹ್ನ ವ್ಯಾಪ್ತಿಯುಳ್ಳ 'ದಿನದ ಎಂಟನೆಯ ಭಾಗದಲ್ಲಿ ಆಚರಿಸತಕ್ಕದ್ದು. ಹೀಗೆ ಸೌರನಕ್ಕವನ್ನೂ ಸಾಯಾಹ್ನ ವ್ಯಾಪ್ತಿಯಲ್ಲಿ ಹಗಲೊಳಗೇ ಮಾಡಬೇಕು. ಎರಡು ದಿನ ಗಳಲ್ಲಿಯೂ ಪ್ರದೋಷ ವ್ಯಾಪ್ತಿ ಯಿದ್ದರೆ ಸರತಿಥಿಯೇ ಗ್ರಾಹೃವು. ದಿನ ದಯದಲ್ಲಿಯೂ ಪುದೊಪವ್ಯಾಪ್ತಭಾವದಲ್ಲಿ ಸರದಿನದೊಳಗೇ ಸಾಯಂಕಾಲದಲ್ಲಿ, ದಿನದ ಎಂಟನೆಯ ಭಾಗದೊಳಗೆ ನಕ್ಕವನ್ನು ಮಾ ಡಬೇಕಲ್ಲದೆ ರಾತ್ರಿಯಲ್ಲಿ ಮಾಡಕೂಡದು. ಸಮವ್ಯಾಪ್ತಿ ಯಿದ್ದರೂ, ಒಂದು ಭಾಗ ವ್ಯಾಪ್ತಿ ಯಿದ್ದರೂ ಸರದಿನವೇ ಗ್ರಾಹ್ಯವಾದದ್ದು , ವೈಷಮ್ಯದಿಂದ ಪ್ರದೋಷದ ಒಂದು ಭಾಗದಲ್ಲಿ ವ್ಯಾಪ್ತಿ ಯಿದ್ದರೆ ಎಂ ದರೆ ಪೂಜಾಭೋಜನಗಳಿಗೆ ಸಾಕಾಗುವಷ್ಟು ಹೆಚ್ಚು ಕಾಲವು ಸಿಕ್ಕು ವುದಾದರೆ, ಆಗ ಆಧಿಕ್ಯವುಳ್ಳ ಪೂರ್ವ ತಿಥಿಯು ಗ್ರಾಹವು. ಹಾಗಿಲ್ಲ ದಿದ್ದರೆ ಸಾವ ಪಕ್ಷದಂತೆ ಉತ್ತರ ತಿಥಿಯೇ ಗ್ರಾಹ್ಯವು, ಆಧಿಕೃವಕ ದಿಂದ ಪೂರ್ವತಿಥಿಯು ಗ್ರಾಹ್ಯವಲ್ಲ. ನಕ್ಷವ್ರತ ಭೋಜನವು ವಿಧಿವಿಹಿ ತವಾದುದರಿಂದ ರವಿವಾಸರಸಂಕ್ರಾನ್ನಾದಿಗಳಲ್ಲಿಯೂ ರಾತ್ರಿಯ ಲ್ಲಿಯೇ ಆಚರಿಸತಕ್ಕದ್ದು. ರವಿವಾರಾದಿಗಳಲ್ಲಿ ರಾತ್ರಿಭೋಜನ ನಿಷೇ. ಧವೆಂಬುದು ರಾಗ ಪ್ರಾಪ್ತವಾಗಿರುವ ಭೋಜನ ನಿಸೋಧಪರವೆಂದು ತಿ ಆಯತಕ್ಕದ್ದು. ಏಕಾದಶಿ ಮೊದಲಾದವುಗಳಿಗೆ ಪ್ರತ್ಸಾಮ್ರಾಯ ಎಂದರೆ ಪ್ರತಿನಿಧಿಯಾಗಿರುವ ನಕ್ಷವಾದರೂ ಉಪವಾಸಕ್ಕೆ ಗೊತ್ತಾಗಿರುವ ದಿನದಲ್ಲಿಯೇ ಆಚರಿಸತಕ್ಕದ್ದು. ಅಯಾಚಿತವೆಂಬುದು ಅಹೋರಾ ತ್ರಗಳಲ್ಲಿ ನೆರವೇರಿಸತಕ್ಕದ್ದಾದುದರಿಂದ ಉಪವಾಸದಂತೆಯೇ ನಿರ್ಣ ಯವನ್ನರಿಯುವುದು. ಪಿತ್ರ ಕರ್ಮಗಳಿಗೆ ಅಪರಾಹ್ನ ಮೊದಲಾದ ವ್ಯಾಪ್ತಿಯಿಂದ ನಿರ್ಣಯವು. ಇದು ಆಯಾಯ ಪ್ರಕರಣದಲ್ಲಿ ಹೇಳ
ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.