ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿದ್ದು ಸರ. yd ಪುರಶ್ಚರಣವಿಧಿಯು, ಪುರಶ್ಚರಣಮಾಡುವವನು, ಸ್ಪರ್ಶವಾಗುವುದಕ್ಕೆ ಮುಂಚೆ ಸ್ನಾನ ಮಾಡಿ, “ ಇಂಥ ಗೋತ್ರದ ಇಂಥ ಹೆಸರುಳ್ಳ ನಾನು ಸೂರ್, ಅಥವಾ ಚಂದ್ರಗ್ರಹಣಕಾಲದಲ್ಲಿ, ಈ ದೇವತೆಯಿಂದ, ಈ ಮಂತ್ರಸಿದ್ದಿಯುಂ ಟಾಗಬೇಕೆಂಬ ಅಪೇಕ್ಷೆಯುಳ್ಳವನಾಗಿ, ಗ್ರಾಸವಾಗುವುದಕ್ಕೆ ಪ್ರಾರಂಭ ವಾದದ್ದು ಮೊದಲು ಮೋಕವಾಗು ವವರೆಗೂ ಈ ಮಂತ್ರ ಜಪರೂಪ ವಾದ ಪುರಶ್ಚರಣೆಯನ್ನು ಮಾಡುತ್ತೇನೆ ” ಎಂದು ಸಂಕಲ್ಪವನ್ನು ಮಾಡಿ ಆಸನ ಪ್ರಾಣಾಯಾಮಗಳನ್ನೂ, ಅಂಗನ್ಯಾಸಕರನ್ಯಾಸಗಳನ್ನೂ ಗ್ರಹಣ ಸ್ಪರ್ಶವಾಗುವುದಕ್ಕಿಂತ ಮುಂಚೆಯೇ ಮಾಡಿಕೊಂಡಿದ್ದು,ಸ್ಪರ್ಶ ವಾದದ್ದು ಮೊದಲು ಮೋಕ್ಷವಾಗುವ ವರೆಗೂ ಮೂಲಮಂತ್ರ ಜಪವನ್ನು ಮಾಡಬೇಕು. ಅನಂತರದಲ್ಲಿ ಮಾರನೆಯ ದಿನದಲ್ಲಿ ಸ್ನಾನಾದಿ ನಿತ್ಯಕ ರಗಳನ್ನು ಮಾಡಿ, “ ಈ ಮಂತ್ರ ಸಿದ್ಧಿಗಾಗಿ, ಈ ಮಂತ್ರೋಪ ದೇಶ ಕಾಲದಲ್ಲಿ ನಾನು ಮಾಡಿದ ಇಷ್ಟು ಸಂಖ್ಯೆಯುಳ್ಳ ಪುರಶ್ಚರಣರೂ ಪವಾದ ಜಪಗಳು ಸಾಂಗವಾಗುವುದಕ್ಕಾಗಿ, ಅದರ ಹತ್ತರಷ್ಟು ಹೋ ಮವನ್ನೂ, ಅದರ ಹತ್ತರಷ್ಟು ತರ್ಪಣಗಳನ್ನೂ, ಅದರ ಹತ್ತರಷ್ಟು ಮಾರ್ಜನೆಗಳನ್ನೂ, ಅದರ ಹತ್ತರಷ್ಟು ಬ್ರಾಹ್ಮಣ ಭೋಜನಗಳನ್ನೂ ನಡೆಯಿಸುತ್ತೇನೆ ಎಂದು ಸಂಕಲ್ಪ ಮಾಡಿ ಹೋಮಾದಿಗಳನ್ನಾಗಲಿ, ಅಥವಾ ಆಯಾಕರಗಳ ನಾಲ್ಕರಷ್ಟು ಇಲ್ಲವೇ ಎರಡರಷ್ಟು ಜಪವನ್ನಾ ಗಲೀ ಮಾಡಬೇಕು. ಗ್ರಹಣಕಾಲದಲ್ಲಿ, ಮಂತ್ರೋಪದೇಶವನ್ನು ಪಡೆ ದವನಿಂದ ನಿಯಮಿಸಲ್ಪಟ್ಟ ಪುತ್ರ ಮೊದಲಾದವನು ( ಇಂಥ ಗೋತ್ರ ದವನಾದ, ಈ ಹೆಸರುಳ್ಳ ಇಂಥವನಿಗೆ ಗ್ರಹಣ ಸ್ಪರ್ಶಸ್ನಾನದಿಂದುಂ ಟಾಗುವ ಶ್ರೇಯಸ್ಸಿಗಾಗಿ ಸ್ಪರ್ಶಾನವನ್ನು ಮಾಡುತ್ತೇನೆ ೨” ಮೊದ ಲಾದ ಸಂಕಲ್ಪಗಳನ್ನು ಮಾಡಿಕೊಂಡು ಪ್ರತಿನಿಧಿಯಾಗಿ ಸ್ನಾನ ದಾನಾದಿ ಗಳನ್ನು ಮಾಡಬೇಕು. ಪುರಶ್ಚರಣೆಯನ್ನು ಮಾಡದಿದ್ದರೂ ಸಹ, ತವು ಗೆ ಗುರೂಪದೇಶವಾಗಿರುವ ತಮ್ಮ ತಮ್ಮ ಇಷ್ಟ ದೇವತಾಮಂತ್ರಜಪ ವನ್ನೂ, ಗಾಯತ್ರೀ ಮಂತ್ರಜಪವನ್ನೂ, ಗುಹಣಕಾಲದಲ್ಲಿ ಅವಶ್ಯವಾಗಿ ಮಾಡಬೇಕು. ಹಾಗಿಲ್ಲದಿದ್ದರೆ ಮಂತ್ರಕ್ಕೆ ಮಾಲಿನ್ಯವುಂಟಾಗುವುದು. 11