ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾ ರ ಬಾ, www MMMMMMMMMMM ಊಟವನ್ನು ಮಾಡಕೂಡದು. ಚಂದ್ರನಿಗೆ ಗ್ರಾಸವುಂಟಾದಾಗ ಮಾರನೆಯದಿನ ಸಂಧ್ಯಾ ಹೋಮಾದಿಗಳನ್ನು ಮಾಡುವುದು ಪ್ರವಹ ವಾದದ್ದಲ್ಲ. ಆವಿಷಯದಲ್ಲಿ, ಶಾಸ್ತ್ರಸಿದ್ದಾಂತದಿಂದ ಸ್ವಲ್ಪ ಕಾಲದಲ್ಲಿಯೇ ಗ ಹಣಮೋಕ್ಷ ವುಂಟಾಗುವುದೆಂಬುದನ್ನು ನಿಶ್ಚಯಿಸಿ ಮುಕ್ತಿಯಾದಮೇಲೆ (ಬಿಡುವುದು) ಸ್ನಾನ ಮಾಡಿ ಹೋಮಾದಿಗಳನ್ನು ಮಾಡಬೇಕು. ಬಹಳ ಹೊತ್ತಿನಮೇಲೆ ಮೋಕ್ಷವಾಗುವುದಾಗಿದ್ದರೆ, ಹೋಮಕಾಲವು ಅತಿ ಕ್ರಮಿಸಿ ಹೋಗುವುದಾದ್ದರಿಂದ ಗ್ರಸ್ತೋದಯದ ಹಾಗೆ ಗ್ರಹಣಮಧ್ಯದ ಲ್ಲಿಯೇ ಸಂಧ್ಯೆಯನ್ನೂ, ಹೋಮವನ್ನೂ ಮಾಡಿ, ಶಾಸ್ತ್ರದಿಂದ ಮೋಕ್ಷ ಕಾಲವನ್ನು ತಿಳಿದು ಸ್ನಾನಮಾಡಿ ಬ್ರಹ್ಮಯಜ್ಞಮೊದಲಾದ ನಿತ್ಯಕಮ್ಮಗ ಳನ್ನು ಮಾಡಬೇಕೆಂದು ತೋರುವುದು. ದರ್ಶದಲ್ಲಿ ಗ್ರಹಣನಿಮಿತ್ತವಾ ಗಿ ಮಾಡುವ ಶ್ರಾದ್ಧದಿಂದಲೇ ದರ್ಶಾದ್ಧ, ಸಂಕ್ರಾಂತಿ ಶಾದ್ಧಗಳು ಚರಿತಾರ್ಥವಾಗುವುವು. ( ಪ್ರಸಂಗಸಿದ್ಧಿಯುಳ್ಳವುಗಳಾಗುವವು) (ಪ್ರಸಂ ರಸಿದ್ದವಾದ ಶ್ರಾದ್ಧಗಳನ್ನು ಸಂಕಲ್ಪಾದಿಗಳಲ್ಲಿಯೂ ಉಚ್ಚಾರಣೆ ಮಾ ಡಬೇಕಾದ್ದಿಲ್ಲವಾದ್ದರಿಂದ ಪ್ರಸಂಗಸಿದ್ಧಿಯೆಂದರೆ ಲೋಪವೆಂದು ಭಾ ನವು) ಗ್ರಹಣದಿನದಲ್ಲಿ ತಂದೆ ಮೊದಲಾದವರ ಪ್ರತಿಸಾಂವತ್ಸರಿಕ ಶಾ ದ್ದವು ಬಂದರೆ ಸಾಧ್ಯವಾದರೆ ಅನ್ನದಿಂದ ಮಾಡಬೇಕು ಬ್ರಾಹ್ಮಣರು ಮೊದಲಾದುವುಗಳು ದೊರಕದೆ ಅಸಾಧ್ಯವಾದರೆ ಆಮಶ್ರಾದ್ಧವನ್ನಾಗಲಿ ಹೇಮಶ್ರಾದ್ಧವನ್ನಾಗಲಿ ಮಾಡಬೇಕು. ಜನ್ಮರಾಶಿಗೆ , ೬, ೧೧, ೧೦ನೇ ರಾಶಿಗಳಲ್ಲಿ ಗ್ರಹಣವುಂಟಾದರೆ ಶುಭಕರವಾದದ್ದು. ೨, ೭,೯, ೫ ನೇ ರಾಶಿಗಳಲ್ಲಾದರೆ ಮಧ್ಯಮವು, ಜನ್ಮದಲ್ಲಿ ಮತ್ತು 8, V, ೧೨ ನೇ ರಾಶಿಗಳಲ್ಲಿ ಆದ ಗುಹಣವು ಅನಿಷ್ಟ ಫಲವನ್ನು ಕೊಡುವುದು. ಯಾವನಿಗೆ ಜನ್ಮ ರಾಶಿಯಲ್ಲಾಗಲಿ ಜನ್ಮ ನಕ್ಷತ್ರದಲ್ಲಾಗಲಿ ಗ್ರಹಣವುಂಟಾಗುವುದೋ ಅವನಿಗೆ ಬಹಳ ಅನಿಷ್ಟ ಫಲವುಂಟಾಗುವುದು. ಆದಕಾರಣ ಗರ್ಗಸ್ಮತಿ ಮೊದಲಾದುವುಗಳಲ್ಲಿ ಹೇಳಿರುವಂತೆ ಶಾನ್ತಿಯನ್ನು ಮಾಡಬೇಕು. ಅ ಥವಾ ಬಿಂಬದಾನವನ್ನು ಮಾಡಬೇಕು. ಅದು ಹೇಗೆಂದರೆ- ಚಂದ್ರಗ್ರ ಹಣವಾದರೆ ಬೆಳ್ಳಿಯ ಚಂದ್ರಮಂಡಲವನ್ನೂ, ಚಿನ್ನದ ಸರ್ಪಬಿಂಬ ವನ್ನೂ ಮಾಡಿಸಬೇಕು, ಸೂರಗ್ರಹಣವಾದರೆ ಚಿನ್ನದ ಮಣ್ಣ