ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಂ.ಮೈಡಿಗೆಗಳ ಗುಟ್ಟು, ರುವದು. ಶಾಮರಾಯ-ಯಾವ ವಿಷಯದಲ್ಲಿ? ಆಚಾರ್ಯ-ಮಡಿ-ಮೈಲಿಗೆಯ ವಿಷಯವಾಗಿ, ಶಾಮರಾಯ-ಏನಿರಿ ಸುಧಾರಕರೇ, ಆಚಾರ್ಯರವರಿಗೆ ಹ್ಯಾಟಹಾಕಬೇ ಕೆಂದು ಮಾಡಿದ್ದೀರೇನು? ಸುಧಾರಕ (ಸ್ವಲ್ಪ ಕುಗ್ಗು ತ್ರ)-ಅಂಥ ಪ್ರಸಂಗ ಬಂದರೆ ತಾವೇ ಹಾಕಿ ಕೊಳ್ಳುವರು. ಆಚಾರ್ಯರಾಯರೇ, ನಾವು ಮಾಡುವ ಮಡಿ-ಮೈಲಿಗೆಗಳ ವಿಷಯ ವಾಗಿ ಈ ಸುಧಾರಕರು ಬಹಳ ಆಕ್ಷೇಪಣೆಗಳನ್ನು ತಕ್ಕೊಳ್ಳುತ್ತಾರೆ. ಅವರ ಮಾತನ್ನು ಖಂಡಿಸುವದಕ್ಕೆ ನನ್ನಿಂದಾಗಲಿಲ್ಲ. ನೀವು ಈ ವಿಷಯವನ್ನು ನಮಗೂ ಅವರಿಗೂ ತಿಳಿಸಿ ಹೇಳಬೇಕೆಂದು ಪ್ರಾರ್ಥಿಸುವೆನು, ಶಾಮರಾಯ-ಆಗಲಿ; ಈ ದಿನ ಸಂಜೆಯ ಮುಂದೆ ಬಂದರೆ ತಿಳಿದಷ್ಟು ಹೇಳುವೆನು. ಸುಧಾರಕರೇ, ನೀವೂ ಬರುವಿರೇನು? ಸುಧಾರಕ-ಅವಶ್ಯವಾಗಿ ಬರುವೆನು, ಲೇಟಾಂಕ ೨. ಕಾಮರಾಯ-ಆಚಾರ್ಯರೇ, ಹೀಗೆ ಬನ್ನಿರಿ; ಓಹೋ! ಸುಧಾರಕಸಾ ಹೇಬರೂ ಬಂದೇಬಿಟ್ಟರು. ನೀವಿಬ್ಬರೂ ಇತ್ತ ಬನ್ನಿರಿ, ಇಲ್ಲಿ ಕುಳಿತುಕೊಳ್ಳಿರಿ. ಆಚಾರ್ಯ ನಾವು ಬಂದದ್ದರಿಂದ ತಮ್ಮ ಕೆಲಸಕ್ಕೆ ತೊಂದರೆಯಾಯಿತೇನು? ಶಾಮರಾಯ-ಇದಕ್ಕಿಂತಲೂ ಹೆಚ್ಚಿನ ಕೆಲಸ ಇನ್ನಾವುದಿರುವದು? ಪಾಶ್ಚಾತ್ಯ ಸಂಸ್ಕೃತಿಯಿಂದ ನಮ್ಮಲ್ಲಿಯ ಕೆಲವು ತರುಣರು ತಮ್ಮ ಹಿಂದೂ ಧರ್ಮದಲ್ಲಿಯ ಪದ್ಧತಿಗಳನ್ನು ತಿಳಿಯಲಸಮರ್ಥರಾಗಿ ಸುಮ್ಮನೆ ದೂಷಿಸುತ್ತ ಕೂಡಹತ್ತಿರುವರು. ಇಂಥವರಿಗೆ ಸ್ವಧರ್ಮದಲ್ಲಿ ಪ್ರೀತಿಯನ್ನು ಹುಟ್ಟಿಸಿದರೆ ನಾನು ಬಹು ದೊಡ್ಡ ಕೆಲಸಮಾಡಿದ ಹಾಗಾಗುವದು. ಇದೇ ಪ್ರತಿಯೊಬ್ಬ ಧಾರ್ಮಿ ಕನ ಮುಖ್ಯ ಕರ್ತವ್ಯವು; ನನ್ನ ಕರ್ತವ್ಯಕ್ಕೆ ನೀವು ಪ್ರಸಂಗ ತಂದುಕೊಟ್ಟಿದ್ದಕ್ಕೆ ನಾನು ನಿಮಗೆ ತುಂಬಾ ಋಣಿಯಾಗಿರುವೆನು, ಕೇಳತಕ್ಕದ್ದನ್ನು ಕೇಳಬೇಕು. ಈ